ಬಿಸ್ಕತ್ತು, ಪಾನೀಯ, ಪ್ಯಾಕೇಜ್ ಫುಡ್‌ ದರಗಳು ಸದ್ಯದಲ್ಲೇ ದುಬಾರಿ

ದೇಶದಲ್ಲಿ ದೈನಂದಿನ ಬಳಕೆಯ ವಸ್ತುಗಳ (ಎಫ್‌ಎಂಜಿಸಿ) ಮೇಲಿನ ಹಣದುಬ್ಬರ ಏರಿಕೆಯಾಗುತ್ತಿರುವ ಕಾರಣ, ಹಲವು ಕಂಪನಿಗಳು ತಮ್ಮ ಆಹಾರ ಉತ್ಪನ್ನಗಳ ಬೆಲೆಯನ್ನು ಶೇ.2-4ರಷ್ಟು ಏರಿಸಲು ಮುಂದಾಗಿದೆ.

Consumer goods companies set to raise prices by 2-4% in 2024 Vin

ಕೋಲ್ಕತಾ/ಮುಂಬೈ: ದೇಶದಲ್ಲಿ ದೈನಂದಿನ ಬಳಕೆಯ ವಸ್ತುಗಳ (ಎಫ್‌ಎಂಜಿಸಿ) ಮೇಲಿನ ಹಣದುಬ್ಬರ ಏರಿಕೆಯಾಗುತ್ತಿರುವ ಕಾರಣ, ಹಲವು ಕಂಪನಿಗಳು ತಮ್ಮ ಆಹಾರ ಉತ್ಪನ್ನಗಳ ಬೆಲೆಯನ್ನು ಶೇ.2-4ರಷ್ಟು ಏರಿಸಲು ಮುಂದಾಗಿದೆ. ಈ ಮೂಲಕ ಬಿಸ್ಕತ್ತು, ತಂಪು ಪಾನೀಯ, ಪ್ಯಾಕೇಜ್ ಆಹಾರ ಪದಾರ್ಥಗಳ ಬೆಲೆ ಏರಿಕೆ ನಿಚ್ಚಳವಾಗಿದೆ.

ದೇಶದ ಬೃಹತ್ ಎಫ್‌ಎಂಜಿಸಿ ಕಂಪನಿಗಳಲ್ಲಿ ಒಂದಾದ ಹಿಂದುಸ್ತಾನ್ ಯುನಿಲಿವರ್ ಶೀಘ್ರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಇನ್ನು ಡಾಬರ್ ತನ್ನ ಎಲ್ಲ ಪದಾರ್ಥಗಳ ಮೇಲಿನ ದರವನ್ನು ಶೇ.2.5ರಷ್ಟು ಏರಿಸುವುದಾಗಿ ತಿಳಿಸಿದೆ. ಅಲ್ಲದೆ, ಇಮಾಮಿ ಕಂಪನಿಯು ಶೇ.3ರಷ್ಟು ಬೆಲೆ ಏರಿಸಲು ಮುಂದಾಗಿದೆ.

ಅಬ್ಬಬ್ಬಾ ಒಂದು ಪ್ಲೇಟ್ ಬೆಲೆ ಇಷ್ಟಾ? ಅನ್ನ ವೇಸ್ಟ್ ಮಾಡೋ ಮುನ್ನ ಯೋಚಿಸಿ

ಬೇಳೆಕಾಳು ಸೇರಿದಂತೆ ಅನೇಕ ಕೃಷಿ ಆಹಾರ ಉತ್ಪನ್ನ ದರ ಎರಡಂಕಿಯಲ್ಲಿದೆ. ಹೀಗಾಗಿ ನಮ್ಮ ಉತ್ಪನ್ನಗಳಮೇಲಿನದರಏರಿಕೆಯೂ ಅನಿವಾರ್ಯ. ಈ ಬೆಲೆ ಏರಿಕೆಯಿಂದಾಗಿ ಸಿಬ್ಬಂದಿಗಳಿಗೆ ನೀಡಲಾಗುವ ಏರುತ್ತಿರುವ ವೇತನಗಳ ಖರ್ಚು, ದೈನಂದಿನ ವಸ್ತುಗಳ ಹಣದುಬ್ಬರ ಎದುರಿಸಲು ಸಹಾಯವಾಗಲಿದೆ. ದೇಶದಲ್ಲಿ ಈಗ ಆಹಾರ ಪದಾರ್ಥ ಮೇಲೂ ಹಣದುಬ್ಬರವಿದ್ದು, ಜೇನು ತುಪ್ಪದ ಮೇಲೂ ಹಣದುಬ್ಬರವಿದೆ ಎಂದು ಡಾಬರ್ ಕಂಪನಿ ಸಿಇಓ ಮೋಹಿತ್ ಮಲ್ಲೋತ್ರ ತಿಳಿಸಿದರು.

Latest Videos
Follow Us:
Download App:
  • android
  • ios