ಅಬ್ಬಬ್ಬಾ..ನ್ಯೂ ಇಯರ್‌ಗೆ ಸ್ವಿಗ್ಗಿಗೆ ಬಂದ ಬಿರಿಯಾಗಿ ಆರ್ಡರ್ ಎಷ್ಟ್ ಗೊತ್ತಾ ?
ಹೊಸ ವರ್ಷ ಅಂದ್ರೆ ವೆರೈಟಿ ಫುಡ್, ಡ್ರಿಂಕ್ಸ್ ಅಂತೂ ಇರ್ಲೇಬೇಕು. ಅದರಲ್ಲೂ ಹೆಚ್ಚಿನವರು ಬಿರಿಯಾನಿ ಜೊತೇನೆ ಹೊಸ ವರ್ಷ ಸೆಲಬ್ರೇಟ್ ಮಾಡೋಣ ಅಂದ್ಕೊಳ್ತಾರೆ. ಹೀಗೆ ಹೊಸವರ್ಷಕ್ಕೆ ಸ್ವಿಗ್ಗಿಗೆ ಬಂದ ಬಿರಿಯಾನಿ ಆರ್ಡರ್ ಎಷ್ಟು ಗೊತ್ತಾ ? ಗೊತ್ತಾದ್ರೆ ನೀವು ಹೌಹಾರೋದು ಖಂಡಿತ.
ಹೊಸ ವರ್ಷ (New year) ಅಂದ್ರೆ ಹಳೆಯ ವರ್ಷವನ್ನು ಬಿಟ್ಟು, ನೋವು, ಕಷ್ಟ, ಕಹಿ ಘಟನೆಗಳನ್ನು ಮರೆತು ಹೊಸ ವರ್ಷಕ್ಕೆ ಹೆಜ್ಜೆಯಿಡುವ ಸಮಯ. ಹೀಗಾಗಿಯೇ ಈ ಸಮಯವನ್ನು ಮೆಮೊರೆಬಲ್‌ಗೊಳಿಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ತಮ್ಮ ಫೇವರಿಟ್ ಪ್ಲೇಟ್ ವಿಸಿಟ್ ಮಾಡುವುದು, ನೆಚ್ಚಿನ ಆಹಾರ (Food) ತಿನ್ನುವುದು, ಪ್ರೀತಿ ಪಾತ್ರರನ್ನು ಭೇಟಿಯಾಗುವುದು ಮೊದಲಾದವುಗಳನ್ನು ಮಾಡ್ತಾರೆ. ಇನ್ನೂ ಹೆಚ್ಚಿನವರು ಹೊಸ ವರ್ಷಕ್ಕೆ ಕೌಂಟ್ ಡೌನ್ ಆಗುವಾಗ ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಾರೆ. ಅದಲ್ಲದೆ ತಮ್ಮ ನೆಚ್ಚಿನ ಆಹಾರದೊಂದಿಗೆ ಹೊಸ ವರ್ಷ ಸ್ವಾಗತಿಸಲು ಹೆಚ್ಚಿನವರು ಉತ್ಸುಕರಾಗಿರುತ್ತಾರೆ. ಅದರಲ್ಲೂ ಹ್ಯಾಪಿನೆಸ್ ಅಂದ್ರೆ ಅಲ್ಲಿ ಬಿರಿಯಾನಿ ಇಲ್ದೆ ಆಗುತ್ತಾ ?
ಬಿರಿಯಾನಿ ಸವಿದು ಹೊಸ ವರ್ಷ ಸ್ವಾಗತಿಸಿದ ಜನ
ಹೊಸ ವರ್ಷವನ್ನು ಜನರು ತುಂಬಾ ಖುಷಿಯಿಂದ ಬರ ಮಾಡಿಕೊಂಡಿದ್ದಾರೆ. ಬಿರಿಯಾನಿಯನ್ನು ಸವಿದು ಎಂಜಾಯ್ ಮಾಡಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಫುಡ್ ಡೆಲಿವರಿ ಆಪ್ ಸ್ವಿಗ್ಗಿ ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಿದೆ ಮತ್ತು ರಾತ್ರಿ 10.25 ರ ವೇಳೆಗೆ ಅಪ್ಲಿಕೇಶನ್ ದೇಶಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಟ್ವಿಟರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೈದರಾಬಾದಿ ಬಿರಿಯಾನಿಗೆ ಶೇಕಡಾ 75.4 ರಷ್ಟು ಆರ್ಡರ್‌ಗಳು ಬಂದಿವೆ, ನಂತರ ಲಕ್ನೋ - 14.2 ಮತ್ತು ಕೋಲ್ಕತ್ತಾ- 10.4 ಶೇಕಡಾ ಆರ್ಡರ್ ಪಡೆದುಕೊಂಡಿದೆ.
New Year 2023: ರೆಸಲ್ಯೂಶನ್ ಫೇಲ್ ಆಗೋದು ಇದೇ ಕಾರಣಕ್ಕೆ, ನೀವಿಂಥಾ ತಪ್ಪು ಮಾಡ್ಬೇಡಿ
3.50 ಲಕ್ಷ ಆರ್ಡರ್‌ಗಳೊಂದಿಗೆ, ಬಿರಿಯಾನಿ, ಸ್ವಿಗ್ಗಿಯಲ್ಲಿ ವಿತರಿಸಲಾದ ಟಾಪ್ ಫುಡ್ ಎಂಬ ಸ್ಥಾನವನ್ನು ಪಡೆದುಕೊಂಡಿದೆ. ಆ್ಯಪ್ ಶನಿವಾರ ಸಂಜೆ 7.20ಕ್ಕೆ 1.65 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ತಲುಪಿಸಿದೆ. ಹೈದರಾಬಾದ್‌ನ ಟಾಪ್ ಬಿರಿಯಾನಿ ಮಾರಾಟದ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಬವರ್ಚಿ, 2021 ರ ಹೊಸ ವರ್ಷದ ಮುನ್ನಾದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ವಿತರಿಸಿತು ಮತ್ತು ಡಿಸೆಂಬರ್ 31, 2022 ಕ್ಕೆ ಬೇಡಿಕೆಯನ್ನು ಪೂರೈಸಲು 15 ಟನ್ ಆಹಾರವನ್ನು ಸಿದ್ಧಪಡಿಸಿದೆ. dominos_india, 61,287 ಪಿಜ್ಜಾಗಳನ್ನು ವಿತರಿಸಲಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.
ದೇಶಾದ್ಯಂತ 61,000 ಪಿಜ್ಜಾ ವಿತರಣೆ
ಬಿರಿಯಾನಿಯಲ್ಲಷ್ಟೇ ನ್ಯೂ ಇಯರ್ ಪಾರ್ಟಿ ಮುಗಿದಿಲ್ಲ. ಇನ್ನೂ ಹೆಚ್ಚಿನ ಮಂದಿ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಬರ್ತ್‌ಡೇ, ಪಾರ್ಟಿ ಮೊದಲಾದವುಗಳಿದ್ದಾಗ, ಹೆಚ್ಚು ಜನರು ಸೇರಿದಾಗ ಪಿಜ್ಜಾ ಅಂತೂ ಬೇಕೇ ಬೇಕು. ಹಾಗೆಯೇ ಹೊಸ ವರ್ಷದ ಸಂಭ್ರಮವನ್ನು ಹೆಚ್ಚಿಸಲು ಬಹುತೇಕರು ಪಿಜ್ಜಾ ಆರ್ಡರ್ ಮಾಡಿದ್ದಾರೆ. ದೇಶಾದ್ಯಂತ 61,000 ಪಿಜ್ಜಾ ವಿತರಣೆಯಾಗಿದೆ. ಹೊಸ ವರ್ಷದ ಮುನ್ನಾದಿನದಂದು ಭಾರತದಾದ್ಯಂತ ಸುಮಾರು 12,344 ಜನರು ಖಿಚಡಿಯನ್ನು ಆರ್ಡರ್ ಮಾಡಿದ್ದಾರೆ. ಏನೇ ಇರಲಿ, ಕೆಲವು ವಿಷಯಗಳು ಯಾವಾಗಲೂ ಮನೆಯಂತೆ ಭಾಸವಾಗುತ್ತವೆ ಎಂಬುದಕ್ಕೆ ಈ ಸತ್ಯವು ಸೌಮ್ಯವಾದ ಜ್ಞಾಪನೆಯಾಗಿದೆ ಎಂದು ಸ್ವಿಗ್ಗಿ ಟ್ವೀಟ್ ಮಾಡಿದೆ.
New Year 2023: ಅದಾಗಲ್ಲ..ಇದಾಗಲ್ಲ ಅನ್ಬೇಡಿ, ಪಾಸಿಟಿವ್ ಥಿಂಕಿಂಗ್ ಬೆಳೆಸಿಕೊಳ್ಳಲು ಹೀಗ್ ಮಾಡಿ
ಸ್ವಿಗ್ಗಿ ಮಾರ್ಟ್‌ನಲ್ಲೂ ಭರ್ಜರಿ ಆರ್ಡರ್
ಕೇವಲ ಫುಡ್ ಡೆಲಿವರಿ ಆಪ್ ಸ್ವಿಗ್ಗಿಯಲ್ಲಿ ಮಾತ್ರವಲ್ಲ, ಸ್ವಿಗ್ಗಿ ಮಾರ್ಟ್‌ನಲ್ಲೂ ಜನರು ಭರ್ಜರಿಯಾಗಿ ಆರ್ಡರ್ ಮಾಡಿದ್ದಾರೆ. ಈರುಳ್ಳಿ ಪಿಜ್ಜಾಗಳ 15,920 ಆರ್ಡರ್‌ಗಳು, ಈರುಳ್ಳಿ ಕಚೋರಿಯ 7,622 ಆರ್ಡರ್‌ಗಳು, ಈರುಳ್ಳಿ ಉತ್ತಪಮ್‌ನ 5,498 ಆರ್ಡರ್‌ಗಳು, ಈರುಳ್ಳಿ ದೋಸೆಯ 9,692 ಆರ್ಡರ್‌ಗಳು, ಈರುಳ್ಳಿ ಪರಾಠದ 6,357 ಆರ್ಡರ್‌ಗಳು SwiggyInstamartಗೆ ಬಂದಿದೆ. ಇನ್ನೊಂದೆಡೆ ಶನಿವಾರ ಸಂಜೆ 7 ಗಂಟೆಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ 1.76 ಲಕ್ಷ ಪ್ಯಾಕೆಟ್‌ಗಳ ಚಿಪ್ಸ್‌ಗಳನ್ನು ಆರ್ಡರ್ ಮಾಡಲಾಗಿದೆ ಎಂದು ಟ್ವಿಟರ್‌ನಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ 2,757 ಪ್ಯಾಕೆಟ್ ಡ್ಯೂರೆಕ್ಸ್ ಕಾಂಡೋಮ್‌ಗಳನ್ನು ವಿತರಿಸಲಾಗಿದೆ.
ಫುಡ್ ಡೆಲಿವರಿ ಮಾಡಿದ ಝೊಮಾಟೊ ಸಿಇಒ ದೀಪಿಂದರ್ ಗೋಯೆಲ್
ಹೆಚ್ಚಿನ ಜನರು ಹೊಸ ವರ್ಷದ ಮುನ್ನಾದಿನವನ್ನು ಕುಟುಂಬ ಅಥವಾ ಸ್ನೇಹಿತರೊಂದಿಗೆ ಆಚರಿಸಿದರೆ, ಝೊಮಾಟೊ ಸಿಇಒ ದೀಪಿಂದರ್ ಗೋಯೆಲ್ ಅವರು ಫುಡ್ ಡೆಲಿವರಿ ಮಾಡಿದರು. Zomato ಫುಡ್ ಆರ್ಡರ್‌ಗೆ ಹೊಸ ವರ್ಷದ ಹಿಂದಿನ ದಿನ ಹೆಚ್ಚು ಬೇಡಿಕೆಯಿದ್ದ ಕಾರಣ ಸ್ವತಃ ದೀಪಿಂದರ್ ಗೋಯೆಲ್ ಫುಡ್ ಡೆಲಿವರಿ ಮಾಡಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಝೊಮಾಟೊದ ಸಿಗ್ನೇಚರ್ ಕೆಂಪು ಜಾಕೆಟ್ ಧರಿಸಿರುವ ಗೋಯೆಲ್ ಅವರು ತಮ್ಮ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಜೊಮಾಟೊ ಸಿಇಒ ಒಟ್ಟು 4 ಆರ್ಡರ್‌ಗಳನ್ನು ವಿತರಿಸಿದರು, ಅವುಗಳಲ್ಲಿ ಒಂದು ತಮ್ಮ ಮೊಮ್ಮಕ್ಕಳೊಂದಿಗೆ ಹೊಸ ವರ್ಷದ ಮುನ್ನಾದಿನವನ್ನು ಆಚರಿಸುತ್ತಿರುವ ಹಿರಿಯ ದಂಪತಿಗಳಿಗಾಗಿತ್ತು ಎಂದು ಗೋಯೆಲ್ ಹೇಳಿದರು.