ಎಫ್‌ಎಸ್‌ಎಸ್‌ಎಐ ಪರೀಕ್ಷೆಯಲ್ಲಿ ಎಂಪೈರ್ ಕಬಾಬ್‌ಗಳಲ್ಲಿ ಕೃತಕ ಬಣ್ಣ ಪತ್ತೆಯಾಗಿದ್ದು, ಸಂಸ್ಥೆ ಸ್ಪಷ್ಟನೆ ನೀಡಿದೆ. ಇನ್ನು ಮುಂದೆ ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸುವುದಾಗಿ ಭರವಸೆ ನೀಡಿದೆ.
ಬೆಂಗಳೂರು: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅಧಿಕಾರಿಗಳು ಬೆಂಗಳೂರಿನಲ್ಲಿನ 6 ಎಂಪೈರ್ ಶಾಖೆಗಳಲ್ಲಿ ನಡೆಸಿದ ಆಹಾರ ಪರೀಕ್ಷೆಯ ವೇಳೆ, ಚಿಕನ್ ಕಬಾಬ್ ಮಾದರಿಗಳನ್ನು ಅಸುರಕ್ಷಿತ ಎಂದು ಪರಿಗಣಿಸಿದ್ದು ಈ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಎಂಪೈರ್ ಗ್ರೂಪ್ ಸ್ಪಷ್ಟನೆ ನೀಡಿದ್ದು, ಗ್ರಾಹಕರ ಭದ್ರತೆ ಮತ್ತು ವಿಶ್ವಾಸಕ್ಕೆ ತನ್ನ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದೆ.
ಸಂಶ್ಲೇಷಿತ ಬಣ್ಣದ ಬಳಕೆ ಕುರಿತು ಸ್ಪಷ್ಟನೆ:
ನಮ್ಮ ಕಬಾಬ್ ಮ್ಯಾರಿನೇಡ್‌ನಲ್ಲಿ ‘ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್ (Sunset Yellow FCF)’ ಎಂಬ ಸಂಶ್ಲೇಷಿತ ಆಹಾರ ಬಣ್ಣವನ್ನು ಹಿಂದೆ ಬಳಕೆ ಮಾಡಲಾಗುತ್ತಿತ್ತು. ಈ ಬಣ್ಣವು ಎಫ್ಎಸ್ಸ್ಎಸ್ಎಐಗೆ ಅನುಮೋದಿತವಾಗಿದ್ದು, ವಾಣಿಜ್ಯವಾಗಿ ಲಭ್ಯವಿದೆ. ಆದರೂ ಎಫ್ಎಸ್ಸ್ಎಸ್ಎಐ ಮಾರ್ಗದರ್ಶನದಂತೆ, ನಾವು ತಕ್ಷಣವೇ ಈ ಬಣ್ಣದ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ ಎಂದಿದೆ.
ಇನ್ನು ಮುಂದೆ ನೈಸರ್ಗಿಕ ಬಣ್ಣಗಳಷ್ಟೇ:
ಗ್ರಾಹಕರ ಆರೋಗ್ಯ ನಮ್ಮ ಮೊದಲ ಆದ್ಯತೆ. ಆದ್ದರಿಂದ ಇನ್ನುಮುಂದೆ ಎಂಪೈರ್ ಹೋಟೆಲ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗದೆ, ಸಂಪೂರ್ಣ ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸಲಾಗುವುದು ಎಂದು ಹೇಳಿದೆ.
ಅದೇ ರುಚಿ, ಅದೇ ಗುಣಮಟ್ಟ:
ಎಂಪೈರ್ ಗ್ರೂಪ್ 60 ವರ್ಷಗಳ ಭರವಸೆಯ ಪರಂಪರೆಯನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಆಹಾರ ಸೇವನೆ ನೀಡುತ್ತಲೇ ಬಂದಿದೆ. ನಮ್ಮ ಅಡುಗೆ ಮನೆಗಳು ಉದ್ಯಮದಲ್ಲಿ ಅತ್ಯಂತ ನೈರ್ಮಲ್ಯಯುತವಾಗಿದ್ದು, ಎಲ್ಲಾ ಆಹಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತವೆ.
ಗ್ರಾಹಕರಿಗೆ ಭರವಸೆ:
ಆಹಾರ ಸುರಕ್ಷತೆ ಮತ್ತು ಗ್ರಾಹಕರ ವಿಶ್ವಾಸವೇ ನಮ್ಮ ಅಸ್ತಿತ್ವದ ಆಧಾರ. ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲ. ನಿಮ್ಮ ಪ್ರೀತಿಯ ಎಂಪೈರ್‌ನಲ್ಲೆಂದಿಗೂ ರುಚಿಕರ, ಸುರಕ್ಷಿತ ಆಹಾರವನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ.
