Healthy Food : ತೂಕ ಇಳಿಸ್ಬೇಕೆಂದ್ರೆ ಇದನ್ನು ತಪ್ಪದೆ ತಿನ್ನಿ
ತರಕಾರಿ ಬರೀ ಹಸಿರು ಬಣ್ಣದಲ್ಲಿ ಮಾತ್ರ ಇರೋದಿಲ್ಲ. ಬಣ್ಣ ಬಣ್ಣದ ತರಕಾರಿಗಳನ್ನು ನಾವು ಕಾಣ್ತೇವೆ. ಈ ಬಣ್ಣದ ತರಕಾರಿ ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ. ಕೆಂಪು ಪಾಲಕ್ ಸೇವನೆಯಿಂದಲೂ ಅನೇಕ ಲಾಭವಿದೆ.
ತೂಕ ಇಳಿಸಿಕೊಳ್ಳಬೇಕು, ಇದು ಈಗಿನ ದಿನಗಳಲ್ಲಿ ಪ್ರತಿಯೊಬ್ಬರ ಗುರಿ. ಅದೆಷ್ಟು ಕಷ್ಟಪಟ್ಟರೂ ತೂಕ ಕಡಿಮೆ ಆಗ್ತಿಲ್ಲ ಎಂಬ ಅಳಲನ್ನು ನಾವು ಪ್ರತಿಯೊಬ್ಬರ ಬಾಯಲ್ಲಿ ಕೇಳ್ತೇವೆ. ತೂಕ ಇಳಿಕೆಗೆ ವ್ಯಾಯಾಮ, ಯೋಗ, ಜಿಮ್, ವಾಕಿಂಗ್ ಮಾತ್ರವಲ್ಲ ಉತ್ತಮ ಜೀವನಶೈಲಿ ಜೊತೆ ಆರೋಗ್ಯಕರ ಆಹಾರ ಸೇವನೆ ಕೂಡ ಮುಖ್ಯ. ಅನೇಕರು ಆಹಾರ ಸೇವನೆಯಲ್ಲಿ ನಿರ್ಲಕ್ಷ್ಯ ಮಾಡ್ತಾರೆ. ಹಾಗಾಗಿ ಅದೆಷ್ಟೆ ಪ್ರಯತ್ನಿಸಿದ್ರೂ ತೂಕ ಇಳಿಯೋದಿಲ್ಲ.
ತೂಕ (Weight) ಇಳಿಕೆ ಎಂಬ ವಿಷ್ಯ ಬಂದಾಗ ಹಸಿರು ತರಕಾರಿ (Vegetable) ಗಳು ನೆನಪಿಗೆ ಬರುತ್ತವೆ. ಈ ಪಟ್ಟಿಯಲ್ಲಿ ಹಸಿರು ಪಾಲಕ್ ಕೂಡ ಸೇರಿದೆ. ಹಸಿರು ಪಾಲಕ್ (Spinach) ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಅನೇಕರಿಗೆ ಕೆಂಪು ಪಾಲಕ್ ಬಗ್ಗೆ ಮಾಹಿತಿ ಇಲ್ಲ. ಕೆಂಪು ಪಾಲಕ ಪೌಷ್ಟಿಕಾಂಶದ ಅತ್ಯುತ್ತಮ ಮೂಲವಾಗಿದೆ. ಕೆಂಪು ಪಾಲಕ್ ನ ಎಲೆಯಿಂದ ಹಿಡಿದು ಕಾಂಡದವರೆಗೆ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು. ಪಾಲಕ್ ನ ಎಲೆ ಹಾಗೂ ಕಾಂಡ ಎಲ್ಲದರ ಮೇಲೆ ಕೆಂಪು ದ್ರವ ಇರುತ್ತದೆ. ಆಫ್ರಿಕನ್ ಸಾಂಪ್ರದಾಯಿಕ ಔಷಧದಲ್ಲಿ ಕೆಂಪು ಪಾಲಕನ್ನು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಗುಣಪಡಿಸಲು ಬಳಕೆ ಮಾಡಲಾಗುತ್ತದೆ. ಅನೇಕ ಪೌಷ್ಠಿಕಾಂಶವುಳ್ಳ ಕೆಂಪು ಪಾಲಕ್, ಸಾಕಷ್ಟು ಆರೋಗ್ಯ ಪ್ರಯೋಜನವನ್ನು ಹೊಂದಿದೆ. ನಾವಿಂದು ಕೆಂಪು ಪಾಲಕ್ ಪ್ರಯೋಜನದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
Healthy Food : ಮಧ್ಯರಾತ್ರಿ ಗ್ಯಾಸ್ಟ್ರಿಕ್ – ಹುಳಿತೇಗಿಗೆ ಇದಿರಬಹುದು ಕಾರಣ
ಕೆಂಪು ಪಾಲಕ್ ನಿಂದಾಗುವ ಲಾಭಗಳು :
ತೂಕ ಇಳಿಕೆಗೆ ಬೆಸ್ಟ್ : ತೂಕ ಕಡಿಮೆ ಮಾಡಲು ಬಯಸುವವರು ಡಯಟ್ ನಲ್ಲಿ ಕೆಂಪು ಪಾಲಕ್ ಇರುವಂತೆ ನೋಡಿಕೊಳ್ಳಿ. ಪಾಲಕ್ ನಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಅದನ್ನು ಸೇವನೆ ಮಾಡಿದ ನಂತ್ರ ನಿಮಗೆ ತುಂಬಾ ಸಮಯ ಹಸಿವಾಗುವುದಿಲ್ಲ. ಹಾಗಾಗಿ ನೀವು ಅನಾರೋಗ್ಯಕರ ಆಹಾರ ಸೇವನೆಯನ್ನು ಕಡಿಮೆ ಮಾಡ್ತೀರಿ. ಕೆಂಪು ಪಾಲಕ್, ಹಸಿವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಕೆಂಪು ಪಾಲಕ್ ನಲ್ಲಿರುವ ಪ್ರೋಟೀನ್, ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೆಂಪು ಪಾಲಕ್ ನಲ್ಲಿರುವ ಪ್ರೋಟೀನ್, ಒಂದು ರೀತಿಯ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದು ಹಸಿವನ್ನು ಹಾಗೂ ತೂಕ ಏರಿಕೆಯನ್ನು ನಿಯಂತ್ರಿಸುತ್ತದೆ.
ಜೀರ್ಣಕ್ರಿಯೆಗೆ ಒಳ್ಳೆಯದು : ಜೀರ್ಣಕ್ರಿಯೆ ಸರಿಯಾಗಿ ಆಗಿಲ್ಲವೆಂದ್ರೆ ನಾನಾ ಆರೋಗ್ಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಕೆಲಸ ಮಾಡ್ತಿಲ್ಲವೆಂದಾದ್ರೆ ನೀವು ಕೆಂಪು ಪಾಲಕ್ ತಿನ್ನಿ. ಇದರಲ್ಲಿರುವ ಫೈಬರ್, ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ಮಾಡುತ್ತದೆ. ಕೊಲೊನ್ ಅನ್ನು ಶುದ್ಧೀಕರಿಸುವ ಮೂಲಕ, ಫೈಬರ್ ನಿಮ್ಮ ಕರುಳಿನ ಚಲನೆಯ ಪ್ರಕ್ರಿಯೆಯನ್ನು ಸರಾಗಗೊಳಿಸಲು ನೆರವಾಗುತ್ತದೆ. ಕರುಳಿನ ಆರೋಗ್ಯ ಹಾಗೂ ಜೀರ್ಣಕ್ರಿಯೆ ಎರಡೂ ಸುಧಾರಿಸುವ ಕಾರಣ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಸರಿಯಾಗಿ ಹೊಟ್ಟೆ ಹಾಕಿ ಕೊಳ್ಳದೇ ಹೋದರೆ, ಬೇರೆ ಬೇರೆ ರೋಗ ಕಾಡೋದು ಗ್ಯಾರಂಟಿ!
ಕಬ್ಬಿಣದ ಕೊರತೆ ನೀಗಿಸುತ್ತೆ ಕೆಂಪು ಪಾಲಕ್ : ಕೆಂಪು ಪಾಲಕ್ ನಲ್ಲಿ ಕಬ್ಬಿಣದ ಅಂಶ ಹೆಚ್ಚಿರುತ್ತದೆ. ಇದು ರಕ್ತದ ಹರಿವಿಗೆ ನೆರವಾಗುತ್ತದೆ. ಕೆಂಪು ಪಾಲಕನ್ನು ನೀವು ಪ್ರತಿ ದಿನ ಸೇವನೆ ಮಾಡೋದ್ರಿಂದ ರಕ್ತ ಶುದ್ಧವಾಗುತ್ತದೆ. ಹಿಮೋಗ್ಲೋಬಿನ್ ಮಟ್ಟ ಸುಧಾರಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ನೀವಾಗಿದ್ದರೆ ಕೆಂಪು ಪಾಲಕನ್ನು ನೀವು ನಿಯಮಿತವಾಗಿ ಸೇವನೆ ಮಾಡಬೇಕು.
ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದು : ಮೂತ್ರಪಿಂಡದ ಆರೋಗ್ಯಕ್ಕೂ ಕೆಂಪು ಪಾಲಕ್ ಬಹಳ ಒಳ್ಳೆಯದು ಎನ್ನುತ್ತದೆ ವಿವಿಧ ಅಧ್ಯಯನದ ವರದಿ. ನಿಮ್ಮ ದೇಹದಲ್ಲಿನ ವಿಷವನ್ನು ಹೊರಹಾಕಲು ಕೆಂಪು ಪಾಲಕ್ ಸಹಾಯಕಾರಿ.
ಬಲಪಡೆಯುತ್ತೆ ಮೂಳೆ : ಕೆಂಪು ಪಾಲಕ್ ನಲ್ಲಿ ವಿವಿಧ ವಿಟಮಿನ್ ಗಳಿವೆ. ವಿಟಮಿನ್ ಕೆ ಕೂಡ ಕೆಂಪು ಪಾಲಕ್ ನಲ್ಲಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದುರ್ಬಲ ಮೂಳೆಗಳು ಅಥವಾ ಕೀಲು ನೋವನ್ನು ದೂರು ಮಾಡುತ್ತದೆ. ಕೆಂಪು ಪಾಲಕನಲ್ಲಿ ಫೈಟೊಸ್ಟೆರಾಲ್ ಇದ್ದು, ಇದು ರಕ್ತಕ್ಕೆ ಒಳ್ಳೆಯದು. ಒತ್ತಡ ಮತ್ತು ಹೃದಯ ಕಾಯಿಲೆಗಳಿಂದ ನಿಮ್ಮನ್ನು ದೂರವಿಡುವ ಕೆಲಸವನ್ನು ಕೆಂಪು ಪಾಲಕ್ ಮಾಡುತ್ತದೆ.