ಸ್ಕೆಲಿಟನ್ ದೇಹ ದಷ್ಟಪುಷ್ಟವಾಗ್ಬೇಕೆಂದ್ರೆ ಗೋಧಿ ಬಿಟ್ಟು ಈ ರೊಟ್ಟಿ ತಿನ್ನಿ
ತೂಕ ಏರಿಕೆ ಈಗ ಮಾಮೂಲಿ ಆದ್ರೂ ಸಣಕಲು ಕಟ್ಟಿ ದೇಹ ಹೊಂದಿರುವವರು ನಮ್ಮಲ್ಲಿದ್ದಾರೆ. ಏನು ತಿಂದ್ರೆ ದಪ್ಪ ಆಗ್ತೇವೆ ಎನ್ನುವ ಅವರ ಪ್ರಶ್ನೆಗೆ ಇಲ್ಲೊಂದಿಷ್ಟು ಸರಳ ಉಪಾಯ ಇದೆ.
ಒಬ್ಬೊಬ್ಬರು ಒಂದೊಂದು ರೀತಿಯ ಶರೀರವನ್ನು ಹೊಂದಿರುತ್ತಾರೆ. ಕೆಲವರು ದಪ್ಪಗಿದ್ದರೆ ಇನ್ಕೆಲವರು ತೆಳ್ಳಗಿರುತ್ತಾರೆ. ವಿಪರೀತ ದಪ್ಪನೆಯ ಶರೀರ ಹೊಂದಿರುವವರು ತೆಳ್ಳಗಾಗಲು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅದೇ ತೆಳ್ಳಗಿರುವವರು ಹೇಗಾದರೂ ಮಾಡಿ ತೂಕ ಏರಿಸಿಕೊಳ್ಳಬೇಕೆಂದು ಯೋಚಿಸುತ್ತಾರೆ. ವಿಪರೀತ ತೆಳ್ಳನೆಯ ಶರೀರ ದೇಹದ ಸೌಂದರ್ಯವನ್ನೂ ಹಾಳುಮಾಡುತ್ತದೆ.
ತುಂಬಾ ತೆಳ್ಳಗಿರುವವರು ಮೂಳೆ (Bone) ಹಾಗೂ ಹೃದಯದ ಸಮಸ್ಯೆಗಳನ್ನು ಹೊಂದಿರಬಹುದು ಅಥವಾ ಅವರಲ್ಲಿ ರೋಗನಿರೋಧಕ ಶಕ್ತಿ (Immunity) ದುರ್ಬಲವಾಗಬಹುದು. ವಿಪರೀತ ತೆಳ್ಳಗಿರುವವರು ಬಹಳ ಬೇಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ರಕ್ತಹೀನತೆ (Anemia)ಯಿಂದಲೂ ಬಳಲಬಹುದು. ಇಂತವರು ದಪ್ಪಗಾಗಬೇಕೆಂದು ಹಲವು ರೀತಿಯ ಪೌಷ್ಠಿಕ ಆಹಾರಗಳ ಸೇವನೆ ಮಾಡುತ್ತಾರೆ. ಮೊಳಕೆ ಕಾಳು, ಹಣ್ಣು, ಪ್ರೋಟೀನ್ ಪೌಡರ್ ಮುಂತಾದವುಗಳ ಸೇವನೆ ಮಾಡುತ್ತಾರೆ. ಆದರೆ ಇಂತಹ ಎಷ್ಟೇ ಪೌಷ್ಠಿಕ ಆಹಾರ ತೆಗೆದುಕೊಂಡರೂ ಕೆಲವರು ದಪ್ಪಗಾಗೋದೇ ಇಲ್ಲ. ಹೀಗೆ ಸಣಕಲು ಶರೀರ ಹೊಂದಿರುವವರು ಗೋಧಿ ರೊಟ್ಟಿಯ ಜೊತೆ ಇನ್ನು ಕೆಲವು ಹಿಟ್ಟಿನ ರೊಟ್ಟಿಗಳನ್ನು ಸೇವಿಸಿದರೆ ಅದರಿಂದ ತೂಕ ಹೆಚ್ಚಾಗುತ್ತದೆ. ಈ ರೊಟ್ಟಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿದೆ. ಅಂತಹ ಕೆಲವು ರೊಟ್ಟಿ ಹಿಟ್ಟಿನ ಮಾಹಿತಿ ಇಲ್ಲಿದೆ.
ನಿಮಗೆ ಗೊತ್ತಾ? ನೀವು ತಿನ್ನೋ ಈ ಆಹಾರಗಳು ಆಲ್ಕೋಹಾಲ್‌ಗಿಂತಲೂ ಡೇಂಜರಸ್!
ತೆಂಗಿನ ಕಾಯಿಯ ಹಿಟ್ಟು : ಒಣಗಿದ ತೆಂಗಿನ ಕಾಯಿ ತುರಿಯನ್ನು ಹಿಟ್ಟು ಮಾಡುವ ಮೂಲಕ ತೆಂಗಿನ ಕಾಯಿಯ ಅಂಟು ಮುಕ್ತ ಹಿಟ್ಟನ್ನು ತಯಾರಿಸಲಾಗುತ್ತದೆ. ಇದು ಗೋಧಿ ಹಿಟ್ಟಿಗಿಂತ ಹೆಚ್ಚಿನ ಕ್ಯಾಲೋರಿ, ಪ್ರೋಟೀನ್, ಕೊಬ್ಬು, ಫೈಬರ್, ಕಬ್ಬಿಣ ಮತ್ತು ಪೊಟ್ಯಾಸಿಯಂನಂತಹ ಖನಿಜಗಳನ್ನು ಹೊಂದಿದೆ. ಇದು ತೂಕ ಹೆಚ್ಚಿಸುವುದರೊಂದಿಗೆ ಶರೀರದ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ತೆಂಗಿನ ತುರಿಯ ಹಿಟ್ಟು ಉತ್ಕರ್ಷಣ ನಿರೋಧಕವಾಗಿದೆ ಮತ್ತು ಎಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ.
ಬಾದಾಮಿ ಹಿಟ್ಟು : ಬಾದಾಮಿಯನ್ನು ಬೇಯಿಸಿ ನುಣ್ಣಗೆ ರುಬ್ಬಿ ಬಾದಾಮಿ ಹಿಟ್ಟನ್ನು ತಯಾರಿಸಲಾಗುತ್ತದೆ. ಇದು ನೈಸರ್ಗಿಕವಾಗಿ ಗ್ಲುಟನ್ ಮುಕ್ತವಾಗಿದೆ. ಬಾದಾಮಿ ಹಿಟ್ಟಿನಲ್ಲಿ ಮೆಗ್ನೀಸಿಯಮ್, ಒಮೇಗಾ 3, ಅನ್ ಸ್ಯಾಚುರೇಟೆಡ್ ಕೊಬ್ಬು, ಪ್ರೋಟೀನ್ ಮತ್ತು ಕ್ಯಾಲೋರಿ ಅಧಿಕವಾಗಿದೆ. ಬಾದಾಮಿ ಹಿಟ್ಟು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಹಾಗೂ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಈ ಹಿಟ್ಟಿನಿಂದ ತಯಾರಿಸಿದ ರೊಟ್ಟಿ ಸೇವಿಸುವುದರಿಂದ ತೂಕ ಏರಿಕೆಯಾಗುತ್ತದೆ.
ಬಟರ್ ಚಿಕನ್ ಕಂಡು ಹಿಡಿದಿದ್ದು ಯಾರು; ದೆಹಲಿ ಹೈಕೋರ್ಟ್‌ಗೂ ತಲುಪಿತು ರೆಸ್ಟೋರೆಂಟ್ ಮಾಲೀಕರ ವಾಗ್ವಾದ!
ಕ್ವಿನೋವಾ ಹಿಟ್ಟು : ಕ್ವಿನೋವಾ ಅಂಟು ಮುಕ್ತ ಹಿಟ್ಟನ್ನು ಬಳಸುವುದರಿಂದ ನಿಮ್ಮ ತೂಕ ತ್ವರಿತವಾಗಿ ಏರಿಕೆಯಾಗುತ್ತದೆ. ಇದು ಪ್ರೋಟೀನ್, ಫೈಬರ್, ಕಬ್ಬಿಣ ಮತ್ತು ಅನ್ ಸ್ಯಾಚುರೇಟೆಡ್ ಕೊಬ್ಬಿನ ಮೂಲವಾಗಿದೆ. ಕ್ವಿನೋವಾ ಹಿಟ್ಟು ಉತ್ಕರ್ಷಣ ನಿರೋಧಕ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಹುರುಳಿ ಹಿಟ್ಟು : ಹುರುಳಿ ಹಿಟ್ಟು ಕೂಡ ಅಂಟು ಮುಕ್ತ ಹಿಟ್ಟಾಗಿದ್ದು ಫೈಬರ್, ಪ್ರೋಟೀನ್, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ರಂಜಕಗಳಂತಹ ಪೋಷಕಾಂಶಗಳ ಮೂಲವಾಗಿದೆ. ಇದರ ಸೇವನೆಯಿಂದ ತೂಕ ಹೆಚ್ಚಾಗುತ್ತದೆ ಮತ್ತು ಇದು ಮಧುಮೇಹವನ್ನು ನಿಯಂತ್ರಿಸುತ್ತದೆ. ಹುರುಳಿ ಹಿಟ್ಟಿನಲ್ಲಿ ಕ್ಯಾನ್ಸರ್ ವಿರೋಧಿ, ಉರಿಯೂತ ವಿರೋಧಿ ಹಾಗೂ ಮಧುಮೇಹ ವಿರೋಧಿ ಗುಣವಿದೆ. ಆರೋಗ್ಯಕರ ಹುರುಳಿ ಹಿಟ್ಟು ತೂಕವನ್ನು ಕೂಡ ಹೆಚ್ಚಿಸುತ್ತದೆ.
ಅಕ್ಕಿ ಹಿಟ್ಟು : ರೊಟ್ಟಿ ತಯಾರಿಸುವಾಗ ಅಕ್ಕಿ ಹಿಟ್ಟನ್ನು ಬಹುತೇಕ ಮಂದಿ ಬಳಕೆ ಮಾಡುತ್ತಾರೆ. ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಇದು ಉತ್ತಮವಾಗಿದೆ ಆದರೆ ಮಧುಮೇಹಿಗಳು ಮಾತ್ರ ಅಕ್ಕಿ ಹಿಟ್ಟನ್ನು ಕಡಿಮೆ ಬಳಕೆ ಮಾಡಬೇಕು. ಏಕೆಂದರೆ ಇದರಲ್ಲಿ ಗ್ಲೈಸೆಮಿಕ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.