Asianet Suvarna News Asianet Suvarna News

ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಹಾಟ್​ ಬ್ಯೂಟಿ ನೋರಾ ಫತೇಹಿ ! ಏನಿದು ಹೊಸ ವಿಷ್ಯ?

ಪ್ರೇಮ್​ ನಿರ್ದೇಶನದ ಕೆಡಿ ಚಿತ್ರದಲ್ಲಿ ಬಾಲಿವುಡ್​ ಹಾಟ್​ ತಾರೆ ನೋರಾ ಫತೇಹಿ  ಕಾಣಿಸಿಕೊಳ್ಳಲಿದ್ದಾರೆ. ಏನಿದು ಹೊಸ ವಿಷ್ಯ? 
 

Bollywood hot star Nora Fatehi  will be seen in KD film directed by Prem suc
Author
First Published Jan 23, 2024, 9:36 PM IST

ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರ ಬಿಡುಗಡೆಯಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.  ಪ್ರೇಮ್ ನಿರ್ದೇಶಿಸುತ್ತಿರುವ ‘ಕೆಡಿ’ ಸಿನಿಮಾ ರೌಡಿಸಂ ಕತೆಯನ್ನು ಒಳಗೊಂಡಿದ್ದು, ಇದರ ಬಹುದೊಡ್ಡ ತಾರಾ ಬಳಗವೇ ಇದೆ. ಇದಾಗಲೇ ಬಾಲಿವುಡ್​​ ದಾದಾ ಸಂಜಯ್​ ದತ್​ ಇರುವುದು ಕೂಡ ಖಚಿತಗೊಂಡಿದೆ. ಪ್ರೇಮ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ  ‘ಕೆಡಿ’ಯಲ್ಲಿ ರವಿಚಂದ್ರನ್ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೇ ಬೇರೆ ಬೇರೆ ಭಾಷೆಗಳ ನಟರೂ ಇದರಲ್ಲಿ ಇದ್ದಾರೆ ಎನ್ನಲಾಗಿದೆ. 

ಇದರ ಬೆನ್ನಲ್ಲೇ ಇದೀಗ ಹೊಸದೊಂದು ಬಿಗ್​ ಅಪ್​ಡೇಟ್​ ಬಂದಿದೆ. ಅದೇನೆಂದರೆ, ಬಾಲಿವುಡ್​ನಲ್ಲಿ ಹಲ್​ಚಲ್​ ಸೃಷ್ಟಿಸುತ್ತಿರೋ ಹಾಟ್​ ಬೆಡಗಿ ನೋರಾ ಫತೇಹಿ ಅವರೂ ಕೆಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಹೌದು. ಅಷ್ಟಕ್ಕೂ ನೋರಾ ಅವರು ನಾಯಕಿಯಾಗಿ ಮಿಂಚಿದ್ದಕ್ಕಿಂತಲೂ ಐಟಂ ಗರ್ಲ್​  ಆಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಅದಕ್ಕಿಂತಲೂ ಹೆಚ್ಚಾಗಿ ವೈಯಕ್ತಿಕವಾಗಿ ಸಕತ್​ ಸದ್ದು ಮಾಡುತ್ತಿರುತ್ತಾರೆ. ಸದಾ ಕಾಂಟ್ರವರ್ಸಿಗಳು ಇವರ ಸುತ್ತಲೂ ಸುತ್ತುತ್ತಲೇ ಇರುತ್ತದೆ. ಇದೀಗ ಈ ನಟಿ ಐಟಂ ಹಾಡಿಗಾಗಿ ಕೆಡಿಗೆ ಬರುತ್ತಿದ್ದು, ಈ ಕುರಿತು ಪ್ರೇಮ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದಾಗಲೇ ಪ್ರೇಮ್​ ಅವರು ತಮ್ಮ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಹೀಗೆ ಐಟಂ ಸಾಂಗ್​ ಮಾಡುತ್ತಾರೆ. ಇದಾಗಲೇ ಮಲೈಕಾ ಶೆರಾವತ್​, ಯಾನಾ ಗುಪ್ತಾ, ಆಮಿ ಜಾಕ್ಸ್​ಸನ್​, ಸನ್ನಿ ಲಿಯೋನ್​ ಹೀಗೆ ಬಹುತೇಕ ಹಾಟ್​ ಬ್ಯೂಟಿಗಳನ್ನು ಕರೆಸಿಕೊಂಡಿದ್ದಾರೆ. ಇದೀಗ ನೋರಾ ಸರದಿ. 

ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಜೊತೆ ಆರ್ಯನ್​ ಡೇಟಿಂಗ್​? ಈಕೆ ಬಾಲಿವುಡ್​ ಹಾಟ್​ ನಟಿ!

ಈ ಕುರಿತು ಪ್ರೇಮ್​ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ನೋರಾ ಅವರು, ಸಿನಿಮಾ ಸೆಟ್​ನಲ್ಲಿ ಇರುವುದನ್ನು ನೋಡಬಹುದು. ಅಲ್ಲಿ ಅವರು  ಸಂಜಯ್ ದತ್ ಜೊತೆ ಮಾತನಾಡುತ್ತಿರುವ ದೃಶ್ಯಗಳಿವೆ.  ಜೊತೆಗೆ ಸಿನಿಮಾದಲ್ಲಿನ ನೋರಾ ಲುಕ್​ನ ಚಿತ್ರವನ್ನೂ ಸಹ ವಿಡಿಯೋದಲ್ಲಿ ತೋರಿಸಲಾಗಿದೆ.  ಅಂದಹಾಗೆ, ನೋರಾ ಫತೇಹಿ  ಕುರಿತು ಹೇಳುವುದಾದರೆ, ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದಾರೆ.ಇವರು  ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ.  ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ   ದೊಡ್ಡ ಬ್ರೇಕ್‌ ಸಿಕ್ಕಿತ್ತು. 

ಇತ್ತೀಚೆಗಷ್ಟೇ ನೋರಾ ಹೆಸರು ಶಾರುಖ್​ ಪುತ್ರ ಆರ್ಯನ್​ ಖಾನ್​ ಜೊತೆ ಥಳಕು ಹಾಕಿಕೊಂಡಿದೆ.  ಆರ್ಯನ್​ ಖಾನ್​ ತಮಗಿಂತ ಐದು ವರ್ಷ ದೊಡ್ಡವರಾಗಿರುವ  ಫತೇಹಿ  ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ವಿಷ್ಯ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಕಳೆದ ಕೆಲವು ತಿಂಗಳುಗಳಿಂದ ಇವರಿಬ್ಬರ ಬಗ್ಗೆ ಸಕತ್​ ಚರ್ಚೆಯಾಗುತ್ತಲೇ ಇದೆ. ಇದೀಗ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಕೆಲವು ತಿಂಗಳ ಹಿಂದೆ ಇವರಿಬ್ಬರೂ ಒಂದೇ ಜಾಗದಲ್ಲಿ, ಒಟ್ಟಿಗೇ ಇದ್ದ ಫೋಟೋ ವೈರಲ್​ ಆಗಿ ಹಲ್​ಚಲ್​ ಸೃಷ್ಟಿಸಿತ್ತು. ಇವರಿಬ್ಬರ ಫೋಟೋವನ್ನು  ಪ್ರತ್ಯೇಕವಾಗಿ ಶೇರ್​ ಮಾಡಲಾಗಿದ್ದರೂ,  ಎರಡು ಫೋಟೋಗಳು ಒಂದೇ ಕಡೆಯದ್ದು ಎಂದು ನೆಟ್ಟಿಗರು ಪತ್ತೆ ಮಾಡಿದ್ದರು. ಇದಕ್ಕೂ ಮೊದಲು ನೋರಾ ಹೆಸರು ನಿರ್ಮಾಪಕ ಕರಣ್​ ಜೋಹರ್​ ಜೊತೆ ಕೇಳಿ ಬಂದಿತ್ತು. ಇದಾದ ಬಳಿಕ ಆರ್ಯನ್​ ಖಾನ್​  ಜೊತೆ ಥಳಕು ಹಾಕಿಕೊಂಡಿದೆ. 

ಸೈಫ್‌ ಅಲಿ ಡಿಸ್‌ಚಾರ್ಜ್‌: ರಾಮನ ಪ್ರಾಣಪ್ರತಿಷ್ಠೆ ವೇಳೆ ರಾವಣ ಪಾತ್ರಧಾರಿಗೆ ಏನಾಯ್ತು? ನಟ ಹೇಳಿದ್ದೇನು?

 
 
 
 
 
 
 
 
 
 
 
 
 
 
 

A post shared by Prem❣️s (@directorprems)

Follow Us:
Download App:
  • android
  • ios