Asianet Suvarna News Asianet Suvarna News

ಮಧುಮೇಹಿಗಳು ಮಾವು ಮತ್ತು ಹಲಸಿನ ಹಣ್ಣು ತಿನ್ಬೋದಾ..ಆರೋಗ್ಯ ತಜ್ಞರು ಏನಂತಾರೆ?

ಮಾವಿನ ಹಣ್ಣಿನ ಸೀಸನ್‌ ನಡೀತಿದೆ. ಹಲಸಿನ ಹಣ್ಣುಗಳ ಸೀಸನ್ ಶುರುವಾಗ್ತಾ ಇದೆ. ಈ ಸಿಹಿ ಸಿಹಿಯಾದ ಹಣ್ಣುಗಳು ಯಾರಿಗೆ ತಾನೇ ಇಷ್ಟವಿಲ್ಲ ಹೆಳಿ. ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಮಧುಮೇಹಿಗಳು ಹಲಸು ಅಥವಾ ಮಾವಿನ ಹಣ್ಣುಗಳನ್ನು ತಿನ್ನಬಹುದೇ ? ಈ ಬಗ್ಗೆ ಆರೋಗ್ಯ ತಜ್ಞರು ಏನಂತಾರೆ ತಿಳಿಯೋಣ.

Can Diabetic patients eat jackfruit or mangoes, Heres what health expert says Vin
Author
First Published Jun 23, 2023, 12:20 PM IST

ಈಗಿನ ಕಾಲದಲ್ಲಂತೂ ಡಯಾಬಿಟಿಸ್ ಇಲ್ಲದವರನ್ನು ಹುಡುಕೋದು ಕಷ್ಟ. ಬಹುತೇಕ ಎಲ್ಲರೂ ಮಧುಮೇಹ ರೋಗಿಗಳೇ. ಇಂಥವರು ತಮ್ಮ ಆರೋಗ್ಯದ ಬಗ್ಗೆ ತಿನ್ನೋ ಆಹಾರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಧುಮೇಹವು ದೀರ್ಘಕಾಲದ ಸ್ಥಿತಿಯಾಗಿದ್ದು, ಮೇದೋಜ್ಜೀರಕ ಗ್ರಂಥಿಯು ಉತ್ಪಾದಿಸುವ ಇನ್ಸುಲಿನ್‌ನ್ನು ದೇಹವು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ಅಥವಾ ಅದನ್ನು ಸಾಕಷ್ಟು ಉತ್ಪಾದಿಸದಿದ್ದಾಗ ಬೆಳವಣಿಗೆಯಾಗುತ್ತದೆ. ಇನ್ಸುಲಿನ್ ಎಂಬ ಹಾರ್ಮೋನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇಂದು, ಮಧುಮೇಹವು ತುಂಬಾ ಸಾಮಾನ್ಯವಾದ ವೈದ್ಯಕೀಯ ಸಮಸ್ಯೆಯಾಗಿದೆ. 

ಸಕ್ಕರೆಯ ಪ್ರಮಾಣ ಹೆಚ್ಚಿರುವವರು ತಮಗೆ ಮಧುಮೇಹವಿದೆ (Diabetes) ಎಂದು ತಿಳಿದಾಗ ತಿನ್ನಲು ಹಿಂಜರಿಯುತ್ತಾರೆ. ಏನು ತಿನ್ನಬೇಕು, ಎಷ್ಟು ತಿನ್ನಬೇಕು, ಯಾವ ಆಹಾರ (Food)ದಿಂದ ದೂರವಿರಬೇಕು ಸೇರಿದಂತೆ ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಮಾವಿನ ಹಣ್ಣಿನ (Mangoes) ಸೀಸನ್‌ ನಡೀತಿದೆ. ಹಲಸಿನ ಹಣ್ಣುಗಳ (Jackfruit) ಸೀಸನ್ ಶುರುವಾಗ್ತಾ ಇದೆ. ಈ ಸಿಹಿ ಸಿಹಿಯಾದ ಹಣ್ಣುಗಳು ಯಾರಿಗೆ ತಾನೇ ಇಷ್ಟವಿಲ್ಲ ಹೆಳಿ. ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಮಧುಮೇಹಿಗಳು ಹಲಸು ಅಥವಾ ಮಾವಿನ ಹಣ್ಣುಗಳನ್ನು ತಿನ್ನಬಹುದೇ ? ಈ ಬಗ್ಗೆ ತಿರುವನಂತಪುರಂನ ನಿಮ್ಸ್ ಮೆಡಿಸಿಟಿಯ ನ್ಯಾಚುರೋಪತಿ ವಿಭಾಗದ ಮುಖ್ಯಸ್ಥೆ ಹಾಗೂ ತೂಕ ಇಳಿಕೆಯ ತಜ್ಞೆ ಡಾ.ಲಲಿತಾ ಅಪ್ಪುಕುಟ್ಟನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ 100 ಮಿಲಿಯನ್ ದಾಟಿದ ಡಯಾಬಿಟಿಸ್ ರೋಗಿಗಳ ಸಂಖ್ಯೆ, ಆರೋಗ್ಯದ ಕಾಳಜಿ ವಹಿಸೋದು ಹೇಗೆ?

ಹಲಸು, ಮಾವಿನ ಹಣ್ಣಿನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳ
ಮಧುಮೇಹಿಗಳು ಆರೋಗ್ಯವಾಗಿರಲು, ಹಲಸು ಮತ್ತು ಮಾವಿನ ಹಣ್ಣುಗಳನ್ನು ತಿನ್ನುವುದನ್ನು ಬಿಟ್ಟು ಬಿಡಬೇಕು. ಏಕೆಂದರೆ ಈ ಆಹಾರಗಳು ಹಣ್ಣಾದಾಗ, ಇವೆರಡೂ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಪಡೆದುಕೊಳ್ಳುತ್ತವೆ. ಅವುಗಳನ್ನು ಸೇವಿಸುವುದರಿಂದ ಹೆಚ್ಚಿನ ಕ್ಯಾಲೋರಿ ಸೇವನೆ ಗಳಿಕೆಯಾಗುತ್ತದೆ. ಕಾಯಿಯಿದ್ದಾಗ ಹಲಸಿನಲ್ಲಿ 150 ಕ್ಯಾಲೊರಿಗಳಿದ್ದರೆ, ಹಣ್ಣದಾಗ ಹಲಸು 100 ಗ್ರಾಂಗೆ 160 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದರೆ, ಪ್ರೋಟೀನ್ ಮತ್ತು ಫೈಬರ್ ಎರಡೂ ಪ್ರಮಾಣದಲ್ಲಿ ಸಮಾನವಾಗಿರುತ್ತದೆ. ಡಾ.ಲಲಿತಾ ಅಪ್ಪುಕುಟ್ಟನ್ ಅವರ ಪ್ರಕಾರ, ಮಧುಮೇಹಿಗಳು ಹಲಸಿನ ಹಣ್ಣನ್ನು ಸೇವಿಸಿದಾಗ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ.

ಮಧುಮೇಹಕ್ಕೆ ಸಂಬಂಧಿಸಿದ ಹುಣ್ಣುಗಳು ಇಂದು ಹೆಚ್ಚು ಸಾಮಾನ್ಯವಾಗಿದೆ. ಇದು ಹಲಸು ಮತ್ತು ಮಾವಿನ ಋತುವಿನ ಉದ್ದಕ್ಕೂ ಈ ಹಣ್ಣಿನ ಅತಿಯಾದ ಸೇವನೆಯ ಪರಿಣಾಮವಾಗಿದೆ. ಸೂಕ್ಷ್ಮಜೀವಿಗಳು ತ್ವರಿತವಾಗಿ ಬೆಳೆಯುತ್ತವೆ ಮತ್ತು ಸಕ್ಕರೆಯ ಮಟ್ಟವು (Sugar level) ಹೆಚ್ಚಾದಾಗ ಅವುಗಳನ್ನು ಹುಣ್ಣಾಗುವಂತೆ ಮಾಡುತ್ತದೆ. 100 ಗ್ರಾಂ ಮಾಗಿದ ಮಾವಿನಹಣ್ಣು 100 ಕ್ಯಾಲೊರಿಗಳನ್ನು ನೀಡುತ್ತದೆ. ಹಸಿರು ಮಾವು, ಕೇವಲ 66 ಕ್ಯಾಲೊರಿಗಳನ್ನು ಹೊಂದಿದೆ. ಆದರೆ, ಇದು ಇತರ ನಿರ್ಣಾಯಕ ಪೋಷಕಾಂಶಗಳನ್ನು ಹೊಂದಿದೆ ಎಂದು ಡಾ. ಲಲಿತಾ ಅಪ್ಪುಕುಟ್ಟನ್ ಹೇಳಿದ್ದಾರೆ.

Health Tips: ಈ ಅಭ್ಯಾಸಗಳಿದ್ದರೆ ರಕ್ತದಲ್ಲಿ ಸಕ್ಕರೆ ಮಟ್ಟ ಇಳಿಯೋದೇ ಇಲ್ಲ

ಬೆಳಗಿನ ಉಪಾಹಾರಕ್ಕಾಗಿ 100 ಗ್ರಾಂ ಗಿಂತ ಹೆಚ್ಚು ಹಲಸು ಅಥವಾ ಮಾವನ್ನು ಸೇವಿಸಬಾರದು. ಸೇವಿಸಿದರೂ ಹಲಸು ಮತ್ತು ಮಾವಿನ ಸೇವನೆಯ ನಂತರ, ಇತರ ಯಾವುದೇ ಹಣ್ಣು ಅಥವಾ ಆಹಾರ ಸೇವಿಸುವುದನ್ನು ಮಾಡಬೇಡಿ. ಮಾವು, ಹಲಸು ತಿಂದ ನಂತರ ಮಧುಮೇಹಿಗಳು ವ್ಯಾಯಾಮಕ್ಕೆ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಈ ರೀತಿ ವ್ಯಾಯಾಮ ಮಾಡದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ತ್ವರಿತವಾಗಿ ಏರಬಹುದು. ವ್ಯಾಯಾಮದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಮಧುಮೇಹ ಹೊಂದಿರುವ ರೋಗಿಗಳು ಇಲ್ಲವಾದರೆ, ಅಲುಗಾಡದೆ ಒಂದೆಡೆ ಕುಳಿತುಕೊಳ್ಳಿ. ದೀರ್ಘ ಸಮಯದ ಕಾಲ ಹೀಗೆ ಕುಳಿತುಕೊಳ್ಳುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು' ಎಂದು ಡಾ. ಲಲಿತಾ ಅಪ್ಪುಕುಟ್ಟನ್ ಹೇಳಿದ್ದಾರೆ.

Follow Us:
Download App:
  • android
  • ios