ಬ್ರಿಟನ್‌ಗೆ ಕೃತಕ ಬುದ್ಧಿಮತ್ತೆ ಶೃಂಗದಲ್ಲಿ ಪಾಲ್ಗೊಳ್ಳಲು ಭೇಟಿ ನೀಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅಲ್ಲಿ ವಿವಿಧ ದೇಶದಗಳ ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ನ್ಯೂಯಾರ್ಕ್: ಬ್ರಿಟನ್‌ಗೆ ಕೃತಕ ಬುದ್ಧಿಮತ್ತೆ ಶೃಂಗದಲ್ಲಿ ಪಾಲ್ಗೊಳ್ಳಲು ಭೇಟಿ ನೀಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಅಲ್ಲಿ ವಿವಿಧ ದೇಶದಗಳ ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಟ್ವೀಟರ್‌ ಮಾಲೀಕ ಹಾಗೂ ಜಗತ್ತಿನ ನಂ.1 ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಅವರನ್ನು ಕೂಡ ರಾಜೀವ್‌ ಚಂದ್ರಶೇಖರ್‌ ಭೇಟಿ ಮಾಡಿದರು. 

ಈ ವೇಳೆ ಮಸ್ಕ್‌ ಚಂದ್ರಶೇಖರ್ ಅವರ ಹೆಸರು ಕೇಳಿ ತಮ್ಮ ಪುತ್ರ ಶಿವನ್‌ ಹೆಸರಲ್ಲೂ ಚಂದ್ರಶೇಖರ್ ಇರುವುದಾಗಿ ಹೇಳಿದ ಎಲಾನ್ ಮಸ್ಕ್‌ ತನ್ನ ಮಗನ ಹೆಸರಿನ ಹಿನ್ನೆಲೆಯನ್ನು ಸಚಿವ ರಾಜೀವ್ ಚಂದ್ರೇಖರ್ ಬಳಿ ಹಂಚಿಕೊಂಡರು. 1983ರಲ್ಲಿ ಭೌತಶಾಸ್ತ್ರಜ್ಞ ಭಾರತ ಪ್ರೊಫೆಸರ್ ಎಸ್. ಚಂದ್ರಶೇಖರ್ ಅವರಿಗೆ ನೊಬೆಲ್ ಬಂದಾಗ ಅವರ ಹೆಸರನ್ನು ಮಗನಿಗಿಟ್ಟಿದ್ದಾಗಿ ಎಲಾನ್ ಮಸ್ಕ್ ಹೇಳಿಕೊಂಡರು. ಇದಕ್ಕೆ ರಾಜೀವ್ ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದರು. 

Scroll to load tweet…