Kokum Health benefits: ಬೇಸಿಗೆಯಲ್ಲಿ ದೇಹ ತಂಪುಗೊಳಿಸುವ ಮ್ಯಾಜಿಕ್ ಫ್ರುಟ್ ಪುನರ್ಪುಳಿ

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಹವನ್ನು ತಂಪಾಗಿಡಲು ಸೀಸನಲ್ ಫ್ರುಟ್ಸ್ ಹಾಗೂ ತರಕಾರಿಗಳನ್ನು ತಿನ್ನುವುದು ಅಗತ್ಯವಾಗಿದೆ. ಅದರಲ್ಲೂ ಬೇಸಿಗೆಯಲ್ಲಿ ದೇಹಕ್ಕೆ ಅತ್ಯುತ್ತಮ ಕೋಕಂ ಫ್ರುಟ್. ಇದರಿಂದ ಆರೋಗ್ಯಕ್ಕೇನು ಪ್ರಯೋಜನ ತಿಳಿಯಿರಿ.

Cool down with Kokum, Know the health benefits of this summer superfruit Vin

ಬೇಸಿಗೆಯ ಸುಡು ಬಿಸಿಲು ಎಲ್ಲರನ್ನೂ ಕಂಗೆಡಿಸುತ್ತಿದೆ. ರಿಫ್ರೆಶ್‌ ಆಗಲು ಹಣ್ಣು, ತಂಪಾದ ಜ್ಯೂಸ್‌ನ್ನು ಕುಡಿಯಲು ಮನಸ್ಸು ಹಂಬಲಿಸುತ್ತದೆ. ಬೇಸಿಗೆಯಲ್ಲಿ ಸೇವಿಸುವ ಆಹಾರ ಅಥವಾ ಪಾನೀಯ ಆರೋಗ್ಯಕ್ಕೂ ಉತ್ತಮವಾಗಿರಬೇಕು. ಅಂಥಾ ಆಹಾರಗಳಲ್ಲೊಂದು ಕೋಕಮ್‌ ಅಥವಾ ಪುನರ್ಪುಳಿ. ಪುನರ್ಪುಳಿ ಸಾಮಾನ್ಯವಾಗಿ ರುಚಿಯಲ್ಲಿ ಸ್ವಲ್ಪ ಹುಳಿ ಮತ್ತು  ಸಿಹಿಯಾಗಿರುತ್ತದೆ. ಆದರೆ ಇದರಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ಇದು ಬೇಸಿಗೆಯ ಆಹಾರಕ್ಕೆ ಪರಿಪೂರ್ಣ ಸೇರ್ಪಡೆಯಾಗಿದೆ. ಇದು ಜೀರ್ಣಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುವುದಲ್ಲದೆ, ದೇಹವನ್ನು ತಂಪಾಗಿಸುತ್ತದೆ. ಕೋಕಮ್‌ನ ಪ್ರಯೋಜನಗಳು ಮತ್ತು ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ವಿಧಾನಗಳನ್ನು ತಿಳಿಯೋಣ.

ಕೋಕಮ್ ಅಥವಾ ಗಾರ್ಸಿನಿಯಾ ಉಷ್ಣವಲಯದ ಹಣ್ಣಾಗಿದ್ದು, ಇದನ್ನು ಸಾಮಾನ್ಯವಾಗಿ ಭಾರತೀಯ ಪಾಕಪದ್ಧತಿಯಲ್ಲಿ ವಿಶೇಷವಾಗಿ ಮಹಾರಾಷ್ಟ್ರ ಮತ್ತು ಗೋವಾದಂತಹ ಕರಾವಳಿ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಇದರ ಹೊರಮೈ ಗಾಢ ಕೆಂಪುಬಣ್ಣದಲ್ಲಿದ್ದು ಒಳಗೆ ಬಿಳಿಬಣ್ಣದ ಬೀಜ ಮತ್ತು ರಸವಿರುತ್ತದೆ. .ಇದು ವಿಶಿಷ್ಟವಾದ ಪರಿಮಳಕ್ಕೆ ಹೆಸರುವಾಸಿಯಾಗಿದೆ . ಬೇಸಿಗೆಯ ಆಹಾರಕ್ಕೆ ಅತ್ಯುತ್ತಮವಾದ ಸೇರ್ಪಡೆಯಾಗಿದೆ. ಇದನ್ನು ಜ್ಯೂಸ್‌, ರಸಂ, ಚಟ್ನಿ ಮಾಡಲು ಬಳಸಬಹುದು. ಕೋಕಂ ಸೇವನೆಯ ಆರೋಗ್ಯ ಪ್ರಯೋಜನಗಳೇನು (health benefits) ತಿಳಿಯೋಣ.

Summer Food : ಚಯಾಪಚಯ ಬೂಸ್ಟ್ ಮಾಡುತ್ತೆ ಈ ಆಹಾರ

ಕೋಕಂನ ಆರೋಗ್ಯ ಪ್ರಯೋಜನಗಳು

1. ಜೀರ್ಣಕ್ರಿಯೆ ಸುಲಭ: ಹಲವಾರು ಶತಮಾನಗಳಿಂದ, ಜನರು ಆರೋಗ್ಯಕರ ಜೀರ್ಣಕ್ರಿಯೆಗಾಗಿ (Digestion) ಮತ್ತು ಅಸಿಡಿಟಿ ಸಮಸ್ಯೆಯನ್ನು ನಿವಾರಿಸಲು ಕೋಕಮ್ ಸೇವಿಸುತ್ತಾ ಬಂದಿದ್ದಾರೆ. ಇದು  ಅಜೀರ್ಣದಿಂದಾಗಿ ಹೊಟ್ಟೆಯಲ್ಲಿ ಸುಡುವ ಸಂವೇದನೆಗಳನ್ನು ನಿವಾರಿಸಲು ಉತ್ತಮವಾಗಿದೆ ಎಂದು ಆಹಾರ ತಜ್ಞರು ಮತ್ತು ಪೌಷ್ಟಿಕತಜ್ಞ ಅವ್ನಿ ಕೌಲ್ ಹೇಳುತ್ತಾರೆ. ಒಣಗಿದ ಕೋಕಂ ಹಣ್ಣನ್ನು (Kokum fruit) ಕೋಕಂ ಜ್ಯೂಸ್ ಆಗಿ ಪಾನೀಯವಾಗಿ ತಯಾರಿಸಲಾಗುತ್ತದೆ, ಇದು ದೇಹದ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ನೈಸರ್ಗಿಕ ಪರಿಹಾರವಾಗಿದೆ. ಇದು ತೂಕನಷ್ಟವನ್ನು (Weight loss) ಸಹ ಉತ್ತೇಜಿಸುತ್ತದೆ.

2. ಚರ್ಮಕ್ಕೆ ಒಳ್ಳೆಯದು: ಕೋಕಮ್ ಉರಿಯೂತದ ಮತ್ತು ಅಲರ್ಜಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಕೋಕಂ ಹಣ್ಣಿನಲ್ಲಿ ನಿರ್ದಿಷ್ಟ ಫೀನಾಲಿಕ್ ಸಂಯುಕ್ತಗಳು ಇರುವುದೇ ಇದಕ್ಕೆ ಕಾರಣ. ಇದಕ್ಕಾಗಿಯೇ ಕೋಕಮ್ ವಿವಿಧ ಗುಣಪಡಿಸುವ ಅಂಶಗಳನ್ನು ಹೊಂದಿದೆ. ಇದು ಗಾಯಗಳು ಮತ್ತು ಕಡಿತಗಳಿಗೆ ಚಿಕಿತ್ಸೆ (Treatment) ನೀಡಬಲ್ಲದು. ಚರ್ಮವನ್ನು ಆರೋಗ್ಯವಾಗಿರಿಸಲು ಕೋಕಮ್ ಬೆಣ್ಣೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

Fruit Juice : ಬಾಯಾರಿಕೆ ಅಂತ ಹೋಗ್ತಾ ಬರ್ತಾ ಹಣ್ಣಿನ ಜ್ಯೂಸ್ ಕುಡಿಬೇಡಿ

3. ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ: ಕೋಕಂ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಟಮಿನ್ ಎ, ಬಿ3 ಮತ್ತು ಸಿ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಸತು ಮತ್ತು ಪೊಟ್ಯಾಸಿಯಮ್‌ಗಳಂತಹ ಬಹು ವಿಟಮಿನ್‌ಗಳಿಂದ ತುಂಬಿದೆ. ಇದು ಫೈಬರ್ ಜೊತೆಗೆ ಫೋಲಿಕ್, ಆಸ್ಕೋರ್ಬಿಕ್, ಅಸಿಟಿಕ್ ಮತ್ತು ಹೈಡ್ರಾಕ್ಸಿ ಸಿಟ್ರಿಕ್ ಆಮ್ಲದ ಅತ್ಯುತ್ತಮ ಪ್ರಮಾಣವನ್ನು ಹೊಂದಿದೆ. ಆದ್ದರಿಂದ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

4. ದೇಹವನ್ನು ಹೈಡ್ರೇಟ್ ಆಗಿಡುತ್ತದೆ: ಕೋಕಂ ಜ್ಯೂಸ್‌ ದೇಹ (Body)ವನ್ನು ಹೈಡ್ರೇಟ್ ಆಗಿಡುತ್ತದೆ. ಬೇಸಿಗೆಯ ಶಾಖದ ಹೊಡೆತದ ಸಂಭವನೀಯತೆಯನ್ನು ತಪ್ಪಿಸಲು ಬೇಸಿಗೆಯಲ್ಲಿ ನೀವು ಸೇವಿಸಬಹುದಾದ ಅತ್ಯುತ್ತಮ ನೈಸರ್ಗಿಕ ಪಾನೀಯಗಳಲ್ಲಿ ಪುನರ್ಪುಳಿ ಜ್ಯೂಸ್ ಒಂದಾಗಿದೆ. ಇದು ದೇಹವನ್ನು ತಂಪಾಗಿಸುತ್ತದೆ ಮತ್ತು ರಿಫ್ರೆಶ್ ಮಾಡುತ್ತದೆ. ದೇಹಕ್ಕೆ ಹೆಚ್ಚಿನ ಎನರ್ಜಿಯನ್ನು ನೀಡುತ್ತದೆ.

Health Tips: ಬೇಸಿಗೆಯಲ್ಲಿ ತಾಳೆಹಣ್ಣು ತಿಂದು ಸುಲಭವಾಗಿ ತೂಕ ಇಳಿಸಿಕೊಳ್ಳಿ

Latest Videos
Follow Us:
Download App:
  • android
  • ios