ಸತ್ತವರ ಜೊತೆ ಕುಳಿತು ಊಟ ಮಾಡಿ, ಸ್ಪೆಷಲ್‌ ರೆಸ್ಟೋರೆಂಟ್‌ಗೆ ಜನವೋ ಜನ..

72 ವರ್ಷಗಳ ಹಿಂದೆ ಸ್ಥಾಪಿಸಲಾದ ಅಹಮದಾಬಾದ್‌ನಲ್ಲಿರುವ ಲಕ್ಕಿ ಟೀ ಸ್ಟಾಲ್ ಸತ್ತ ಜನರೊಂದಿಗೆ ಟೀ ಅಥವಾ ಊಟವನ್ನು ಮಾಡಲು ಜನರಿಗೆ ಅವಕಾಶ ಮಾಡಿಕೊಡುತ್ತಿದೆ. ಆಹಾರ ಬ್ಲಾಗರ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಟೀ ಅಂಗಡಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ. 

Dine With The Dead, Tea Shop Built on a Cemetery in Ahmedabad, Video Viral Vin

ಸಾಮಾನ್ಯವಾಗಿ, ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಆಕರ್ಷಿಸಲು ವಿಶಿಷ್ಟವಾದ ಟೆಕ್ನಿಕ್‌ಗಳನ್ನು ಅಳವಡಿಸಿಕೊಳ್ಳುತ್ತವೆ. ಆಹಾರದ ಮೇಲೆ ಡಿಸ್ಕೌಂಟ್, ಫುಡ್ ಕಾಂಬೋ ಮೊದಲಾದವುಗಳನ್ನು ಮುಂದಿಡುತ್ತವೆ. ಆದರೆ ಅಹಮದಾಬಾದ್‌ನಲ್ಲಿರುವ ಟೀ ಅಂಗಡಿಯು ಸತ್ತ ಜನರ ಪಕ್ಕದಲ್ಲಿ ಒಂದು ಕಪ್ ಬೆಚ್ಚಗಿನ ಚಹಾವನ್ನು ನೀಡುವ ವಿಲಕ್ಷಣ ಪರಿಕಲ್ಪನೆಯೊಂದಿಗೆ ಬಂದಿದೆ. ಹೌದು, ನೀವು ಕೇಳಿದ್ದು ಸರಿಯಾಗಿದೆ. 72 ವರ್ಷಗಳ ಹಿಂದೆ ಸ್ಥಾಪಿಸಲಾದ ಅಹಮದಾಬಾದ್‌ನಲ್ಲಿರುವ ಲಕ್ಕಿ ಟೀ ಸ್ಟಾಲ್ ಸತ್ತ ಜನರೊಂದಿಗೆ ಟೀ ಅಥವಾ ಊಟವನ್ನು ಮಾಡಲು ಜನರಿಗೆ ಅವಕಾಶ ಮಾಡಿಕೊಡುತ್ತಿದೆ. ಆಹಾರ ಬ್ಲಾಗರ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಟೀ ಅಂಗಡಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ. 

ರೆಸ್ಟೋರೆಂಟ್‌ನ ಮಾಲೀಕ ಕೃಷ್ಣನ್ ಕುಟ್ಟಿ ಈ ಜಮೀನನ್ನು ಖರೀದಿಸಿದ್ದರು. ಆದರೆ ಅದು ಸ್ಮಶಾನ ಎಂಬುದು ಗೊತ್ತಿರಲ್ಲಿಲ್ಲ. ಆದರೆ ಅದು ಗೊತ್ತಾದ ನಂತರ ಮತ್ತೇನೂ ಮಾಡಲು ಸಾಧ್ಯವಿರಲ್ಲಿಲ್ಲ. ಹೀಗಾಗಿ ಸ್ಮಶಾನದಲ್ಲೇ ರೆಸ್ಟೋರೆಂಟ್ ಮಾಡುವ ಯೋಜನೆ ರೂಪಿಸಿದರು. ಸಮಾಧಿಯ ಸುತ್ತಲೂ ಕಬ್ಬಿಣದ ಸರಳುಗಳನ್ನು ಅಳವಡಿಸಿದರು. ಸಮಾಧಿಗಳ ಸುತ್ತಲೂ ಕುಳಿತುಕೊಳ್ಳುವ ಪ್ರದೇಶವನ್ನು ನಿರ್ಮಿಸಿದರು. ಪ್ರತಿದಿನ ಬೆಳಿಗ್ಗೆ, ಸಿಬ್ಬಂದಿ ಸಮಾಧಿಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ತಾಜಾ ಹೂವುಗಳಿಂದ ಅಲಂಕರಿಸುತ್ತಾರೆ.

ದಿನಾ ಬ್ರೇಕ್‌ಫಾಸ್ಟ್‌ಗೆ ಬರುತ್ತಿದ್ದ ವೃದ್ಧ ವ್ಯಕ್ತಿಗೆ ಹೊಟೇಲ್ ಮಾಲೀಕರಿಂದ ಸರ್‌ಪ್ರೈಸ್‌

ವರದಿಯ ಪ್ರಕಾರ, ಹೆಸರಾಂತ ಕಲಾವಿದ ಎಂಎಫ್ ಹುಸೇನ್ ಆಗಾಗ ಅಂಗಡಿಗೆ ಬರುತ್ತಿದ್ದರು. ಅವರು 1994ರಲ್ಲಿ ಅಂಗಡಿಯ ಮಾಲೀಕರಿಗೆ ತಮ್ಮ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದರು. ಸದ್ಯ ಈ ಫುಡ್ ಬ್ಲಾಗರ್‌ನಿಂದಾಗಿ ಈ ರೆಸ್ಟೋರೆಂಟ್ ವಿಚಾರ ವೈರಲ್ ಆಗಿದ್ದು, ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವೊಬ್ಬರು 'ಇದು ಸ್ಪೆಷಲ್ ಇಂಟೀರಿಯರ್ ಹೊಂದಿರುವ ಹೊಟೇಲ್' ಎಂದಿದ್ದಾರೆ. ಮತ್ತೊಬ್ಬರು 'ಇಲ್ಲಿಯ ಆಹಾರ ಸಹ ಇಷ್ಟೇ ಕೆಟ್ಟದಾಗಿದೆ' ಎಂದು ತಿಳಿಸಿದ್ದಾರೆ.

ಅಹಮದಾಬಾದ್‌ನಲ್ಲಿ ವೈರಲ್ ಆಗಿರುವ 'ಡೆಡ್ ವಿಥ್ ದಿ ಡೆಡ್' ಟೀ ಶಾಪ್‌ನ್ನು ಸ್ಮಶಾನದಲ್ಲಿ ನಿರ್ಮಿಸಲಾಗಿದೆ. ಲಕ್ಕಿ ಹೆಸರಿನ ಈ ರೆಸ್ಟೋರೆಂಟ್ 50 ವರ್ಷಗಳಿಗಿಂತ ಹೆಚ್ಚು ಹಳೆಯದು. ಸಮಾಧಿಗಳು ಮತ್ತು ಶವಪೆಟ್ಟಿಗೆಯ ಸುತ್ತಲೂ ಕಂಬಿ ಬೇಲಿಗಳನ್ನು ನಿರ್ಮಿಸಿ, ಸುತ್ತಲೂ ಚೇರ್ ಹಾಕಲಾಗಿದೆ. ಅಹಮದಾಬಾದ್‌ನ ಲಾಲ್ ದರ್ವಾಜಾ ಪ್ರದೇಶದಲ್ಲಿ ನೆಲೆಗೊಂಡಿರುವ ಈ ನಿರ್ದಿಷ್ಟ ಟೀ ಸ್ಟಾಲ್ ಅಥವಾ ಚಿಕ್ಕ ಆಹಾರದ ಜಾಯಿಂಟ್, ಶವಪೆಟ್ಟಿಗೆಗಳು ಮತ್ತು ಆಹಾರದ ಮೇಜುಗಳನ್ನು ಒಂದರ ಪಕ್ಕದಲ್ಲಿಯೇ ಕುಳಿತಿದೆ. ಈ ಶವಪೆಟ್ಟಿಗೆಯನ್ನು ಕಬ್ಬಿಣದ ಗ್ರಿಲ್‌ಗಳಿಂದ ಮುಚ್ಚಲಾಗಿದ್ದರೂ, ಅದು ಸ್ವಲ್ಪ ವಿಲಕ್ಷಣವಾಗಿ ಕಾಣುತ್ತದೆ. 

ಆಹಾರ ಎದುರಿಗಿದ್ದರೂ ತಿನ್ನದೇ ಮೊಬೈಲ್ ಒತ್ತುವ ಗ್ರಾಹಕರು: ಸ್ಮಾರ್ಟ್‌ಫೋನ್ ನಿಷೇಧಿಸಿದ ಹೊಟೇಲ್‌

ರೆಸ್ಟೋರೆಂಟ್ ಮಾಲೀಕ ಕೃಷ್ಣನ್ ಕುಟ್ಟಿ, ಲಕ್ಕಿ ರೆಸ್ಟೋರೆಂಟ್ ಆರಂಭಿಸಿದ ಬಳಿಕ ಜೀವನ ಹೆಚ್ಚು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಕುತೂಹಲಿ ಪ್ರಯಾಣಿಕರು ಮತ್ತು ಆಹಾರಪ್ರೇಮಿಗಳು ಅಹಮದಾಬಾದ್‌ನಲ್ಲಿರುವ ಈ ಆಫ್‌ಬೀಟ್ ರೆಸ್ಟೋರೆಂಟ್‌ಗೆ ಭೇಟಿ ನೀಡುತ್ತಾರೆ. ಸ್ಮಶಾನವು ನನಗೆ ಅದೃಷ್ಟ ತಂದಿದೆ ಎಂದು ಕೃಷ್ಣನ್‌ ಕುಟ್ಟಿ ನಂಬುತ್ತಾರೆ. ಈ ಸಮಾಧಿಗಳಿಂದಾಗಿ ತನ್ನ ರೆಸ್ಟೋರೆಂಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ಅಸಾಮಾನ್ಯ ಅನುಭವಗಳನ್ನು ಹುಡುಕಲು ಹಲವಾರು ಜನರು ಇಲ್ಲಿಗೆ ಬರುತ್ತಾರೆ ಎಂದು ತಿಳಿಸುತ್ತಾರೆ.

ರೆಸ್ಟೋರೆಂಟ್ ಒಳಗೆ 12 ಸಮಾಧಿಗಳಿವೆ ಮತ್ತು ಈ ಸಮಾಧಿಗಳು 16 ನೇ ಶತಮಾನದ ಕೆಲವು ಸೂಫಿ ಸಂತರಿಗೆ ಸೇರಿವೆ ಎಂದು ಸ್ಥಳೀಯರು ನಂಬುತ್ತಾರೆ. ಇಲ್ಲಿನ ಮಾಣಿಗಳು ಈ ಸಮಾಧಿಗಳನ್ನು ಸ್ವಚ್ಛಗೊಳಿಸಿದ ನಂತರ ಪ್ರತಿದಿನ ತಾಜಾ ಹೂವುಗಳಿಂದ ಅಲಂಕರಿಸುತ್ತಾರೆ ಮತ್ತು ಗೌರವ ಸಲ್ಲಿಸುತ್ತಾರೆ. ಸತ್ತವರನ್ನು ಗೌರವಿಸುವುದು ಬಹಳ ಮುಖ್ಯ ಎಂದು ಅವರು ನಂಬುತ್ತಾರೆ ಮತ್ತು ಆದ್ದರಿಂದ ಅವರು ಈ ಸಮಾಧಿಗಳನ್ನು ಸಂರಕ್ಷಿಸಲು ಏನು ಬೇಕಾದರೂ ಮಾಡುತ್ತಾರೆ.

Latest Videos
Follow Us:
Download App:
  • android
  • ios