ಅಬ್ಬಾ ಏನ್ ಕ್ರಿಯೇಟಿವಿಟಿ..ಬೆಕ್ಕಿನ ಆಕಾರದ ದೋಸೆ ಮೇಕಿಂಗ್ ವೀಡಿಯೋ ವೈರಲ್
ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಲು ಆರಂಭವಾದಾಗಿನಿಂದ ಜನರ ನಾನಾ ರೀತಿಯ ಪ್ರತಿಭೆಗಳು ವೈರಲ್ ಆಗುತ್ತಿರುತ್ತವೆ. ಬೀದಿ ಬದಿ ವ್ಯಾಪಾರಿಯಿಂದ ಹಿಡಿದು ಬಿಸಿನೆಸ್ ಮ್ಯಾನ್ ವರೆಗೂ ಹಲವರ ವೀಡಿಯೋಗಳು ವೈರಲ್ ಆಗಿದ್ದಿದೆ. ಸದ್ಯ ಬೀದಿ ವ್ಯಾಪಾರಿಯೊಬ್ಬರ ಕ್ರಿಯೇಟಿವಿಟಿ ಲೆವೆಟ್ ಇಂಟರ್‌ನೆಟ್‌ನಲ್ಲಿ ಸದ್ದು ಮಾಡ್ತಿದೆ.
ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಪ್ರತಿಭೆಯನ್ನು ಹೊಂದಿರುತ್ತಾನೆ. ಹಲವಾರು ಬಾರಿ ಈ ಪ್ರತಿಭೆಯನ್ನು ಅನಾವರಣಗೊಳಿಸಲು ಸರಿಯಾದ ವೇದಿಕೆ ಸಿಗುವುದಿಲ್ಲವಷ್ಟೇ. ಅದೆಷ್ಟೋ ಜನರಲ್ಲಿರುವ ಪ್ರತಿಭೆ ಯಾರಿಗೂ ತಿಳಿಯದೇ ಹಾಗೆಯೇ ಉಳಿದುಬಿಡುತ್ತದೆ. ಆದರೆ ಸೋಷಿಯಲ್ ಮೀಡಿಯಾಗಳ ಬಳಕೆಯಿಂದ ಸದ್ಯ ಗಲ್ಲಿ ಗಲ್ಲಿಗಳಲ್ಲಿರುವ ಪ್ರತಿಭೆಗಳೂ ಬೆಳಕಿಗೆ ಬರುತ್ತಿವೆ. ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುತ್ತವೆ. ದಕ್ಷಿಣ ಭಾರತದಿಂದ ಬಂದ ಅಪ್ಪಮ್, ತುಪ್ಪುಳಿನಂತಿರುವ ಪ್ಯಾನ್‌ಕೇಕ್‌ಗಳು, ಪಾರಿವಾಳಗಳು ಮತ್ತು ಚಿಟ್ಟೆಗಳ ಆಕಾರದಲ್ಲಿ ದೋಸೆ ಮಾಡುವ ವೀಡಿಯೋಗಳು ಈಗಾಗಲೇ ವೈರಲ್ ಆಗಿವೆ. ಹಾಗೆಯೇ ಕೆಲವೊಬ್ಬರು ಸ್ಟೈಲಿಶ್ ಆಗಿ ದೋಸೆ ಮಗುಚುವ ರೀತಿ, ಸ್ಲೈಡಿಂಗ್ ಮಾಡುವ ಶೈಲಿ ಸಹ ವೈರಲ್ ಆಗಿದೆ. ಸದ್ಯ ವೈರಲ್ ಆಗ್ತಿರೋದು ಬೆಕ್ಕಿನ ಆಕಾರದಲ್ಲಿ ದೋಸೆ ತಯಾರಿಸ್ತಿರೋ ವ್ಯಕ್ತಿಯ ವೀಡಿಯೋ.
ಇದೀಗ ಬೀದಿಬದಿ ವ್ಯಾಪಾರಿಯೊಬ್ಬರು ಬೆಕ್ಕಿನ ಆಕಾರದಲ್ಲಿ ದೋಸೆ (Dosa) ತಯಾರಿಸಿ ಸಾಮಾಜಿಕ ಜಾಲತಾಣ (Social media) ಬಳಕೆದಾರರನ್ನು ಬೆರಗುಗೊಳಿಸಿದ್ದಾರೆ. ನಾಂದಿ ಇಂಡಿಯಾ, ಎನ್‌ಜಿಒ ಸಿಇಒ ಮನೋಜ್ ಕುಮಾರ್ ಹಂಚಿಕೊಂಡ ವೀಡಿಯೊದಲ್ಲಿ, ಬೀದಿ ವ್ಯಾಪಾರಿಯು ದೋಸೆ ಹಿಟ್ಟನ್ನು ತವಾ ಮೇಲೆ ಎರೆಯುವುದನ್ನು ಮತ್ತು ಹಿಟ್ಟನ್ನು ಬೆಕ್ಕಿನ ಆಕಾರಕ್ಕೆ (Cat shape) ತರುವುದನ್ನು ನೋಡಬಹುದು. ದೋಸೆಯ ಹಿಟ್ಟಿನಲ್ಲೇ ಅವರು ಬೆಕ್ಕಿಗೆ ಕಿವಿ, ಕಣ್ಣುಗಳನ್ನು ಮಾಡುವುದು ಎಲ್ಲರನ್ನೂ ಬೆರಗುಗೊಳಿಸಿದೆ.
ಇದು ಚೇಸಿಂಗ್ ದೃಶ್ಯವಲ್ಲ: ನವ ಜೋಡಿಯ ಮದುವೆ ಫೋಟೋಶೂಟ್ ವೈರಲ್
ವ್ಯಕ್ತಿಯ ಕೌಶಲ್ಯದಿಂದ ಪ್ರಭಾವಿತರಾದ ಮನೋಜ್ ಕುಮಾರ್ ಅವರು ಪೌಷ್ಟಿಕ ಆಹಾರ (Food) ವ್ಯವಸ್ಥೆಯ ಮೇಲೆ ಪ್ರಭಾವ ಬೀರಲು ಅವರೊಂದಿಗೆ ಕೆಲಸ ಮಾಡಬಹುದೇ ಎಂದು ಯೋಚಿಸಿದರು. 'ಭಾರತದ ಬೀದಿ ಆಹಾರ ಮಾರಾಟಗಾರರು (Street vendor) ಅತ್ಯಂತ ನವೀನ ಯೋಚನೆಗಳನ್ನು ಹೊಂದಿದ್ದಾರೆ ಎಂದು ನಾನು ನಂಬುತ್ತೇನೆ. ಯಾವುದೇ ದೊಡ್ಡ ರೆಸ್ಟೋರೆಂಟ್ ಶೆಫ್‌ಗಳಿಗಿಂತಲೂ ಅವರು ಹೆಚ್ಚು ಟ್ಯಾಲೆಂಟೆಡ್ ಆಗಿದ್ದಾರೆ. ದಯವಿಟ್ಟು ಈ ವ್ಯಕ್ತಿಯ ಕಲಾತ್ಮಕ ಕೌಶಲ್ಯವನ್ನು ಶ್ಲಾಘಿಸಿ' ಎಂದು ಮನೋಜ್ ಕುಮಾರ್ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ಟ್ವಿಟರ್‌ನಲ್ಲಿ 2.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಮನುಷ್ಯನ ಸೃಜನಶೀಲತೆ ಮತ್ತು ಪ್ರತಿಭೆಗೆ ಹಲವರು ಅಚ್ಚರಿವ್ಯಕ್ತಪಡಿಸಿದ್ದಾರೆ. ಹಲವಾರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ.
ಕೆಲವರು ಬೆಕ್ಕಿನ ಆಕಾರದ ದೋಸೆಯನ್ನು ನೋಡಿ ವಾವ್ಹ್ ಎಂದರೆ, ಇನ್ನು ಕೆಲವರು ಈ ಆಕಾರದಲ್ಲಿ ದೋಸೆಯನ್ನು ನೋಡಿ ಖುಷಿಯಾಗುತ್ತಿದೆ ಎಂದರು. ಇನ್ನು ಕೆಲವರು ವ್ಯಕ್ತಿಯ ಸೃಜನಶೀಲತೆಗೆ ಹ್ಯಾಟ್ಸಾಫ್ ಎಂದಿದ್ದಾರೆ. ಕ್ಲಿಪ್ ವಿಲಕ್ಷಣವಾದ ಆಹಾರ ಸಂಯೋಜನೆಯೊಂದಿಗೆ ಕೊನೆಗೊಳ್ಳಲಿಲ್ಲ ಎಂದು ಕೆಲವರು ಸಮಾಧಾನ ವ್ಯಕ್ತಪಡಿಸಿದರು.
ಮದ್ವೆಗೆ ಹಾಲ್ ಸಿಗ್ತಿಲ್ವಾ... ಬಂದಿದೆ ಸಂಚಾರಿ ಮದ್ವೆ ಹಾಲ್ : ಹೇಗಿದೆ ನೋಡಿ
ಒಂದೇ ಕೈಯಲ್ಲಿ 16 ದೋಸೆ ಪ್ಲೇಟ್ ಬ್ಯಾಲೆನ್ಸ್ ಮಾಡುವ ವಿದ್ಯಾರ್ಥಿಭವನದ ಸರ್ವರ್
ಬೆಂಗಳೂರಿನ ಅತ್ಯಂತ ಪ್ರಸಿದ್ಧವಾದ ದೋಸೆ ತಾಣದ ಬಗ್ಗೆ ಯೋಚಿಸಿದಾಗಲೆಲ್ಲಾ ಥಟ್ಟಂತ ನೆನಪಾಗೋದೆ ವಿದ್ಯಾರ್ಥಿ ಭವನ. ಆ ಸ್ಥಳಕ್ಕೆ ಭೇಟಿ ನೀಡಿದವರಿಗೆಲ್ಲರಿಗೂ ಅಲ್ಲಿಯ ಸರ್ವರ್‌ಗಳಲ್ಲಿ ವಿಶೇಷ ಪ್ರತಿಭೆ (Skills) ಇದೆ ಎಂದು ತಿಳಿದಿದೆ. ಅವರು ತಮ್ಮ ಕೈಯಲ್ಲಿ ಒಂದು ಸಮಯದಲ್ಲಿ ಅನೇಕ ದೋಸೆಯ ಪ್ಲೇಟ್‌ಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ತೆಗೆದುಕೊಂಡು ಬರುತ್ತಾರೆ. ಎಲ್ಲವನ್ನೂ ಒಂದರ ಮೇಲೊಂದರಂತೆ ಇಟ್ಟು ತೆಗೆದುಕೊಂಡು ಬರುವ ರೀತಿ ಅಚ್ಚರಿ ಮೂಡಿಸುತ್ತದೆ. ಉದ್ಯಮಿ ಆನಂದ್ ಮಹೀಂದ್ರಾ ಈ ವೀಡಿಯೋವನ್ನು ಹಂಚಿಕೊಂಡಿದ್ದು ಎಲ್ಲೆಡೆ ವೈರಲ್ ಆಗಿತ್ತು
ಆನಂದ್ ಮಹೀಂದ್ರಾ ಅವರು ವಿದ್ಯಾರ್ಥಿ ಭವನದ ಪರಿಚಾರಕರಿಂದ ಎಷ್ಟು ಪ್ರಭಾವಿತರಾಗಿದ್ದಾರೆಂದರೆ, ಅವರ ಕೌಶಲ್ಯವನ್ನು ‘ಒಲಿಂಪಿಕ್ ಕ್ರೀಡೆ’ ಎಂದು ಗುರುತಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು. ಮಹೀಂದ್ರಾ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಸರ್ವರ್ ವೀಡಿಯೊವನ್ನು ಹಂಚಿಕೊಂಡಿದ್ದರು. 2.20 ನಿಮಿಷಗಳ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ ದೋಸೆಗಳನ್ನು ಮಾಡುತ್ತಿದ್ದಾನೆ ಮತ್ತು ಇನ್ನೊಬ್ಬ ವ್ಯಕ್ತಿ ತಟ್ಟೆಯಲ್ಲಿ ದೋಸೆಗಳನ್ನು ಸಂಗ್ರಹಿಸುತ್ತಿರುವುದನ್ನು ಕಾಣಬಹುದಾಗಿತ್ತು. ಅವನು ಒಂದು ಕೈಯಲ್ಲಿ ಸುಮಾರು 15 ದೋಸೆ ಪ್ಲೇಟ್‌ಗಳನ್ನು ಇರಿಸುತ್ತಾನೆ, ಅಂಗೈಯಿಂದ ತೋಳಿನ ಕೊನೆಯ ವರೆಗೆ ದೋಸೆ ಪ್ಲೇಟ್ ಇಡುವುದನ್ನು ಕಾಣಬಹುದು. ನಂತರ ಅವನು ಟೇಬಲ್‌ಗಳವರೆಗೆ ನಡೆದು ಗ್ರಾಹಕರಿಗೆ (Customers) ದೋಸೆ ಪ್ಲೇಟ್ ನೀಡುತ್ತಾನೆ.