ಮದ್ವೆಗೆ ಹಾಲ್ ಸಿಗ್ತಿಲ್ವಾ... ಬಂದಿದೆ ಸಂಚಾರಿ ಮದ್ವೆ ಹಾಲ್ : ಹೇಗಿದೆ ನೋಡಿ
ವ್ಯಕ್ತಿಯೊಬ್ಬರು ಕಂಟೈನರ್ ಟ್ರಕ್ ಒಳಗೆ ಸಂಚಾರಿ ಮದ್ವೆ ಹಾಲೊಂದನ್ನು ನಿರ್ಮಿಸಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ವ್ಯಕ್ತಿಯ ಕ್ರಿಯೇಟಿವಿಟಿಗೆ ಭೇಷ್ ಎಂದಿದ್ದಾರೆ
ನವದೆಹಲಿ: ಮದುವೆಯ ಸೀಸನ್‌ಗಳಲ್ಲಿ ಒಂದೇ ದಿನ ದೇಶಾದ್ಯಂತ ಸಾವಿರಾರು ಮದುವೆಗಳು ಒಂದೊಂದು ದಿನ ನಡೆಯುತ್ತವೆ. ಕೆಲವೊಂದು ದಿನ ಒಂದೇ ದಿನ ಒಂದೇ ಊರಿನಲ್ಲೂ 4-5 ಮದುವೆಗಳು ನಡೆಯುವುದುಂಟು. ಎಲ್ಲರೂ ಮದುವೆಯನ್ನು ಮನೆಯಲ್ಲೇ ನಡೆಸುವಷ್ಟು ಅನುಕೂಲ ಹೊಂದಿರುವುದಿಲ್ಲ. ಹೀಗಿರುವಾಗ ಮದುವೆ ಮಂಟಪವೂ ಸುಲಭದಲ್ಲಿ ಸಿಗುವುದಿಲ್ಲ. ಅದಕ್ಕೂ ಸಾವಿರ ಸಾವಿರ ಲಕ್ಷ ಲಕ್ಷ ಲೆಕ್ಕದಲ್ಲಿ ಬಾಡಿಗೆ ನೀಡಬೇಕಾಗುತ್ತದೆ. ಬಾಡಿಗೆ ನೀಡಿದರು ಕೆಲವೊಮ್ಮೆ ಸಮುದಾಯ ಭವನಗಳು ಖಾಲಿ ಇರುವುದಿಲ್ಲ. ಹೀಗಿರುವಾಗ ನೀವಿರುವಲ್ಲಿಗೆ ಮದುವೆ ಮಂಟಪ ಅಥವಾ ಕಾರ್ಯಕ್ರಮ ನಡೆಸುವ ಸ್ಥಳ ಬಂದರೆ ಹೇಗಿರುತ್ತದೆ. ಈ ಐಡಿಯಾವೇ ಒಂಥರಾ ಸೂಪರ್ ಆಗಿದೆ ಅಲ್ವಾ. ಇದು ಕೇವಲ ಐಡಿಯಾ ಅಲ್ಲ ನಿಜವಾಗಿಯೂ ಕಾರ್ಯರೂಪಕ್ಕೆ ಬಂದಿರುವಂತಹದ್ದು, ಮಂಟಪ ಹೇಗೆ ಮನೆ ಬಳಿ ಬರಲು ಸಾಧ್ಯ, ಅದು ಹೇಗೆ ಕಾರ್ಯನಿರ್ವಹಿಸುತ್ತಿದೆ. ಎಂಬ ಕುತೂಹಲ ನಿಮಗೂ ಇದೆ ಅಲ್ವಾ ಹಾಗಿದ್ರೆ ಮುಂದೆ ಓದಿ...
ಹೇಳಿ ಕೇಳಿ ಇದೊಂದು ಸರಕು ಸಾಗಣೆ ಕಂಟೇನರ್ ಲಾರಿ (Container lorry). ಇದರ ಒಳಗೆಯೇ ಮದುವೆ ಮನೆಗೆ (wedding hall) ಬೇಕಾದ ಎಲ್ಲಾ ವ್ಯವಸ್ಥೆಗಳಿವೆ. ಗಂಡು ಹೆಣ್ಣು ನಿಲ್ಲಲು ಬೇಕಾದ ವೇದಿಕೆ ಮದುವೆ ಮನೆಗೆ ಬಂದ ಅತಿಥಿಗಳು (Guest) ಕುಳಿತುಕೊಳ್ಳಲು ಬೇಕಾದ ಚೇರ್ ಹಾಗೂ ಚೇರ್ ಇಡಲು ಸ್ಥಳ ಎಲ್ಲವೂ ಈ ಒಂದು ಲಾರಿಯಲ್ಲಿದೆ. ಸದಾ ಸೃಜನಶೀಲತೆಗೆ (Creativity) ಪ್ರೋತ್ಸಾಹ ನೀಡುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
40 ಅಡಿ ಉದ್ದದ ಈ ಸರಕು ಸಾಗಾಣಿಕಾ ಕಂಟೇನರ್‌ನಲ್ಲಿ ಮಡಚಬಹುದಾದ ಭಾಗಗಳಿವೆ. ಈ ಭಾಗಗಳನ್ನು ಬಿಚ್ಚಿ ಜೋಡಿಸಿದರೆ 1200 ಚದರ್ ಅಡಿಯ ವಿಸ್ತಾರದ 'ಮದುವೆ ಮನೆ' ಸಿದ್ಧವಾಗುತ್ತದೆ. ಬೇಕಾದಲ್ಲಿ ಕೊಂಡೊಯ್ಯಬಹುದಾದ ಈ ಮೊಬೈಲ್ ಮದುವೆ ಮನೆ, ಸುಮಾರು 200 ಕುರ್ಚಿಗಳ ಸಾಮರ್ಥ್ಯವನ್ನು(Capacity) ಹೊಂದಿದೆ. ಮಡಚಬಹುದಾದ ವಿನ್ಯಾಸವುಳ್ಳ ಇದರಲ್ಲಿ ಹವಾ ನಿಯಂತ್ರಣ (AC) ವ್ಯವಸ್ಥೆಯೂ ಇದೆ. ಬರೀ ಇಷ್ಟೇ ಅಲ್ಲದೇ ವಧು ವರರಿಗೆ (Bride & Groom) ಮದುವೆಗೆ ತಯಾರಾಗಲು ಬೇಕಾದ ಪ್ರತ್ಯೇಕ ಕೋಣೆಗಳಿವೆ. ಮದುವೆ ಅಥವಾ ಸಮಾರಂಭಕ್ಕೆ ಕಲ್ಯಾಣ ಮಂಟಪ ಸಿಗದವರು ಇದನ್ನು ಬಳಸಿ ಸಮಾರಂಭ ಮಾಡಿಕೊಳ್ಳಬಹುದಾಗಿದೆ.
ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು: ಉಕ್ಕಡದ ಮಾರಮ್ಮನಿಗೆ ಭಕ್ತನ ವಿಚಿತ್ರ ಪತ್ರ!
ಈ ವಿಡಿಯೋ ಹಂಚಿಕೊಂಡ ಆನಂದ ಮಹೀಂದ್ರಾ (Anand mahindra) 'ಇದನ್ನು ವಿನ್ಯಾಸಗೊಳಿಸಿದವರನ್ನು ನಾನು ಭೇಟಿಯಾಗಲು ಬಯಸುತ್ತೇನೆ. ಈ ಮೊಬೈಲ್ ಮದುವೆ ಮನೆಯನ್ನು ದೂರದ ಪ್ರದೇಶಗಳಿಗೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಅಲ್ಲದೇ ಇದು ಅಧಿಕ ಜನದಟ್ಟಣೆಯಿರುವ ಭಾರತದಂತಹ (India) ದೇಶಗಳಲ್ಲಿ ಶಾಶ್ವತ ಜಾಗವನ್ನು ಆಕ್ರಮಿಸುವುದಿಲ್ಲ. ಹೀಗಾಗಿ ಪರಿಸರ ಸ್ನೇಹಿಯೂ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವನಿಗೆ ಮದುವೆ ಮಾಡಿ, ಜವಾಬ್ದಾರಿ ಬಂದ್ರೆ ಸುಧಾರಿಸಬಹುದು; ಧವನ್‌ಗೆ ಜಡ್ಡು ಹೀಗಂದಿದ್ದೇಕೆ..? ವಿಡಿಯೋ ವೈರಲ್
ಮನುಷ್ಯನ ಸೃಜನಶೀಲತೆ, ಅನುಕೂಲಕ್ಕೆ ತಕ್ಕಂತೆ ಅವಿಷ್ಕಾರಗಳಿಗೆ ಮಿತಿ ಎಂಬುದು ಇಲ್ಲ ಎಂಬುದಕ್ಕೆ ಈ ಕಂಟೇನರ್ ಲಾರಿಯೇ ಸಾಕ್ಷಿಯಾಗಿದೆ.