Asianet Suvarna News Asianet Suvarna News

ಮೆಂತೆ, ಅರಿಶಿನ, ವಿಟಮಿನ್ ಡಿ ಅತೀಯಾದರೆ ಆರೋಗ್ಯಕ್ಕೆ ಕುತ್ತು

ವಿಟಮಿನ್‌ (Vitamin) ಸಿ, ಡಿ. ಇ, ಎಫ್‌ ಹೆಚ್ಚು ಬಳಸಿದರೆ ಕೊರೋನಾ (Corona) ತಡೀಬಹುದು ಅನ್ನೋ ನಂಬಿಕೆ ಜನರಲ್ಲಿde. ಆದರೆ, ಕೆಲವನ್ನು ಅತಿಯಾಗಿ ಬಳಸಿದರೆ ಆರೋಗ್ಯಕ್ಕೆ (Health0 ಒಳ್ಳೇಯದಲ್ಲಿ. ಆರೋಗ್ಯಕ್ಕೆ ಅಪಾಯ ತರೋದು ಗ್ಯಾರಂಟಿ.

Fenugreek Turmeric And Vitamin D Are Not Good For Health If We Consume More
Author
Bengaluru, First Published Apr 27, 2022, 2:23 PM IST | Last Updated Apr 27, 2022, 2:25 PM IST

ಕೊರೋನಾ (Corona) ಆರಂಭ ಆದಾಗಿನಿಂದಲೂ ಜನರು ಜೀವನಶೈಲಿಯೇ (Lifestyle) ಬದಲಾಗುತ್ತಿದೆ. ತಿನ್ನೋ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರು. ಎಲ್ಲವೂ ನಾರ್ಮಲ್ ಆಗುತ್ತಿದೆ ಎನ್ನುವಾಗಲೇ ಇದೀಗ 4ನೇ ಅಲೆಯ ಭೀತಿ ಶುರುವಾಗಿದೆ. ಮುಂಚಿನಷ್ಟು ಈ ರೋಗದ ಬಗ್ಗೆ ಆತಂಕ ಇಲ್ಲದೇ ಇರಬಹುದು. ಆದರೆ, ಆಹಾರ ಪದ್ಧತಿಯಲ್ಲಿ ಮತ್ತೆಲ್ಲರೂ ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಳ್ಳೋದು ಗ್ಯಾರಂಟಿ. 

ಪ್ರತಿಷ್ಠಿತ ಅಸ್ಪತ್ರೆಯೊಂದರ ತಜ್ಞ ವೈದ್ಯರು ಇತ್ತೀಚೆಗೆ ಕುತೂಹಲಕಾರಿ ಕೇಸೊಂದನ್ನು ಅಟೆಂಡ್‌ ಮಾಡಿದ್ದರು. ಟೈಪ್‌ 2 ಡಯಾಬಿಟಿಸ್‌ ಇದ್ದ ಪೇಷೆಂಟ್ ಬಂದಿದ್ದು. ಅವನು ವಾಂತಿ ಭೇದಿ ಸಮಸ್ಯೆಯಿಂದ ಅತೀವ ಬಳಲುತ್ತಿದ್ದರು. 

ಪರೀಕ್ಷಿಸಿದಾಗ ವಿಟಮಿನ್‌ ಡಿ (Vitamin D) ಟಾಕ್ಸಿಕ್ ಆದದ್ದು ಕಂಡುಬಂತು. ಆಗಿದ್ದಿಷ್ಟು, ವಾಟ್ಸ್ಯಾಪ್‌ನಲ್ಲಿ ಬಂದ ಸಲಹೆ ಸೀರಿಯಸ್ಸಾಗಿ ತೆಗೆದುಕೊಂಡು ವಿಟಮಿನ್‌ ಡಿ ಗುಳಿಗೆಗಳನ್ನು ವಿಪರೀತ ತೆಗೆದುಕೊಂಡಿದ್ದರು. ಈ ಮಾತ್ರೆಯನ್ನು ವಾರಕ್ಕೊಂದು ತೆಗೆದುಕೊಳ್ಳಬೇಕು. ಬದಲಾಗಿ ದಿನಕ್ಕೊಂದು ತೆಗೆದುಕೊಂಡಿದ್ದರು. ಅನಗತ್ಯ ಮಾತ್ರೆ ತೆಗೆದುಕೊಂಡರೆ ಏನಾಗಬೇಕೋ ಅದೇ ಆಗಿತ್ತು. 

Health Tips: ಅತಿಸಾರವಾದಾಗ ಈ ಆಹಾರ ಸೇವಿಸಿ, ತಕ್ಷಣವೇ ಪರಿಹಾರ ಪಡೆಯಿರಿ

ಕೊರೋನಾ ಬಂದಾಗ ಎದುರಿಸೋ ಸಮಸ್ಯೆ ಒಂದಾದಾರೆ, ವಾಸಿಯಾದ್ಮೇಲೆ ಮತ್ತೊಂದು ರೀತಿ ಪ್ರಾಬ್ಲಮ್. ಅದೂ ಅಲ್ಲದೇ ಸ್ವಯಂ ವೈದ್ಯರಾಗಿ ಏನೇನೋ ಮಾಡಲು ಹೋಗಿ ಇಂಥ ಪರಿಸ್ಥಿತಿ ತಂದು ಕೊಳ್ಳುತ್ತಾರೆ. ದೇಹಕ್ಕೆ ವಿಟಮಿನ್‌ ಡಿ ಬೇಕು ನಿಜ. ಹಾಗಂತ ಅದರ ಗುಳಿಗೆಗಳನ್ನು ಅತಿ ತೆಗೆದುಕೊಂಡರೆ ವಾಂತಿ, ನಿರ್ಜಲೀಕರಣ, ವಾಕರಿಕೆ,  ಗೊಂದಲ, ತೂಕಡಿಕೆ, ನಿದ್ರಾವಸ್ಥೆ ಇತ್ಯಾದಿ ಕಾಡೋದು ಗ್ಯಾರಂಟಿ. ವಿಟಮಿನ್‌ ಡಿಯ ಅಂಶ ಒಂದು ಮಿಲಿಲೀಟರ್‌ಗೆ 150 ನ್ಯಾನೋ ಗ್ರಾಂಗಿಂತ ಹೆಚ್ಚಾಗಲೇಬಾರದು. 

ಎಲ್ಲರೂ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೆಣಗುತ್ತಿದ್ದಾರೆ. ಅತ್ಯುತ್ತಮ ಜೀವನಶೈಲಿ, ಸಕರಾತ್ಮಕ ಚಿಂತನೆಗಳು (Poisitive Thoughts) ಇಮ್ಯುನಿಟಿ ಪವರ್ (Immunity Power) ಹೆಚ್ಚಿಸಲು ಸಾಥ್ ನಿಡುತ್ತೆ. ಬದಲಾಗಿ ಏನೋ ತಿಂದು, ಒಂದೆರಡು ದಿನಗಳಲ್ಲಿ ಬಲಾಢ್ಯರಾಗುತ್ತೇವೆ ಅಂದ್ರೆ, ಅಗೋಲ್ಲ, ಹೋಗೋಲ್ಲ. ಒಂದಲ್ಲೊಂದು ಕಷಾಯ, ಗುಳಿಗೆ, ಅಥವಾ ಹೋಮಿಯೋಪತಿ ಆರ್ಸೇನಿಕಂ ಆಲ್ಬಂ ತೆಗೆದುಕೊಳ್ಳುತ್ತಿದ್ದಾರೆ ಹೇಳುತ್ತಿದ್ದಾರೆ. ಮೆಂತೆ ಕಾಳು, ಅರಿಶಿನ  ಕೂಡ ಸಾಕಷ್ಟು ಸೇವಿಸುತ್ತಾರೆ. ಸೇವಿಸಲಿ. ಆದರೆ ಸರಿಯಾದ ಪ್ರಮಾಣದಲ್ಲಿ ತೆಗದುಕೊಂಡರೆ ಒಳ್ಳೆಯದು. 

Summer Tips: ಬೇಸಿಗೆಯಲ್ಲಿ ಬಾಳೆ ಹಣ್ಣು ಹಾಳಾಗದಂತೆ ಹೀಗೆ ರಕ್ಷಿಸಿ

ಏನೇ ಅತಿಯಾದರೂ ಆರೋಗ್ಯಕ್ಕೆ ಒಳ್ಳೇಯದಲ್ಲ
ಬೇಕಾಬಿಟ್ಟಿ ಪ್ರೊಟೀನ್ಸ್, ವಿಟಮಿನ್ಸ್ ತೆಗೆದುಕೊಳ್ಳುವುದು ಮನುಷ್ಯನಿಗೆ ಒಳ್ಳೇಯದಲ್ಲ. ಅವರವರ ದೇಹ ಪ್ರಕೃತಿಗೆ ತಕ್ಕಂತೆ ಇವುಗಳ ಪ್ರಮಾಣ ಬೇರೆ ಬೇರೆ ಬೇಕಾಗಬಹುದು. ಯುನಾನಿ (Yunani), ಆಯುರ್ವೇದ (Ayurveda),  ಹೋಮಿಯೋಪತಿ (Homeopathy), ಸಿದ್ಧ, ನ್ಯಾಚುರೋಪತಿ (Naturopathy)ಮಾದರಿಯಲ್ಲಿ ಹಲವು ಕಷಾಯಗಳೂ, ಗುಳಿಗೆಗಳೂ ರೋಗ ನಿರೋಧಶಕ್ತಿ ಹೆಚ್ಚಿಸಬಲ್ಲವು. ಪ್ರಧಾನಿ ನರೇಂದ್ರ ಮೋದಿಯವರೂ  (Narendra Modi)ಇವುಗಳನ್ನು ಬಳಸಿ ದೇಹಾರೋಗ್ಯ ಹೆಚ್ಚಿಸಿಕೊಳ್ಳಿ ಎಂದಿದ್ದಾರೆ. ಹಾಗಂಥ ಇವನ್ನು ಬಳಸುವಾಗ ಆಯುಷ್‌ ಸಚಿವಾಲಯದ (Ayush Ministry) ನೀಡಿದ ಪ್ರಕಟಣೆಗಳಲ್ಲಿ ಅವುಗಳ ಡೋಸೇಜ್‌ (Dosage) ಬಗ್ಗೆ ವಿವರಿಸಲಾಗಿದೆ; ಹೇಳಿದಂತೆಯೇ ಸೇವಿಸಬೇಕು. ಅಥವಾ ತಲೆತಲಾಂತರದಿಂದ ಇವುಗಳನ್ನು ನೀಡುತ್ತಿರುವ ಪರಿಣತ ವೈದ್ಯರ ಬಳಿಯಾದರೂ ಸಲಹೆ ತೆಗದುಕೊಳ್ಳಬೇಕು.

ಮೆಂತೆ ಕಾಳನ್ನು ಒಂದು ಹದದಲ್ಲಿ ಸೇವಿಸಿದರೆ ಓಕೆ. ಹೆಚ್ಚಾದರೆ ರಕ್ತವನ್ನು ತಿಳಿಗೊಳಿಸುತ್ತದೆ. ಲಿವರ್‌ ಸಮಸ್ಯೆ (Liver Problem) ಇರುವವರಲ್ಲಿ ಮತ್ತು ಇಲ್ಲದವರಲ್ಲೂ, ಅಪಾಯಕಾರಿ ಮಟ್ಟ ಮುಟ್ಟಿದರೆ ಬ್ಲೀಡಿಂಗ್‌ ಶುರುವಾಗಬಹುದು. ಅಲೋವೆರಾ ಜ್ಯೂಸ್‌ ಸಹ ಒಳ್ಳೆಯದು. ಆದರೆ ಇದು ಅತಿಯಾದರೆ ಲಿವರ್‌ ಡ್ಯಾಮೇಜಾಗಬಹುದು. ಅರಿಶಿನವನ್ನು ಹಾಲಿಗೆ ಹಾಕಿ ಅಥವಾ ಬಿಸಿನೀರಿನಲ್ಲಿ ಕದಡಿ ಕುಡಿಯಬಹುದು. ದಿನಕ್ಕೆ ಅರ್ಧ ಸ್ಪೂನ್‌ಗಿಂತ ಹೆಚ್ಚಿರಬಾರದು. ಹೀಗೆ ದಿನಕ್ಕೆ ಎರಡು- ಮೂರು ಸ್ಪೂನ್‌ ಪ್ರತಿದಿನ ತಿಂಗಳುಗಟ್ಟಲೆ ಸೇವಿಸಿದ ಒಬ್ಬ ವ್ಯಕ್ತಿ ಕರುಳು ಪೂರ್ಣ ಹಳದಿಯಾಗಿ, ಲಿವರ್‌ ಸಮಸ್ಯೆ ಬಂದಿದ್ದೂ ಇದೆ ಎನ್ನುತ್ತಾರೆ ತಜ್ಞ ವೈದ್ಯರು. 

ಬೇಸಿಗೆಯಲ್ಲಿ ತಂಪಾಗಿರಲು ಈ ತರಕಾರಿ ಜ್ಯೂಸ್‌ಗಳನ್ನು ತಪ್ಪದೇ ತಿನ್ನಿ

ಚ್ಯವನಪ್ರಾಶ, ಕಷಾಯ, ಅಶ್ವಗಂಧಗಳನ್ನೂ ಹೆಚ್ಚಾಗಿ ಸೇವಿಸಿದರೆ ಜೀರ್ಣಾಂಗ ಸಮಸ್ಯೆ, ಜೊತೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೆಚ್ಚಿನ ಆಯುರ್ವೇದ ಮದ್ದುಗಳು ದೇಹದ ಉಷ್ಣತೆ ಹೆಚ್ಚಿಸುತ್ತದೆ. ಇವನ್ನು ಸೇವಿಸುವಾಗ ದೇಹದ ತಂಪು ಕಾಪಾಡಿಕೊಳ್ಳಲು ಇನ್ನೊಂದು ಆಹಾರವೋ, ಎಳನೀರು ಅಥವಾ ಮೊಸರ ಸೇವಿಸಿ ಬ್ಯಾಲೆನ್ಸ್‌ ಮಾಡಲೇಬೇಕು.

Latest Videos
Follow Us:
Download App:
  • android
  • ios