ದಿನಾ ಬ್ರೇಕ್‌ಫಾಸ್ಟ್‌ಗೆ ಬರುತ್ತಿದ್ದ ವೃದ್ಧ ವ್ಯಕ್ತಿಗೆ ಹೊಟೇಲ್ ಮಾಲೀಕರಿಂದ ಸರ್‌ಪ್ರೈಸ್
ಪ್ರತಿಯೊಬ್ಬರೂ ರೆಸ್ಟೋರೆಂಟ್‌ಗೆ ಹೋದಾಗ ಇಷ್ಟಪಟ್ಟು ಆರ್ಡರ್ ಮಾಡುವ ಆಹಾರವೊಂದು ಇರುತ್ತದೆ. ಮೆನುವಿನಲ್ಲಿ ಅದೆಷ್ಟೇ ಆಹಾರವಿದ್ದರೂ ಒಂದೇ ಉಪಾಹಾರವನ್ನು ಆರ್ಡರ್ ಮಾಡುತ್ತಾರೆ. ಹಾಗೆಯೇ ಐರ್ಲಂಡ್‌ನಲ್ಲಿ ವ್ಯಕ್ತಿಯೊಬ್ಬರು ಪ್ರತಿದಿನ ರೆಸ್ಟೋರೆಂಟ್‌ಗೆ ಬಂದು ಒಂದೇ ಆಹಾರವನ್ನು ಆರ್ಡರ್ ಮಾಡುತ್ತಿದ್ದು, ರೆಸ್ಟೋರೆಂಟ್ ಆ ಖಾದ್ಯಕ್ಕೆ ಅವರ ಹೆಸರನ್ನೇ ಇಟ್ಟಿದೆ.
ರೆಸ್ಟೋರೆಂಟ್‌ಗೆ ನಿಯಮಿತವಾಗಿ ಬಂದು ಒಂದೇ ಉಪಾಹಾರವನ್ನು ಆರ್ಡರ್ ಮಾಡುತ್ತಿದ್ದ ರೆಗ್ಯುಲರ್ ಕಸ್ಟಮರ್ ಒಬ್ಬರ ಹೆಸರನ್ನೇ ಆ ಖಾದ್ಯಕ್ಕೆ ನಾಮಕರಣ ಮಾಡಿರುವ ಘಟನೆ ಐರ್ಲೆಂಡ್‌ನಲ್ಲಿ ನಡೆದಿದೆ. ಗ್ರ್ಯಾಂಗೆಕಾನ್ ಕಿಚನ್ ಕೆಫೆಗೆ ಬಂದಾಗೆಲ್ಲ ಜಾನ್ ಎಂಬ ಹಿರಿಯ ವ್ಯಕ್ತಿ ಒಂದೇ ಆಹಾರವನ್ನು ಆರ್ಡರ್ ಮಾಡುತ್ತಿದ್ದರು. ಅರ್ಧ ಬೇಯಿಸಿದ ಮೊಟ್ಟೆ, ಸಾಸೇಜ್ ಹಾಗೂ ಹುರಿದ ತರಕಾರಿಗಳೊಂದಿಗೆ ತಯಾರಿಸುವ ಉಪಾಹಾರ ಖಾದ್ಯವನ್ನು ತಿನ್ನುತ್ತಿದ್ದರು. ಹೀಗಾಗಿ ಅವರು ತಿನ್ನುವ ಆಹಾರಕ್ಕೆ ‘ಜಾನ್ಸ್ ಉಪಾಹಾರ’ ಎಂದು ಹೆಸರಿಸಲಾಗಿದೆ. ಮೆನುವಿನಲ್ಲಿ ಸಹ ಇದನ್ನು ಹೆಸರಿಸಲಾಗಿದೆ. ಇದನ್ನು ಕಂಡು ಜಾನ್ ಸಂತೋಷಪಡುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಟೇಲ್‌ಗೆ ಹೋಗಿ ನಾವು ಹಣ ಕೊಟ್ಟೇ ಆಹಾರವನ್ನು ಸೇವಿಸುತ್ತಿದ್ದರೂ ನಾವು ರೆಗ್ಯುಲರ್ ಆಗಿ ಭೇಟಿ ನೀಡುವ ಹೊಟೇಲ್ ಬಗ್ಗೆ ನಮಗೆ ತಿಳಿಯದೇ ಆಪ್ತತೆಯೊಂದು ಬೆಳೆದುಕೊಳ್ಳುತ್ತದೆ. ಹಾಗೆಯೇ ಜಾನ್ ಪ್ರತಿದಿನ ವಿಸಿಟ್ ಮಾಡೋ ಗ್ರಾಂಜ್‌ಕೋನ್ ರೆಸ್ಟೋರೆಂಟ್‌ನಲ್ಲಿ ನಿರ್ಧಿಷ್ಟ ಆಹಾರವನ್ನು ಇಷ್ಟಪಡುತ್ತಿದ್ದರು. ಪ್ರತಿದಿನ ಬಂದಾಗಲೂ ಇದೇ ಆಹಾರವನ್ನು ಆರ್ಡರ್ ಮಾಡುತ್ತಿದ್ದರು. ಆ ದಿನ ಎಂದಿನಂತೆ ಜಾನ್ ಹೊಟೇಲ್‌ಗೆ ಬಂದಾಗ ಅಚ್ಚರಿ ಕಾದಿತ್ತು. ಹೊಟೃಲ್ ಸಿಬ್ಬಂದಿ ಹೊಸ ಮೆನು ತೋರಿಸಿ ಅವರ ಹೆಸರಿನ ಖಾದ್ಯವನ್ನು ತೋರಿಸಿದರು. ಈ ಮೂಲಕ ಹೊಟೇಲ್ ತನ್ನ ರೆಗ್ಯುಲರ್ ಕಸ್ಟಮರ್‌ಗೆ ಗೌರವ ಸೂಚಿಸಿತು.
ವೆಜ್ ಬದಲು ಸರ್ವ್ ಮಾಡಿದ್ದು ಚಿಕನ್ ರೋಲ್, ಹೋಟೆಲ್ ವಿರುದ್ಧ 1ಕೋಟಿ ಪರಿಹಾರ ಕೇಳಿದ ವ್ಯಕ್ತಿ!
ಯಾವತ್ತಿನಂತೆ ಹೊಟೇಲ್‌ಗೆ ಬಂದಾಗ ಜಾನ್ ಇದನ್ನು ನಿರೀಕ್ಷಿಸಿರಲ್ಲಿಲ್ಲ. ಸಿಬ್ಬಂದಿ ಮೆನುವನ್ನು ತಂದು ಕೊಟ್ಟಾಗ ಅದರಲ್ಲಿ ತನ್ನ ಹೆಸರಿನ ಆಹಾರವನ್ನು ನೋಡಿ ಆಶ್ಚರ್ಯ ಚಕಿತರಾದು. Grangecon ಕಿಚನ್ Instagramನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 'ಬಹುತೇಕ ಪ್ರತಿದಿನ ಜಾನ್ (ನಮ್ಮ ಅತ್ಯುತ್ತಮ ಗ್ರಾಹಕ) ಬೆಳಗಿನ ಉಪಾಹಾರಕ್ಕಾಗಿ ನಮ್ಮ ಹೊಟೇಲ್‌ಗೆ ಭೇಟಿ ನೀಡುತ್ತಾರೆ. ಅವರು ಫ್ರೈ ಅಪ್ ಆರ್ಡರ್ ಮಾಡುತ್ತಾರೆ. ಆದ್ದರಿಂದ ನಾವು ಅವರ ಹೆಸರನ್ನು ಬ್ರೇಕ್‌ಫಾಸ್ಟ್‌ಗೆ ಇಡಲು ನಿರ್ಧರಿಸಿದೆವು. ಅವರ ನೆಚ್ಚಿನ ಆಹಾರವನ್ನು 'ಜಾನ್ಸ್ ಬ್ರೇಕ್‌ಫಾಸ್ಟ್' ಎಂದು ಇನ್ನು ಮುಂದೆ ಸರ್ವ್ ಮಾಡಲಾಗುತ್ತದೆ' ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಈ ವೀಡಿಯೋ ಈಗಾಗಲೇ 40 ಸಾವಿರ ಲೈಕ್‌ಗಳನ್ನು ಸಂಗ್ರಹಿಸಿದೆ ಮತ್ತು ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು 'ಇದು ನಾನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿದಿನ ನೋಡಲು ಬಯಸುವ ವಿಷಯವಾಗಿದೆ. ವ್ಯಕ್ತಿ ಅದೆಷ್ಟು ಖುಷಿಯಾಗಿದ್ದಾರೆ. ಇಂಥಾ ನೋಡಲು ಖುಷಿಯಾಗುತ್ತದೆ' ಎಂದು ಬರೆದಿದ್ದಾರೆ. 'ಇದು ಜಾನ್‌ಗೆ ಒಂದು ಸುಂದರವಾದ ಗೌರವವಾಗಿದೆ. ನಾನು ಆಹಾರಕ್ಕಾಗಿ ಹೊಟೇಲ್‌ಗೆ ಬಂದಾಗ ಅವರನ್ನು ಗಮನಿಸಿದ್ದಾನೆ. ಹೊಟೇಲ್‌ನ ಈ ಕೆಲಸದಿಂದ ಜಾನ್‌ಗೆ ತುಂಬಾ ಖುಷಿಯಾಗುವುದು ಖಂಡಿತ' ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ.
Viral Menu : ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ವು ಈ ಎಲ್ಲ ಮೆನು
ವೀಡಿಯೊವನ್ನು ಇಲ್ಲಿ ನೋಡಿ