Asianet Suvarna News Asianet Suvarna News

Hyderabad Biriyani Delivery: ವಿಮಾನದ ಮೂಲಕ ಬಿರಿಯಾನಿ ಡೆಲಿವರಿ ಮಾಡುತ್ತೆ ಜೊಮ್ಯಾಟೋ..!

ತನ್ನ 'ಇಂಟರ್‌ಸಿಟಿ ಲೆಜೆಂಡ್ಸ್' ಮೂಲಕ, ಜೊಮ್ಯಾಟೋ  ಭಾರತದಿಂದ ಎಲ್ಲಿ ಬೇಕಾದರೂ ಆರ್ಡರ್ ಮಾಡಲು ಗ್ರಾಹಕರಿಗೆ ಅನುವು ಮಾಡಿಕೊಡಲು ಕಾರ್ಯ ನಿವೃತ್ತವಾಗಿದೆ ಎಂದು ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್‌ ಅವರು ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. 
 

order baked rasgullas from kolkata biryani from hyderabad on zomato delivery through flight ash
Author
First Published Aug 31, 2022, 6:04 PM IST

ದೇಶದ ಪ್ರತಿ ರಾಜ್ಯ, ನಗರಗಳಲ್ಲೂ ವೈವಿಧ್ಯಮಯವಾದ ಆಹಾರಗಳು ಸಿಗುತ್ತವೆ. ಆ ಆಹಾರ ಅಲ್ಲಿ ಮಾತ್ರ ಚೆನ್ನಾಗಿರುತ್ತೆ, ಬೇರೆ ಕಡೆ ತಿಂದ್ರೆ ಅಷ್ಟು ಟೇಸ್ಟ್‌ ಇರೋದಿಲ್ಲ ಅಂತ ಹೇಳೋದನ್ನ ನೀವು ಕೇಳಿರ್ತೀರಾ. ಹಾಗೆ, ಹೈದರಾಬಾದ್‌ಗೆ ಹೋದಾಗ ಬಿರಿಯಾನಿ ತಿನ್ಬೇಕು, ಕೋಲ್ಕತ್ತಗೆ ಹೋದಾಗ ರಸಗುಲ್ಲಾ ತಿನ್ಬೇಕು ಅಂತ ನೀವೂ ಅನ್ಕೋತೀರಾ.. ಇನ್ಮುಂದೆ, ನೀವಿರುವ ಸ್ಥಳದಿಂದಲೇ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ಸಾಕು, ವಿಮಾನದ (Flight) ಮೂಲಕ ನಿಮ್ಮ ಡೆಲಿವರಿ ನಿಮ್ಮ ಮನೆಗೇ ಬರುತ್ತದೆ..!

ಹೌದು, ಆನ್‌ಲೈನ್ ಆಹಾರ ವಿತರಣಾ ವೇದಿಕೆ ಜೊಮ್ಯಾಟೋ (Zomato) ಭಾರತದ ಯಾವುದೇ ನಗರದಿಂದ ದೇಶದ ವಿವಿಧ ಭಾಗಗಳಿಗೆ ಅನನ್ಯ ಆಹಾರವನ್ನು ತಲುಪಿಸಲು ಪೈಲಟ್ ಯೋಜನೆಯನ್ನು (Pilot Scheme) ಪ್ರಾರಂಭಿಸಿದೆ. ಈ ಬಗ್ಗೆ ಕಂಪನಿಯ ಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್‌ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬ್ಲಾಗ್‌ಪೋಸ್ಟ್‌ನಲ್ಲಿ, ಅವರು ತಮ್ಮ 'ಇಂಟರ್‌ಸಿಟಿ ಲೆಜೆಂಡ್ಸ್' (Intercity Legends) ಮೂಲಕ, ಜೊಮ್ಯಾಟೋ ಗ್ರಾಹಕರಿಗೆ ಭಾರತದ ಎಲ್ಲಿಂದಲಾದರೂ ಆರ್ಡರ್ ಮಾಡುವ ನಿಟ್ಟಿನಲ್ಲಿ ಕಾರ್ಯ ನಿಮಿತ್ತವಾಗಿದ್ದೇವೆ ಎಂದು ಹೇಳಿದರು.  

ಝೋಮ್ಯಾಟೋ ಬಾಯ್ ವೇಷದಲ್ಲಿ Chain Snatchers ಬಲೆಗೆ ಕೆಡವಿದ ಪೊಲೀಸರು

"ಕೋಲ್ಕತ್ತಾದಿಂದ ರಸಗುಲ್ಲಾಗಳು (Rasgullas), ಹೈದರಾಬಾದ್‌ನಿಂದ ಬಿರಿಯಾನಿ (Biryani),  ಬೆಂಗಳೂರಿನಿಂದ ಮೈಸೂರು ಪಾಕ್ (Mysore Pak), ಲಖನೌದಿಂದ ಕಬಾಬ್‌ (Kebab), ಹಳೆಯ ದಹಲಿಯಿಂದ ಬಟರ್ ಚಿಕನ್‌ (Butter Chicken), ಅಥವಾ ಜೈಪುರದಿಂದ ಪಯಾಜ್ ಕಚೋರಿಯಂತಹ ಪ್ರಖ್ಯಾತಿ ಹೊಂದಿರುವ ಭಕ್ಷ್ಯಗಳನ್ನು ಆರ್ಡರ್ ಮಾಡಬಹುದು ಮತ್ತು ಮರುದಿನ ಅದನ್ನು ನಿಮ್ಮ ಮನೆಗೆ ಡೆಲಿವರಿ ಮಾಡಲಾಗುವುದು’’ ಎಂದು ಜೊಮ್ಯಾಟೋ ಮಾಹಿತಿ ನೀಡಿದೆ. ಜೊಮ್ಯಾಟೋದ ರೆಸ್ಟೋರೆಂಟ್ ಪಾಲುದಾರರು ಮತ್ತು ವಿತರಣಾ ಪಾಲುದಾರರ ವ್ಯಾಪಕ ನೆಟ್‌ವರ್ಕ್ ಅನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಆಹಾರ ತಂತ್ರಜ್ಞಾನದ ಆಳವಾದ ತಿಳುವಳಿಕೆ ಮತ್ತು ನಮ್ಮ ಗ್ರಾಹಕರು ಇಷ್ಟಪಡುವ ಒಳನೋಟಗಳ ಮೂಲಕ, ಮರುದಿನವೇ ಭಾರತದಾದ್ಯಂತ ಪ್ರಖ್ಯಾತಿ ಭಕ್ಷ್ಯಗಳನ್ನು ನಿಮಗೆ ತಲುಪಿಸಲಾಗುವುದು" ಎಂದೂ ಅವರು ಬರೆದಿದ್ದಾರೆ.

ಈ "ಐಕಾನಿಕ್ ಭಕ್ಷ್ಯಗಳನ್ನು" Zomato ಅಪ್ಲಿಕೇಶನ್‌ನಲ್ಲಿ 'ಇಂಟರ್‌ಸಿಟಿ ಲೆಜೆಂಡ್ಸ್' ಮೂಲಕ ಆರ್ಡರ್ ಮಾಡಬಹುದು ಮತ್ತು ವಿಮಾನದ ಮೂಲಕ ಸಾಗಿಸಲಾಗುವುದು ಎಂದು ಜೊಮ್ಯಾಟೋ ಸಿಇಒ ದೀಪಿಂದರ್‌ ಗೋಯಲ್ ಹೇಳಿದರು. "ಆಹಾರವನ್ನು ರೆಸ್ಟೋರೆಂಟ್‌ನಿಂದ ಹೊಸದಾಗಿ ತಯಾರಿಸಲಾಗುತ್ತದೆ ಮತ್ತು ಮರುಬಳಕೆ ಮಾಡಬಹುದಾದ ಹಾಗೂ ಟ್ಯಾಂಪರ್-ಪ್ರೂಫ್ ಕಂಟೇನರ್‌ಗಳಲ್ಲಿ ಪ್ಯಾಕ್ ಮಾಡಲಾಗಿದ್ದು, ವಾಯು ಸಾಗಣೆಯ ಸಮಯದಲ್ಲಿ ಅದನ್ನು ಸುರಕ್ಷಿತವಾಗಿರಿಸಲು ಮೊಬೈಲ್ ಶೈತ್ಯೀಕರಣ ತಂತ್ರಜ್ಞಾನವು ಆಹಾರವನ್ನು ಫ್ರೀಜ್ ಮಾಡುವ ಅಥವಾ ಯಾವುದೇ ರೀತಿಯ ಸಂರಕ್ಷಕಗಳನ್ನು ಸೇರಿಸುವ ಅಗತ್ಯವಿಲ್ಲದೆ ಸಂರಕ್ಷಿಸುತ್ತದೆ’’ ಎಂದೂ ಅವರು ಹೇಳಿದರು. 

287ರೂ. ಪಿಜ್ಜಾ ಆರ್ಡರ್ ರದ್ದುಗೊಳಿಸಿದ ಝೊಮ್ಯಾಟೊಗೆ ಬಿತ್ತು 10,000ರೂ. ದಂಡ!

ಪ್ರಸ್ತುತ, ಕಂಪನಿಯು "ಗುರುಗ್ರಾಮ್ ಮತ್ತು ದಕ್ಷಿಣ ದೆಹಲಿಯ ಕೆಲವು ಭಾಗಗಳಲ್ಲಿ ಆಯ್ದ ಗ್ರಾಹಕರಿಗೆ ಇದನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ" ಎಂದು ಸಹ ದೀಪಿಂದರ್‌ ಗೋಯಲ್ ಹೇಳಿದರು."ನೀವು ಸಿಹಿತಿಂಡಿಗಳು, ಬಿರಿಯಾನಿಗಳು, ಕಚೋರಿಗಳು ಅಥವಾ ಕಬಾಬ್‌ಗಳನ್ನು ಇಷ್ಟಪಡುತ್ತೀರಾ, ಇದು ಪಾಕಶಾಲೆಯ ಸ್ವರ್ಗವಾಗಿರುತ್ತದೆ. ಮುಂದಿನ ಕೆಲವು ವಾರಗಳಲ್ಲಿ ನಾವು ಇದನ್ನು ಇತರ ನಗರಗಳಿಗೆ ತ್ವರಿತವಾಗಿ ವಿಸ್ತರಿಸುತ್ತೇವೆ. ಭಾರತದ ಪ್ರತಿ ಮೂಲೆ ಮೂಲೆಗಳಲ್ಲಿ ಒಂದು ಆಭರಣ ಅಡಗಿದೆ. 100 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಮತ್ತು ಭಾರತವು ನೀಡುವ ಅತ್ಯಂತ ಸಾಂಪ್ರದಾಯಿಕ ಭಕ್ಷ್ಯಗಳ ಸಮೃದ್ಧ ಹರಡುವಿಕೆಯೊಂದಿಗೆ, ಇಂಟರ್‌ಸಿಟಿ ಲೆಜೆಂಡ್‌ ಎಷ್ಟು ದೊಡ್ಡದಾಗಬಹುದು ಎಂಬುದಕ್ಕೆ ಆಕಾಶವು ಮಿತಿಯಾಗಿದೆ." ಎಮದೂ ಜೊಮ್ಯಾಟೋ ಸಿಇಒ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, ಜೊಮ್ಯಾಟೋನ ಅಸ್ತಿತ್ವದಲ್ಲಿರುವ ಪ್ಲಾಟ್‌ಫಾರ್ಮ್ ಅಡಿಯಲ್ಲಿ, ಅದರ ರೆಸ್ಟೋರೆಂಟ್ ಪಾಲುದಾರರು 7-10 ಕಿ.ಮೀ ವ್ಯಾಪ್ತಿಯಲ್ಲಿರುವ ಪ್ರದೇಶಗಳಿಗೆ ಮಾತ್ರ ಆರ್ಡರ್‌ ಮಾಡಬಹುದು.  

Follow Us:
Download App:
  • android
  • ios