ಅಬ್ಬಬ್ಬಾ..ಬರೋಬ್ಬರಿ 12 ಕೆಜಿ ತೂಕದ ಸಮೋಸಾ, 30 ನಿಮಿಷದಲ್ಲಿ ತಿನ್ನಿ, ಬಂಪರ್ ಬಹುಮಾನ ಗೆಲ್ಲಿ
ಸಮೋಸಾ ಸಾಮಾನ್ಯವಾಗಿ ಎಲ್ರೂ ಇಷ್ಟಪಟ್ಟು ತಿನ್ನೋ ಸ್ನ್ಯಾಕ್ಸ್. ಸಂಜೆ ಟೀ ಜೊತೆ ತಿನ್ತಾ ಕೂತ್ರೆ ಎಷ್ಟು ಸಮೋಸಾ ಮುಗೀತು ಅಂತಾನೆ ಗೊತ್ತಾಗಲ್ಲ. ಆದ್ರೆ ಇಲ್ಲೊಂದು ಸಮೋಸಾ ಇದೆ. ಅದು ಬರೋಬ್ಬರಿ 12 ಕೆಜಿ ತೂಕದ್ದು ಅಂದ್ರೆ ನಂಬ್ತೀರಾ. ಅಷ್ಟೇ ಅಲ್ಲ, ಇದನ್ನು ಜಸ್ಟ್ 30 ನಿಮಿಷದಲ್ಲಿ ತಿಂದ್ರೆ ಬಹುಮಾನಾನೂ ಇದೆ.
ಮೀರತ್: ಸಮೋಸಾ, ಭಾರತದ ಸಾಂಪ್ರದಾಯಿಕ ತಿಂಡಿಯಾಗಿದೆ. ಬಟಾಣಿ, ಆಲೂಗಡ್ಡೆ ಮೊದಲಾದ ಮಸಾಲ ಮಿಶ್ರಣದೊಂದಿಗೆ ಬರುತ್ತದೆ. ಸಾಮಾನ್ಯವಾಗಿ ಅಂಗೈಯಗಲದ ಸಮೋಸಾವನ್ನು ನೀವೆಲ್ಲಾ ನೋಡಿರ್ತೀರಾ. ಆದ್ರೆ ಇದು ಬರೋಬ್ಬರಿ 12 ಕೆಜಿ ತೂಕದ ಬಾಹುಬಲಿ ಸಮೋಸಾ. ನೋಡೋಕೆ ಅಷ್ಟೆತ್ತರ ಮತ್ತು ಅಗಲವಾಗಿದೆ. ಅಷ್ಟೇ ಅಲ್ಲ, ಈ ದೈತ್ಯ ಸಮೋಸಾವನ್ನು ತಿಂದ್ರೆ ಬಂಪರ್ ಬಹುಮಾನ ಸಹ ಕೊಡಲಾಗುತ್ತಿದೆ. ಹೌದು, ನಂಬೋಕೆ ಕಷ್ಟವಾದರೂ ಇದು ನಿಜ.ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ. ಏನೆಂದರೆ, ಬರೋಬ್ಬರಿ 12 ಕಿಲೋಗ್ರಾಂಗಳಷ್ಟು ತೂಕವಿರುವ ಈ ದೈತ್ಯ ಸಮೋಸಾವನ್ನು ತಿಂದು, ಬರೋಬ್ಬರು 71,000 ರೂ. ಗೆಲ್ಲಬಹುದು.
ಮೀರತ್‌ನಲ್ಲಿರುವ ಬೃಹತ್ ಗಾತ್ರದ ಸಮೋಸಾ ಭಾರೀ ಸುದ್ದಿಯಲ್ಲಿದೆ. ಈ ಸಮೋಸಾವನ್ನು ನೀವು 30 ನಿಮಿಷಗಳಲ್ಲಿ ತಿಂದು ಮುಗಿಸಿದರೆ, 71,000 ರೂಪಾಯಿ ನಗದು ನೀಡಲಾಗುವುದು ಎಂದು ಸ್ವತಃ ಹೋಟೆಲ್ ಮಾಲೀಕರು ಘೋಷಿಸಿದ್ದಾರೆ. ಇಲ್ಲಿನ ಲಾಲ್ಕುರ್ತಿ ಮೂಲದ ಕೌಶಲ್ ಸ್ವೀಟ್ಸ್‌ನ ಮೂರನೇ ತಲೆಮಾರಿನ ಮಾಲೀಕ ಶುಭಂ ಕೌಶಲ್, ಸಮೋಸಾವನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಲು ಏನಾದರೂ ವಿಭಿನ್ನವಾಗಿ (Different) ಮಾಡಲು ಬಯಸಿದ್ದೆ. ಅದಕ್ಕಾಗಿ ಈ ಬಾಹುಬಲಿ ಸಮೋಸಾ ಮಾಡಿದ್ದಾಗಿ ಹೇಳುತ್ತಾರೆ.
Viral Food: ಇಲ್ಲಿ ಸಿಗುತ್ತೆ ಚಿಕನ್, ಮಟನ್ ಪಾನಿಪುರಿ!
ಸಮೋಸಾ ತಯಾರಿಸಲು ಆರು ಗಂಟೆಗಳ ಸಮಯ
ಆಲೂಗಡ್ಡೆ, ಬಟಾಣಿ, ಮಸಾಲೆ ಪದಾರ್ಥಗಳು, ಪನೀರ್ ಮತ್ತು ಡ್ರೈ ಫ್ರೂಟ್ಸ್ ತುಂಬಿದ ಈ ಸಮೋಸಾವನ್ನು ತಯಾರಿಸಲು ಕೌಶಲ್ ಅವರ ಅಂಗಡಿಯಲ್ಲಿ ಬಾಣಸಿಗರಿಗೆ ಸುಮಾರು ಆರು ಗಂಟೆಗಳು ಬೇಕಾಯಿತು. 12 ಕಿಲೋಗ್ರಾಂಗಳ ಸಮೋಸಾದಲ್ಲಿ, ಸುಮಾರು ಏಳು ಕೆಜಿ ಪೇಸ್ಟ್ರಿ ಕೋನ್‌ನಲ್ಲಿ ಪ್ಯಾಕ್ ಮಾಡಲಾದ ಖಾರದ ಪದಾರ್ಥವಿದೆ. ಈ ಸಮೋಸಾದ ಮಸಾಲೆಯನ್ನು ಪ್ಯಾನ್‌ನಲ್ಲಿ ಹುರಿಯಲು ಬಾಣಸಿಗರಿಗೆ (Chef) 90 ನಿಮಿಷಗಳು ಮತ್ತು ಮೂವರು ಅಡುಗೆಯವರು ಬೇಕಾಗುತ್ತಾರೆ ಎಂದು ಅಂಗಡಿ ಮಾಲೀಕರು ಹೇಳಿದರು.
30 ನಿಮಿಷಗಳಲ್ಲಿ ತಿಂದು ಮುಗಿಸಿದರೆ, 71,000 ಬಹುಮಾನ
ಈ ಸಮೋಸಾವನ್ನು 30 ನಿಮಿಷಗಳಲ್ಲಿ ತಿಂದು ಮುಗಿಸಿದರೆ, 71,000 ರೂಪಾಯಿ ಗೆಲ್ಲುವ ಅವಕಾಶ ಕೂಡ ಇದೆ ಎಂದು ಅವರು ಹೇಳಿದರು. ಈ 12 ಕೆಜಿ ತೂಕದ ಸಮೋಸಾ ಬೆಲೆ ಸುಮಾರು 1,500 ರೂ. ಆಗಿದೆ. ಬಾಹುಬಲಿ ಸಮೋಸಾಗಳಿಗಾಗಿ ತನಗೆ ಇದುವರೆಗೆ ಸುಮಾರು 40-50 ಆರ್ಡರ್‌ಗಳು ಬಂದಿವೆ. ಈ ಸಮೋಸಾ ದೇಶದಲ್ಲೇ ಅತಿ ದೊಡ್ಡ ಸಮೋಸಾವಾಗಿದೆ ಎಂದು ಕೌಶಲ್ ಹೇಳಿದ್ದಾರೆ.
ಮೊಸರು ಗುಲಾಬ್ ಜಾಮೂನ್, ಫಾಂಟಾ ಮ್ಯಾಗಿ… ಏನೀ ವಿಚಿತ್ರ ಕಾಂಬಿನೇಷನ್ ಸ್ನ್ಯಾಕ್ಸ್?
'ಸಮೋಸವು ಜನರ ಗಮನ ಸೆಳೆಯುವಂತೆ ಮಾಡಲು ಏನಾದರೂ ವಿಭಿನ್ನವಾಗಿ ಮಾಡಬೇಕೆಂದು ಬಯಸಿದೆ. ನಾವು 'ಬಾಹುಬಲಿ' ಸಮೋಸವನ್ನು ಮಾಡಲು ನಿರ್ಧರಿಸಿದೆವು. ಮೊದಲು, ನಾವು ನಾಲ್ಕು ಕೆಜಿಯ ಸಮೋಸವನ್ನು ಮಾಡಲು ಪ್ರಾರಂಭಿಸಿದೆವು ಮತ್ತು ನಂತರ ಎಂಟು ಕೆ.ಜಿ ತೂಕದ ಸಮೋಸಗಳನ್ನು ಮಾಡಿದ್ದೇವೆ. ಇವೆರಡೂ ಜನಪ್ರಿಯವಾಗಿವೆ (Famous). ನಂತರ ನಾವು 12 ಕೆಜಿ ಸಮೋಸಾವನ್ನು ಸಿದ್ಧಪಡಿಸಿದ್ದೇವೆ' ಎಂದು ಕೌಶಲ್ ಹೇಳಿದರು.
ಹುಟ್ಟುಹಬ್ಬಕ್ಕೆ ಬೃಹತ್ ಸಮೋಸಾ ಆರ್ಡರ್ ಮಾಡುವ ಜನರು
ಜನರು ಈ ಬೃಹತ್ ಸಮೋಸಾವನ್ನು ಬಹಳ ಇಷ್ಟಪಡುತ್ತಿದ್ದಾರೆ. ಹೆಚ್ಚಿನ ಜನರು ಬಾಹುಬಲಿ ಸಮೋಸಾಗಳನ್ನು ಆರ್ಡರ್ ಮಾಡುತ್ತಾರೆ ಮತ್ತು ಸಾಂಪ್ರದಾಯಿಕ ಕೇಕ್ ಬದಲಿಗೆ ತಮ್ಮ ಹುಟ್ಟುಹಬ್ಬದಂದು (Birthday) ಇದನ್ನು ಕತ್ತರಿಸಲು ಬಯಸುತ್ತಾರೆ ಎಂದು ಕೌಶಲ್ ಹೇಳುತ್ತಾರೆ. 'ನಮ್ಮ ಬಾಹುಬಲಿ ಸಮೋಸಾವು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ಅಂಗಡಿಗೆ ಆಗಾಗ್ಗೆ ಬರುವ ಫುಡ್ ಬ್ಲಾಗರ್‌ಗಳ ಗಮನವನ್ನೂ ಸೆಳೆದಿದೆ. ನಾವು ಸ್ಥಳೀಯರು ಮತ್ತು ದೇಶದ ಇತರ ಭಾಗಗಳಲ್ಲಿ ವಾಸಿಸುವ ಜನರೂ ಈ ಬಗ್ಗೆ ಕೇಳುತ್ತಿದ್ದಾರೆ. ನಾವು ಸಮೋಸಾಕ್ಕಾಗಿ ಮುಂಗಡ ಆರ್ಡರ್‌ಗಳನ್ನು ಮಾತ್ರ ತೆಗೆದುಕೊಳ್ಳುತ್ತೇವೆ' ಎಂದು ಕೌಶಲ್ ಹೇಳಿದರು.