Asianet Suvarna News Asianet Suvarna News

ಮಗಳು ಬೇಗ ದೊಡ್ಡೋಳಾಗಬಾರದು ಅಂದ್ರೆ ಹೀಗ್ ನೋಡ್ಕಳ್ಳಿ!

ಪ್ರತಿಯೊಬ್ಬ ಹೆಣ್ಣು ಮಗು ಪಿರಿಯಡ್ಸ್ ಚಕ್ರಕ್ಕೆ ಒಳಗಾಗ್ತಾಳೆ. ಅದಕ್ಕೊಂದು ವಯಸ್ಸಿನ ಮಿತಿ ಇದೆ. ಆದ್ರೆ ಈಗಿನ ದಿನಗಳಲ್ಲಿ ಅತಿ ಚಿಕ್ಕ ಮಕ್ಕಳೇ ಮುಟ್ಟಾಗ್ತಿದ್ದು, ಅದ್ರ ನಿಯಂತ್ರಣಕ್ಕೆ ಏನು ಮಾಡ್ಬೇಕು ಅಂತ ನಾವು ಹೇಳ್ತೇವೆ.  
 

Causes And Problems Of Getting Periods At An Early Age roo
Author
First Published Mar 19, 2024, 2:46 PM IST

ಮಕ್ಕಳು ಮತ್ತು ಹದಿಹರೆಯದ ಹುಡುಗಿಯರಲ್ಲಿ ಹೆಚ್ಚುತ್ತಿರುವ ಹಾರ್ಮೋನ್ ಏರುಪೇರು ಪೋಷಕರಿಗೆ ಮಾತ್ರವಲ್ಲದೆ ವೈದ್ಯರಿಗೂ ವಿಚಿತ್ರವಾದ ಸಮಸ್ಯೆಯನ್ನು ಸೃಷ್ಟಿಸಿದೆ. 6 ವರ್ಷ ವಯಸ್ಸಿನ ಹುಡುಗಿಯರು ಪಿರಿಯಡ್ಸ್ ಗೆ ಒಳಗಾಗ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಇಂತಹ ಪ್ರಕರಣಗಳು ಸುಮಾರು ಶೇಕಡಾ 15-20 ರಷ್ಟು ಹೆಚ್ಚಾಗಿದೆ. ಹುಡುಗಿಯರಲ್ಲಿ ಆಗುವ ಮೊದಲ ಪಿರಿಯಡ್ಸ್ ಅನ್ನು ಮೆನಾರ್ಚೆ ಎಂದೂ ಕರೆಯುತ್ತಾರೆ. ಇದು 8 ರಿಂದ 13 ವರ್ಷ ವಯಸ್ಸಿನ ನಡುವೆ ಇರುತ್ತದೆ. ಇದು ಮುಂಬರುವ ಪ್ರೌಢಾವಸ್ಥೆಯ ಸಂಕೇತವಾಗಿದೆ. 

ಚಿಕ್ಕ ವಯಸ್ಸಿನಲ್ಲಿ ಪಿರಿಯಡ್ಸ್ (Periods) ಶುರುವಾದ್ರೆ ಮಕ್ಕಳಿ (Children) ಗೆ ಅದ್ರ ಬಗ್ಗೆ ತಿಳುವಳಿಕೆ ನೀಡೋದು ಕಷ್ಟ. ನೈರ್ಮಲ್ಯ (Hygiene) , ಆರೋಗ್ಯದ ಬಗ್ಗೆ ಅವರಿಗೆ ಮಾಹಿತಿ ನೀಡುವುದು ಪಾಲಕರಿಗೆ ಸವಾಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಪಿಟ್ಯುಟರಿ ಗ್ರಂಥಿಯ ಆರಂಭಿಕ ಸಕ್ರಿಯಗೊಳಿಸುವಿಕೆ, ಹಾರ್ಮೋನ್ ಅಸಮತೋಲನ, ಬದಲಾಗುವ ಜೀವನಶೈಲಿ, ಕಡಿಮೆಯಾಗುವ ದೈಹಿಕ ಚಟುವಟಿಕೆ, ಜಂಕ್ ಫುಡ್  ಮತ್ತು  ಪಿಯರ್ ಪ್ರೆಶರ್ ಚಿಕ್ಕ ವಯಸ್ಸಿನಲ್ಲಿ ಪಿರಿಯಡ್ಸ್ ಆಗಲು ಮುಖ್ಯ ಕಾರಣ. ಆರಂಭಿಕ ಪ್ರೌಢಾವಸ್ಥೆಯು ಮಗುವಿನ ದೇಹವು ತನ್ನ ಗೆಳೆಯರಿಗಿಂತ ಬೇಗ ಬದಲಾಗುವಂತೆ ಮಾಡುತ್ತದೆ. ಹಾರ್ಮೋನಿನ ಬದಲಾವಣೆಗಳು ಹಾಗೂ ಆಕೆಯ ಲೈಂಗಿಕ ಬದಲಾವಣೆಗಳಿಂದ ಪ್ರೇರೇಪಿಸಲ್ಪಟ್ಟ ಮೂಡ್ ಸ್ವಿಂಗ್‌ಗಳು ಅವಳಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು. ಬೇಗ ಪಿರಿಯಡ್ಸ್ ಆಗುವ ಮಕ್ಕಳಿಗೆ ಕುಟುಂಬದಿಂದ ನಿರಂತರ ಬೆಂಬಲ ಅಗತ್ಯವಿರುತ್ತದೆ. ಸಂಬಂಧಿಕರು, ಗೆಳೆಯರನ್ನು ಎದುರಿಸುವ, ಅವರ ಟೀಕೆಗಳನ್ನು ನಿರ್ಲಕ್ಷ್ಯಿಸಿ ಮುಂದೆ ಸಾಗುವ ಧೈರ್ಯ, ಆತ್ಮವಿಶ್ವಾಸವನ್ನು ಮಕ್ಕಳಿಗೆ ನೀಡಬೇಕು.

ಬಿಳಿ ಕೂದಲ ತಡೆಗೆ ಅಮೆರಿಕನ್ನರು ಏನ್ ತಿನ್ತಿದ್ದಾರೆ ಗೊತ್ತಾ? ಭಾರತೀಯ ಆಹಾರಕ್ಕೆ ಮಾರು ಹೋದ ವಿದೇಶಿಗರು

ಪಿರಿಯಡ್ಸ್ ಬೇಗ ಆಗದಂತೆ ಏನು ಮಾಡ್ಬೇಕು? : ಹೆಣ್ಣು ಮಕ್ಕಳು ಅತಿ ಬೇಗ ಪ್ರೌಢಾವಸ್ಥೆಗೆ ಬಂದ್ರೆ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅದನ್ನ ತಡೆಯಲು ಪಾಲಕರು ಪ್ರಯತ್ನಿಸಬೇಕು. ಕೆಲ ವಿಷ್ಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಮಕ್ಕಳಿಗೆ ನೀಡುವ ಆಹಾರ ಇಲ್ಲಿ ಮುಖ್ಯವಾಗುತ್ತದೆ. ಮೊದಲೇ ಹೇಳಿದ್ದಂತೆ ಜಂಕ್ ಫುಡ್ ಮಕ್ಕಳ ಆರೋಗ್ಯದ ಮೇಲೆ ಹಾರ್ಮೋನ್ ಏರುಪೇರಿನ ಮೇಲೆ ಪ್ರಭಾವ ಬೀರುತ್ತದೆ. ಪಾಲಕರು ಮಕ್ಕಳಿಗೆ ಜಂಕ್ ಫುಡ್, ಹೊರಗಿನ ತಿಂಡಿ ನೀಡುವ ಬದಲು ಸಾಧ್ಯವಾದಷ್ಟು ಪ್ರಾದೇಶಿಕ, ನೈಸರ್ಗಿಕ ಆಹಾರವನ್ನು ಮಕ್ಕಳಿಗೆ ನೀಡಿ.

ಈಗಿನ ಮಕ್ಕಳು ಮೊಬೈಲ್, ಟಿವಿ ವೀಕ್ಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಶಾಲೆ – ಮನೆ ಎರಡೂ ಕಡೆ ಕುಳಿತುಕೊಂಡೇ ಇರುವ ಬಹುತೇಕ ಮಕ್ಕಳ ದೈಹಿಕ ಚಟುವಟಿಕೆ ಕಡಿಮೆ ಆಗಿದೆ. ಅವರು ಮನೆಯಿಮದ ಹೊರಗೆ ಹೋಗಿ ಆಟವಾಡುವುದನ್ನು ಕಡಿಮೆ ಮಾಡಿದ್ದಾರೆ. ದೈಹಿಕ ಚಟುವಟಿಕೆ ಆರಂಭಿಕ ಪಿರಿಯಡ್ಸ್ ತಡೆಯಲು ಸಹಕಾರಿ. ಹಾಗಾಗಿ ನಿಮ್ಮ ಮಕ್ಕಳು ಪ್ರತಿ ದಿನ ಕನಿಷ್ಠ ಒಂದು ಗಂಟೆಯಾದ್ರೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಿ.  ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕ ಎಲ್ಲರೂ ಈಗ ಮನೆಯಲ್ಲಿ ಬಂಧಿಯಾಗಿರುತ್ತಾರೆ. ಸೂರ್ಯನ ಕಿರಣ ಬೀಳದ ಮನೆಯಲ್ಲಿ, ಎಸಿ ರೂಮಿನಲ್ಲಿ ಸದಾ ಇರುವ ಮಕ್ಕಳಿಗೆ ವಿಟಮಿನ್ ಡಿ ಕೊರತೆ ಕಾಡುತ್ತಿದೆ. ಹೆಣ್ಣು ಮಕ್ಕಳು ಬೆಳಿಗ್ಗೆ ಅಥವಾ ಸಂಜೆ ಕನಿಷ್ಠ ಅರ್ಧ ಗಂಟೆ ಸೂರ್ಯನ ಕಿರಣಕ್ಕೆ ಮೈವೊಡ್ಡುವಂತೆ ನೋಡಿಕೊಳ್ಳಿ. 

ಕೂದಲ ಹಾನಿ ನಿಯಂತ್ರಣಕ್ಕಾಗಿ ಅತ್ಯಂತ ಪರಿಣಾಮಕಾರಿ ಕೊರಿಯನ್ ಹೇರ್‌ ಕೇರ್‌ ಟಿಪ್ಸ್‌!

ಈಗ ಎಲ್ಲಿ ನೋಡಿದ್ರೂ ಪ್ಲಾಸ್ಟಿಕ್. ಕುಡಿಯೋ ನೀರಿನಿಂದ ಹಿಡಿದು ಬೇಯಿಸೋ ಆಹಾರದವರೆಗೆ ಎಲ್ಲದಕ್ಕೂ ಪ್ಲಾಸ್ಟಿಕ್ ಬಳಕೆ (Usage of Plactic) ಮಾಡ್ತಾರೆ. ಮಕ್ಕಳು ಬೇಗ ಪಿರಿಯಡ್ಸ್ ಗೆ ಒಳಗಾಗಬಾರದು ಅಂದ್ರೆ ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಬೇಯಿಸಿ ಮಕ್ಕಳಿಗೆ ತಿನ್ನಿಸಬೇಡಿ. ನಿಮಗೆ ಅಚ್ಚರಿ ಎನ್ನಿಸಬಹುದು ಆದ್ರೆ ನೀವು ಮಕ್ಕಳಿಗೆ ನೀಡುವ ಲಿಪ್ಸ್ಟಿಕ್ (Lipstic), ನೇಲ್ ಪಾಲಿಶ್ (Nail Polish) ಮತ್ತು ಪರ್ಫ್ಯೂಮ್ (Perfume) ಕೂಡ ಬೇಗ ಪಿರಿಯಡ್ಸ್ ಆಗಲು ಕಾರಣ. ಮಕ್ಕಳು ಹೇಗಿದ್ರೂ ಚೆಂದ. ಅವರ ತುಟಿ (Lips), ಉಗುರಿನ ಅಂದ ಹೆಚ್ಚಿಸಲು ಹೋಗಿ ಮತ್ತೊಂದು ಸಮಸ್ಯೆಗೆ ಅವರು ಬೀಳದಂತೆ ನೋಡಿಕೊಳ್ಳಿ. 

Follow Us:
Download App:
  • android
  • ios