Health Tips: ಈ ಅಭ್ಯಾಸಗಳಿದ್ದರೆ ರಕ್ತದಲ್ಲಿ ಸಕ್ಕರೆ ಮಟ್ಟ ಇಳಿಯೋದೇ ಇಲ್ಲ
ಅರಿಯದೇ ಯಾವುದೋ ಜೀವನಶೈಲಿ ಅಳವಡಿಸಿಕೊಂಡಿದ್ದೀರಿ. ಆದರೆ, ಮಧುಮೇಹ ಬಂದ ಬಳಿಕವೂ ಅವುಗಳನ್ನು ಮುಂದುವರಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ಯದ್ವಾತದ್ವಾ ಏರುವುದು ಗ್ಯಾರೆಂಟಿ. ಹೀಗಾಗಿ, ಅಂತಹ ಅಭ್ಯಾಸಗಳನ್ನು ದೂರ ಮಾಡಿಕೊಳ್ಳಿ.
ಮಧುಮೇಹವನ್ನು ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆ ಎಂದೇ ಪರಿಗಣಿಸಲಾಗುತ್ತದೆ. ಆಹಾರ-ವಿಹಾರ, ಒತ್ತಡ-ಚಿಂತನೆಗಳು ಮಧುಮೇಹಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತವೆ. ನಾವೆಲ್ಲ ಅರಿತೋ ಅರಿಯದೆಯೋ ಮಧುಮೇಹಕ್ಕೆ ಕಾರಣವಾಗುವ ಅದೆಷ್ಟೋ ಅಂಶಗಳನ್ನು ಅಳವಡಿಸಿಕೊಂಡಿರುತ್ತೇವೆ. ಅವು ತಪ್ಪು ಎಂದು ಗೊತ್ತಿದ್ದರೂ ತಿದ್ದಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ, ಮಧ್ಯವಯಸ್ಸಿನಲ್ಲಿ ನಿಜವಾಗಿಯೂ ಮಧುಮೇಹ ಆರಂಭವಾದಾಗ ಏಕಾಏಕಿ ಹೊಸದೊಂದು ಸಮಸ್ಯೆ ಆರಂಭವಾದಂತೆ ಅನಿಸುತ್ತದೆ. ಆಗ ಆಹಾರ-ವಿಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ತಮ್ಮ ಆರೋಗ್ಯದ ಬಗ್ಗೆ ಗಂಭೀರವಾಗಿ ಕಾಳಜಿ ಹೊಂದಿರುವ ಮಧುಮೇಹಿಗಳು ಸಾಮಾನ್ಯವಾಗಿ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ, ಇತರೆ ಜೀವನಶೈಲಿಯ ಅಂಶಗಳನ್ನು ಮರೆಯುತ್ತಾರೆ. ಕೆಲವರು ಆಹಾರದ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಜೀವನಶೈಲಿಯ ಒಟ್ಟಾರೆ ವಿಚಾರದ ಬಗೆಗೂ ನಿರ್ಲಕ್ಷ್ಯ ತೋರುತ್ತಾರೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಲು ಅನೇಕ ಕಾರಣಗಳಿರುತ್ತವೆ. ಇವೆಲ್ಲವೂ ಕೆಟ್ಟ ಜೀವನಶೈಲಿಗೇ ಸಂಬಂಧಿಸಿವೆ ಎನ್ನುವುದು ಗಮನಾರ್ಹ. ಹೀಗಾಗಿ, ಮಧುಮೇಹ ಬರದೇ ಇರಲು ಹಾಗೂ ಬಂದ ಬಳಿಕ ನಿಭಾಯಿಸುವುದಕ್ಕೋಸ್ಕರ ಯಾವ ರೀತಿಯ ನಿಮ್ಮ ಪರಿಪಾಠದಿಂದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು.
• ರಾತ್ರಿ ತಡವಾಗಿ ಮಲಗುವುದು (Late Night Sleep)
ಎಂದೋ ಒಮ್ಮೆ ರಾತ್ರಿ ತಡವಾಗಿ ಮಲಗಿದರೆ ಪರವಾಗಿಲ್ಲ. ಆದರೆ, ದಿನವೂ ಲೇಟಾಗಿ ಮಲಗುವ ಅಭ್ಯಾಸ (Habit) ಹೊಂದಿದ್ದರೆ ಅದು ಖಂಡಿತವಾಗಿ ಮಧುಮೇಹಿಗಳಿಗೆ (Diabetes) ಉತ್ತಮ ಅಭ್ಯಾಸವಲ್ಲ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood Sugar Level) ಹೆಚ್ಚಿಸುತ್ತದೆ. ಕೆಲಸವಿರಲಿ ಬಿಡಲಿ, ರಿಲ್ಯಾಕ್ಸ್ ನೆಪದಲ್ಲಿ ತಡರಾತ್ರಿಯವರೆಗೆ ಮೊಬೈಲ್ ನೋಡುವುದು ಇಂದಿನ ಸಾಮಾನ್ಯ ಅಭ್ಯಾಸ. ಮಧುಮೇಹಿಗಳು ಇದನ್ನು ಯಾವುದೇ ಕಾರಣಕ್ಕೂ ಅಳವಡಿಸಿಕೊಳ್ಳಬೇಡಿ. ಪ್ರತಿದಿನ 7-8 ಗಂಟೆ ನಿದ್ರಿಸುವ ಅಭ್ಯಾಸದಿಂದ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಜತೆಗೆ, ರಕ್ತದಲ್ಲಿ ಸಕ್ಕರೆ ಮಟ್ಟವೂ ಸರಿಯಾಗಿರುತ್ತದೆ. ರಾತ್ರಿ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿ ಹಸಿವಾದಾಗ ಸಕ್ಕರೆ ಮಟ್ಟ ಹೆಚ್ಚಿಸುವ ಆಹಾರಗಳನ್ನೇ ಬಯಸುವುದು ಸಹ ಕಂಡುಬಂದಿದೆ.
ಸ್ನೇಹಿತರು ಚಾಲೆಂಜ್ ಮಾಡಿದ್ರು ಅಂತ ಬೇಕಾಬಿಟ್ಟಿ ನಿದ್ದೆ ಮಾತ್ರೆ ತಿಂದ ಬಾಲಕ ಸಾವು
• ದೈಹಿಕ ಚಟುವಟಿಕೆ (Physical Activity) ಬಗ್ಗೆ ಗಮನವಿಲ್ಲದಿರುವುದು
ಬಹಳಷ್ಟು ಜನ ದೈಹಿಕ ಚಟುವಟಿಕೆಗಳ ಬಗ್ಗೆ ಭಾರೀ ಅಸಡ್ಡೆ ಹೊಂದಿರುತ್ತಾರೆ. ಹಲವರು ಸಮಯವಿಲ್ಲ ಎನ್ನುವ ನೆಪ ಹೇಳುತ್ತಾರೆ. ದೈಹಿಕ ಚಟುವಟಿಕೆ ಕಡಿಮೆಯಾದಾಗ ದೇಹದಲ್ಲಿ (Body) ಹಲವು ರೀತಿಯ ಸಮಸ್ಯೆಗಳು (Problems) ಉಂಟಾಗುತ್ತವೆ. ದೈಹಿಕ ಚಟುವಟಿಕೆಯಿಂದ ಆರೋಗ್ಯದ ಜತೆಗೆ ಸಕ್ಕರೆ ಮಟ್ಟವೂ ಸರಿಯಾಗಿರುತ್ತದೆ.
• ಅತಿಯಾಗಿ ಒತ್ತಡ (Stress) ಮಾಡಿಕೊಳ್ಳುವುದು
ನೀವು ಗಮನಿಸಿ. ಜೀವನದ ಅದ್ಯಾವುದೋ ಒಂದು ಹಂತದಲ್ಲಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ನಿಮ್ಮನ್ನು ಅಂಟಿಕೊಳ್ಳುತ್ತದೆ. ಯೋಚಿಸಿದರೆ, ಅದು ನೀವು ಗರಿಷ್ಠ ಪ್ರಮಾಣದಲ್ಲಿ ಒತ್ತಡಕ್ಕೆ ತುತ್ತಾಗಿದ್ದ ಸಮಯವಾಗಿರುವುದೇ ಹೆಚ್ಚು. ಜತೆಗೆ, ದೀರ್ಘಕಾಲದಿಂದ ಇರುವ ಒತ್ತಡವೂ ಇದಕ್ಕೆ ಕಾರಣವಾಗುತ್ತದೆ. ಒತ್ತಡದಿಂದ ದೇಹದಲ್ಲಿ ಇನ್ಸುಲಿನ್ (Insulin) ಕುಸಿತವಾಗುತ್ತದೆ. ಎಪಿನೆಫ್ರಿನ್ ಮತ್ತು ಕಾರ್ಟಿಸೋಲ್ (Cortisol) ಹಾರ್ಮೋನುಗಳು ಹೆಚ್ಚುತ್ತವೆ. ಇವುಗಳ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಉಸಿರಾಟದ ವ್ಯಾಯಾಮಗಳು (Breathing Exersice), ಯೋಗ (Yoga), ಧ್ಯಾನ (Meditation) ಪರಿಣಾಮಕಾರಿ ಎನಿಸಿವೆ. ಇವುಗಳನ್ನು ಜೀವನಶೈಲಿಯಲ್ಲಿ (Lifestyle) ಅಳವಡಿಸಿಕೊಳ್ಳುವುದು ಅಗತ್ಯ.
Oral Health: ಎರಡು ಹೊತ್ತು ಬ್ರಶ್ ಮಾಡಲೂ ಭಾರತೀಯರು ಸೋಮಾರಿಗಳಂತೆ!
• ಆಹಾರದ ಬಗ್ಗೆ ನಿಯಂತ್ರಣ (Food Control) ಕಡಿಮೆ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಭಾಯಿಸಬೇಕಾದರೆ ದಿನದಲ್ಲಿ ಎಷ್ಟು ಕ್ಯಾಲರಿ (Calorie) ಆಹಾರ ಸೇವನೆ ಮಾಡುತ್ತೀರಿ ಎನ್ನುವುದನ್ನು ಪರಿಗಣಿಸಬೇಕಾಗುತ್ತದೆ. ಕ್ಯಾಲರಿ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರೊಟೀನ್, ಒಳ್ಳೆಯ ಕೊಬ್ಬು, ನಾರಿನಂಶದ (Fibre) ಆಹಾರ ಹೆಚ್ಚು ಸೇವಿಸಬೇಕು, ಕಾರ್ಬೋಹೈಡ್ರೇಟ್ ಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಆಹಾರದ ಬಗ್ಗೆ ನಿಗಾ ಇಲ್ಲದಿದ್ದರೆ ಸಕ್ಕರೆ ಮಟ್ಟ ಹೆಚ್ಚಾಗುವುದು ಸಾಮಾನ್ಯ.