Asianet Suvarna News Asianet Suvarna News

Weight Loss Tips 2022: ಹೊಸ ವರ್ಷದಲ್ಲಿ ತೂಕ ಇಳಿಸಿಕೊಳ್ಳಬೇಕೆಂದರೆ ಈ ಆಹಾರ ತಿನ್ನಲೇಬೇಡಿ

ಹೊಸ ವರ್ಷ (New Year) ಬಂತು ಅಂದ್ರೆ ಸಾಕು ಎಲ್ರೂ ಹೊಸ ಹೊಸ ರೆಸಲ್ಯೂಶನ್ (Resolution) ಮಾಡಿಕೊಳ್ತಾರೆ. ಅದ್ರಲ್ಲಿ ಹೆಚ್ಚಿನವರ ಲಿಸ್ಟ್‌ನಲ್ಲಿ ಈ ವರ್ಷನಾದ್ರೂ ತೂಕ ಇಳಿಸ್ಕೊಂಡು ಸಣ್ಣಗಾಗ್ಬೇಕು ಅನ್ನೋ ಪ್ಲಾನ್ ಇರುತ್ತೆ. ಹಾಗಾದ್ರೆ ತೂಕ (Weight)ವನ್ನು ಕಳೆದುಕೊಳ್ಳುವ ಸಲುವಾಗಿ 2022ರಲ್ಲಿ ನೀವು ತಿನ್ನದಿರಬೇಕಾದ ಆಹಾರಗಳು ಯಾವುದು..?

Foods You Must Avoid to Lose Weight in 2022
Author
Bengaluru, First Published Dec 30, 2021, 8:27 PM IST

ಹಳೆ ವರುಷವನ್ನು ಬೀಳ್ಕೊಟ್ಟು ಹೊಸ ವರುಷವನ್ನು ಆದರದಿಂದ ಸ್ವಾಗತಿಸುವ ಸಮಯ. ಹೊಸ ವರ್ಷ ಬಂದಾಗ ಹಲವರು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ವರ್ಷ ಹೆಚ್ಚು ಸೇವಿಂಗ್ಸ್ ಮಾಡಬೇಕು, ಯಾರ ಜತೆಯೂ ಜಗಳ ಮಾಡದೆ ಚೆನ್ನಾಗಿರಬೇಕು. ಹೆಚ್ಚು ತಿನ್ನುವುದನ್ನು ಯತ್ನಿಸಿ ತೂಕ ಕಳೆದುಕೊಳ್ಳಲು ಯತ್ನಿಸಬೇಕು ಮೊದಲಾದ ಪ್ಲಾನ್ ಗಳಿರುತ್ತವೆ. ಅದರಲ್ಲೂ ಜಿಮ್, ವ್ಯಾಯಾಮದ ಬಗ್ಗೆ ಸೋಮಾರಿಯಾಗಿರುವವರು ಈ ವರ್ಷನಾದ್ರೂ ತಪ್ಪದೆ ಡಯಟ್ ಮಾಡ್ಬೇಕು, ಜಂಕ್ ಫುಡ್‌ಗಳನ್ನು ದೂರವಿಡ್ಬೇಕು ಅಂದುಕೊಳ್ತಾರೆ. ಆದ್ರೆ ಹಲವರಿಗೆ ತೂಕ ಹೆಚ್ಚಿಸಿಕೊಳ್ಳಲು ಯಾವ ಆಹಾರ ಸೇವನೆ ಉತ್ತಮ, ತೂಕ ಕಳೆದುಕೊಳ್ಳಲು ಯಾವ ಆಹಾರ ಉತ್ತಮ ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಕಡಿಮೆ ಪ್ರಮಾಣದಲ್ಲಿ ತಿಂದರೆ ತೂಕ ಕಡಿಮೆಯಾಗುತ್ತದೆ ಎಂಬ ತಪ್ಪು ಭಾವನೆಯಲ್ಲಿರುತ್ತಾರೆ.

ಹಸಿವಾದಾಗ ನಾವು ಏನನ್ನು ತಿನ್ನುತ್ತಿದ್ದೇವೆ ಎಂಬ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಸುಮ್ಮನೆ ಬಾಯಿ ಚಪಲಕ್ಕೆ, ರುಚಿಯಿದೆ ಅನ್ನೋ ಕಾರಣಕ್ಕೆ ತಿನ್ನುತ್ತಾ ಹೋಗುತ್ತೇವೆ. ಆಹಾರದಲ್ಲಿ ಎಷ್ಟು ಪ್ರಮಾಣದಲ್ಲಿ ಕ್ಯಾಲೋರಿ ಇದೆ. ಆರೋಗ್ಯಕ್ಕೆ ಈ ಫುಡ್ ಒಳ್ಳೆಯದಾ ಅನ್ನೋದನ್ನು ಯೋಚಿಸುವುದಕ್ಕೆ ಹೋಗುವುದಿಲ್ಲ. 2022ರಲ್ಲಿ ಸ್ವಲ್ಪ ತೂಕವನ್ನು ಕಳೆದುಕೊಳ್ಳುವುದು ನಿಮ್ಮ ಗುರಿಗಳಲ್ಲಿ ಒಂದಾಗಿದ್ದರೆ, ನೀವು ಈ ಕೆಳಗಿನ ಕೆಲವು ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸುವುದು ಕಡಿಮೆ ಮಾಡಿ. ಅಥವಾ ಅಂಥಹಾ ಆಹಾರಗಳನ್ನು ಸೇವಿಸದಿರುವುದು ಉತ್ತಮ.

Weight Loss : ಉಪವಾಸ ಮಾಡಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ರೆ ಎಚ್ಚರ..!

ಬಿಳಿ ಬ್ರೆಡ್ (White bread)
2022ರಲ್ಲಿ ತೂಕ ಕಳೆದುಕೊಳ್ಳುವುದು ನಿಮ್ಮ ದೃಢ ನಿರ್ಧಾರವಾಗಿದ್ರೆ ಬಿಳಿ ಬ್ರೆಡ್‌ನ್ನು ಸೇವಿಸಲೇಬೇಡಿ. ಬಿಳಿ ಬ್ರೆಡ್ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಗಿದ್ದು, ಇದು ತೂಕ (Weight) ಹೆಚ್ಚಳಕ್ಕೆ ಕಾರಣವಾಗುತ್ತದೆ. ಬ್ರೆಡ್ ತಿನ್ನುವುದರಿಂದ ಹೊಟ್ಟೆ ಸಂಪೂರ್ಣವಾಗಿ ತುಂಬುವುದಿಲ್ಲ. ಹೀಗಾಗಿ ಆಗಾಗ ಏನಾದರೂ ತಿನ್ನುವಂತಾಗುತ್ತದೆ. ಊಟದಲ್ಲಿ ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿ ತಿಂದಾಗುತ್ತದೆ. ಹೀಗಾಗಿ ಹಸಿವಾದಾಗ, ಬ್ರೇಕ್ ಫಾಸ್ಟ್‌ (Breakfast)ಗೆ ಬ್ರೆಡ್ ತಿನ್ನುವ ಬದಲು ಕಾಳುಗಳು, ಹಣ್ಣು (Fruit)ಗಳನ್ನು ಹೆಚ್ಚೆಚ್ಚು ಸೇವಿಸಿ.

ಹುರಿದ ಆಹಾರ (Fried food)
ಫ್ರೈಡ್ ಫುಡ್ ಸೇವನೆ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಹಾನಿಕರವೇ. ಫ್ರೈಡ್ ಪೊಟೇಟೋ, ಫ್ರೈಡ್ ಚಿಕನ್ ತಿನ್ನಲು ಎಲ್ಲವೂ ಟೇಸ್ಟೀ ಅನಿಸಿದರೂ ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಹೀಗಾಗಿ ಎಣ್ಣೆಯಲ್ಲಿ ಕರಿದ ಆಹಾರಗಳ ಸೇವನೆಯನ್ನು ಸಾಧ್ಯವಾದಷ್ಟು ಸೀಮಿತಗೊಳಿಸಬೇಕು. ಯಾಕೆಂದರೆ ನೀವು ಬರ್ನ್ ಮಾಡುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸಿದರೆ, ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಧ್ಯಯನವೊಂದರಲ್ಲಿ ಕರಿದ ಆಹಾರದ ಸೇವನೆಯು ತೂಕವನ್ನು ಹೆಚ್ಚಿಸುವುದು ಅಥವಾ ಸ್ಥೂಲಕಾಯತೆಯನ್ನು ಬೆಳೆಸುವ ಗುಣವನ್ನು ಹೊಂದಿದೆ ಎಂದು ತಿಳಿದುಬಂದಿದೆ. 

Weight Loss Diet Plan: ಫಿಟ್ ಆಗಿರೋಕೆ ತಿನ್ನೋದೆಲ್ಲಾ ಬಿಟ್ಟು ಕಷ್ಟಪಡಬೇಕಾಗಿಲ್ಲ..!

ಸಕ್ಕರೆ ಬದಲಿಗಳು(Sugar substitutes)
ಸಕ್ಕರೆಯ ಬದಲಿಗೆ ಬಳಸಲಾಗುವ ಸಿಹಿಪುಡಿಗಳು ತೂಕ ಕಳೆದುಕೊಳ್ಳುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಈ ಶುಗರ್ ಸಬ್ಸಿಟ್ಯೂಟ್ಸ್ ಶೂನ್ಯ ಕ್ಯಾಲೊರಿಗಳನ್ನು ಹೊಂದಿದ್ದರೂ ಸಹ, ಅವು ಇನ್ನೂ ರಕ್ತ (Blood)ದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಹೆಚ್ಚಳವನ್ನು ಉಂಟುಮಾಡುತ್ತವೆ. ಹೀಗಾಗಿ ಇದು ನಿಮ್ಮ ತೂಕವನ್ನು ಕಳೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

ಕಡಿಮೆ ಫೈಬರ್‌ನ ಆಹಾರಗಳು (Low-fiber foods)
ಬಿಳಿ ಬ್ರೆಡ್, ಅಕ್ಕಿ ಕೇಕ್‌ (Cake)ಗಳು, ಆಲೂಗಡ್ಡೆ ಮೊದಲಾದ ಕಡಿಮೆ ಫೈಬರ್ ಇರುವ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಇವುಗಳಲ್ಲಿರುವ ಅಂಶ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಕರುಳಿನ ಆರೋಗ್ಯ ತಜ್ಞ ಮತ್ತು ಅಪ್‌ಲಿಫ್ಟ್ ಫುಡ್‌ನ ಸಂಸ್ಥಾಪಕ, ಕಾರಾ ಲ್ಯಾಂಡಾ ಹೇಳುವ ಪ್ರಕಾರ, ಫೈಬರ್ ಅಂಶವಿರುವ ಆಹಾರಗಳು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವಾಗುವಂತೆ ಮಾಡುತ್ತದೆ. ಹೀಗಾಗಿ ಮತ್ತೆ ಹಸಿವಾದಾಗ ನೀವು ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಾರೆ

Follow Us:
Download App:
  • android
  • ios