Fruit Juice : ಬಾಯಾರಿಕೆ ಅಂತ ಹೋಗ್ತಾ ಬರ್ತಾ ಹಣ್ಣಿನ ಜ್ಯೂಸ್ ಕುಡಿಬೇಡಿ
ಹಣ್ಣು, ಹಣ್ಣಿನ ಜ್ಯೂಸ್ ಅಂದ್ರೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ಕೆಲವರು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ನಾಲ್ಕೈದು ಗ್ಲಾಸ್ ಜ್ಯೂಸ್ ಕುಡಿತಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಈ ಸುದ್ದಿ ಓದಿ.
ಬೇಸಿಗೆ ಇರಲಿ ಇಲ್ಲ ಚಳಿಗಾಲವಿರಲಿ ಹಣ್ಣು, ಹಣ್ಣಿನ ಜ್ಯೂಸ್ ಸೇವನೆ ಮಾಡೋದು ಬಹಳ ಮುಖ್ಯ. ಪ್ರತಿ ದಿನ ಹಣ್ಣಿನ ಜ್ಯೂಸ್ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡ್ತಾರೆ. ಹಣ್ಣಿನ ಜ್ಯೂಸ್, ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ವಿಟಮಿನ್ ಗಳು, ಖನಿಜಾಂಶಗಳು, ಕಾರ್ಬೋಹೈಡ್ರೇಟ್ ಗಳು, ಆ್ಯಂಟಿಆಕ್ಸಿಡೆಂಟ್ ಗಳ ಉಗ್ರಾಣವಾಗಿದೆ. ಹಣ್ಣುಗಳಲ್ಲಿ ಕಂಡುಬರುವ ಆರೋಗ್ಯಕರ ಕೊಬ್ಬು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಸಾಕಷ್ಟು ಒಳ್ಳೆ ಅಂಶವಿದ್ರೂ ಜ್ಯೂಸ್ ಅತಿಯಾಗಿ ಸೇವನೆ ಮಾಡೋದು ಒಳ್ಳೆಯದಲ್ಲಿ.
ಕೆಲವರು ಡಯಟ್ (Diet) ಹೆಸರಿನಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ದಿನದ ಅನೇಕ ಬಾರಿ ಜ್ಯೂಸ್ ಸೇವನೆ ಮಾಡ್ತಾರೆ. ಹಣ್ಣಿನ ಜ್ಯೂಸ್ ನಲ್ಲಿ ಫೈಬರ್ (Fiber) ಹಾಗೂ ಕೆಲವು ಸೂಕ್ಷ್ಮ ಪೋಷಕಾಂಶ ಕಂಡು ಬರುತ್ತದೆ. ಹಾಗಾಗಿ ಹೆಚ್ಚು ಜ್ಯೂಸ್ ಸೇವನೆ ಹಾನಿಕಾರಕವಾಗಿದೆ. ಹಣ್ಣುಗಳಲ್ಲಿ ಫ್ರಕ್ಟೋಸ್ (Fructose) ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಫ್ರಕ್ಟೋಸ್ ಒಂದು ರೀತಿಯ ಸಕ್ಕರೆ. ದಿನದಲ್ಲಿ ನಾಲ್ಕೈದು ಬಾರಿ ಫ್ರಕ್ಟೋಸ್ ಇರುವ ಹಣ್ಣಿನ ಜ್ಯೂಸ್ ಸೇವನೆ ಮಾಡೋದ್ರಿಂದ ಮಧುಮೇಹದ ಸಮಸ್ಯೆ ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ ಸಾಮಾನ್ಯ. ಬಾಯಾರಿಕೆಯಾದಾಗೆಲ್ಲ ನೀವು ಜ್ಯೂಸ್ ಕುಡಿಯುತ್ತಿದ್ದರೆ ಇಂದೇ ನಿಮ್ಮ ಈ ಕೆಟ್ಟ ಹವ್ಯಾಸ ಬಿಡಿ. ಇದು ನಿಮ್ಮ ಆರೋಗ್ಯದ ಮೇಲೆ ದೊಡ್ಡಮಟ್ಟದಲ್ಲಿ ಪರಿಣಾಮ ಬೀರುತ್ತದೆ.
Health Tips: ಬೇಸಿಗೆಯಲ್ಲಿ ತಾಳೆಹಣ್ಣು ತಿಂದು ಸುಲಭವಾಗಿ ತೂಕ ಇಳಿಸಿಕೊಳ್ಳಿ
ಹಣ್ಣಿನ ರಸದಲ್ಲಿ ಕ್ಯಾಲೋರಿ ಎಷ್ಟಿರುತ್ತೆ ಗೊತ್ತಾ? : ಆರೋಗ್ಯ ತಜ್ಞರ ಪ್ರಕಾರ, ಜ್ಯೂಸ್‌ಗಳಲ್ಲಿ ಹೆಚ್ಚಿನ ಕ್ಯಾಲೋರಿಗಳು ಕಂಡುಬರುತ್ತವೆ. ಒಂದು ಕಪ್ ರಸದಲ್ಲಿ 117 ಕ್ಯಾಲೋರಿಗಳು ಮತ್ತು ಸುಮಾರು 21 ಗ್ರಾಂ ಸಕ್ಕರೆ ಇರುತ್ತದೆ. ಇದರಲ್ಲಿ ಫ್ರಕ್ಟೋಸ್ ಅಧಿಕವಾಗಿರುತ್ತದೆ.
ಹೆಚ್ಚು ಹಣ್ಣಿನ ಜ್ಯೂಸ್ ಸೇವನೆ ಮಾಡಿದ್ರೆ ಏನಾಗುತ್ತೆ? : ಅತಿ ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಆಹಾರ ಸೇವನೆ ಮಾಡಿದ್ರೂ ಅದು ಒಳ್ಳೆಯದಲ್ಲ. ಹೆಚ್ಚು ಹಣ್ಣಿನ ರಸ ಕುಡಿದ್ರೆ ಮೊದಲೇ ಹೇಳಿದಂತೆ ರಕ್ತಕ್ಕೆ ಹೆಚ್ಚು ಸಕ್ಕರೆ ಸೇರುತ್ತದೆ. ಇದ್ರಿಂದ ಮಧುಮೇಹ ಸಮಸ್ಯೆ ಕಾಡುತ್ತದೆ. ಇದಲ್ಲದೆ ಹಲ್ಲುಗಳಲ್ಲಿ ಹುಳು ಕಾಣಿಸಿಕೊಳ್ಳುತ್ತದೆ. ಯಕೃತ್ತಿನ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಹಣ್ಣಿನ ಜ್ಯೂಸ್ ಕುಡಿಯಬಾರದು ಎನ್ನುತ್ತಾರೆ ತಜ್ಞರು.
Healthy Food: ಫ್ರಿಜ್ ನಲ್ಲಿ ಕತ್ತರಿಸಿದ ಕಲ್ಲಂಗಡಿ ಹಣ್ಣಿಟ್ಟು ಆರೋಗ್ಯ ಹಾಳ್ಮಾಡ್ಕೊಳ್ಳಬೇಡಿ
ದಿನಕ್ಕೆ ಎಷ್ಟು ಜ್ಯೂಸ್ ಸೇವನೆ ಮಾಡ್ಬೇಕು ಗೊತ್ತಾ? : ಹಣ್ಣಿನಲ್ಲಿರುವ ನಾರಿನಾಂಶ, ಹಣ್ಣಿನ ಜ್ಯೂಸ್ ತಯಾರಿಸಿದಾಗ ಸಿಗೋದಿಲ್ಲ. ಹಣ್ಣಿನ ಜ್ಯೂಸ್ ನಲ್ಲಿ ಫ್ರಕ್ಟೋಸ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದು ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ನಾವು ಪ್ರತಿ ದಿನ ಒಂದು ಗ್ಲಾಸ್ ಜ್ಯೂಸ್ ಸೇವನೆ ಮಾಡಿದ್ರೆ ಸಾಕು. ಒಂದಕ್ಕಿಂತ ಹೆಚ್ಚು ಜ್ಯೂಸ್ ಕುಡಿಯೋದು ಅಪಾಯಕಾರಿ. ಆ ಕ್ಷಣಕ್ಕೆ ನಿಮಗೆ ಹಿತವೆನ್ನಿಸಬಹುದು. ಆದ್ರೆ ದೀರ್ಘಕಾಲದಲ್ಲಿ ಇದು ನಮ್ಮ ದೇಹದ ಮೇಲೆ ಅಡ್ಡಪರಿಣಾಮ ಬೀರುತ್ತದೆ.
ಜ್ಯೂಸ್ ಕುಡಿಯಲು ಇದು ಬೆಸ್ಟ್ ಸಮಯ : ದಿನಕ್ಕೆ ಎಷ್ಟು ಜ್ಯೂಸ್ ಕುಡಿಯಬೇಕು ಎನ್ನುವುದು ಮುಖ್ಯವಲ್ಲ ಯಾವಾಗ ಸೇವನೆ ಮಾಡ್ಬೇಕು ಎಂಬ ಬಗ್ಗೆಯೂ ನೀವು ಗಮನ ಹರಿಸಬೇಕು. ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಜ್ಯೂಸ್ ಕುಡಿದು ತಮ್ಮ ಕೆಲಸಕ್ಕೆ ಹೋಗ್ತಾರೆ. ಇನ್ನು ಕೆಲವರು ಮಲಗುವ ಮೊದಲು ಜ್ಯೂಸ್ ಕುಡಿಯುತ್ತಾರೆ. ತಜ್ಞರ ಪ್ರಕಾರ ಈವೆರಡೂ ತಪ್ಪಾದ ವಿಧಾನವಾಗಿದೆ. ನೀವು ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಸೇವನೆ ಮಾಡೋದ್ರಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಂಭವವಿರುತ್ತದೆ. ಬೆಳಿಗ್ಗೆ ಉಪಹಾರವಾದ್ಮೇಲೆ ಜ್ಯೂಸ್ ಕುಡಿಯೋದು ಒಳ್ಳೆಯ ಅಭ್ಯಾಸವಾಗಿದೆ. ಉಪಹಾರ ಮತ್ತು ಊಟದ ಮಧ್ಯೆ ನೀವು ಜ್ಯೂಸ್ ಸೇವನೆ ಮಾಡೋದು ಅತ್ಯಂತ ಬೆಸ್ಟ್ ಎನ್ನುತ್ತಾರೆ ತಜ್ಞರು.