ಒಣಗಿದ ತರಕಾರಿಯನ್ನು ಫ್ರೆಶ್ ಮಾಡುವ ಕೆಮಿಕಲ್‌: ವೈರಲ್ ವಿಡಿಯೋ ನೋಡಿ ಆಘಾತಗೊಂಡ ಜನ

ತರಕಾರಿ ಮೇಲೆ ರಾಸಾಯನಿಕದ ಪ್ರಯೋಗದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿದರೆ ಮಾರುಕಟ್ಟೆಯಲ್ಲಿ ದೊರೆಯುವ ಯಾವ ತರಕಾರಿಯ ಮೇಲೆಯೂ ನಿಮಗೆ ನಂಬಿಕೆ ಬರದು.

Can vegetables be kept fresh like this Is this true? People are shocked to see the viral video akb

ನವದೆಹಲಿ: ಇಂದು ನಾವು ತಿನ್ನುವ ಆಹಾರಗಳಲ್ಲಿ ಸಾಕಷ್ಟು ವಿಷಕಾರಿ ಅಂಶಗಳಿರುತ್ತವೆ. ಅನ್ನದಿಂದ ಹಿಡಿದು ಹಣ್ಣ ಹಂಪಲುಗಳವರೆಗೆ ವಿಷ ಪರೋಕ್ಷವಾಗಿ ಅವರಿಸಿರುತ್ತದೆ. ಅವು ಸಸ್ಯಹಾರಿಯೇ ಆಗಿರಬಹುದು ಅಥವಾ ಮಾಂಸಹಾರವೇ ಆಗಿರಬಹುದು. ಪ್ರತಿಯೊಂದು ಆಹಾರ ಉತ್ಪನ್ನದಲ್ಲೂ ರಾಸಾಯನಿಕ ಇದ್ದೇ ಇರುತ್ತದೆ. ತರಕಾರಿ ಬೆಳೆಯುವಾಗ ಹಾಕುವ ಗೊಬ್ಬರದಿಂದ ಪ್ರಾರಂಭಿಸಿ  ಮಾರುಕಟ್ಟೆಯಲ್ಲಿ ಅದನ್ನು ತಾಜಾ ಆಗಿ ಇಡುವವರೆಗೆ ಹಲವು ರಾಸಾಯನಿಕಗಳ ಪ್ರಯೋಗ ಅದರ ಮೇಲೆ ನಡೆದಿರುತ್ತವೆ.  ಹಾಗೆಯೇ ಇಲ್ಲೊಂದು ಕಡೆ ಈ ತರಕಾರಿ ಮೇಲೆ ರಾಸಾಯನಿಕದ ಪ್ರಯೋಗದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿದರೆ ಮಾರುಕಟ್ಟೆಯಲ್ಲಿ ದೊರೆಯುವ ಯಾವ ತರಕಾರಿಯ ಮೇಲೆಯೂ ನಿಮಗೆ ನಂಬಿಕೆ ಬರದು.

ಟ್ವಿಟ್ಟರ್‌ನಲ್ಲಿ ಅಮಿತ್ ತಧಾನಿ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು,  ವಿಡಿಯೋ ನೋಡಿದ ಅನೇಕರು ಆಘಾತಗೊಂಡಿದ್ದಾರೆ.  ವಿಡಿಯೋದಲ್ಲಿ ಹಸಿರು ತರಕಾರಿ (ಬಹುಶ ಕೊತ್ತಂಬರಿ ಸೊಪ್ಪು) ಒಣಗಿ ಬಾಡಿ ಹೋಗಿದ್ದು,  ಇದನ್ನು ಒಂದು ಪಾತ್ರೆಯಲ್ಲಿರುವ ದ್ರವ ರೂಪದ  ಕೆಮಿಕಲ್‌ಗೆ ಮುಳುಗಿಸಿ ಹೊರ ತೆಗೆಯುತ್ತಾರೆ. ಇದಾಗಿ ಎರಡು ನಿಮಿಷದಲ್ಲಿ ಒಣಗಿ ಹೋಗಿದ್ದ ಸೊಪ್ಪು ಸಂಪೂರ್ಣ  ಆಗ ತಾನೆ ಕೊಯ್ಲು ಮಾಡಿ ತಂದಂತೆ ಕಾಣಿಸುತ್ತಿದೆ. ಕೇವಲ ಎರಡೇ ಎರಡು ನಿಮಿಷದಲ್ಲಿ ಸೊಪ್ಪು ತಾಜಾ ತರಕಾರಿಯಂತೆ ಕಾಣುತ್ತಿದ್ದು,  ಈ ವಿಡಿಯೋ ನೋಡಿದ ಜನ ದಂಗಾಗಿದ್ದಾರೆ. 

ಆಹಾರದಲ್ಲಿ ‘ವಿಷ’ವೋ? ‘ವಿಷ’ ಆಹಾರವೋ..? ಶ್ರೀಗಳ ಸಾವಿನ ಸಿಕ್ರೇಟ್

ಸಾಮಾನ್ಯವಾಗಿ ಸ್ವಲ್ಪ ಬಾಡಿದ ಸೊಪ್ಪು ಅಥವಾ ತರಕಾರಿಯನ್ನು ನೀರಿನಲ್ಲಿ ಹಾಕಿಟ್ಟರೆ ನೀರು ಹೀರಿಕೊಂಡು ಅದು ಸ್ವಲ್ಪ ತಾಜಾತನ ಪಡೆಯುವುದು ಆದರೆ  ಇದಕ್ಕೆ ಕನಿಷ್ಠ ಅರ್ಧಗಂಟೆಯಾದರೂ ಹಿಡಿಯುವುದು. ಆದರೆ ಇಲ್ಲಿ ಈ ದ್ರವ ರೂಪದ ರಾಸಾಯನಿಕಕ್ಕೆ ಮುಳುಗಿಸಿ ಎರಡು ನಿಮಿಷದಲ್ಲಿ ಸೊಪ್ಪು ಸಂಪೂರ್ಣ ತಾಜಾ ಆಗಿ, ಈಗಷ್ಟೇ ಕತ್ತರಿಸಿ ತಂದಂತೆ ಕಾಣಿಸುತ್ತಿದೆ. ಈ ವಿಡಿಯೋ ಪೋಸ್ಟ್ ಮಾಡಿದ ಅಮಿತ್ ತಧಾನಿ,  2 ನಿಮಿಷದ ನಿಜವಾದ ದುರಂತ ಎಂದು ಬರೆದುಕೊಂಡಿದ್ದಾರೆ.  ಈ ವಿಡಿಯೋವನ್ನು 4 ಲಕ್ಷಕ್ಕೂ ಜನ ವೀಕ್ಷಿಸಿದ್ದಾರೆ. ಅನೇಕರು ಆಘಾತಗೊಂಡು ಕಾಮೆಂಟ್ ಮಾಡಿದ್ದಾರೆ. 

ಮೂಲತಃ ಈ ವಿಡಿಯೋವನ್ನು ದೇವರಾಜನ್ ರಾಜಗೋಪಾಲನ್ ಎಂಬುವವರು (Devarajan Rajagopalan) ಲಿಂಕ್ಡಿನ್‌ನಲ್ಲಿ ಪೋಸ್ಟ್ ಮಾಡಿದ್ದು,   ಅವರು ಹೀಗೆ ಬರೆದುಕೊಂಡಿದ್ದಾರ. ' ಇದು105 ಸೆಕೆಂಡ್‌ಗಳ ಲೈವ್ ವಿಡಿಯೋ,  ರಸಾಯನಿಕದಲ್ಲಿ ತೊಳೆಯುವುದರಿಂದ ಒಣಗಿದ ತರಕಾರಿ ಕೂಡ ತಾಜಾವಾಗಿ ಕಾಣಿಸುತ್ತದೆ.  ಇದುವೇ ಇಂದು ಹೆಚ್ಚುತ್ತಿರುವ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಕಾರಣ ಎಂದು ಅವರು ಬರೆದುಕೊಂಡಿದ್ದಾರೆ.  ಇತ್ತ ಟ್ವಿಟ್ಟರ್‌ನಲ್ಲಿ ಶೇರ್ ಆಗಿರುವ ಈ ವಿಡಿಯೋಗೆ ಅನೇಕರು ಭಯಾನಕವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.  ಇದನ್ನು ನೋಡಿದ ಮೇಲೆ ಇನ್ನೇನು ತಿನ್ನಬೇಕು ಎಂದು ಅನಿಸುತ್ತಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೆ ಕೆಲವರು ಇದು ನಾವು ನಮ್ಮ ಪೂರ್ವಜರಂತೆ ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.  ಇದು ಎಷ್ಟೊಂದು ಭಯಾನಕವಾಗಿದೆ. ಇಂತಹ ಕಲಬೆರಕೆ ಹೇಗೆ ಕೊನೆಯಾಗುವುದು ಎಂದು ಪ್ರಶ್ನಿಸಿದ್ದಾರೆ.

Health Tips : ಸಾತ್ವಿಕ ಭೋಜನ ಆರೋಗ್ಯದ ಮೇಲೆ ಮಾಡುತ್ತೆ ಮ್ಯಾಜಿಕ್!

 ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲಾಗಿಲ್ಲ.  ಒಂದು ವೇಳೆ ನಿಜವೇ ಆಗಿದ್ದರೆ ಇದು ಜನರನ್ನು ಶೀಘ್ರವಾಗಿ ರೋಗ ಪೀಡಿತಗೊಳಿಸುವುದರಲ್ಲಿ ಸಂಶಯವಿಲ್ಲ. 

 

Latest Videos
Follow Us:
Download App:
  • android
  • ios