Asianet Suvarna News Asianet Suvarna News

ದೋಸೆಗೂ ಬಂತು ಪ್ರಿಂಟರ್‌, ನಿಮಿಷಗಳಲ್ಲೇ ಗರಿ ಗರಿಯಾದ ದೋಸೆ ರೆಡಿ

ದೋಸೆ ಹುಯ್ಯೋದು ಒಂದು ಕಲೆ. ಎಲ್ರಿಗೂ ನೀಟಾಗಿ ದೋಸೆ ಮಾಡೋಕೆ ಬರಲ್ಲ. ಕೆಲವೊಬ್ಬರು ಮಾಡೋ ದೋಸೆ ರೌಂಡ್ ಶೇಪ್‌ ಬರಲ್ಲ. ಇನ್ನು ಕೆಲವೊಬ್ಬರು ದೋಸೆ ಮಾಡಿದರೆ ಸೀದು ಹೋಗುತ್ತೆ. ಆದ್ರೆ ಇನ್ಮುಂದೆ ಅಯ್ಯೋ ನಂಗೆ ದೋಸೆ ಮಾಡೋಕೆ ಬರಲ್ಲ ಅಂತ ಬೇಜಾರು ಮಾಡ್ಕೊಳ್‌ಬೇಕಾಗಿಲ್ಲ. ಸ್ಟಾರ್ಟ್‌ ಅಪ್‌ವೊಂದು ನಿಮಿಷಗಳಲ್ಲಿ ದೋಸೆ ಸಿದ್ಧಪಡಿಸುವ ದೋಸೆ ಪ್ರಿಂಟರ್ ಸಿದ್ಧಪಡಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Chennai Startups Dosa Printer Goes Viral Vin
Author
First Published Aug 26, 2022, 10:13 AM IST

ಮನುಷ್ಯ ಸ್ವಭಾತಹಃ ಆಲಸೀ. ಹೀಗಾಗಿ ಆರಾಮವಾಗಿರಲು ಎಷ್ಟು ಸೌಕರ್ಯಗಳು ಬಂದರೂ ಮತ್ತಷ್ಟು ಆವಿಷ್ಕಾರಗಳಿಗೆ ಕಾಯುತ್ತಲೇ ಇರುತ್ತಾನೆ. ಮನುಷ್ಯನ ಇಂಥಹಾ ಸ್ವಭಾವವೇ ಹೊಸ ಹೊಸ ವಸ್ತುಗಳ ಆವಿಷ್ಕಾರಕ್ಕೆ ಕಾರಣವಾಗುತ್ತದೆ. ಆಹಾರವನ್ನು ಬೇಯಿಸಲು ಬೆಂಕಿಪೆಟ್ಟಿಗೆಯಿಂದ ಹಿಡಿದು ತಾಮ್ರ, ಕಬ್ಬಿಣ, ಅಲ್ಯುಮಿನಿಯಂ ಮೊದಲಾದವುಗಳು ಇದೇ ರೀತಿ ಆವಿಷ್ಕಾರಗೊಂಡವು. ಮನುಷ್ಯನ ದೈನಂದಿನ ಚಟುವಟಿಕೆಗಳನ್ನು ಸುಲಭಗೊಳಿಸಲು ಹಲವು ವಸ್ತುಗಳು ಆವಿಷ್ಕರಿಸಲ್ಪಟ್ಟಿವೆ. ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ಮೈಕ್ರೋ ಓವನ್‌, ಗೀಸರ್‌, ಹೀಟರ್, ಎಸಿ ಎಲ್ಲವೂ ಮನುಷ್ಯನ ಇಂಥಾ ಸ್ವಭಾವ ನೋಡಿಯೇ ಕಂಡುಹಿಡಿಯಲ್ಪಟ್ಟಂಥವು. 

ಅಡುಗೆ ಮನೆಯ (Kitchen) ಕೆಲಸಗಳು ಯಾವಾಗಲೂ ತಲೆನೋವಿನ ವಿಷಯ. ತರಕಾರಿ ಹೆಚ್ಚುವುದು, ಬೇಯಿಸುವುದು, ದೋಸೆ, ಇಡ್ಲಿ ತಯಾರಿಸುವುದು ಪ್ರತಿಯೊಂದು ಕೆಲಸಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿಯೇ ಗೃಹಿಣಿಯರು ಹೋಮ್ ಅಪ್ಲೈಯೆನ್ಸ್‌ಗಳನ್ನು ಖರೀದಿಸುತ್ತಲೇ ಇರುತ್ತಾರೆ. ಮಹಿಳೆಯ (Woman) ಇಂಥಹಾ ಮನಸ್ಥಿತಿಯನ್ನು ಮನಗಂಡೇ ಕೆಲ ಸಂಸ್ಥೆಗಳು, ಸ್ಟಾರ್ಟ್‌ ಅಪ್‌ಗಳು ಹೊಸ ಹೊಸ ಪರಿಕರಗಳನ್ನು ತಯಾರಿಸುತ್ತವೆ. ಮಾರುಕಟ್ಟೆಗ ಬರುವ ಇಂಥಾ ಯಂತ್ರಗಳು ಜನರ ಕೆಲಸವನ್ನು ಸುಲಭಗೊಳಿಸುತ್ತವೆ. ಸದ್ಯ ಅಂಥದ್ದೇ ಒಂದು ವಿಶಿಷ್ಟ ಯಂತ್ರ ವೈರಲ್ ಆಗ್ತಿದೆ. ಅದುವೇ ದೋಸೆ ಪ್ರಿಂಟರ್‌.

ಇಲ್ಲಿ ಹೃದಯ, ಹೂವು ಚಿಟ್ಟೆಯ ಆಕಾರದಲ್ಲೂ ಸಿಗುತ್ತೆ ದೋಸೆ: viral video

ಗರಿಗರಿಯಾದ ದೋಸೆ ಸಿದ್ಧಪಡಿಸುವ ಪ್ರಿಂಟರ್
ಅರೆ, ದೋಸೆ ಮಾಡೋಕು ಒಂದು ಪ್ರಿಂಟರಾ ಎಂದು ಅಚ್ಚರಿಗೊಳ್ಬೇಡಿ. ನಂಬೋಕೆ ಕಷ್ಟವಾದರೂ ಇದು ನಿಜ. ಚೆನ್ನೈ ಮೂಲದ ಕಂಪನಿ ಇವೊಚೆಫ್‌ನ 'ದೋಸಾ ಪ್ರಿಂಟರ್'ವೊಂದನ್ನು ಸಿದ್ಧಪಡಿಸಿದೆ. ಬ್ರ್ಯಾಂಡ್‌ ವೆಬ್‌ಸೈಟ್‌ನ ಪ್ರಕಾರ, ಇಸಿ ಫ್ಲಿಪ್ ಹೆಸರಿನ ಈ ಸಾಧನವನ್ನು 'ವಿಶ್ವದ ಮೊದಲ ಸ್ಮಾರ್ಟ್ ದೋಸೆ ತಯಾರಕ' ಎಂದು ಕರೆಯಲಾಗಿದೆ. ಇದರ ಬೆಲೆ 15,999 ರೂ. 

ದೋಸೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತಿಂಡಿ. ಚಟ್ನಿ, ಸಾಂಬಾರಿನ ಜೊತೆ ದೋಸೆಯನ್ನು ಅದ್ದಿ ತಿನ್ನೋಕೆ ಚೆನ್ನಾಗಿರುತ್ತೆ. ಆದ್ರೆ ನೀಟಾಗಿ ದೋಸೆ ಮಾಡೋಕೆ ಎಲ್ರಿಗೂ ಬರಲ್ಲ. ಕೆಲವೊಬ್ಬರು ಮಾಡೋ ದೋಸೆ ರೌಂಡ್ ಶೇಪ್‌ನಲ್ಲಿ ಇರಲ್ಲ. ಇನ್ನು ಕೆಲವೊಬ್ಬರು ಮಾಡೋ ದೋಸೆ ಸೀದು ಹೋಗುತ್ತೆ. ಇನ್ನು ಕಾಲೇಜು, ಆಫೀಸ್ ಹೋಗುವ ಗಡಿಬಿಡಿಯಲ್ಲಿ ಹೇಗಾಗಿದೆಯಂದರೆ ದೋಸೆ ಹಿಟ್ಟು ರೆಡಿಯಿದ್ದರೂ ಜನರಿಗೆ ದೋಸೆ ಹೊಯ್ದು ತಿನ್ನೋಕೆ ಸಮಯವಿರಲ್ಲ. ಅಂಥವರಿಗೆ ಈ ದೋಸೆ ಪ್ರಿಂಟರ್ ಎಲ್ಲಾ ರೀತಿಯಲ್ಲಿ ನೆರವಾಗಲಿದೆ. 

ದೋಸೆ ಪ್ರಿಂಟರ್‌ನಲ್ಲಿ ದೋಸೆ ಮಾಡುವುದು ಹೇಗೆ ?
ಎವೊಚೆಫ್ ಹೆಸರಿನ ಸ್ಟಾರ್ಟ್‌ಅಪ್‌ ವಿಶ್ವದ ಮೊದಲ ಸ್ಮಾರ್ಟ್‌ ದೋಸೆ ಮೇಕರ್‌ ಅನ್ನು ತಯಾರಿಸಿದೆ. ಈ ದೋಸೆ ಮೇಕರ್‌ನಲ್ಲಿ ನೀವು ದೋಸೆ ಹಿಟ್ಟು ಹಾಕಿಬಿಟ್ಟರೆ ಸಾಕು. ನಿಮಿಷಗಳಲ್ಲಿ ಚೌಕಾಕಾರದ ದೋಸೆ ಸಿದ್ಧವಾಗಿಬಿಡುತ್ತದೆ. ಈ ದೋಸೆ ಪ್ರಿಂಟರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಂದಿಷ್ಟು ಮಂದಿ ಇದನ್ನು ಕೊಂಡಾಡಿದರೆ, ಹಲವರು ಇದನ್ನು ಅವಶ್ಯಕತೆಯೇ ಇಲ್ಲದ ಸಾಧನ ಎಂದು ದೂರಿದ್ದಾರೆ. ಈ ದೋಸೆ ಮೇಕರ್‌ನಲ್ಲಿ ಹಿಟ್ಟನ್ನು ಹಾಕಿದರೆ ಸಾಕು. ಮಾಮೂಲಿ ಪ್ರಿಂಟರ್‌ಗಳಂತೆಯೇ ಇದು ದೋಸೆಯನ್ನೇ ಪ್ರಿಂಟ್‌ ಮಾಡಿಕೊಟ್ಟುಬಿಡುತ್ತದೆ. ದೋಸೆ ಎಷ್ಟು ದಪ್ಪವಿರಬೇಕು, ಎಷ್ಟು ಕ್ರಿಸ್ಪಿಯಾಗಿರಬೇಕು, ಎಷ್ಟು ಹೊತ್ತು ಕಾಯಿಸಬೇಕು ಎನ್ನುವುದನ್ನೂ ನೀವು ಈ ಮೇಕರ್‌ನಲ್ಲಿ ಸೆಟ್‌ ಮಾಡಿಕೊಳ್ಳಬಹುದು.

ಅಮೇರಿಕಾದಲ್ಲಿ ಸಾದಾ ದೋಸೆ ಹೆಸ್ರು ನೇಕೆಡ್ ಕ್ರೇಪ್ಸ್, ಬೆಲೆ ಭರ್ತಿ 1400 ರೂ.!

ದೋಸೆ ಪ್ರಿಂಟರ್‌ ಖರೀದಿಸುವುದು ಹೇಗೆ?
ಸದ್ಯ ಈ ದೋಸೆ ಮೇಕರ್‌ ಅನ್ನು ಎವೊಚೆಫ್ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು. ವಿಶೇಷವಾಗಿ ಮನೆಯಿಂದ ದೂರ ಇರುವವರಿಗಾಗಿಯೇ ಈ ಮೇಕರ್‌ ಅನ್ನು ಮಾಡಿರುವುದಾಗಿ ಹೇಳಿಕೊಂಡಿರುವ ಸಂಸ್ಥೆ ವಿಶ್ವಾದ್ಯಂತ ಇದರ ಡೆಲಿವರಿ ಮಾಡುವುದಾಗಿ ತಿಳಿಸಿದೆ. ನಾಲ್ಕು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ದೋಸೆ ಮೇಕರ್‌ ಬೆಲೆ 15,999 ರೂ.

ದೋಸೆ ತಯಾರಕರ ಕೆಲಸವನ್ನು ಪ್ರದರ್ಶಿಸುವ ತುಣುಕನ್ನು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಅಲ್ಲಿ ಅದು ಪ್ರಶಂಸೆ ಮತ್ತು ನೆಗೆಟಿವ್‌ ಕಮೆಂಟ್‌ನ್ನು ಪಡೆದುಕೊಂಡಿದೆ. 'ಇದು ಅಗತ್ಯವಿರುವ ಉಪಕರಣವಲ್ಲ. ದೋಸೆ ಮಾಡುವುದು ಕಷ್ಟದ ಕೆಲಸವಲ್ಲ. ಬ್ಯಾಟರ್ ಅನ್ನು ಸಿದ್ಧಪಡಿಸುವುದು ಕಷ್ಟದ ಕೆಲಸ' ಎಂದು ಟ್ವಿಟರ್ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಇಂಥಾ ದೋಸೆ ಪ್ರಿಂಟರ್‌ನ್ನು ದುಡ್ಡು ಕೊಟ್ಟು ಖರೀದಿಸುವವರು ನಿಜವಾಗಲೂ ಮೂರ್ಖರು ಎಂದು ಬರೆದಿದ್ದಾರೆ. ಇನ್ನು ಹಲವರು ದೋಸೆ ಪ್ರಿಂಟರ್ ದೋಸೆ ಪ್ರಿಂಟರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಉಪಕರಣವು ಬಾಣಸಿಗರಿಗೆ ತಮ್ಮ ಕೆಲಸವನ್ನು ತ್ವರಿತವಾಗಿ ಮಾಡಲು ಅನುಮತಿಸುತ್ತದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios