Asianet Suvarna News Asianet Suvarna News

ಒಳಗೆ ಜೀವಂತ ಹುಳು ತುಂಬಿಸಿ ಮಾಡಿದ ಮೊಮೊಸ್ : ವಾಂತಿ ಬರಿಸುವ ವೀಡಿಯೋ ಸಖತ್ ವೈರಲ್‌

ಕೆಲವು ಆಹಾರ ಪ್ರಯೋಗಗಳು ನಾವು ಒಮ್ಮೆ ಪ್ರಯತ್ನಿಸಬೇಕು ಎನ್ನುವಷ್ಟು ಚೆನ್ನಾಗಿದ್ದರೆ ಮತ್ತೆ ಕೆಲವು ಹೊಟ್ಟೆ ತೊಳೆಸುವಂತೆ ಮಾಡುತ್ತವೆ. ಅದೇ ರೀತಿ ಇಲ್ಲೊಂದು ವೀಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳುವುದಂತೂ ಗ್ಯಾರಂಟಿ.. 

Disgusting Momos made with live worms inside netizens who vomited in the comments after watching this viral video akb
Author
First Published Nov 3, 2023, 4:30 PM IST

ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ವಿಲಕ್ಷಣವೆನಿಸಿದ ಹಲವು ರೀತಿಯ ಆಹಾರ ತಿನಿಸುಗಳ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಆಹಾರ ಪ್ರಯೋಗಗಳು ನಾವು ಒಮ್ಮೆ ಪ್ರಯತ್ನಿಸಬೇಕು ಎನ್ನುವಷ್ಟು ಚೆನ್ನಾಗಿದ್ದರೆ ಮತ್ತೆ ಕೆಲವು ಹೊಟ್ಟೆ ತೊಳೆಸುವಂತೆ ಮಾಡುತ್ತವೆ. ಈ ಪ್ರಯೋಗಗಳು ಹೇಗಿದ್ದರೂ ಇವುಗಳ ವೀಡಿಯೋಗಳು ಮಾತ್ರ ಸಖತ್ ವೈರಲ್ ಆಗ್ತಿರ್ತವೆ. ಅದೇ ರೀತಿ ಇಲ್ಲೊಂದು ವೀಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳುವುದಂತೂ ಗ್ಯಾರಂಟಿ.. 

ಇಂದು ಹೊಟೇಲ್‌ಗಳು ಹಾಗೂ ಬೀದಿ ಬದಿ ಆಹಾರ ತಯಾರಕರು  ಹಲವು ರೀತಿಯ ಮೊಮೊಸ್‌ಗಳ ಪ್ರಯೋಗವನ್ನು ಮಾಡುತ್ತಾರೆ. ಮಾಂಸಹಾರದ ಮೊಮೊಸ್‌ನಿಂದ ಆರಂಭಿಸಿ ಒಳಗೆ ವಿವಿಧ ಬಗೆಯ ಸಿಹಿಯಿಂದ ಕೂಡಿದ ಮೊಮೊಸ್, ಬೇಯಿಸಿದ, ಅರ್ಧ ಬೇಯಿಸಿದ ತರಕಾರಿ ತುಂಬಿರುವ ಮೊಮೊಸ್‌ ಹೀಗೆ ಹಣ್ಣುಗಳಿರುವಮೊಮೊಸ್ ಹೀಗೆ  ವಿವಿಧ ರೀತಿಯ ಮೊಮೊಸ್‌ಗಳನ್ನು ನಾವು ನೋಡಬಹುದಾಗಿದೆ. ನೀವು ಆಹಾರ ಪ್ರಿಯರು ಅಥವಾ ಮೊಮೊಸ್ ಪ್ರಿಯರಾಗಿದ್ದಲ್ಲಿ ಈ ಬಗ್ಗೆ ನಿಮಗೆ ಹೆಚ್ಚೇನು ಹೇಳಬೇಕಾಗಿಲ್ಲ. ಆದರೆ ಈ ರೀತಿ ಮೊಮೊಸ್ ತಯಾರಿಸುವ ವೇಳೆ ವ್ಯಕ್ತಿಯೋರ್ವ ಜೀವಂತ ಹುಳುಗಳನ್ನು ಒಳಗೆ ತುಂಬಿಸಿ ಮೊಮೊಸ್ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಗನ ಹೆಸರಲ್ಲಿ ಚಂದ್ರಶೇಖರನ ಸೇರಿಸಿ ಕಾರಣ ಹೇಳಿದ ಎಲಾನ್ ಮಸ್ಕ್‌..!

ಅಂತದ್ದೇನಿದೆ ವಿಡಿಯೋದಲ್ಲಿ...

chinesestreetfood2023 ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋ ನೋಡಿದ ಜನ ಮಾತ್ರ ಇನ್ಸ್ಟಾಗ್ರಾಮ್‌ ಕಾಮೆಂಟ್‌ನಲ್ಲೇ  ವಾಂತಿ ಮಾಡ್ತಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ  ಎರಡು ಕೈಗಳು ಮೊಮೊ ತಯಾರಿಸುವುದು ಕಾಣಿಸುತ್ತಿದೆ. ಮೊಮೊಸ್ ತಯಾರಿಸುವವರು ಅದರ ಒಳಗಡೆ ಸರ ಸರನೆಂದು ಹರಿದಾಡುವ ಹುಳಗಳನ್ನು ಹಾಗೂ ಕೇಸರಿ ಬಣ್ಣದ ಕೆಲವು ಕಾಳುಗಳನ್ನು ತುಂಬಿಸಿ ಮುಚ್ಚಿದ್ದು, ಈ ವೇಳೆ ಹುಳುಗಳು ಹರಿದಾಡಿ ಹೊರಗೆ ಬರುವುದನ್ನು ಕಾಣಬಹುದಾಗಿದೆ. 

ದಾಳಿಂಬೆ ಜ್ಯೂಸ್‌ನಲ್ಲಿ ಬಾಂಬ್: ಆರ್ಡರ್‌ ಮಾಡಿದವನ ಎಳೆದೊಯ್ದ ಪೊಲೀಸರು

ನಂತರ ಸ್ವಲ್ಪ ಹೊತ್ತಿನಲ್ಲೇ ಬೇಯಿಸಿದ ಮೊಮೊಸ್‌ನ್ನು ಒಡೆದು ತೋರಿಸಿದ್ದು, ಅದರಲ್ಲಿ ಹುಳುಗಳು ನಿಶ್ಚಲವಾಗಿರುವುದನ್ನು ಕಾಣಬಹುದು.  ಇದನ್ನು ನೋಡಿದ ಜನ ಮಾತ್ರ ಅಸಹ್ಯಪಟ್ಟುಕೊಂಡಿದ್ದಾರೆ. ಅನೇಕರು ಇದು ಚೀನಾದಲ್ಲಿ ಮಾತ್ರ ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮನುಷ್ಯರಿಗೆ ತಿನ್ನುವುದಕ್ಕೆ ಬೇಕಾದಷ್ಟು ಒಳ್ಳೆಯ ಅವಕಾಶಗಳಿರುವಾಗ ಇವುಗಳನ್ನೆಲ್ಲಾ ತಿನ್ನುವುದೇಕೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಭೂಮಿಯಲ್ಲಿ ಏನು ನಡೆಯುತ್ತಿದೆ. ಇದನ್ನು ತಿನ್ನುವುದು ಬಿಡಿ ನೋಡುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಕಾಮೆಂಟ್‌ನಲ್ಲಿ ವಾಂತಿ ಮಾಡುತ್ತಿರುವ ದೃಶ್ಯವನ್ನು ಕಾಮೆಂಟ್ ಮಾಡಿದ್ದಾರೆ. 

ಹಾವಿನ ವಿಷ ಹೀರಿ ಕಿಕ್ಕೇರಿಸಿಕೊಳ್ತಿದ್ರಾ? ಬಿಗ್‌ಬಾಸ್‌ ವಿನ್ನರ್‌ ಆಯೋಜಿಸ್ತಿದ್ದ ರೇವ್ ಪಾರ್ಟಿ: ಐವರ ಬಂಧನ

 

Follow Us:
Download App:
  • android
  • ios