Asianet Suvarna News Asianet Suvarna News

ಚಳಿಗೆ ಮಧ್ಯರಾತ್ರಿ ಎಚ್ಚರವಾಗ್ತಿದ್ರೆ ಇದನ್ನು ತಿಂದು ಮತ್ತೆ ಮಲಗಿ

ಚಳಿ ಚಳಿ.. ಸದ್ಯ ಎಲ್ಲರ ಬಾಯಲ್ಲಿ ಕೇಳ್ತಿರುವ ಮಾತಿದು. ಚಳಿಗೆ ಬೆಚ್ಚಗೆ ಹೊದ್ದು ಮಲಗಬೇಕು ಎನ್ನಿಸುತ್ತೆ. ದೇಹ ತಣ್ಣಗಿರುವ ಕಾರಣ ನಿದ್ರೆ ಸರಿಯಾಗಿ ಬರೋದಿಲ್ಲ. ರಾತ್ರಿ ನಿದ್ರೆ ಬರ್ತಿಲ್ಲ ಎನ್ನುವವರು ಡಯಟ್ ಪ್ಲಾನ್ ಚೇಂಜ್ ಮಾಡ್ಬೇಕು.
 

Foods That Boost Body Temperature
Author
First Published Dec 15, 2022, 3:20 PM IST

ಚಳಿರಾಯ ಅಬ್ಬರಿಸ್ತಿದ್ದಾನೆ. ನೆಲಕ್ಕೆ ಕಾಲಿಡದ ಸ್ಥಿತಿ ಸದ್ಯ ಬೆಂಗಳೂರಿನಲ್ಲೇ ಇದೆ. ಸಂಜೆ ಐದು ಗಂಟೆಯಾಗ್ತಿದ್ದಂತೆ ಮೈಕೊರೆಯುವ ಚಳಿ ಶುರುವಾಗುತ್ತದೆ. ಈ ಚಳಿಗೆ ನಿದ್ರೆ ಬರೋದು ಕಷ್ಟ. ಮಧ್ಯರಾತ್ರಿ ವಿಪರೀತ ಚಳಿಯಿಂದ ಎಚ್ಚರವಾದ್ರೆ ಮತ್ತೆ ನಿದ್ರೆ ಬರೋದಿಲ್ಲ. ನಿದ್ರೆ ಸರಿಯಾಗಿ ಆಗಿಲ್ಲವೆಂದ್ರೆ ಒಂದೊಂದೇ ಸಮಸ್ಯೆ ಶುರುವಾಗುತ್ತದೆ.

ಚಳಿಗಾಲ (Winter) ದಲ್ಲಿ ಅನೇಕರು ನಿದ್ರೆ (Sleep) ಸಮಸ್ಯೆ ಎದುರಿಸುತ್ತಾರೆ. ಚಳಿಯಿಂದಾಗಿ 7 -8 ಗಂಟೆ ನಿದ್ರೆ ಮಾಡೋದು ಕಷ್ಟವಾಗುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ (Health) ಕ್ಕೆ ಗುಣಮಟ್ಟದ ನಿದ್ರೆ ಬಹಳ ಮುಖ್ಯ. ಈ ಋತುವಿನಲ್ಲಿ ಯಾವುದೇ ತೊಂದರೆಯಾಗದೆ ನೀವು ನಿದ್ರೆ ಮಾಡ್ಬೇಕು ಅಂದ್ರೆ ಮೈ ಬೆಚ್ಚಗಿರಬೇಕು. ನಿಮ್ಮ ಮೈ ಬೆಚ್ಚಗಿರಬೇಕೆಂದ್ರೆ ನೀವು ಕೆಲ ಆಹಾರ ಸೇವನೆ ಮಾಡ್ಬೇಕು. ರಾತ್ರಿ (Night) ಕೆಲವೊಂದಿಷ್ಟು ಆಹಾರವನ್ನು ಚಳಿಗಾಲದ ಡಯಟ್ ನಲ್ಲಿ ಸೇರಿಸಿದ್ರೆ ನಿದ್ರೆಯಲ್ಲಿ ಎಚ್ಚರವಾಗೋದಿಲ್ಲ. ನಾವಿಂದು ಚಳಿಗಾಲದ ರಾತ್ರಿ ನೀವು ಏನು ತಿನ್ಬೇಕು ಅನ್ನೋದನ್ನು ಹೇಳ್ತೆವೆ.

ಡ್ರೈ ಫ್ರೂಟ್ಸ್ (Dry Fruits) : ಮಲಗುವ ಮುನ್ನ ಕಡಲೆಕಾಯಿ, ಬಾದಾಮಿ ಮತ್ತು ಪಿಸ್ತಾಗಳಂತಹ ಡ್ರೈ ಫ್ರೂಟ್ಸ್ ತಿನ್ನಬೇಕು. ಈ ಡ್ರೈ ಫ್ರೂಟ್ಸ್ ಮೆಲಟೋನಿನ್ ಹೊಂದಿರುತ್ತದೆ. ಇದು ನಿಮ್ಮ ನಿದ್ರೆಯ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನಿದ್ರೆಯನ್ನು ಉತ್ತೇಜಿಸುತ್ತದೆ. ಡ್ರೈ ಫ್ರೂಟ್ಸ್ ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತದೆ.

ಶುಂಠಿ : ಶುಂಠಿಯನ್ನು ಔಷಧಿ ರೂಪದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಇದು ವಾಸೋಡಿಲೇಟಿಂಗ್ ಗುಣಲಕ್ಷಣಗಳ ಜೊತೆಗೆ ಅನೇಕ ರೀತಿಯ ಆಂಟಿ-ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಅಂಶವನ್ನು ಹೊಂದಿದೆ. ರಕ್ತನಾಳಗಳನ್ನು ವಿಶ್ರಾಂತಿಗೊಳಿಸುವ ಜೊತೆಗೆ ರಕ್ತದ ಹರಿವನ್ನು ಹೆಚ್ಚಿಸಿ ದೇಹವನ್ನು ಬಿಸಿ ಮಾಡುತ್ತದೆ. ಮಲಗುವ ಮುನ್ನ ಶುಂಠಿಯ ಚೂರನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ, ಟೀ ರೂಪದಲ್ಲಿ ಸೇವನೆ ಮಾಡಬೇಕು. ನಿದ್ರಾಹೀನತೆ ಸಮಸ್ಯೆ ಮಾತ್ರವಲ್ಲದೆ ಶೀತ, ಕೆಮ್ಮಿಗೆ ಇದು ಔಷಧವಾಗಿದೆ.

Homemade chest rub ಬಳಸಿ ಒಂದೇ ರಾತ್ರಿಯಲ್ಲಿ ಕಫಕ್ಕೆ ಹೇಳಿ ಗುಡ್ ಬೈ

ಕ್ಯಾರೆಟ್ : ಕ್ಯಾರೆಟ್ ಒಂದು ತರಕಾರಿಯಾಗಿದ್ದು, ಇದು ಕೂಡ ನಿಮ್ಮ ನಿದ್ರೆಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಕ್ಯಾರೆಟ್ ಜೀರ್ಣಿಸಿಕೊಳ್ಳಲು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಇದರಿಂದಾಗಿ ದೇಹದ ಉಷ್ಣತೆ ಆಂತರಿಕವಾಗಿ ಉಳಿಯುತ್ತದೆ. ಕ್ಯಾರೆಟ್‌ನಲ್ಲಿರುವ ಆಲ್ಫಾ ಕ್ಯಾರೋಟಿನ್ ಮತ್ತು ಪೊಟ್ಯಾಸಿಯಮ್ ನಿದ್ರೆಯನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಚಳಿಗಾಲದಲ್ಲಿ ರಾತ್ರಿ ಊಟದ ಜೊತೆ ನೀವು ಕ್ಯಾರೆಟ್ ಸಲಾಡ್ ಸೇವನೆ ಮಾಡಬೇಕು. ಕ್ಯಾರೆಟ್ ಉತ್ತಮ ನಿದ್ರೆ ಜೊತೆ ನಿಮ್ಮ ಇತರ ಆರೋಗ್ಯ ಸಮಸ್ಯೆಗೆ ಮದ್ದಾಗಿ ಕೆಲಸ ಮಾಡುತ್ತದೆ. ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುವ ಕೆಲಸ ಮಾಡುತ್ತದೆ. 

ದಾಲ್ಚಿನಿ : ದಾಲ್ಚಿನಿ ಅನೇಕ ಔಷಧಿ ಗುಣವನ್ನು ಹೊಂದಿದೆ. ಚಳಿಗಾಲದಲ್ಲಿ ವೈರಸ್‌, ಸೋಂಕುಗಳಿಂದ ದೇಹವನ್ನು ರಕ್ಷಿಸುವ ಕೆಲಸವನ್ನು ದಾಲ್ಚಿನಿ ಮಾಡುತ್ತದೆ. ದೇಹದ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್‌ ನಿಯಂತ್ರಿಸುವ ಕೆಲಸವನ್ನು ಇದು ಮಾಡುತ್ತದೆ.  ದಾಲ್ಚಿನ್ನಿ ಒಂದು ಗಿಡಮೂಲಿಕೆಯಾಗಿದ್ದು, ಆಯುರ್ವೇದದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ದಾಲ್ಚಿನಿ ದೇಹವನ್ನು ಒಳಗಿನಿಂದ ಬಿಸಿ ಮಾಡುವ ಮೂಲಕ ನಿದ್ರೆಯನ್ನು ಉತ್ತೇಜಿಸುತ್ತದೆ.  
ಚಳಿಗಾಲದಲ್ಲಿ ಮಲಗುವ ಮೊದಲು ಹಾಲಿಗೆ ಒಂದು ಚಿಟಿಕೆ ದಾಲ್ಚಿನಿ ಪುಡಿ ಬೆರೆಸಿ ಕುಡಿದ್ರೆ ನಿದ್ರೆ ಸಮಸ್ಯೆ ಕಾಡೋದಿಲ್ಲ.

Chefs Tips : ನಿಮ್ಮ ಅಡುಗೆ ತಿಂದು ಜನ ಹೊಗಳ್ಬೇಕೆಂದ್ರೆ ಹೀಗ್ ಮಾಡಿ

ಓಟ್ಸ್ :  ಓಟ್ಸ್ ನಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಅದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಧಾನವಾಗಿ ಇದು ಜೀರ್ಣವಾಗುವ ಕಾರಣ ದೇಹ ಬಿಸಿಯಾಗುತ್ತದೆ. ಮೆಲಟೋನಿನ್ ಮಟ್ಟ ಸುಧಾರಿಸುವ ಕೆಲಸ ಮಾಡುತ್ತದೆ.
 

Follow Us:
Download App:
  • android
  • ios