Asianet Suvarna News Asianet Suvarna News

'ಅಮೃತಧಾರೆ' ಗೌತಮ್ ಬಾಯಲ್ಲಿ ನೀರೂರಿಸಿದ ಅವರೆಕಾಳು ಉಪ್ಪಿಟ್ಟು ಮಾಡೋದು ಹೇಗೆ?

ಅವರೆಕಾಳು ಉಪ್ಪಿಟ್ಟು ಉಪ್ಪಿಟ್ಟಿಗೆ ಕ್ರಂಚಿ ವಿನ್ಯಾಸ ನೀಡುವುದೇ ಅಲ್ಲದೆ, ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಫಟಾಫಟ್ ತಯಾರಿಸಬಹುದಾದ ಇದು ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂಥ ರೆಸಿಪಿ. 

Avarekai Upma in Amruthadhare serial here is the recipe skr
Author
First Published Jan 6, 2024, 11:19 AM IST

'ನಮ್ಮಮ್ಮ ಚಳಿಗಾಲಕ್ಕೆ ಸ್ಪೆಶಲ್ ಆಗಿ ಅವರೆಕಾಳು ಉಪ್ಪಿಟ್ಟು ಮಾಡ್ತಿದಾಳೆ. ಅಮ್ಮ ಮಾಡೋ ಅವರೆಕಾಯಿ ಉಪ್ಪಿಟ್ಟು ನಮ್ ಅಪಾರ್ಟ್‌ಮೆಂಟ್ನಲ್ಲೇ ಫೇಮಸ್' ನಾದಿನಿಯ ಬಾಯಲ್ಲಿ ಇಂಥದೊಂದು ಮಾತು ಕೇಳ್ತಿದ್ದಂಗೇ ಗೌತಮ್ ಬಾಯಲ್ಲಿ ನೀರೂರಿ ಆತ ಅತ್ತೆ ಮನೆಲಿ ಉಳಿಯೋ ನಿರ್ಧಾರ ಮಾಡೇ ಬಿಟ್ಟ. ಈ ಡೈಲಾಗು, ಸೀನು ಎಲ್ಲ ಆಗಿದ್ದು 'ಅಮೃತಧಾರೆ' ಧಾರಾವಾಹಿಯಲ್ಲಿ. ಈ ಧಾರಾವಾಹಿಯ ಈ ಸೀನ್ ನೋಡಿ ಮರುದಿನ ಅದೆಷ್ಟು ಜನರ ಮನೆಯಲ್ಲಿ ಅವರೆಕಾಯಿ ಉಪ್ಪಿಟ್ಟು ಘಮಘಮಿಸಿತೋ ಏನೋ. ಮತ್ತೆ ಕೆಲವರು ಅವರೆಕಾಯಿ ಉಪ್ಪಿಟ್ಟು ಮಾಡೋ ವಿಧಾನಕ್ಕಾಗಿ ತಡಕಾಡಿರಬಹುದು. ನೀವೂ ಹಾಗೆ ಅವರೆಕಾಯಿ ಉಪ್ಪಿಟ್ಟಿನ ರೆಸಿಪಿ ಹುಡುಕುತ್ತಿದ್ದರೆ, ಇಲ್ಲಿದೆ ನೋಡಿ ರುಚಿರುಚಿಯಾದ ಅವರೆಕಾಳು ಉಪ್ಪಿಟ್ಟು ಮಾಡೋ ವಿಧಾನ. 

ಅವರೆಕಾಳು ಉಪ್ಪಿಟ್ಟು ಮಾಡುವ ವಿಧಾನ
 ತಯಾರಿ ಸಮಯ: 10 ನಿಮಿಷಗಳು
 ಅಡುಗೆ ಸಮಯ: 10 ನಿಮಿಷಗಳು
 ಒಟ್ಟು ಸಮಯ: 20 ನಿಮಿಷಗಳು

ಪದಾರ್ಥಗಳು
½ ಕಪ್ ಸೂಜಿ ರವೆ/ರವೆ 
1 ಸಣ್ಣದಾಗಿ ಕೊಚ್ಚಿದ ಮಧ್ಯಮ ಈರುಳ್ಳಿ 
¾ ಅಥವಾ 1 ಕಪ್ ಅವರೆಕಾಯಿ (ಉಪ್ಪು ನೀರಿನಲ್ಲಿ ಬೇಯಿಸಿಕೊಂಡಿರಬೇಕು)
1 ಟೀ ಚಮಚ ವಾಂಗಿ ಬಾತ್ ಪೌಡರ್
½ ಟೀ ಚಮಚ ಸಾಸಿವೆ 
½ ಟೀ ಚಮಚ ಜೀರಿಗೆ
½ ಟೀ ಚಮಚ ಉದ್ದಿನಬೇಳೆ
1 ಉದ್ದ ಸೀಳಿದ ಹಸಿ ಮೆಣಸಿನಕಾಯಿ 
ಕರಿಬೇವಿನ ಎಲೆಗಳು
ಒಂದು ಚಿಟಿಕೆ ಇಂಗು
¼ ಟೀ ಚಮಚ ಅರಿಶಿನ ಪುಡಿ 
½ ಟೀ ಚಮಚ ಸಕ್ಕರೆ (ಐಚ್ಛಿಕ)

2-3 ಟೇಬಲ್ ಸ್ಪೂನ್ ಎಣ್ಣೆ
1.5 ಕಪ್ ನೀರು
ಸ್ವಲ್ಪ ಕೊತ್ತಂಬರಿ ಸೊಪ್ಪು
2 ಚಮಚ ತುರಿದ ತೆಂಗಿನಕಾಯಿ
1 ಚಮಚ ನಿಂಬೆ ರಸ
ರುಚಿಗೆ ತಕ್ಕಂತೆ ಉಪ್ಪು

Health Tips: ಭಯ ಬಿಡಿ… ನೀವು ಹೀಗಿದ್ರೆ ಹಾರ್ಟ್ ಅಟ್ಯಾಕ್ ಆಗೋ ಚಾನ್ಸೇ ಇರೋಲ್ಲ!

ಸೂಚನೆಗಳು
ಕಡಾಯಿಯಲ್ಲಿ ರವೆಯವನ್ನು ಕೊಂಚ ಕೆಂಪಗಾಗುವವರೆಗೆ, ಹಸಿ ವಾಸನೆ ಮಾಯವಾಗುವವರೆಗೆ ಹುರಿಯಿರಿ. 
ಅವರೆಕಾಯಿಯನ್ನು ಅದು ಮೃದುವಾಗುವವರೆಗೆ ಕುದಿಯುವ ನೀರಿನಲ್ಲಿ ಉಪ್ಪಿನೊಂದಿಗೆ ಬೇಯಿಸಿ ಮತ್ತು ಪಕ್ಕಕ್ಕೆ ಇಟ್ಟುಕೊಳ್ಳಿ. 
ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಸಾಸಿವೆ, ಜೀರಿಗೆ, ಉದ್ದಿನಬೇಳೆ, ಇಂಗು, ಕರಿಬೇವಿನ ಎಲೆಗಳು, ಹಸಿರು ಮೆಣಸಿನಕಾಯಿ ಸೇರಿಸಿ, 30 ಸೆಕೆಂಡುಗಳ ಕಾಲ ಹುರಿಯಿರಿ.
ಮುಂದೆ, ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಬೇಯಿಸಿದ ಅವರೆಕಾಯಿ, ಉಪ್ಪು, ಅರಿಶಿನ ಪುಡಿ, ವಾಂಗಿ ಬಾತ್ ಪುಡಿ ಸೇರಿಸಿ ಮತ್ತು 2-3 ನಿಮಿಷ ಹುರಿಯಿರಿ.
ಈಗ ಈರುಳ್ಳಿಗೆ 1.5 ಕಪ್ ನೀರು ಸೇರಿಸಿ. ನೀರು ಕುದಿಯಲು ಪ್ರಾರಂಭಿಸಿದ ನಂತರ, ಸ್ವಲ್ಪ ಸ್ವಲ್ಪವಾಗಿ ಹುರಿದ ರವೆ ಸೇರಿಸಿ ಮತ್ತು ಉಂಡೆ ಉಂಡೆಯಾಗುವುದನ್ನು ತಪ್ಪಿಸಲು ನಿರಂತರವಾಗಿ ಬೆರೆಸುತ್ತಿರಿ.
ಮಧ್ಯಮ ಉರಿಯಲ್ಲಿ ಸುಮಾರು 2-3 ನಿಮಿಷಗಳ ಕಾಲ ಮುಚ್ಚಿ ಬೇಯಲು ಬಿಡಿ. ನಂತರ, ನಿಂಬೆ ರಸ, ಕೊತ್ತಂಬರಿ ಸೊಪ್ಪು, ತುರಿದ ತೆಂಗಿನಕಾಯಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಒಲೆಯಿಂದ ಕೆಳಗಿಳಿಸಿ ಮತ್ತು ಬಿಸಿ ಬಿಸಿಯಾಗಿ ಅವರೆಕಾಳು ಉಪ್ಪಿಟ್ಟು ಸವಿಯಿರಿ. 

ತಾನು ಇಷ್ಟಪಟ್ಟಿದ್ದ ಸಹಪಾಠಿಗೆ 12 ಲಕ್ಷದ ಉಡುಗೊರೆ ಕೊಟ್ಟ ನರ್ಸರಿ ಬಾಲಕ!

ಟಿಪ್ಪಣಿಗಳು
ರವೆಯನ್ನು ಹುರಿಯುವಾಗ ಅದನ್ನು ಸುಡಬೇಡಿ. 
ತಾಜಾ ಅವರೆಕಾಳು ಒಮ್ಮೆ ಫ್ರೀಜ್ ಮಾಡಿದ್ದಕ್ಕಿಂತ ಹೆಚ್ಚು ರುಚಿಯಾಗಿರುತ್ತದೆ.
ನೀವು ವಾಂಗಿಬಾತ್ ಪುಡಿಯನ್ನು ಹೊಂದಿಲ್ಲದಿದ್ದರೆ ರಸಂ ಪುಡಿ ಬಳಸಬಹುದು.
ಮೃದುವಾದ ಮತ್ತು ರುಚಿಕರವಾದ ಉಪ್ಪಿಟ್ಟಿಗಾಗಿ ರವೆ ಮತ್ತು ನೀರಿನ ಅನುಪಾತವು 3:1 ಆಗಿರಬೇಕು.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios