ಮಾಧುರಿ ದೀಕ್ಷಿತ್ ಮೀಟ್ ಆಗ್ಬೇಕು ಅಂತ ಟಿಮ್ ಕುಕ್ ಕೇಳಿದ್ದೇಕೆ?
ಮುಂಬೈಗೆ ಹೋದ್ಮೇಲೆ ವಡಾ ಪಾವ್ ತಿನ್ನದೆ ಬರೋಕಾಗುತ್ತಾ? ಭಾರತಕ್ಕೆ ಬಂದ ಆ್ಯಪಲ್ ಸಿಇಒ ಟಿಮ್ ಕುಕ್ ಕೂಡ ಈ ಅವಕಾಶ ಬಿಡಲಿಲ್ಲ. ಮುಂಬೈ ಹೊಟೇಲ್ ನಲ್ಲಿ ವಡಾ ಪಾವ್ ತಿಂದು ವಾವ್ ಎಂದಿದ್ದಾರೆ.
ಭಾರತದಲ್ಲಿ ಆ್ಯಪಲ್‌ನ ಮೊದಲ ಮಳಿಗೆ ಮುಂಬೈನಲ್ಲಿ ಪ್ರಾರಂಭವಾಗಿದೆ. ಆಪಲ್‌ನ ಮೊದಲ ಅಧಿಕೃತ ಸ್ಟೋರನ್ನು ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ ತೆರೆಯಲಾಗಿದೆ. ಆ್ಯಪಲ್ ಸಿಇಒ ಟಿಮ್ ಕುಕ್ , ಆ್ಯಪಲ್ ಸ್ಟೋರ್ ಉದ್ಘಾಟನೆ ಹಿನ್ನಲೆಯಲ್ಲಿ ಭಾರತಕ್ಕೆ ಆಗಮಿಸಿದ್ದರು. ಎಲ್ಲಾ ಸರಿ ಅವರು ಯಾಕೆ ಬಾಲಿವುಡ್ ಡ್ಯಾನ್ಸಿಂಗ್ ಕ್ವೀನ್ ಮಾದುರಿ ದೀಕ್ಷಿತ್ ಅವರನ್ನು ಭೇಟಿಯಾಗಬೇಕು ಅಂತ ಕೇಳಿದ್ದರು ಗೊತ್ತಾ? ಖಳ್ ನಾಯಕ್ ಚಿತ್ರದ ಛೋಲೆ ಕ್ಯಾ ಹೈ ಪಿಕ್ಚರ್ ಹಾಡು ನೋಡಿದ್ದಾರಂತೆ. ಅದರಲ್ಲಿ ಕುಕ್ ಕುಕ್ ಅನ್ನೋದ್ರಿಂದ ಆ್ಯಪಲ್‌ನ ಟಿಮ್ ಕುಕ್ ದಕ್ ದಕ್ ಹುಡುಗಿಯನ್ನು ಮೀಟ್ ಆದ್ರಂತೆ ಅನ್ನೋ ಟ್ರೋಲ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎಲ್ಲರನ್ನೂ ಬಿಟ್ಟು ಮಾಧುರಿಯನ್ನೇ ಏಕೆ ಕುಕ್ ಮೀಟ್ ಆದರು ಅನ್ನೋದು ಮಾತ್ರ ಇನ್ನೂ ಯಕ್ಷಪ್ರಶ್ನೆ.
ಅದರಿಲಿ. ದಿಲ್ಲಿಗೆ ಬಂದ ಕುಕ್ ಏನೇನು ಮಾಡಿದ್ರು ನೋಡೋಣ, ಕುಕ್ (Cook) ಮುಂಬೈನಲ್ಲಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಲ್ಲದೆ, ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾಗಿ ಮಾತುಕತೆ ನಡೆದಿದ್ದಾರೆ. ಕುಕ್, ಸಾಮಾಜಿಕ ಜಾಲತಾಣದಲ್ಲಿ ಕೆಲ ಸುಂದರ ಕ್ಷಣಗಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಕುಕ್ ಟ್ವಿಟರ್ (Twitter) ನಲ್ಲಿ ಮುಂಬೈ ಪ್ರವಾಸದ ಕೆಲ ಫೋಟೋ, ವಿಡಿಯೋಗಳನ್ನು ನಾವು ನೋಡ್ಬಹುದು. ಬೇರೆ ದೇಶದಲ್ಲಿ ಇರಲಿ ಇಲ್ಲ ಬೇರೆ ಊರಿನಿಂದ ಇರಲಿ, ನಮ್ಮೂರಿಗೆ ಬಂದಾಗ ಇಲ್ಲಿನ ಸುಂದರ ಸ್ಥಳವನ್ನಲ್ಲದೆ ನಮ್ಮ ಪ್ರಸಿದ್ಧ ಆಹಾರವನ್ನು ನಾವು ಅವರಿಗೆ ನೀಡ್ತೇವೆ. ಕುಕ್ ಕೂಡ ಮುಂಬೈ ಸ್ಪೇಷಲ್ ವಡಾ ಪಾವ್ (Vada Pav) ಸವಿದಿದ್ದಾರೆ. ಇದ್ರಲ್ಲಿ ಇನ್ನೊಂದು ವಿಶೇಷವೆಂದ್ರೆ ಕುಕ್, ವಡಾಪಾವ್ ರುಚಿಯನ್ನು ನಟಿ ಮಾಧುರಿ ದೀಕ್ಷಿತ್ ಜೊತೆ ಕುಳಿತು ತಿಂದಿದ್ದಾರೆ. ಸದ್ಯ ಕುಕ್ ಹಾಗೂ ಮಾಧುರಿ ದೀಕ್ಷಿತ್ ವಡಾ ಪಾವ್ ತಿನ್ನುತ್ತಿರುವ ಫೋಟೋ ವೈರಲ್ ಆಗಿದೆ.
VIRAL VIDEO : ಬೆಂಕಿಯಲ್ಲ ಬಿಸಿಲಲ್ಲೇ ಮೊಟ್ಟೆ ಆಮ್ಲೆಟ್ ಆಯ್ತು!
ಮಾಧುರಿ ದೀಕ್ಷಿತ್ ಮೊದಲು ತನ್ನ ಟ್ವಿಟರ್ ನಲ್ಲಿ ಕುಕ್ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಮಾಧುರಿ, ಮುಂಬೈನಲ್ಲಿ ವಡಾ ಪಾವ್‌ಗಿಂತ ಉತ್ತಮ ಸ್ವಾಗತವನ್ನು ಯೋಚಿಸಲು ಸಾಧ್ಯವಿಲ್ಲ ಎಂದು ಶೀರ್ಷಿಕೆ ಹಾಕಿದ್ದಾರೆ. ಮಾಧುರಿ ದೀಕ್ಷಿತ್ ಟ್ವಿಟನ್ನು ರೀ ಟ್ವಿಟ್ ಮಾಡಿರುವ ಕುಕ್, ನನ್ನ ಮೊದಲ ವಡಾ ಪಾವ್ ಪರಿಚಯಿಸಿದ್ದಕ್ಕೆ ಧನ್ಯವಾದ ಮಾಧುರಿ ದೀಕ್ಷಿತ್ ಇದು ತುಂಬಾ ರುಚಿಕರವಾಗಿದೆ ಎಂದು ಕುಕ್ ಶೀರ್ಷಿಕೆ ಹಾಕಿದ್ದಾರೆ.
ಫೋಟೋದಲ್ಲಿ ಮಾಧುರಿ ದೀಕ್ಷಿತ್ ಹಾಕು ಕುಕ್, ವಡಾ ಪಾವ್ ತಿನ್ನುತ್ತಿದ್ದು, ಇಬ್ಬರು ನಗ್ತಿರೋದನ್ನು ನೀವು ನೋಡ್ಬಹುದು. ಇದಕ್ಕೆ ಅನೇಕರು ಕಮೆಂಟ್ ಕೂಡ ಮಾಡಿದ್ದಾರೆ. ಸ್ವಾತಿ ಸ್ನ್ಯಾಕ್ಸ್ ಗೆ ಅವರನ್ನು ಕರೆದುಕೊಂಡು ಹೋಗಿದ್ದು ಒಳ್ಳೆಯ ಚಾಯ್ಸ್ ಅಂತಾ ಒಬ್ಬರು ಬರೆದ್ರೆ ಮತ್ತೊಬ್ಬರು ಇಂಡಿಯಾದ ಸ್ನ್ಯಾಕ್ಸ್ ವಿಶ್ವದಲ್ಲಿ ಬೆಸ್ಟ್. ಸಮೋಸಾ, ವಡಾ ಪಾವ್, ಬೇಲ್ ಪುರಿ, ಗೋಲ್ಗಪ್ಪ ಎಂದು ಕಮೆಂಟ್ ಮಾಡಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ ಕುಕ್, ವಡಾ ಪಾವ್ ಶಾಪ್ ಓಪನ್ ಮಾಡ್ತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ. ನೀವು ದೆಹಲಿಗೆ ಬಂದಾಗ ಛೋಲೆ ಬಟೂರಾ ತಿನ್ನಿ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಟಿಮ್ ಕುಕ್ ಮಾಧುರಿ ದೀಕ್ಷಿತ್ ಹೊರತುಪಡಿಸಿ ಮುಖೇಶ್ ಅಂಬಾನಿ, ಎಆರ್ ರೆಹಮಾನ್, ರವೀನಾ ಟಂಡನ್, ಅನಿಲ್ ಕುಂಬ್ಳೆ ಮತ್ತು ಅರ್ಮಾನ್ ಮಲಿಕ್ ಅವರಂತಹ ಅನೇಕ ಸೆಲೆಬ್ರಿಟಿಗಳನ್ನು ಭೇಟಿಯಾಗಿದ್ದಾರೆ. ಕುಕ್ ಜೊತೆಗಿರುವ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Snack Recipe: ಒಮ್ಮೆ ತಿಂದರೆ ಮತ್ತೆ ತಿನ್ನಬೇಕು ಎನಿಸುವ ಚೀಸಿ ಮೊನಾಕೋಸ್ ರೆಸಿಪಿ
ಭಾರತದಲ್ಲಿ ಮೊದಲ ಬಾರಿ ಆ್ಯಪಲ್ ಸ್ಟೋರ್ ತೆರೆಯಲಾಗಿದ್ದು, ಅದ್ರ ಒಳಗಿನ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. 2020ರಲ್ಲಿ ಕಂಪನಿ ಮೊದಲ ಬಾರಿ ಭಾರತದಲ್ಲಿ ಆನ್ಲೈನ್ ಸ್ಟೋರ್ ಶುರು ಮಾಡಿತ್ತು. ಆಗ್ಲೇ ಕಂಪನಿ ಆಫ್ಲೈನ್ ಸ್ಟೋರ್ ಕೂಡ ಶುರು ಮಾಡಲು ನಿರ್ಧರಿಸಿತ್ತು. ಆದ್ರೆ ಕೆಲ ಕಾರಣದಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಏಪ್ರಿಲ್ 18ರಂದು ಮುಂಬೈನಲ್ಲಿ ಮೊದಲ ಸ್ಟೋರ್ ಶುರುವಾಗಿದ್ದು, ಏಪ್ರಿಲ್ 20ರಂದು ದೆಹಲಿಯಲ್ಲಿ ಎರಡನೇ ಮಳಿಗೆ ಶುರುವಾಗಲಿದೆ. ಈವರೆಗೆ ಗ್ರಾಹಕರೆಲ್ಲ ಆ್ಯಪಲ್ ರೀಸೆಲ್ಲರ್ ಬಳಿ ಆ್ಯಪಲ್ ಉತ್ಪನ್ನಗಳನ್ನು ಖರೀದಿ ಮಾಡ್ತಿದ್ದರು. ಈಗ ನೀವು ಸ್ಟೋರ್ ಗೆ ಹೋಗಿ ಖರೀದಿ ಮಾಡಬಹುದು. ಇದ್ರಿಂದ ಕೆಲ ಲಾಭವಿದೆ. ಉತ್ಪನ್ನದ ಮೇಲೆ ಪೋರ್ಟ್‌ಫೋಲಿಯೋ ಸಿಗುವ ಜೊತೆಗೆ ವಿಶೇಷ ಕೊಡುಗೆ ಸಿಗಲಿದೆ.