Asianet Suvarna News Asianet Suvarna News

ಅಲ್ಲಿ ನೋವು, ಇಲ್ಲಿ ನೋವು ಅಂತ ಸಿಕ್ಕಾಪಟ್ಟೆ ಕ್ಯಾಲ್ಸಿಯಂ ತಿಂತೀರಾ? ಹಾರ್ಟ್ ಅಟ್ಯಾಕ್ ಆಗ್ಬಹುದು ಜೋಕೆ !

ಮಾಡುವ ಕೆಲಸ, ತಿನ್ನುವ ಆಹಾರ (Food)ದಿಂದ ಮನುಷ್ಯನಿಗೆ ದಿನಕ್ಕೊಂದು ಹೊಸ ಕಾಯಿಲೆ (Disease) ಸೃಷ್ಟಿಯಾಗುತ್ತಿದೆ. ಅದರಲ್ಲಿಯೂ ನಿರಂತರ ಕಂಪ್ಯೂಟರ್ ಬಳಕೆಯಿಂದ ಕೈ ಬೆರಳ ಸಂದಿಯಲ್ಲಿ ನೋವು ಕಾಡುತ್ತೆ. ಅದು ಕಡಿಮೆಯಾಗಬಹುದು ಅಂತ ಕ್ಯಾಲ್ಸಿಯಂ (Calcium) ತಿನ್ನುತ್ತಾರೆ. ಆದರೆ, ದೇಹಕ್ಕೆ ವಿಪರೀತ ಕ್ಯಾಲ್ಸಿಯಂ ಮಾತ್ರೆಗಳು ಒಳ್ಳೆಯದಲ್ಲ. ಬದಲಾಗಿ ಆಹಾರಗಳಲ್ಲಿ ಸಿಗುವ ಕ್ಯಾಲ್ಸಿಯಂ ಮೊರೆ ಹೋಗೋದು ಬೆಸ್ಟ್. ಅಷ್ಟಕ್ಕೂ ಯಾವ ಆಹಾರಗಳಲ್ಲಿ ಇದು ಹೇರಳವಾಗಿರುತ್ತದೆ? 

Calcium Supplements, A Risk Factor For Heart Attack Vin
Author
Bengaluru, First Published Jun 5, 2022, 5:31 PM IST

ದುಶ್ಚಟಗಳಿಲ್ಲ, ಜೀವನಶೈಲಿಯೂ ಚೆನ್ನಾಗಿದೆ. ಒಳ್ಳೆಯವರೂ ಹೌದು. ಆದರೂ ಹಾರ್ಟ್ ಅಟ್ಯಾಕ್ ಆಯಿತು ಅಂತ ಕೇಳೋದು ಈಗ ಕಾಮನ್. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ, ಹೆಚ್ಚಿಗ ಪೋಷಕಾಂಶಗಳ (Supplements) ಸೋವನೆಯೂ ಹೃದಯ ದುರ್ಬಲಗೊಳ್ಳುವುದು ಮಾಡಬಹುದು ಎಂಬುವುದು ಗೊತ್ತಾ?  ಯಾವುದ್ಯಾವುದೋ ಕಾರಣಕ್ಕೆ ನೋವು ಅಂತ ಕ್ಯಾಲ್ಸಿಯಂ ಬಳಸುವುದು ಹೆಚ್ಚಾಗಿದೆ. ಇದು ಡೇಂಜರಸ್.  ಕ್ಯಾಲ್ಸಿಯಂ (Calcium) ಸಪ್ಲಿಮೆಂಟ್ಸ್ ಅನ್ನು ದಿನಾ ತಿನ್ನೋದ್ರಿಂದ ಹಾರ್ಟ್ ಅಟ್ಯಾಕ್ (Heart Attack), ಸ್ಟ್ರೋಕ್ (Stroke) ಆಗಬಹುದು. ಬೇಕಾ ಹೇಳಿ ನಮ್ಮ ಆರೋಗ್ಯವನ್ನು ಈ ರೀತಿ ಹಾಳು ಮಾಡಿ ಕೊಳ್ಳುವುದು? ಬದಲಾಗಿ ನೈಸರ್ಗಿಕವಾಗಿಯೇ ಸಿಗುವ ಆಹಾರದ (Natural Food) ಮೂಲಕ ಕ್ಯಾಲ್ಸಿಯಂ ಹೆಚ್ಚಿಗೆ ದೇಹಕ್ಕೆ ಹೋಗುವಂತೆ ಮಾಡೋದೇ ವಾಸಿ. 

ಪೋಷಕಾಂಶಗಳ ಕೊರತೆ ಕಾಡಿದಾಗ ಮಾತ್ರೆ ತೆಗೆದುಕೊಳ್ಳುವುದು ಕಾಮನ್. ಆದರೆ, ಅದನ್ನು ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೇ ತೆಗೆದುಕೊಳ್ಳುವುದು ಇಲ್ಲಸಲ್ಲದ ರೋಗಗಳನ್ನು ಆಹ್ವಾನಿಸಿದಂತಾಗುತ್ತದೆ. ಇಷ್ಟೆಲ್ಲಾ ಕಷ್ಟವಾಗಬಾರದು ಎನ್ನುವುದಾದರೆ ಈ ಫುಡ್ ತಿನ್ನೋದನ್ನು ಹೆಚ್ಚಿಸಿಕೊಳ್ಳಿ. 

ಮೊಡವೆ ಸಮಸ್ಯೆ ನಿವಾರಿಸಲು ಈ Food Tips ಅನುಸರಿಸಿ!

ರಾಗಿ ತಿಂದ್ರೆ ಗಟ್ಟಿಯಾಗುತ್ತೆ ಮೂಳೆ
ಅಕ್ಕಿ ತಿಂದರೂ ಪಾಲಿಶ್ ಇಲ್ಲದ ಅಕ್ಕಿ ತಿಂದರೊಳಿತು. ಅಲ್ಲದೇ ರಾಗಿಯನ್ನು ಸಹ ನಿಯಮಿತವಾಗಿ ಸೇವಿಸಿದರೆ ಹೊಟ್ಟೆಗೂ ತಂಪು, ದೇಹಕ್ಕೆ ಅಗತ್ಯ ಇರುವ ಪೋಷಕಾಂಶಗಳನ್ನು ಇದು ಪೂರೈಸಬಲ್ಲದು. ದಿನಾಲೂ ತಿನ್ನಲು ಕಷ್ಟವಾದರೆ ವಾರಕ್ಕೆರಡು ಬಾರಿಯಾದರೂ ರಾಗಿ ಅಂಬಲಿಯೋ, ಗಂಜಿಯಿಂದ ಹೊಟ್ಟೆ ತುಂಬಿಸಿಕೊಳ್ಳಿ. ಇದರಿಂದ ಹಸಿವು ಸಹ ಬೇಗ ಆಗೋಲ್ಲ. ಪದೆ ಪದೇ ತಿನ್ನಬೇಕು ಅನಿಸೋಲ್ಲ. ದೇಹದ ತೂಕವೂ ಕಡಿಮೆಯಾಗುತ್ತೆ. 

ಮತ್ಯಾವುದರಲ್ಲಿ ಹೆಚ್ಚು ಪೋಷಕಾಂಶಗಳಿವೆ? 
ಕರಿಬೇವು
ಅಯ್ಯೋ ಆಹಾರದಲ್ಲಿ ಸಿಗೋ ಕರಿಬೇವನ್ನೆಲ್ಲ ತಿನ್ನಲು ನಾವೇನು ದನಾನಾ? ಅಂತ ಸಿಕ್ಕ ಸೊಪ್ಪನ್ನು ಎತ್ತಿಡಬೇಡಿ. ಬರೀ ಸುವಾಸನೆ, ರುಚಿ (Taste) ಹೆಚ್ಚಿಸಲು ಮಾತ್ರ ಇದನ್ನು ಹಾಕೋದಲ್ಲ. ಇದರಲ್ಲಿ ದೇಹಕ್ಕೆ ಅಗತ್ಯ ಪೋಷಕಾಂಶಗಳೂ ಇರುತ್ತೆ. ಕಣ್ಣು ಹಾಗೂ ಕೂದಲಿನ ಆರೋಗ್ಯಕ್ಕಂತೂ ಇದು ಹೇಳಿ ಮಾಡಿಸಿದ ಸೊಪ್ಪು. 

ವೀಳ್ಯದೆಲೆ (Beetal Leaf)
ಹಿಂದಿನ ಕಾಲದಿಂದಲೂ ಬಾಣಂತೀಯರಿಗೆ ವೀಳ್ಯೆದೆಲೆ-ಸುಣ್ಣ ತಿನ್ನಲು ಕೊಡುತ್ತಾರೆ. ಮಗುವಿಗೆ ಹಾಲುಣಿಸುವ ಹೆಣ್ಣಿಗೆ ಕ್ಯಾಲ್ಸಿಯಂ ಕೊರತೆ ಕಾಡಬಾರದು ಎನ್ನೋದು ಇದರ ಉದ್ದೇಶ. ಊಟ ಆದ್ಮೇಲೂ ವೀಳ್ಯದೆಲೆ-ಸುಣ್ಣು ತಿನ್ನುತ್ತಾರೆ ಮಂದಿ. ಇದು ದೇಹಕ್ಕೆ ಅಗತ್ಯ ಕ್ಯಾಲ್ಸಿಯಂ ಒದಗಿಸುತ್ತೆ. ಸುಖಾ ಸುಮ್ಮನೆ ಮಾತ್ರೆ ಮೂಲಕ ಸಂಪ್ಲಿಮೆಂಟ್ಸ್ ಸೇವಿಸುವ ಬದಲು, ತಾಂಬೂಲ ತಿನ್ನಲು ಅಭ್ಯಾಸ ಮಾಡಿಕೊಳ್ಳಿ. ಹಾಗಂಥ ಸುವಾಸನೆಯುಕ್ತ ಅಡಿಕೆ ಪುಡಿಗಳಿಂದ ದೂರವಿದ್ದು ಬಿಡಿ. 

ಊಟದ ನಂತ್ರ ಸ್ವೀಟ್ಸ್ ತಿನ್ನೋದಲ್ಲ. ಮೊದ್ಲೇ ತಿನ್ಬೇಕಂತೆ ! ಇಲ್ಲದಿದ್ರೆ ಎಷ್ಟೊಂದು ತೊಂದ್ರೆ ನೋಡಿ

ಹಾಲು, ಮೊಸರು
ಹಾಲಿನ ಉತ್ಪನ್ನಗಳು (Milk Products) ದೇಹಕ್ಕೆ ಯಾವಾಗಲೂ ಅಗತ್ಯ ಕ್ಯಾಲ್ಸಿಯಂ ಒದಗಿಸಬಲ್ಲದು. ತುಪ್ಪ ತಿಂದರೆ ದಪ್ಪ ಆಗುತ್ತೇನೆಂಬ ಭಯ ಬೇಡ. ಬದಲಾಗಿ, ಎಲ್ಲೆಲ್ಲಿ ಬಳಸಲು ಸಾಧ್ಯವೋ ಅಲ್ಲಲ್ಲಿ ತುಪ್ಪ ಬಳಸಿ. ಹಾಲು, ಮೊಸರು ದಿನಲೂ ಸೇವಿಸಿ. ಅದರಲ್ಲಿಯೂ ಒಳ್ಳೆಯ ಹಾಲಾಗಿದ್ದಾರಂತೂ ರುಚಿಯೂ ಹೆಚ್ಚು. ಅಗತ್ಯ ಪೋಷಕಾಂಶಗಳನ್ನು ಪೂರೈಸುತ್ತೆ. 

ಹಸಿರು ತರಕಾರಿ (Green Vegitables)
ಸೊಪ್ಪು, ಹಸಿರು ತರಕಾರಿಗಳು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಕೊಳ್ಳಲಿ. ಹಸಿಯಾಗಿ ತಿನ್ನುವ ತರಕಾರಿಗಳನ್ನು ಸಾಧ್ಯವಾದಷ್ಟು ಬಳಸಿ. ಬೇರೆ ಬೇರೆ ಹಣ್ಣು, ತರಕಾರಿಗಳನ್ನು ತಿನ್ನುತ್ತಿದ್ದರೆ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಮಾತ್ರವಲ್ಲ, ಇತರೆ ಪೋಷಕಾಂಶಗಳು ಸಮೃದ್ಧಿಯಾಗಿ ಸಿಗುತ್ತದೆ. ಇದು ಅನಗತ್ಯ ಮಾತ್ರ ಸೇವನೆಗೆ ಕಡಿವಾಣ ಹಾಕುವುದರಲ್ಲಿ ಅನುಮಾನವೇ ಇಲ್ಲ. 

ಏನೇನೋ ಮಾತ್ರೆ, ಪುಡಿ ಅಂತ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಸಾಧ್ಯವಾದಷ್ಟು ನೈಸರ್ಗಿಕ ಆಹಾರಗಳ ಮೂಲಕವೇ ದೇಹಕ್ಕೆ ಅತ್ಯುತ್ತಮ ಪೋಷಕಾಂಶಗಳು ಸಿಗುವಂತೆ ನೋಡಿಕೊಳ್ಳಿ. ಆಗ ನೋಡಿ, ಆರೋಗ್ಯ ಹೇಗಿರುತ್ತೆ ಅಂತ.

Follow Us:
Download App:
  • android
  • ios