ನಿಮಗೆ ಗೊತ್ತಾ? ನೀವು ತಿನ್ನೋ ಈ ಆಹಾರಗಳು ಆಲ್ಕೋಹಾಲ್‌ಗಿಂತಲೂ ಡೇಂಜರಸ್!
ಆಲ್ಕೋಹಾಲ್ ಗಿಂತ ಆರೋಗ್ಯಕ್ಕೆ ಹೆಚ್ಚು ಹಾನಿ ಮಾಡುವ ಕೆಲವು ಆಹಾರಗಳು ಇವೆ ಗೊತ್ತಾ? ಈ ವಿಷಯಗಳನ್ನು ಆಹಾರದ ಭಾಗವಾಗಿ ನೀವು ಸೇವಿಸುತ್ತೀರಿ. ಇನ್ನು ಮುಂದೆ ಅವುಗಳನ್ನು ತಿನ್ನೋದನ್ನು ಬಿಡಿ.
ಡ್ರಗ್ಸ್ , ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತೆ. ಇದನ್ನು ಸೇವಿಸಲೇ ಬಾರದು, ಅಥವಾ ಕನಿಷ್ಟ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಎಂದು ನಂಬುವ ಜನರು ಸಹ ಇದ್ದಾರೆ. ಆದರೆ ನಾವು ಸೇವಿಸುವ ಕೆಲವೊಂದು ಆಹಾರಗಳು ಆಲ್ಕೋಹಲ್ (Alcohol) ಗಿಂತ ಹೆಚ್ಚು ಪರಿಣಾಮ ಬೀರುತ್ತೆ ಅನ್ನೋದು ನಿಮಗೆ ಗೊತ್ತಾ?
ಹೌದು ನಾವು ದಿನನಿತ್ಯ ಬಳಸುವಂತಹ ಕೆಲವೊಂದು ಆಹಾರ ವಸ್ತುಗಳು ದೇಹಕ್ಕೆ ಒಂದಲ್ಲ, ಅನೇಕ ರೀತಿಯಲ್ಲಿ ಹಾನಿ ಮಾಡುತ್ತವೆ ಮತ್ತು ದೇಹವನ್ನು ಒಳಗಿನಿಂದ ಟೊಳ್ಳಾಗಿಸುತ್ತದೆ. ನಾವು ಪ್ರತಿನಿತ್ಯ ಸೇವಿಸುವ ಕೆಲವೊಂದು ಆಹಾರದಲ್ಲೇ ಇಂತಹ ವಿಷ ಸೇರಿ ಹೋಗಿವೆ. ಹಾಗಿದ್ರೆ ಅಂತಹ ಆಹಾರಗಳು ಯಾವುವು? ಅವುಗಳನ್ನು ಅವಾಯ್ಡ್ ಮಾಡೋದು ಹೇಗೆ ನೋಡೋಣ.
ಆರೋಗ್ಯಕ್ಕೆ ಹಾನಿ ಮಾಡುವ ಆಹಾರ
ಸೋಡಿಯಂ (Sodium)
ಸೋಡಿಯಂ ದೇಹದ ಮೇಲೆ ಒಂದಲ್ಲ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸೋಡಿಯಂನ ಅತಿ ಸೇವನೆಯು ಅಧಿಕ ರಕ್ತದೊತ್ತಡಕ್ಕೆ (High Blood Pressure) ಕಾರಣವಾಗಬಹುದು. ಇದು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಸೋಡಿಯಂ ಸೇವನೆಯು ಯಕೃತ್ತಿಗೆ ಸಹ ಹಾನಿಕಾರಕವಾಗಿದೆ. ಉಪ್ಪು ಸೋಡಿಯಂ ಅನ್ನು ಹೊಂದಿರುತ್ತದೆ, ಆದ್ದರಿಂದ ಉಪ್ಪಿನ ಸೇವನೆ ಕಡಿಮೆ ಮಾಡಿ ಎನ್ನಲಾಗುತ್ತದೆ. ಹೆಚ್ಚುವರಿ ಉಪ್ಪು ಮೂಳೆಗಳನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಸಕ್ಕರೆಯುಕ್ತ ಆಹಾರಗಳು (sugar food)
ಹೆಚ್ಚುವರಿ ಸಕ್ಕರೆಯನ್ನು ಒಳಗೊಂಡಿರುವ ಅನೇಕ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸೋಡಾಗಳು, ಕ್ಯಾಂಡಿಗಳು, ಪೇಸ್ಟ್ರಿಗಳು ಮತ್ತು ಕೇಕ್ ಗಳು ಹೆಚ್ಚುವರಿ ಸಕ್ಕರೆಯನ್ನು ಹೊಂದಿರುತ್ತವೆ. ಸಕ್ಕರೆ ಹೆಚ್ಚಾಗಿ ತಿನ್ನೋದರಿಂದ ತೂಕ ಹೆಚ್ಚಾಗುತ್ತದೆ, ಅಲ್ಲದೇ ಕೊಬ್ಬಿನ ಮಟ್ಟದ ಸಮಸ್ಯೆಯನ್ನು ಸಹ ಹೆಚ್ಚಿಸುತ್ತದೆ. ಅದಕ್ಕಾಗಿಯೇ ಕಡಿಮೆ ಸಕ್ಕರೆಯನ್ನು ಸೇವಿಸಲು ಹೇಳಲಾಗುತ್ತೆ.
ಸಂಸ್ಕರಿಸಿದ ಮಾಂಸಗಳು (meat)
ಸಂಸ್ಕರಿಸಿದ ಮಾಂಸವು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಸೋಡಿಯಂ ಮತ್ತು ನೈಟ್ರೇಟ್ ಅನ್ನು ಹೊಂದಿರುತ್ತದೆ. ಇವೆರಡೂ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತವೆ. ಇವೆರಡರ ಅತಿಯಾದ ಸೇವನೆಯು ದೇಹವನ್ನು ಗಂಭೀರ ಕಾಯಿಲೆಗಳಿಗೆ ಒಳಗಾಗುವಂತೆ ಮಾಡುತ್ತೆ.
ಕೋಲ್ಡ್ ಡ್ರಿಂಕ್ಸ್ (cold drink)
ಇತ್ತೀಚಿನ ದಿನಗಳಲ್ಲಿ, ನಾವು ಹೊರಗೆ ಏನನ್ನಾದರೂ ಸೇವಿಸಿದರೆ, ಅದರ ಜೊತೆಗೆ ಕೋಲ್ಡ್ ಡ್ರಿಂಕ್ಸ್ ಸಹ ತೆಗೆದುಕೊಳ್ಳುತ್ತೇವೆ. ತಂಪು ಪಾನೀಯಗಳನ್ನು ಪ್ರತಿದಿನ ಕುಡಿದರೆ, ಅವು ಕೊಬ್ಬಿನ ಯಕೃತ್ತಿನ ಅಪಾಯವನ್ನುಂಟು ಮಾಡುತ್ತವೆ. ಅದಕ್ಕಾಗಿಯೇ ತಂಪು ಪಾನೀಯಗಳ ಬದಲು ತಾಜಾ ಹಣ್ಣಿನ ರಸಗಳನ್ನು ಸೇವಿಸೋದು ಉತ್ತಮ. ಅಷ್ಟೇ ಅಲ್ಲ ಕೋಲ್ಡ್ ಆಗಿಲ್ಲದ, ಹೆಚ್ಚು ಸಕ್ಕರೆ ಇಲ್ಲದ ಜ್ಯೂಸ್ ಸೇವಿಸಿ.