ರೆಸ್ಟೋರೆಂಟ್‌ನಲ್ಲಿ ಡ್ರೈ ಐಸ್ ತಿಂದು ರಕ್ತ ಕಕ್ಕಿದ ಐವರು, ಹೊಟೆಲ್ ಮ್ಯಾನೇಜರ್ ಅರೆಸ್ಟ್!
ಪ್ರತಿಷ್ಠಿತ ಹೊಟೆಲ್‌ಗೆ ತೆರಳಿದ ಗ್ರಾಹಕರು ಆಸ್ಪತ್ರೆ ದಾಖಲಾಗಿದ್ದರೆ. ಗ್ರಾಹಕರಿಗೆ ನೀಡಿದ್ದ ಡ್ರೈ ಐಸ್‌ನಿಂದ ರಕ್ತ ವಾಂತಿ ಮಾಡಿದ್ದಾರೆ. ಇದರ ಪರಿಮಾಣ ಹೊಟೆಲ್ ಮ್ಯಾನೇಜರ್‌ನ್ನು ಅರೆಸ್ಟ್ ಮಾಡಲಾಗಿದೆ.
ಗುರುಗ್ರಾಂ(ಮಾ.05) ರೆಸ್ಟೋರೆಂಟ್‌ಗೆ ಆಹಾರ ಸೇವಿಸಲು ಬಂದ ಐವರು ಗ್ರಾಹಕರಿಗೆ ಡ್ರೈ ಐಸ್ ನೀಡಲಾಗಿದೆ. ಮೌಥ್ ಫ್ರೆಶ್ನರ್ ಆಗಿ ಈ ಡ್ರೈಸ್ ಐಸ್ ನೀಡಿದ್ದಾರೆ. ಆದರೆ ಡ್ರೈ ಐಸ್ ಸೇವಿಸದ ಬೆನ್ನಲ್ಲೇ ಗ್ರಾಹಕರಲ್ಲಿ ವಾಂತಿಯಾಗಿದೆ. ಕೆಲವೇ ಕ್ಷಣಗಳಲ್ಲಿ ಬಾಯಿ ತುರಿಕೆ ಆರಂಭಗೊಂಡು ರಕ್ತ ವಾಂತಿ ಮಾಡಿದ ಘಟನೆ ಗುರುಗ್ರಾಂನ ಲ್ಯಾಫೋರೆಸ್ಟಾ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಇದರಿಂದ ರೆಸ್ಟೋರೆಂಟ್ ಮ್ಯಾನೇಜರ್ ಇದೀಗ ಅರೆಸ್ಟ್ ಆಗಿದ್ದಾರೆ.
ಐವರು ಗೆಳೆಯರು ಹಾಗೂ ಗೆಳತಿಯರು ಗುರುಗ್ರಾಂ 90 ಸೆಕ್ಟರ್‌ನಲ್ಲಿರುವ ಲ್ಯಾಫೋರೆಸ್ಟಾ ಕೆಫ್ ಕಮ್ ರೆಸ್ಟೋರೆಂಟ್‌ಗೆ ತೆರಳಿದ್ದಾರೆ. ತಮಗಿಷ್ಟವಾದ ತಿನಿಸುಗಳನ್ನು ಆರ್ಡರ್ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಮ್ಯಾನೇಜರ್ ಮೌಥ್ ಫ್ರೆಶ್ನರ್ ಆಗಿ ಡ್ರೈ ಐಸ್ ನೀಡಿದ್ದಾರೆ. ಈ ಡ್ರೈಸ್ ಐಸ್ ತಿಂದ ಬೆನ್ನಲ್ಲೇ ತುರಿಕು ಆರಂಭಗೊಂಡಿದೆ. ಬಾಯಿ ಸುಟ್ಟ ಅನುಭವವಾಗಿದೆ. ಕೆಲವೇ ಕ್ಷಣಗಳಲ್ಲಿ ವಾಂತಿ ಶುರುವಾಗಿದೆ. ಕೆಲ ಹೊತ್ತಲ್ಲೇ ರಕ್ತ ವಾಂತಿ ಮಾಡಿ ಅಸ್ವಸ್ಥರಾಗಿದ್ದಾರೆ.
ಈ ಆಹಾರಗಳ ಜೊತೆ ಬೆಣ್ಣೆ ಸೇರಿಸಿದ್ರೆ… ವಿಷವಾಗೋದು ಖಂಡಿತಾ… ಹುಷಾರಾಗಿರಿ!
ಅಸ್ವಸ್ಥಗೊಂಡ ಐವರು ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ್ದಾರೆ. ಆಹಾರ ಸುರಕ್ಷತೆಯಡಿ ಹೊಟೆಲ್ ಮ್ಯಾನೇಜರ್ ಗಗನದೀಪ್‌ನನ್ನು ಬಂಧಿಸಿದ್ದಾರೆ.ಇತ್ತ ಹೊಟೆಲ್ ಮಾಲೀಕ ಅಮೃತ ಪಾಲ್ ಸಿಂಗ್ ಪರಾರಿಯಾಗಿದ್ದಾರೆ.
ಹೊಟೆಲ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಮೌಥ್ ಫ್ರೆಶ್ನರ್ ಜೊತೆ ಡ್ರೈ ಐಸ್ ಮಿಶ್ರಣ ಮಾಡಲಾಗಿದೆ. ಇದರಿಂದ ಅಚಾತುರ್ಯ ನಡೆದಿದೆ. ಗ್ರಾಹಕರನ್ನು ಟಾರ್ಗೆಟ್ ಮಾಡಿಲ್ಲ. ಇದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಬಂಧಿತ ಹೊಟೆಲ್ ಮ್ಯಾನೇಜರ್ ಹೇಳಿದ್ದಾರೆ.ಈ ಪ್ರಕರಣದ ಕುರಿತ ತನಿಖೆ ಮುಂದುವರಿದಿದೆ. ಇತ್ತ ಆಸ್ಪತ್ರೆ ದಾಖಲಾಗಿದ್ದ ಐವರು ಬಿಡುಗಡೆಯಾಗಿದ್ದಾರೆ.
ಏನಿದು ಡ್ರೈ ಐಸ್?
1900ರ ದಶಕದಲ್ಲಿ ಪ್ರಯೋಗದ ಮೂಲಕ ಡ್ರೈ ಐಸ್ ಪತ್ತೆ ಹಚ್ಚಲಾಗಿತ್ತು. ಮೊದಲ ಬಾರಿಗೆ ಈ ಪ್ರಯೋಗ ಯಶಸ್ವಿಯಾಗಿದೆ. ಇದರ ವಾಣಿಜ್ಯ ಉತ್ಪಾದನೆಯನ್ನು 1920ರಿಂದ ಆರಂಭಿಸಲಾಯಿತು. ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ್(CO2) ಅನಿಲವನ್ನು ತಂಪಾಗಿಸಿ, ಘನೀಕರಿಸುವ ಮೂಲಕ ಡ್ರೈ ಐಸ್ ಮಾಡಲಾಗುತ್ತದೆ. ವೈದ್ಯಕೀಯ, ಆಹಾರ ಹಾಗೂ ಪಾನೀಯಗಳಲ್ಲಿ , ಸಂಶೋಧನೆಗಳಲ್ಲಿ ಈ ಡ್ರೈ ಐಸ್ ಬಳಸಲಾಗುತ್ತದೆ.
ಊಟ ಮಾಡಿದ ತಕ್ಷಣ ಟೀ, ಕಾಫಿ ಕುಡೀತಿರಾ, ಹಾಗಿದ್ರೆ ನೀವಿದನ್ನು ತಿಳ್ಕೊಳ್ಳೇಬೇಕು
ಉತ್ಪನ್ನಗಳು ಸಾಗಿಸುವಾಗ ಹಾಳಾಗದಂತೆ ಇಡಲು ಡ್ರೈ ಐಸ್ ಬಳಸಲಾಗುತ್ತದೆ. ಆದರೆ ಗುರುಗ್ರಾಂ ರೆಸ್ಟೋರೆಂಟ್‌ನಲ್ಲಿ ಡ್ರೈ ಐಸ್‌ನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ. ಕೆಲ ಎಡವಟ್ಟುಗಳನ್ನು ಮಾಡಿರುವ ಕಾರಣ ಈ ದುರ್ಘಟನೆ ನಡೆದಿದೆ.