MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • Homemade chest rub ಬಳಸಿ ಒಂದೇ ರಾತ್ರಿಯಲ್ಲಿ ಕಫಕ್ಕೆ ಹೇಳಿ ಗುಡ್ ಬೈ

Homemade chest rub ಬಳಸಿ ಒಂದೇ ರಾತ್ರಿಯಲ್ಲಿ ಕಫಕ್ಕೆ ಹೇಳಿ ಗುಡ್ ಬೈ

ಚಳಿಗಾಲದಲ್ಲಿ, ಶೀತ ಗಾಳಿ ಎದೆ ಮೇಲೆ ದಾಳಿ ಮಾಡುತ್ತವೆ. ಇದರಿಂದ ಶೀತ, ಕೆಮ್ಮು, ಉಸಿರಾಟದ ತೊಂದರೆ, ಕಫ, ಸೈನಸ್‌ನಂತಹ ಸಮಸ್ಯೆಗಳು ಕಾಡಬಹುದು. ಅಮೆರಿಕದ ವೈದ್ಯರು ಇದನ್ನು ನಿವಾರಿಸಲು ಮನೆಮದ್ದೊಂದರ ಬಗ್ಗೆ ಮಾಹಿತಿ ನೀಡಿದ್ದಾರೆ. ಅದನ್ನ ಬಳಸಿದ್ರೆ ನೀವೂ ಕೂಡ ಸುಲಭವಾಗಿ ಕಫದ ಸಮಸ್ಯೆಯನ್ನು ನಿವಾರಿಸಬಹುದು.

2 Min read
Suvarna News
Published : Dec 14 2022, 04:54 PM IST
Share this Photo Gallery
  • FB
  • TW
  • Linkdin
  • Whatsapp
19

ಇದೀಗ ಚಳಿಗಾಲ, ಅಲ್ಲೊಮ್ಮೆ ಇಲ್ಲೊಮ್ಮೆ ಮಳೆ, ಬಿಸಿಲು ಬಂದರೂ ಸಹ ಚಳಿಯೂ ಸಹ ಹೆಚ್ಚುತ್ತಲೇ ಇದೆ. ಈ ಋತುವಿನಲ್ಲಿ, ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ., ಇದರಿಂದ ಯಾರು ಬೇಕಾದರೂ ಸುಲಭವಾಗಿ ಸೋಂಕಿಗೆ ಒಳಗಾಗಬಹುದು. ಈ ಕಾರಣದಿಂದಾಗಿಯೇ ಈ ದಿನಗಳಲ್ಲಿ ಹೆಚ್ಚಿನ ಜನರು ಶೀತ, ಕೆಮ್ಮು, ನೆಗಡಿ, (cough, cold) ಗಂಟಲು ಕೆರೆತ, ಶ್ವಾಸಕೋಶದಲ್ಲಿ ಕಫ ಶೇಖರಣೆ, ಜ್ವರ, ಅಲರ್ಜಿ, ಮೈಕೈ ನೋವು, ಸ್ನಾಯು ನೋವಿನಂತಹ ರೋಗಗಳಿಂದ ಬಳಲುತ್ತಿದ್ದಾರೆ. ಸಮಸ್ಯೆ ಕಂಡು ಬಂದ ಕೂಡಲೇ ವೈದ್ಯರನ್ನು ಕಾಣಲೇಬೇಕೆಂದೇನೂ ಇಲ್ಲ. ಸಮಸ್ಯೆ ಸಣ್ಣದಾಗಿದ್ದರೆ, ನೀವು ಮನೆಯಲ್ಲಿಯೇ ಈ ಸಮಸ್ಯೆ ಬಗೆಹರಿಸಬಹುದು.

29

ಚಳಿಗಾಲ (winter season) ವಿಶೇಷವಾಗಿ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಅಪಾಯಕಾರಿ. ಅವರು ಈ ಅಸ್ವಸ್ಥತೆಗಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಶೀತ ಗಾಳಿ ನೇರವಾಗಿ ಎದೆ ಮೇಲೆ ದಾಳಿ ಮಾಡೋದ್ರಿಂದ ಹೆಚ್ಚಿನ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಕೆಮ್ಮು, ಪಕ್ಕೆಲುಬು ನೋವು ಮತ್ತು ಋತುವಿನುದ್ದಕ್ಕೂ ಸರಿಯಾಗಿ ಉಸಿರಾಡದಿರುವುದು ಮುಂತಾದ ಸಮಸ್ಯೆಗಳನ್ನು ಹೊಂದಿರುವ ಅನೇಕ ಜನರಿದ್ದಾರೆ.

39

ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಪ್ರತಿ ಬಾರಿ ಔಷಧಿಗಳನ್ನು ಬಳಸುವುದು ಸರಿಯಲ್ಲ. ಏಕೆಂದರೆ ಔಷಧಿಗಳ ಅತಿಯಾದ ಸೇವನೆ ಆರೋಗ್ಯದ ಮೇಲೆ ಹೆಚ್ಚಿನ ಸಮಸ್ಯೆ ಉಂಟು ಮಾಡಬಹುದು. ಅಮೆರಿಕನ್ ಡಾಕ್ಟರ್ ಜೋಶಾಕ್ಸ್ ಮನೆಯಲ್ಲಿ ತಯಾರಿಸಬಹುದಾದ ಬಾಮ್ (DIY chest balm) ಬಗ್ಗೆ ತಿಳಿಸಿದ್ದಾರೆ ಮತ್ತು ಅದರ ಬಳಕೆಯು ಶೀತ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

49
ಚೆಸ್ಟ್ ರಬ್ ನ ಉಪಯೋಗವೇನು?

ಚೆಸ್ಟ್ ರಬ್ ನ ಉಪಯೋಗವೇನು?

ಚಳಿಗಾಲದಲ್ಲಿ ಎದೆ ಬಿಗಿತ ಅಥವಾ ಭಾರ ಅನುಭವಿಸುತ್ತಿದ್ದರೆ, ಈ ಬಾಮ್ ನಿಮಗೆ ಅತ್ಯುತ್ತಮ ಆಯ್ಕೆ ಎನ್ನಬಹುದು. ಚಳಿಗಾಲದಲ್ಲಿ, ಚಳಿಗಾಲದ ಅತ್ಯಂತ ಶೀತ ಗಾಳಿ ಎದೆಗೆ ಸೋಕಿದಾಗ ಉಸಿರಾಟದ ತೊಂದರೆ (breathing problem), ಕೆಮ್ಮು, ಎದೆ ದಟ್ಟಣೆ ಮತ್ತು ನೋವಿನಂತಹ ರೋಗಲಕ್ಷಣಗಳು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಚೆಸ್ಟ್ ರಬ್ ನಿಮಗೆ ಪರಿಹಾರ ನೀಡುವುದಲ್ಲದೆ, ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿದ್ದು, ಯಾವುದೇ ಸೈಡ್ ಎಫೆಕ್ಟ್ ಕೂಡ ಇರೋದಿಲ್ಲ..

59
ಉಸಿರಾಟದ ತೊಂದರೆ ಇರುವವರಿಗೆ ಅತ್ಯುತ್ತಮ ಮನೆಮದ್ದುಗಳು (best home remedies for breathing problem)

ಉಸಿರಾಟದ ತೊಂದರೆ ಇರುವವರಿಗೆ ಅತ್ಯುತ್ತಮ ಮನೆಮದ್ದುಗಳು (best home remedies for breathing problem)

ಎದೆಯಲ್ಲಿ ಯಾವುದೇ ಸಮಸ್ಯೆಯಿಂದಾಗಿ ನೀವು ಉಸಿರಾಟ ಅಥವಾ ಇತರ ಉಸಿರಾಟದ ಸಮಸ್ಯೆಗಳನ್ನು ಹೊಂದಿದ್ದರೆ, ಈ ಹೋಮ್ ಬಾಮ್ ನಿಮಗೆ ಪರಿಣಾಮಕಾರಿ. ಇದರಲ್ಲಿ ಬಳಸಲಾದ ಸುವಾಸನೆಯುಕ್ತ ತೈಲಗಳು ಉಸಿರಾಟದ ತೊಂದರೆಯನ್ನು ನಿವಾರಿಸುವ ಮೂಲಕ ಉಸಿರಾಟವನ್ನು ಸುಲಭಗೊಳಿಸುತ್ತವೆ. ಇದರಲ್ಲಿ ಸೇರಿಸಲಾದ ಪುದೀನಾ ಮತ್ತು ನೀಲಗಿರಿಯ ಸಾರಭೂತ ತೈಲಗಳು ಉಸಿರಾಟದ ತೊಂದರೆ ನಿವಾರಿಸುತ್ತೆ.

69

ಎದೆಯ ಬಿಗಿತ-ಕೆಮ್ಮಿಗೆ ಇದು ಅತ್ಯುತ್ತಮ ಪರಿಹಾರ. ಅಲ್ಲದೇ ಸೈನಸ್ ಮತ್ತು ತಲೆನೋವಿನಿಂದ ಪರಿಹಾರ ಪಡೆಯಲು ಸಹ ನೀವು ಇದನ್ನು ಬಳಸಬಹುದು. ಸ್ನಾಯು ನೋವು, ಸೈನಸ್, ತಲೆನೋವು ಮತ್ತು ವಾಕರಿಕೆ ನಿವಾರಿಸಲು ಇದರಲ್ಲಿ ಪುದೀನಾ ಸಾರಭೂತ ತೈಲ ಬಳಸಲಾಗುತ್ತೆ. ಅಂತೆಯೇ, ನೀಲಗಿರಿ ತೈಲವು ಕಫ ತೆಗೆದುಹಾಕಲು, ವಿಷ ತೆಗೆದುಹಾಕಲು, ಶೀತ ಮತ್ತು ಫ್ಲೂ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.

79

ಈ ಮನೆ ಮದ್ದು ತಯಾರಿಸಲು ಏನೆಲ್ಲಾ ಸಾಮಾಗ್ರಿಗಳು ಬೇಕು ನೋಡೋಣ…
1/4 ಕಪ್ ಆಲಿವ್ ಎಣ್ಣೆ
1/2 ಕಪ್ ತೆಂಗಿನೆಣ್ಣೆ
1/4 ಕಪ್ ಜೇನು ಮೇಣ
1 ಗಾಜಿನ ಜಾರ್
20 ಹನಿ ಪೆಪ್ಪರ್ ಮಿಂಟ್ ಸಾರಭೂತ ತೈಲ (peppermint essential oil)
20 ಹನಿ ನೀಲಗಿರಿ ಸಾರಭೂತ ತೈಲ

89
ಈ ಕಫ ನಿವಾರಕ ತಯಾರಿಸೋದು ಹೇಗೆ?

ಈ ಕಫ ನಿವಾರಕ ತಯಾರಿಸೋದು ಹೇಗೆ?

ಒಂದು ಜಾರ್‌ನಲ್ಲಿ ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆ ಮತ್ತು ಜೇನು ಮೇಣ ಹಾಕಿ
ಒಂದು ಪಾತ್ರೆಯಲ್ಲಿ 2 ಇಂಚು ನೀರು ಹಾಕಿ ಮತ್ತು ಕಡಿಮೆ ಉರಿಯಲ್ಲಿ ಬಿಸಿ ಮಾಡಿ.
ಜಾರನ್ನು ನೀರಿರುವ ಪಾತ್ರೆ ಮೇಲೆ ಇರಿಸಿ ಮತ್ತು ಎಣ್ಣೆ ಕರಗಲು ಬಿಡಿ. ಚೆನ್ನಾಗಿ ಮಿಶ್ರಣ ಮಾಡಿ
ಮಿಶ್ರಣ ತಣ್ಣಗಾದ ಮೇಲೆ ಅದಕ್ಕೆ ಪೆಪ್ಪರ್ ಮಿಂಟ್ ಎಸೆನ್ಶಿಯಲ್ ಆಯಿಲ್ ಮತ್ತು ನೀಲಗಿರಿ ಎಸೆನ್ಶಿಯಲ್ ಆಯಿಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕಫ ನಿವಾರಕ ತಯಾರಾಗಿದೆ.

99

ಉತ್ತಮ ಫಲಿತಾಂಶಗಳಿಗಾಗಿ, ರಾತ್ರಿಯಲ್ಲಿ ಮಲಗುವ ಮೊದಲು ನೀವು ಅದನ್ನು ನಿಮ್ಮ ಎದೆ ಮೇಲೆ ಮಸಾಜ್ ಮಾಡಬಹುದು. ಅದನ್ನು ಹಚ್ಚಿದ ನಂತರ, ನೀವು ಗಾಳಿಯನ್ನು ತಪ್ಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಅದನ್ನು ಕಣ್ಣಿನ ಬಳಿ ತೆಗೆದುಕೊಂಡು ಹೋಗಬೇಡಿ. ಈ ಔಷಧ ಬಳಸೋದ್ರಿಂದ ಕಫ ನಿವಾರಣೆಯಾಗುತ್ತದೆ. ನೆಮ್ಮದಿಯ ಉಸಿರಾಟ ಸಾಧ್ಯವಾಗುತ್ತೆ.

About the Author

SN
Suvarna News
ಚಳಿಗಾಲ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved