Celebrity Food: ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ ಕದ್ದುಮುಚ್ಚಿ ಇದನ್ನು ಜಾಸ್ತಿ ತಿನ್ತಾರೆ..!

ಬಾಲಿವುಡ್ ನಟಿಯರ ಲೈಫ್‌ಸ್ಟೈಲ್ (Lifestyle) ಎಲ್ಲರಂಥಲ್ಲ. ಅದು ಬೇರೆಯದ್ದೇ ಲೋಕ. ಫಿಟ್ನೆಸ್ (Fitness) ಚೆನ್ನಾಗಿರಲು ತಿನ್ನೋ ಆಹಾರದ ಬಗ್ಗೆಯೂ ಅವರು ಕಟ್ಟುನಿಟ್ಟಾಗಿರುತ್ತಾರೆ. ಲಘು ಆಹಾರ (Food)ವನ್ನೇ ಸೇವಿಸುವ ಸೆಲೆಬ್ರಿಟಿಗಳು ಕೆಲವೊಮ್ಮೆ ಚೀಟ್ ಮೀಲ್ಸ್ ಸಹ ತಿನ್ತಾರೆ. ಹಾಗಿದ್ರೆ ‘ಗೆಹ್ರೈಯಾನ್’ ಚಿತ್ರದ ನಟ,ನಟಿಯರ ಚೀಟ್ ಮೀಲ್ಸ್ ಏನು ?

Favourite Cheat Meals Of The Cast Of Gehraiyaan

ಬಾಲಿವುಡ್ ಚಿತ್ರ ‘ಗೆಹ್ರೈಯಾನ್’ (Gehraiyaan)  ಪ್ರೇಕ್ಷಕರಿಂದ ಎಲ್ಲಾ ರೀತಿಯ ಮಿಶ್ರ ವಿಮರ್ಶೆಗಳನ್ನು ಪಡೆಯುತ್ತಿದೆ. ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಅಭಿನಯದ ಚಿತ್ರ ಸಾಕಷ್ಟು ಬೋಲ್ಡ್ ಸೀನ್‌ಗಳನ್ನು ಒಳಗೊಂಡಿದ್ದು, ಚಿತ್ರದಲ್ಲಿ ಜೋಡಿಗಳ ಬೋಲ್ಡ್, ಹಾಟ್ ಲುಕ್ (Hotlook), ಬಿಕಿನಿ, ಲಿಪ್‌ಲಾಕ್ ಮೊದಲಾದ ದೃಶ್ಯಗಳು ವೈರಲ್ ಆಗಿವೆ. ಶಕುನ್ ಬಾತ್ರಾ ನಿರ್ದೇಶಿಸಿರುವ ಚಿತ್ರ ಸಂಬಂಧಗಳ ಕುರಿತಾದ ಕಥಾಹಂದರವನ್ನು ಹೊಂದಿದೆ. 

ಬಾಲಿವುಡ್ ನಟಿಯರ ಲೈಫ್‌ಸ್ಟೈಲ್ (Lifestyle) ಎಲ್ಲರಂಥಲ್ಲ. ಅದು ಬೇರೆಯದ್ದೇ ಲೋಕ. ಡಿಸೈನರ್ ಡ್ರೆಸ್, ಸೆಲೆಬ್ರಿಟಿ ಆರ್ಟಿಸ್ಟ್ ಮೇಕಪ್, ನ್ಯೂಟ್ರಿಷಿಯನ್ ಸಜೆಸ್ಟೆಡ್ ಫುಡ್ ಎಲ್ಲಾನೂ ಲಕ್ಸುರಿಯಸ್. ವಯಸ್ಸಾದರೂ ಯಂಗ್ ಆಗಿ ಕಾಣುವ ಸೆಲೆಬ್ರಿಟಿಗಳು ಅದಕ್ಕಾಗಿ ಯೋಗ, ಜಿಮ್ ಎಂದು ಹಲವರು ವಿಧಾನಗಳನ್ನು ಅನುಸರಿಸುತ್ತಾರೆ. ಹಾಗೆಯೇ ಮುಖ್ಯವಾಗಿ ಉತ್ತಮ ಆಹಾರಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಓಟ್ಸ್, ಸೂಪ್, ಪರೋಟಾ, ಜ್ಯೂಸ್ ಗಳನ್ನು ಹೆಚ್ಚಾಗಿ ಸೇವಿಸುವ ಸೆಲೆಬ್ರಿಟಿಗಳು ಚೀಟ್ ಫುಡ್ ಕೂಡಾ ಸೇವಿಸುತ್ತಾರೆ ಗೊತ್ತಾ ? ಚೀಟ್ ಫುಡ್ ಎಂದರೆ ಒಮ್ಮೊಮ್ಮೆ ಡಯಟ್ ಫುಡ್ ಬಿಟ್ಟು ಇಷ್ಟವಾದ ಆಹಾರವನ್ನು ಸೇವಿಸುವುದು. ‘ಗೆಹ್ರೈಯಾನ್’ ಚಿತ್ರದ ನಟ-ನಟಿಯರು ಸಹ ಚೀಟ್ ಮೀಲ್ಸ್ ಹೊಂದಿದ್ದಾರೆ. ಅವು ಯಾವುವೆಲ್ಲಾ ತಿಳಿಯೋಣ.

Celebrity Food: ಬಾಲಿವುಡ್ ಟಾಪ್ ನಟಿಯರು ಬ್ರೇಕ್ ಫಾಸ್ಟ್‌ಗೆ ಏನು ತಿನ್ತಾರೆ ?

ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್‌ನ ಟಾಪ್ ನಟಿಯರಲ್ಲೊಬ್ಬರು. ತಮ್ಮ ಸುಂದರ ಮೈಮಾಟ, ಲುಕ್‌ನಿಂದಲೇ ಬಿಟೌನ್‌ನಲ್ಲಿ ಹೆಸರು ಪಡೆದವರು. ಮೂಲತಃ ದಕ್ಷಿಣ ಭಾರತದವರಾಗಿರುವ ನಟಿ ದೀಪಿಕಾ ಪಡುಕೋಣೆ ಬೆಳಗ್ಗಿನ ಬ್ರೇಕ್ ಫಾಸ್ಟ್‌ಗೂ ಸೌತ್ ಇಂಡಿಯನ್ ಫುಡ್ ಪ್ರಿಫರ್ ಮಾಡುತ್ತಾರೆ. ಇಡ್ಲಿ, ತೆಂಗಿನಕಾಯಿ ಚಟ್ನಿ ಮತ್ತು ಫಿಲ್ಟರ್ ಕಾಫಿ ಅಥವಾ ಇಡ್ಲಿ, ವಡಾ ಸಾಂಬಾರ್‌ನೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸಲು ಇಷ್ಟಪಡುತ್ತಾರೆ. ಆದರೆ, ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವ ‘ಪದ್ಮಾವತ್’ ನಟಿ ಚೀಟ್ ಮೀಲ್ಸ್ ಕೂಡಾ ತಿನ್ನುತ್ತಾರೆ.'ಹೈವೇ ಗೋಮಾಂತಕ್' ಹೆಸರಿನ ರೆಸ್ಟೋರೆಂಟ್ ಮುಂಬೈನಲ್ಲಿ ಡಿಪಿ ಅವರ ನೆಚ್ಚಿನ ಸ್ಥಳವಾಗಿದೆ. ದೀಪಿಕಾ ಇಲ್ಲಿಗೆ ಭೇಟಿ ನೀಡಿ ಇಷ್ಟಪಟ್ಟ ಆಹಾರವನ್ನೆಲ್ಲಾ ತಿನ್ನುತ್ತಾರೆ 

ಸಿದ್ದಾಂತ್ ಚತುರ್ವೇದಿ
ಸಿದ್ಧಾಂತ್ ಚತುರ್ವೇದಿ ಜಂಕ್ ಫುಡ್‌ನ್ನು ಎಲ್ಲಾ ವೆಚ್ಚದಲ್ಲಿ ತಪ್ಪಿಸುತ್ತಾರೆ ಆದರೆ ಅವರ ನೆಚ್ಚಿನ ಚೀಟ್ ಊಟಕ್ಕೆ ಬಂದಾಗ, ಅವರು ಪಾನಿ ಪುರಿ, ಸೇವ್ ಪುರಿ, ಪಾವ್ ಭಾಜಿ ಮತ್ತು ದೋಸೆಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಮಧ್ಯರಾತ್ರಿಯ ತಿಂಡಿಯ ವಿಷಯಕ್ಕೆ ಬಂದಾಗ, ಸಿದ್ಧಾಂತ್ ತನ್ನ ಕಡುಬಯಕೆಗಳನ್ನು ಪೂರೈಸಲು ಕೆಲವು ಕುರುಕುಲಾದ ಖಕ್ರಾವನ್ನು ತಿನ್ನಲು ಇಷ್ಟಪಡುತ್ತಾರೆ.

Relationship Tips: 'ಗೆಹ್ರೈಯಾನ್' ಸಿನಿಮಾ ನೋಡಿ, ದಾಂಪತ್ಯದಲ್ಲಿ ಈ ತಪ್ಪು ಮಾಡಬೇಡಿ !

ಅನನ್ಯಾ ಪಾಂಡೆ
ಅನನ್ಯಾ ಪಾಂಡೆ (Ananya Panday) ತಮ್ಮ ತೆಳ್ಳಗಿನ ದೇಹದಿಂದ ಇಂಡಸ್ಟ್ರಿಯಲ್ಲಿ ಹೆಚ್ಚು ಹೆಸರು ಪಡೆದಿದ್ದಾರೆ. ಆದರೆ ಅನನ್ಯ ವೆರೈಟಿ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಬಟರ್ ಚಿಕನ್ ಮತ್ತು ಚೀಸ್ ನಾನ್ ಅನನ್ಯಾ ಪಾಂಡೆಯ ನೆಚ್ಚಿನ ಚೀಟ್ ಮೀಲ್ ಆಗಿದೆ. ಪ್ರೋಟೀನ್ ಪ್ಯಾನ್‌ಕೇಕ್‌ಗಳು, ಓಟ್ಸ್‌ಗಳನ್ನು ಇಷ್ಟಪಡುತ್ತಾರೆ ಮತ್ತು ಅವುಗಳನ್ನು ಪ್ರತಿದಿನವೂ ತಿನ್ನುತ್ತಾರೆ. ಅನನ್ಯಾ ಅಲ್ಲಿರುವ ಎಲ್ಲಾ ಆಹಾರ ಪ್ರಿಯರಿಗೆ 'ಮಿಜು' ಹೆಸರಿನ ರೆಸ್ಟೋರೆಂಟ್‌ನ್ನು ಶಿಫಾರಸು ಮಾಡುತ್ತಾರೆ.

ಧೈರ್ಯ ಕರ್ವಾ
ಧೈರ್ಯ ಕರ್ವಾ ಬಾಲಿವುಡ್‌ನ ಉದಯೋನ್ಮುಖ ನಟ. ಉರಿ, 83 ಮತ್ತು ಈಗ ಗೆಹ್ರೈಯಾನ್‌ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಆಹಾರ ಪ್ರಿಯರಾಗಿರುವ ಧೈರ್ಯ ಕರ್ವಾ ಹಲವು ವೆರೈಟಿಯ ಆಹಾರವನ್ನು ಟೇಸ್ಟ್ ಮಾಡಲು ಇಷ್ಟಪಡುತ್ತಾರೆ. ಇವರ ನೆಚ್ಚಿನ ಚೀಟ್ ಮೀಲ್‌ನಲ್ಲಿ ಮೊಮೋಸ್ ಸಹ ಸೇರಿದೆ. ಖಾರ ಚಟ್ನಿ ಜತೆ ಮೊಮೋಸ್ ಸವಿಯಲು ನಟ ಇಷ್ಟಪಡುತ್ತಾರೆ.

Latest Videos
Follow Us:
Download App:
  • android
  • ios