Healthy Food: ಈ ರೋಗ ಇರೋರು ಮರೆತೂ ಟೊಮೆಟೊ ತಿನ್ಬೇಡಿ
Health Tips in Kannada: ಟೊಮೆಟೊ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆರೋಗ್ಯಕ್ಕೂ ಟೊಮೆಟೊ ಒಳ್ಳೆಯದು. ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿರುವ ಟೊಮೆಟೊ ತೂಕ ಇಳಿಸಲು ಬೆಸ್ಟ್ ತರಕಾರಿ. ಆದ್ರೆ ಬೊಜ್ಜು ಕರಗುತ್ತೆ ಅಂತಾ ಎಲ್ಲರೂ ಇದನ್ನು ತಿನ್ನೋ ಹಾಗಿಲ್ಲ.
ಟೊಮೆಟೊ ಇಲ್ಲದ ಮನೆಯಿಲ್ಲ ಅಂದ್ರೆ ತಪ್ಪಾಗಲಾರದು. ಟೊಮೆಟೊ ಬಹುಪಯೋಗಿ ತರಕಾರಿ. ಸಾಸ್, ಕೆಚಪ್, ಸೂಪ್, ಸಾಂಬಾರ್ ಸೇರಿದಂತೆ ಚಾಟ್ಸ್ ಗೆ ಕೂಡ ಟೊಮೆಟೊ ಬೇಕೇಬೇಕು. ಟೊಮೆಟೊ ಆಹಾರಕ್ಕೆ ವಿಶೇಷ ರುಚಿ ನೀಡುತ್ತದೆ. ನಮ್ಮ ದೇಹ ಮತ್ತು ಮನಸ್ಸನ್ನು ಸುಸ್ಥಿರವಾಗಿಡಲು ಪ್ರಕೃತಿಯು ಔಷಧಿ ಗುಣಗಳನ್ನು ಹೊಂದಿರುವ ತರಕಾರಿ, ಹಣ್ಣುಗಳನ್ನು ನಮಗೆ ನೀಡಿದೆ. ಅದ್ರಲ್ಲಿ ಟೊಮೆಟೊ ಕೂಡ ಒಂದು. ಟೊಮೆಟೊ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಯಾವುದೇ ತರಕಾರಿಯಾಗ್ಲಿ, ಹಣ್ಣಾಗ್ಲಿ, ಒಣ ಹಣ್ಣುಗಳಾಗ್ಲಿ ಎಲ್ಲವನ್ನೂ ಮಿತಿ ಮೀರಿ ಸೇವನೆ ಮಾಡುವುದು ಒಳ್ಳೆಯದಲ್ಲ. ಎಲ್ಲದಕ್ಕೂ ಒಂದು ಮಿತಿ ಇರಬೇಕು. ಟೊಮೆಟೊ ಸೇವನೆಗೂ ಒಂದು ನಿಯಂತ್ರಣವಿರಬೇಕು. ಎಲ್ಲ ಪದಾರ್ಥಕ್ಕೆ ಹಾಗೂ ಪ್ರತಿ ದಿನ ಟೊಮೆಟೊ ಸೇವನೆ ಒಳ್ಳೆಯದಲ್ಲ. ಟೊಮೆಟೊವನ್ನು ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಟೊಮೆಟೊ (Tomato) ದಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ವಿಟಮಿನ್ ಎ (Vitamin A), ವಿಟಮಿನ್ ಸಿ ಮತ್ತು ವಿಟಮಿನ್ ಕೆ ಟೊಮೆಟೊದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್ (Magnesium), ರಂಜಕ, ತಾಮ್ರ ಮತ್ತು ನಿಯಾಸಿನ್‌ನಂತಹ ಪೋಷಕಾಂಶಗಳು ಟೊಮೆಟೊದಲ್ಲಿವೆ. ಸೋಡಿಯಂ (Sodium), ಕೊಲೆಸ್ಟ್ರಾಲ್ ಮತ್ತು ಕ್ಯಾಲೊರಿಗಳ ಪ್ರಮಾಣ ಟೊಮೆಟೊದಲ್ಲಿ ಕಡಿಮೆ ಇದೆ ಎಂಬುದು ಖುಷಿ ವಿಷ್ಯ.
ಟೊಮೆಟೊ ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ಪ್ರಯೋಜನ ಹೇಳುವ ಮೊದಲು ಅದನ್ನು ಯಾರು ಸೇವನೆ ಮಾಡ್ಬಾರದು ಎಂಬುದನ್ನು ಇಲ್ಲಿ ಹೇಳ್ತೇವೆ. ಟೊಮೆಟೊ ಅತಿಯಾದ ಸೇವನೆಯಿಂದ ಸಾಕಷ್ಟು ಅನಾನುಕೂಲವಿದೆ.
ಮಕ್ಕಳ LUNCH BOXಗೆ ಈ ತಿಂಡಿ ಹಾಕಿ ಕಳುಹಿಸಿ, ಖುಷ್ ಖುಷಿಯಾಗಿ ತಿಂದಿರ್ತಾವೆ ನೋಡಿ!
ಅತಿಸಾರ (Diarrhea) : ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಟೊಮೆಟೊ ಸೇವನೆ ಮಾಡಬಾರದು. ಹಾಗೆಯೇ ಅತಿಯಾಗಿ ಟೊಮೆಟೊ ಸೇವನೆ ಮಾಡಿದ್ರೆ ಅತಿಸಾರ ಸಮಸ್ಯೆ ಕಾಡಬಹುದು. ಟೊಮೆಟೊದಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಇದೆ. ಇದು ಅತಿಸಾರವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹಾಗಾಗಿ ಅತಿಸಾರ ಸಮಸ್ಯೆಯಿರುವವರು ಟೊಮೆಟೊದಿಂದ ದೂರವಿರುವುದು ಒಳ್ಳೆಯದು.
ಎಸಿಡಿಟಿ (Acidity) : ಇತ್ತೀಚಿನ ದಿನಗಳಲ್ಲಿ ಎಸಿಡಿಟಿ ಸಮಸ್ಯೆ ಹೆಚ್ಚಾಗ್ತಿದೆ. ಟೊಮೆಟೊದಲ್ಲಿ ಆಮ್ಲೀಯತೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಟೊಮೆಟೊವನ್ನು ಅತಿಯಾಗಿ ತಿಂದರೆ ಎಸಿಡಿಟಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಕೆಲವರಿಗೆ ಟೊಮೆಟೊ ಸೇವನೆ ನಂತ್ರ ಎದೆ ಉರಿ ಸಮಸ್ಯೆ ಕಾಣಿಸಿಕೊಳ್ಳುವುದು ಇದೇ ಕಾರಣಕ್ಕೆ.
ಮೂತ್ರಪಿಂಡದಲ್ಲಿ ಕಲ್ಲು (Kidney Stone) : ಮೂತ್ರಪಿಂಡದಲ್ಲಿ ಕಲ್ಲಿದ್ದವರು ಅಪ್ಪಿತಪ್ಪಿಯೂ ಟೊಮೆಟೊ ಸೇವನೆ ಮಾಡಲು ಹೋಗ್ಬೇಡಿ. ಮೂತ್ರಪಿಂಡ ಸಮಸ್ಯೆ ಇರುವವರು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಟೊಮೆಟೊದಲ್ಲಿ ಕಂಡುಬರುವ ಕ್ಯಾಲ್ಸಿಯಂ ಆಕ್ಸಲೇಟ್ ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುತ್ತದೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಮೂತ್ರಪಿಂಡದಲ್ಲಿ ಕಲ್ಲಿದೆ ಎನ್ನುವವರು ಟೊಮೆಟೊ ಸೇವನೆ ಮಾಡಬೇಡಿ.
ಟೊಮೆಟೊ ಸೇವನೆಯಿಂದಾಗುವ ಲಾಭಗಳು :
ರೋಗ ನಿರೋಧಕ ಶಕ್ತಿ ಹೆಚ್ಚಳ : ಟೊಮೆಟೊದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಇದಲ್ಲದೆ ಆಂಟಿಆಕ್ಸಿಡೆಂಟ್‌ಗಳು, ಬೀಟಾ-ಕ್ಯಾರೋಟಿನ್ ಅಂಶವಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೆಗಡಿ, ಶೀತದಂತಹ ಸಮಸ್ಯೆಯಿರುವವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸವನ್ನು ಟೊಮೆಟೊ ಮಾಡುತ್ತದೆ.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು : ಟೊಮೆಟೊದಲ್ಲಿರುವ ವಿಟಮಿನ್ ಸಿ ಅಂಶ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ.
ಚಾಕೊಲೇಟ್ ಮಿಲ್ಕ್ ಶೇಕ್ ಕುಡೀರಿ, ಸ್ನಾಯುಗಳು ಸ್ಟ್ರಾಂಗ್ ಆಗಿರ್ತವೆ
ತೂಕ ಇಳಿಸಲು ಟೊಮೆಟೊ : ಟೊಮೆಟೊದಲ್ಲಿ ಫೈಬರ್ ಅಂಶವಿದೆ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಟೊಮೆಟೊವನ್ನು ಸೂಪ್, ಜ್ಯೂಸ್ ಅಥವಾ ಸಲಾಡ್ ರೂಪದಲ್ಲಿ ಸೇವನೆ ಮಾಡುವುದ್ರಿಂದ ತೂಕ ಇಳಿಯುತ್ತದೆ.