ಅತ್ತೆ ಜೊತೆ ಸೇರಿ ದಕ್ಷಿಣ ಭಾರತದ ಆಹಾರ ತಯಾರಿಸಿದ ಡಚ್ ಸೊಸೆ: ವಿಡಿಯೋ ವೈರಲ್‌

ಭಾರತದ ಹುಡುಗನನ್ನು ಮದುವೆಯಾಗಿ ಬಂದ ಡಚ್‌ ಮೂಲದ ಸೊಸೆಯೊಬ್ಬರು ತನ್ನ ಅತ್ತೆಯ ಜೊತೆ ಸೇರಿ ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಆಹಾರವನ್ನು ಸಖತ್ ಆಗಿ ತಯಾರಿಸುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Dutch daughter prepared south indian food with her mother in law akb

ಮದುವೆ ಸ್ವರ್ಗದಲ್ಲಿ ನಿಗದಿಯಾಗಿ ಭೂಮಿ ಮೇಲೆ ನಡೆಯುವಂತೆ ಕೆಲವೊಂದು ಮದುವೆಗಳನ್ನು ನೋಡಿದಾಗ ಇದು ನಿಜ ಎನಿಸುವುದು. ದೇಶ ಭಾಷೆ ಧರ್ಮವನ್ನು ಮೀರಿ ಕೆಲವು ಮದುವೆಗಳು ನಡೆಯುತ್ತವೆ. ಹಾಗೆಯೇ ಭಾರತದ ಹುಡುಗನನ್ನು ಮದುವೆಯಾಗಿ ಬಂದ ಡಚ್‌ ಮೂಲದ ಸೊಸೆಯೊಬ್ಬರು ತನ್ನ ಅತ್ತೆಯ ಜೊತೆ ಸೇರಿ ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಆಹಾರವನ್ನು ಸಖತ್ ಆಗಿ ತಯಾರಿಸುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡಚ್ ಮೂಲದ ಸ್ಟೆಫನಿ ಭಾರತೀಯ ಮೂಲದ ಪ್ರಭು ಅವರನ್ನು ಮದುವೆಯಾಗಿದ್ದು, ಈ ಸಂಸ್ಕೃತಿಯನ್ನು ಬಹು ಬೇಗನೆ ಅರಿಯುವ ಮೂಲಕ ಪ್ರಭು ಕುಟುಂಬದೊಂದಿಗೆ ಬೆರೆತು ಹೋಗಿದ್ದಾರೆ. ಪ್ರಭು ಅವರ ತಾಯಿಯ ಜೊತೆ ಸೇರಿ ಸ್ಟೆಫನಿ ವಿವಿಧ ದಕ್ಷಿಣ ಭಾರತದ ತಿನಿಸುಗಳನ್ನು ಶುಚಿರುಚಿಯಾಗಿ ತಯಾರಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಪ್ರಭು ಅವರ ತಾಯಿ ತಮ್ಮ ವಿದೇಶಿ ಸೊಸೆಗೆ ದಕ್ಷಿಣ ಭಾರತದ ಕೆಲ ತಿನಿಸುಗಳನ್ನು ಹೇಗೆ ತಯಾರಿಸುವುದು ಎಂದು ಹೇಳಿಕೊಡುತ್ತಿದ್ದಾರೆ. ಅತ್ತೆ ಹೇಳಿ ಕೊಟ್ಟಂತೆ ಸೊಸೆ ಮಾಡುತ್ತಿದ್ದಾರೆ. ದೋಸೆ, ಇಡ್ಲಿ, ಪೂರಿ, ಅಪ್ಪಂ, ಪುಟ್ಟು, ಕುಳ್ಳಿ, ಪನಿಯರಂ, ರವೆ ಉಪ್ಪಿಟ್ಟು ಮುಂತಾದ ತಿನಿಸುಗಳನ್ನು ಈ ಅತ್ತೆ ಸೊಸೆ ಜೋಡಿ ಜೊತೆಯಾಗಿ ತಯಾರಿಸಿದ್ದಾರೆ. 

ರವಿಚಂದ್ರನ್ ಸೊಸೆ ಸಂಗೀತಾಗೆ ಮೇಕಪ್ ಮಾಡಿದ ಪನ್ನಾ: ವಿಡಿಯೋ ವೈರಲ್

 
 
 
 
 
 
 
 
 
 
 
 
 
 
 

A post shared by Prabhu Visha (@prabhuvisha)

 

ತಿನಿಸುಗಳನ್ನು ತಯಾರಿಸಿದ ಬಳಿಕ ಇಡೀ ಕುಟುಂಬ ಜೊತೆಯಾಗಿ ಕುಳಿತು ಆಹಾರವನ್ನು ಸೇವಿಸುತ್ತಿದ್ದಾರೆ. ಈ ವಿಡಿಯೋವನ್ನು ಇನಸ್ಟಾಗ್ರಾಮ್‌ನಲ್ಲಿ ಪ್ರಭು ಅವರು ಪೋಸ್ಟ್ ಮಾಡಿದ್ದು, 7 ಮಿಲಿಯನ್‌ಗೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜೊತೆಗೆ ಸೊಸೆಗೆ ಸೊಗಸಾಗಿ ಅಡುಗೆ ಮಾಡಲು ಹೇಳಿ ಕೊಟ್ಟ ಪ್ರಭು ತಾಯಿಗೆ ಧನ್ಯವಾದ ತಿಳಿಸಿದ್ದಾರೆ. 

ಸೊಸೆ, ಮಗ, ಮಗಳು ಏರ್‌ಲೈನ್ಸ್‌ನಲ್ಲಿ: 7 ಮಕ್ಕಳಿದ್ದ ಕುಟುಂಬದಲ್ಲಿ ಅತ್ಯಂತ ಕಿರಿಯರು ಕೋವಿಂದ್!

ವಿಶೇಷವಾಗಿ ಮದುವೆಯಾಗಿ ಮನೆಗೆ ಸೊಸೆಯಾಗಿ ಬರುವ ಹೆಣ್ಣು ಮಗಳು ಹೊಸ ವಾತಾವರಣ, ಪರಿಸರಕ್ಕೆ ಹೊಂದಿಕೊಳ್ಳಲು ಬಹುತೇಕ ಕಷ್ಟಪಡುತ್ತಾರೆ.  ತಾವು ಹುಟ್ಟಿ ಬೆಳೆದ ಮನೆ, ಪ್ರೀತಿ ತುಂಬಿ ಸಾಕಿದ ಪೋಷಕರು ಸಹೋದರ ಸಹೋದರಿಯರು ಸೇರಿದಂತೆ ತನ್ನ ಕುಟುಂಬವನ್ನೆಲ್ಲಾ ತೊರೆದು ಮಹಿಳೆ ಬೇರೆಯದೇ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಮಹಿಳೆಗೆ ಧೀರ್ಘಕಾಲವೇ ಬೇಕಾಗುತ್ತದೆ. ಒಂದೇ ಜಾತಿ ಒಂದೇ ಪಂಗಡ, ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಸಮುದಾಯ ರಾಜ್ಯ ಹೀಗೆ ಎಲ್ಲಾ ಲೆಕ್ಕಾಚಾರ ಹಾಕಿ ಪೋಷಕರೇ ನಿರ್ಧರಿಸಿ ಮಾಡಿದ ಮದುವೆಯಲ್ಲೇ ಕೆಲವು ಹೆಣ್ಣು ಮಕ್ಕಳು ಹೊಸ ಪರಿಸರ ಹೊಸ ಜನರ ಜೊತೆ ಬೆರೆಯಲಾಗದೇ ಕಷ್ಟಪಡುವುದನ್ನು ನೋಡಬಹುದು. ಅಂತಹದರಲ್ಲಿ ಈ ದೇಶದ ಭಾಷೆ ಸಂಸ್ಕೃತಿ ಆಹಾರ, ಪರಂಪರೆಯ ಗಂಧ ಗಾಳಿ ತಿಳಿಯದ ದೂರದ ಡಚ್‌ ದೇಶದ ಹೆಣ್ಣೊಬ್ಬಳು, ಈ ಭಾರತೀಯ ಸಂಸ್ಖೃತಿಯೊಂದಿಗೆ ಹೀಗೆ ಸಲೀಸಾಗಿ ಬೆರೆತು ಕಲೆತು ಹೋಗಿರುವುದು ಅಚ್ಚರಿ ಮೂಡಿಸಿದೆ.
 

Latest Videos
Follow Us:
Download App:
  • android
  • ios