Dosa Challenge: ಗರಿಗರಿಯಾದ ದೋಸೆ ತಿನ್ನಿ, ಬಂಪರ್ ಕ್ಯಾಶ್ ಪ್ರೈಜ್ ಗೆಲ್ಲಿ
ದೋಸೆ ಅಂದ್ರೆ ಹಲವರ ಪಾಲಿಗೆ ಅಚ್ಚುಮೆಚ್ಚು. ಹೆಚ್ಚು ಮಸಾಲೆಗಳ ಭರಾಟೆಯಿಲ್ಲದೆ ಮೆದುವಾಗಿ, ಕ್ರಿಸ್ಪೀಯಾಗಿರುವ ದೋಸೆಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ಬೋದು. ಆದ್ರೆ ನಿಮ್ಗೆ ಇಷ್ಟವಾಗಿರೋ ದೋಸೆ ತಿಂದು ಪ್ರೈಜ್ ಕೂಡಾ ಗೆಲ್ಬೋದು ಅನ್ನೋದು ನಿಮ್ಗೊತ್ತಾ?
ದಕ್ಷಿಣಭಾರತದ ಪ್ರಮುಖ ತಿಂಡಿಗಳಲ್ಲಿ ಒಂದು ದೋಸೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಹೊತ್ತುಗೊತ್ತಿನ ಪರಿವಿಲ್ಲದೆ ಜನರು ದೋಸೆ ತಿನ್ನೋಕೆ ಇಷ್ಟಪಡ್ತಾರೆ. ಸಾದಾ ದೋಸೆ, ಸೆಟ್ ದೋಸೆ, ರವಾ ದೋಸೆ, ಮಸಾಲೆ ದೋಸೆ, ಪುಡಿ ದೋಸೆ ಹೀಗೆ ಒಂದಾ ಎರಡಾ ದೋಸೆಯಲ್ಲಿ ನಾನಾ ವೆರೈಟಿಗಳಿವೆ. ಮಸಾಲೆಗಳ ಭರಾಟೆಯಿಲ್ಲದೆ ಹೊಟ್ಟೆ ಕೆಡೋ ಚಿಂತೆಯೂ ಇಲ್ಲದ ಕಾರಣ ಬಹುತೇಕರು ದೋಸೆ ತಿನ್ನೋಕೆ ಇಷ್ಟಪಡ್ತಾರೆ. ದುಡ್ಡು ಕೊಟ್ಟು ನೀವು ದೋಸೆ ತಿಂದು ಇರ್ತೀರಾ. ಆದ್ರೆ ಇಲ್ಲಿಗೆ ಹೋದ್ರೆ ದೋಸೆ ತಿನ್ನೋದಕ್ಕೆ ನಿಮ್ಗೆನೇ ದುಡ್ಡು ಕೊಡ್ತಾರೆ ಗೊತ್ತಾ?
ದೆಹಲಿಯ ದೋಸಾ ಫ್ಯಾಕ್ಟರಿ ಇಂಥಹದ್ದೊಂದು ವಿಶಿಷ್ಟ ದೋಸೆ ಚಾಲೆಂಜ್‌ನ್ನು ಏರ್ಪಡಿಸಿದೆ. ಇಲ್ಲಿರುವ ಬರೋಬ್ಬರಿ 6 ಅಡಿ ಉದ್ದದ ದೋಸೆಯನ್ನು ತಿಮದವರು 11,000 ರೂ. ಬಹುಮಾನ (Prize)ವನ್ನು ಪಡೆಯಬಹುದು. @pestolicious ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಬ್ಲಾಗರ್ ಜೋಡಿಯಾದ ವಾಣಿ ಮತ್ತು ಸಾವಿ, ದೋಸೆ ಸವಾಲಿನ (Dosa challenge) ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಸಂಡೇ ಹೊರಗಡೆನೇ ತಿನ್ಬೇಕು ಅಂತೇನಿಲ್ಲ..ಮಸಾಲೆ ದೋಸೆ ಮನೆಯಲ್ಲೇ ಮಾಡಿ ತಿನ್ನಿ..
ದೋಸೆ ತಿನ್ನಿ, ಬಹುಮಾನ ಗೆಲ್ಲಿ, ದೋಸೆ ಚಾಲೆಂಜ್ ವೈರಲ್
ಪೋಸ್ಟ್ ಮಾಡಿದ ನಂತರ ವಿಡಿಯೋ 5.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. 383 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಪೋಸ್ಟ್‌ನ ವಿಡಿಯೋದಲ್ಲಿ ಶೀರ್ಷಿಕೆಯಾಗಿ, 'ಇದನ್ನು ಮುಗಿಸುವ ಯಾರನ್ನಾದರೂ ಟ್ಯಾಗ್ ಮಾಡಿ' ಎಂದು ಬರೆಯಲಾಗಿದೆ. ನವದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ದೋಸೆ ಫ್ಯಾಕ್ಟರಿ ಎಂಬ ಜನಪ್ರಿಯ ದೋಸೆ ರೆಸ್ಟೋರೆಂಟ್‌ನಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
ವೈರಲ್ ವೀಡಿಯೋ ಈ 6 ಅಡಿ ಉದ್ದದ ದೋಸೆಯ ತಯಾರಿ ರೀತಿಯನ್ನು ಸಹ ತೋರಿಸುತ್ತದೆ. ಅಲ್ಲಿ ಮೂರು ದೈತ್ಯ ದೋಸೆಗಳನ್ನು ಏಕಕಾಲದಲ್ಲಿ ಎರೆದು ಹಿಟ್ಟಿನ ಮೂಲಕ ಕನೆಕ್ಟ್ ಮಾಡಲಾಗುತ್ತದೆ. ನಂತರ ವಿಭಿನ್ನ ರೀತಿಯ ಮಸಾಲೆ ಸೇರಿಸಿ ಚೀಸ್ ಟಾಪಿಂಗ್ ಸೇರಿಸುತ್ತಾರೆ. ಆ ಬಳಿಕ ಈ ಬೃಹತ್ ದೋಸೆಯನ್ನು ಸಾಂಬಾರ್, ಚಟ್ನಿಯೊಂದಿಗೆ ಸರ್ವ್ ಮಾಡಲಾಗುತ್ತದೆ. ರೆಸ್ಟೋರೆಂಟ್‌ನ ಮಾರ್ಗಸೂಚಿಗಳು ದೋಸೆಯನ್ನು ಮುಗಿಸಿ ಮತ್ತು 11,000 ರೂ. ನಗದು ಬಹುಮಾನವನ್ನು ಗೆಲ್ಲಿರಿ ಎಂದು ಸೂಚಿಸುತ್ತದೆ. ಸೋಷಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಮಸಾಲೆ ದೋಸೆಗೆ ಸಾಂಬಾರ್ ಕೊಡದ್ದಕ್ಕೆ ವ್ಯಕ್ತಿಯಿಂದ ದೂರು, ಕೋರ್ಟ್ ತೀರ್ಪಿಗೆ ರೆಸ್ಟೋರೆಂಟ್ ಮಾಲೀಕ ಕಕ್ಕಾಬಿಕ್ಕಿ
ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಇದನ್ನು ಒಬ್ಬರೇ ತಿಂದು ಮುಗಿಸುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು. ಮತ್ತೊಬ್ಬರು, 'ಯಾವುದೇ ಸಮಯದ ಮಿತಿ ಇಲ್ಲವಾದರೆ ನಾನಿದನ್ನು ಸುಲಭವಾಗಿ ತಿಂದು ಖಾಲಿ ಮಾಡಬಲ್ಲಿ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, 'ನಿಮ್ಮ ಹಣವನ್ನು ಇಟ್ಟುಕೊಳ್ಳಿ, ನಾನು ಅದನ್ನು ಉಚಿತವಾಗಿ ತಿನ್ನುತ್ತೇನೆ' ಎಂದು ತಿಳಿಸಿದರು.
ಮತ್ತೊಬ್ಬರು, 'ನಾನು ಅಡುಗೆಮನೆಯಲ್ಲಿ ತಾಯಿ ದೋಸೆ ಹೊಯ್ಯುತ್ತಿರುವಾಗ ತವಾದಿಂದ ನೇರವಾಗಿ 20-25 ದೋಸೆಗಳನ್ನು ತಿನ್ನುತ್ತೇನೆ' ಎಂದು ಹೇಳಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಈ ರೀತಿ ಫುಡ್ ಚಾಲೆಂಜ್ ಇಟ್ಟು ಜನರ ಆರೋಗ್ಯ (Health)ವನ್ನು ಹಾಳು ಮಾಡಬೇಡಿ' ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ 6 ಫೀಟ್ ಲಾಂಗ್ ದೋಸ್ ಇಂಟರ್‌ನೆಟ್‌ನಲ್ಲಿ ಸುದ್ದಿಯಾಗ್ತಿರೋದಂತೂ ನಿಜ.