Asianet Suvarna News Asianet Suvarna News

ರೋಷ, ಮೌನ, ಕಣ್ಣೀರು.... ಕನ್ನಡಿ ಎದುರು ಕುಳಿತು ಬಿಗ್‌ಬಾಸ್‌ ಸ್ಪರ್ಧಿಗಳು ಏನೆಲ್ಲಾ ಹೇಳಿದ್ರು ಕೇಳಿ

ಬಿಗ್‌ಬಾಸ್‌ ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಬಿಗ್‌ಬಾಸ್‌ ಸ್ಪರ್ಧಿಗಳು ಕನ್ನಡಿ ಎದುರು ಕುಳಿತು ಮಾತನಾಡಿದ್ದಾರೆ. ಯಾವ ಸ್ಪರ್ಧಿ ಏನು ಹೇಳಿದ್ರು ಕೇಳಿ... 
 

Bigg Boss contestants sat in front of the mirror and talked themselves suc
Author
First Published Jan 24, 2024, 1:09 PM IST

ಬಿಗ್​ಬಾಸ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ,  ಮನೆಯೊಳಗಿನ ಸದಸ್ಯರ ನಡುವಿನ ಜಟಾಪಟಿಯೂ ಭರ್ಜರಿಯಾಗಿ ನಡೆಯುತ್ತಿದೆ.  ಮಾಡು ಇಲ್ಲವೇ ಮಡಿ ಹಂತದಲ್ಲಿ ಇದ್ದಾರೆ ಸ್ಪರ್ಧಿಗಳು. ಈ ಹಿನ್ನೆಲೆಯಲ್ಲಿ ಸಿಕ್ಕ ಅವಕಾಶವನ್ನು ತಮ್ಮ ಎದುರಾಳಿಗಳನ್ನು ಕುಗ್ಗಿಸುವುದಕ್ಕೆ, ಅಂತಿಮ ಸ್ಪರ್ಧೆಯ  ದಾರಿಯನ್ನು ಸುಗಮಗೊಳಿಸಿಕೊಳ್ಳುವುದನ್ನು ನೋಡುತ್ತಿದ್ದಾರೆ.  ಬಿಗ್​ಬಾಸ್​ ಮನೆಯಲ್ಲಿ ಸದ್ಯ ಆರು ಸ್ಪರ್ಧಿಗಳು ಇದ್ದು, ಅವರ ನಡುವೆ, ಕಿತ್ತಾಟ ಜೋರಾಗಿ ನಡೀತಿದೆ. ಫಿನಾಲೆ ವಾರದ ಆರಂಭದಲ್ಲಿ ವೈಯುಕ್ತಿಕ ನಿರ್ಧಾರಗಳ ಮೇಲೆ ‘ಬಿಗ್ ಬಾಸ್‌’ ನಾಮಿನೇಷನ್‌ ಪ್ರಕ್ರಿಯೆ ನಡೆಸಿದರು. ಅದಾದ್ಮೇಲೆ ನಾಮಿನೇಷನ್ ಇಲ್ಲ ಅಂತ ‘ಬಿಗ್ ಬಾಸ್‌’ ಟ್ವಿಸ್ಟ್ ಕೊಟ್ಟಿದ್ದಾರೆ. 

ಈ ವಾರ ಮನೆಯಲ್ಲಿ ವಿನಯ್‌, ಸಂಗೀತಾ, ಪ್ರತಾಪ್‌, ಕಾರ್ತಿಕ್‌, ತುಕಾಲಿ ಸಂತೋಷ್‌, ವರ್ತೂರು ಸಂತೋಷ್‌ ಉಳಿದುಕೊಂಡಿದ್ದಾರೆ. ನಿನ್ನೆಯಷ್ಟೇ ಸಂಗೀತಾ ಶೃಂಗೇರಿಯನ್ನು ಶನಿ ಎಂದು ಕಾರ್ತಿಕ್​ ಹೇಳಿದ್ದರ ಬಗ್ಗೆ  ಬಹಳ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಕಾರ್ತಿಕ್​ ಉಲ್ಟಾ ಹೊಡೆದಿದ್ದರು. ಕಿಚ್ಚನ ಪಂಚಾಯಿತಿಯಲ್ಲಿಯೂ  ಕಾರ್ತಿಕ್ ಮಾತಿಗೆ ಕಿಚ್ಚ ಗರಂ ಆಗಿದ್ದರು.  ಅಷ್ಟಕ್ಕೂ ಬಿಗ್ ಬಾಸ್  ಆರಂಭದಿಂದಲೂ ಸಂಗೀತಾ ಹಾಗೂ ವಿನಯ್ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಲೇ ಇದೆ.  ಒಂದು ಹಂತದಲ್ಲಿ ಕಾರ್ತಿಕ್​ ಸಂಗೀತಾ ಅವರಿಗೆ ಶನಿ ಹೇಳಿದ್ದು ಸ್ವಲ್ಪ ಜೋರಾಗಿ ಗಲಾಟೆಯಾಗಿತ್ತು. ಸಂಗೀತಾ ಸಿಟ್ಟಿನಲ್ಲಿ ಶನಿಯ ವಿಷಯವನ್ನು ಕೆದಕಿ, ನಿಮ್​ ಲೈಫ್​ನಲ್ಲಿ ನಾನು ಶನಿ ಆಗ್ತೀನಿ, ಆಗಿದ್ದೀನಿ, ಆಗ್ಬೇಕು ಎಂದಿದ್ದರು.  

ನಿಮ್​ ಲೈಫ್​ನಲ್ಲಿ ನಾನು ಶನಿ ಆಗ್ತೀನಿ, ಆಗಿದ್ದೀನಿ, ಆಗ್ಬೇಕು! ಕಪ್​ ಗೆಲ್ತೇನೆಂದ ಕಾರ್ತಿಕ್ ವಿರುದ್ಧ ಸಿಡಿದೆದ್ದ ಸಿಂಹಿಣಿ

ಇದರ ಬೆನ್ನಲ್ಲೇ ಬಿಗ್​ ಬಾಸ್​ ಸ್ಪರ್ಧಿಗಳು ಕನ್ನಡಿ ಮುಂದೆ ಕೂತು ತಮ್ಮನ್ನು ತಾವು ಮರಳಿ ಪಡೆಯುತ್ತಿದ್ದಾರೆ. ತಮ್ಮದೇ ಪ್ರತಿಬಿಂಬ ಕಂಡು ತಪ್ಪು–ಒಪ್ಪು, ಮನದಾಳದಲ್ಲಿ ಹುದುಗಿದ್ದ ನೋವು, ಇತರರಿಂದ ಹೇಳಿಸಿಕೊಂಡು ಅರಗಿಸಿಕೊಳ್ಳಲಾರದೆ ಉಳಿದುಕೊಡ ಮಾತುಗಳನ್ನು ಆಡಿಕೊಂಡಿದ್ದಾರೆ. ‘ನನ್ನ ಕಾಣುವ ಹುಡುಕಾಟದಲ್ಲಿ ನನ್ನನ್ನು ಹುಡುಕಿಕೊಂಡಿರುವೆ. ಯಾರು ಜೊತೆಯಿಲ್ಲದಾಗ ನೀನಿದ್ದೆ’ ಎಂದು ಸಂಗೀತಾ ಹೇಳಿದ್ದಾರೆ. ನನ್ನಲ್ಲಿ ನಾನು ಏನನ್ನು ಹುಡುಕಿದ್ನೋ ಅದನ್ನು ನಾನು ಹುಡುಕಿಕೊಂಡಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ನನಗೆ ನನ್ನ ಪರಿಚಯ ಹೆಚ್ಚಾಗಿಯೇ ಆಗಿದೆ ಎಂದು ಕಣ್ಣೀರು ಹಾಕಿದರು. 

ಕನ್ನಡಿ ಎದುರು ಕುಳಿತ ಕಾರ್ತಿಕ್‌, ಸ್ನೇಹವನ್ನು ಬಳಸಿಕೊಳ್ಳುತ್ತೀಯಾ ಎನ್ನುವ ಆರೋಪ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.  ಡ್ರೋನ್ ಪ್ರತಾಪ್ ಕನ್ನಡಿ ಮುಂದೆ ಕುಳಿತು ನನ್ನನ್ನು ನಾನೇ ನೋಡಿಕೊಂಡಾಗ ಕೆಲವು ವಿಚಾರಗಳು ನನ್ನನ್ನು ಚುಚ್ಚುತ್ತಿದೆ ಎಂದರೆ, ವಿನಯ್, ಹಲೋ ಮಿಸ್ಟರ್ ವಿನಯ್ ಗೌಡ ಎಂದು ತನ್ನನ್ನು ತಾನೇ ಪರಿಚಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಅವರು ಮೌನವಾಗಿದ್ದರು.  

ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಹಾಟ್​ ಬ್ಯೂಟಿ ನೋರಾ ಫತೇಹಿ ! ಏನಿದು ಹೊಸ ವಿಷ್ಯ?

Follow Us:
Download App:
  • android
  • ios