Viral Video : ಬೆಂಕಿಯಲ್ಲ ಬಿಸಿಲಲ್ಲೇ ಮೊಟ್ಟೆ ಆಮ್ಲೆಟ್ ಆಯ್ತು!
ಬಿಸಿಲ ಬೇಗೆ ಹೆಚ್ಚಾಗ್ತಿದೆ. ಉರಿಯುತ್ತಿರುವ ಸೂರ್ಯನ ಶಾಖಕ್ಕೆ ಸ್ವಲ್ಪ ಹೊತ್ತು ಮೈಒಡ್ಡಿದ್ರೆ ನಾವೇ ಸುಟ್ಟು ಹೋಗ್ತೇವೆ. ಇನ್ನು ಮೊಟ್ಟೆ ಬೇಯದೆ ಇರುತ್ತಾ? ಪಶ್ಚಿಮ ಬಂಗಾಳದ ಬಿಸಿಲಿಗೆ ಇದೂ ಆಗಿದೆ.
ಉದ್ಯಾನ ನಗರಿ ಬೆಂಗಳೂರಿನಲ್ಲೇ ರಣಬಿಸಿಲಿದೆ. ಇನ್ನು ಉತ್ತರ ಭಾರತದ ಸ್ಥಿತಿ ಹೇಗಾಗಿರಬೇಡ. ಏಪ್ರಿಲ್ ಮಧ್ಯದಲ್ಲಿಯೇ ಬಿಸಿಲ ಧಗೆಯನ್ನು ತಡೆಯೋಕೆ ಸಾಧ್ಯವಾಗ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ರಣಬಿಸಿಲು ಜನರನ್ನು ಹೈರಾಣ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿ, ಬಿಹಾರದಲ್ಲಿ ಮಾತ್ರವಲ್ಲ ಉತ್ತರ ಪ್ರದೇಶ, ಆಂಧ್ರಪ್ರದೇಶದಲ್ಲೂ ಬಿಸಿಲಿನ ಅಬ್ಬರ ಹೆಚ್ಚಾಗಿದೆ.
ಬೇಸಿಗೆ (Summer) ಯಲ್ಲಿ ಸೂರ್ಯನ ಪ್ರಖರ ಶಾಖ ಹೆಚ್ಚಾಗ್ತಿದ್ದಂತೆ ಛತ್ರಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜನರು ತಮ್ಮನ್ನು ತಂಪುಗೊಳಿಸಲು ಕೂಲರ್, ಫ್ಯಾನ್, ಎಸಿ ಖರೀದಿಸ್ತಿದ್ದಾರೆ. ಬಿಸಿ ನೀರಿನ ಬದಲು ಕೋಲ್ಡ್ ನೀರಿನ ಬಳಕೆ ಮಾಡ್ತಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳೋದು ಹೇಗೆ ಎನ್ನುವ ಬಗ್ಗೆ ಒಂದಿಷ್ಟು ವಿಡಿಯೋಗಳನ್ನು ಹಂಚಿಕೊಳ್ಳಲಾಗ್ತಿದೆ. ನಮ್ಮೂರಿನಲ್ಲಿ ಎಷ್ಟು ಬಿಸಿಲಿದೆ, ನಿಮ್ಮೂರಿನಲ್ಲಿ ಎಷ್ಟು ಬಿಸಿಲಿದೆ ಎನ್ನುವ ವಿಡಿಯೋಗಳು ಹರಿದಾಡ್ತಿವೆ.
VIRAL VIDEO : ಐಸ್ ಕ್ರೀಂ ಜೊತೆ ತಂದೂರಿ ಚಿಕನ್, ಹೇಗಿರಬಹುದು ಟೇಸ್ಟ್?
ತುಂಬಾ ಹೊತ್ತು ಬಿಸಿಲಿನಲ್ಲಿ ಕುಳಿತ್ರೆ ನಮ್ಮ ತಲೆ ಕಾಯೋದ್ರಿಂದ ಇದ್ರಲ್ಲೇ ಈಗ ದೋಸೆ ಬೇಯಿಸಬಹುದು ಅಂತಾ ನಾವು ತಮಾಷೆ ಮಾಡ್ತಿರುತ್ತೇವೆ. ಗಂಟೆ ಬೆಳಿಗ್ಗೆ 10 ಆಗ್ತಿದ್ದಂತೆ ಟ್ಯಾಂಕ್ ನೀರು ಬಿಸಿಯಾಗಿ ಬರೋದನ್ನು ನಾವು ನೋಡಬಹುದು. ನೆಲ ಕಾದಿರೋದ್ರಿಂದ ಬರಿಗಾಲಿನಲ್ಲಿ ಕಾಲಿಟ್ರೆ ಸುಟ್ಟು ಹೋದ ಅನುಭವವಾಗುತ್ತದೆ. ಮಹಿಳೆಯರು ಬೇಸಿಗೆಯಲ್ಲಿ ಹಪ್ಪಳ, ಸಂಡಿಗೆಯನ್ನು ತಯಾರಿಸಿದ್ರೆ ಇಲ್ಲೊಬ್ಬ ವ್ಯಕ್ತಿ ಆಮ್ಲೆಟ್ (Omelet) ತಯಾರಿಸಿದ್ದಾನೆ. ಆತ ಬಿಸಿಲಿನಲ್ಲಿ ಪ್ರಯೋಗ ಮಾಡಿದ್ದಾನೆ. ಆತ ಮಾಡಿದ ಕೆಲಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಸಿಲಿನಲ್ಲಿ ಎಗ್ (Egg) ಆಮ್ಲೆಟ್ ಮಾಡಿದ ಭೂಪ : ಮೊದಲೇ ಹೇಳಿದಂತೆ ಉತ್ತರ ಭಾರತ (North India )ದ ಕಡೆ ಬಿಸಿಲು ವಿಪರೀತವಾಗಿದೆ. ಈ ಬಿಸಿಲಿನಲ್ಲಿ ಆಮ್ಲೆಟ್ ಕೂಡ ಮಾಡಬಹುದು ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. @puchubabuchandrani ಹೆಸರಿನ ಫೇಸ್ಬುಕ್ (Facebook) ಪೇಜ್ ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ವ್ಯಕ್ತಿ ಈ ವಿಡಿಯೋ (Video) ದಲ್ಲಿ ಕಾಣಿಸಿಕೊಂಡಿದ್ದಾನೆ. ಟೆರೆಸ್ ನಲ್ಲಿ ಆಮ್ಲೆಟ್ ಮಾಡೋದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಮೊದಲು ಟೆರೆಸ್ (Terrace) ಕಟ್ಟೆ ಮೇಲೆ ನಾನ್ ಸ್ಟಿಕ್ ತವಾ ಇಡುತ್ತಾನೆ. ಅದು ಕಪ್ಪಗಿರುವ ಕಾರಣ ಬೇಗ ಬಿಸಿಯನ್ನು ಎಳೆದುಕೊಳ್ಳುತ್ತದೆ ಎಂದು ಆತ ಹೇಳ್ತಿದ್ದಾನೆ. ತವಾ ಸ್ವಲ್ಪ ಬಿಸಿಯಾಗ್ತಿದ್ದಂತೆ ಅದಕ್ಕೆ ಒಂದು ಮೊಟ್ಟೆಯನ್ನು ಒಡೆದು ಹಾಕ್ತಾನೆ. ಸ್ವಲ್ಪ ಸಮಯದಲ್ಲೇ ಮೊಟ್ಟೆ ಆಮ್ಲೆಟ್ ಆಗಲು ಶುರುವಾಗುತ್ತದೆ. ನಂತ್ರ ತವಾದಿಂದ ಅದನ್ನು ತೆಗೆದು ಮಗುಚಿ ಹಾಕ್ತಾನೆ. ಸ್ವಲ್ಪ ಸಮಯದ ನಂತ್ರ ಆಮ್ಲೆಟ್ ತಿನ್ನುವ ವ್ಯಕ್ತಿ, ವಾವ್, ಸರಿಯಾಗಿ ಬೆಂದಿದೆ ಎಂದು ಕಮೆಂಟ್ ಮಾಡ್ತಾನೆ.
Viral Video: ರಸ್ತೆ ಬದಿಯಲ್ಲಿ ವಿಶಿಷ್ಟ ಮೊಮೊ ಮಾಡಿ ಫೇಮಸ್ ಆದ ಹುಡುಗಿ
ಇದಕ್ಕೆ ಬೆಂಗಾಲಿ ವ್ಯಕ್ತಿ, ಬೆಂಕಿಯಿಲ್ಲದೆ ಎಗ್ ಫ್ರೈ ಮಾಡಿದ್ದಾನೆ (Bengal Man Fry Egg Without Fire) ಎಂದು ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋವನ್ನು ಈವರೆಗೆ 1.5 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ಬಿಸಿಯಲ್ಲಿ ಈತ ನಿಂತಿದ್ರಿಂದ ಈತನ ತಲೆಯೂ ಬಿಸಿಯಾಗಿದೆ ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ. ಇದು ಸುಳ್ಳು ವಿಡಿಯೋ. ಮಧ್ಯ ಮಧ್ಯ ಕತ್ತರಿಸಿ ಜೋಡಿಸಲಾಗಿದೆ. ಬಿಸಿಲಿಗೆ ಮೊಟ್ಟೆ ಬೆಂದಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. ಮುಂದಿನ ಬಾರಿ ಚಿಕನ್ ಕರಿ ಮಾಡಿ ಎಂದು ಮತ್ತೊಬ್ಬ ಕಮೆಂಟ್ ಮಾಡಿದ್ದಾನೆ. ಇನ್ನು ಕೆಲವರು ವಿಡಿಯೋ ನೋಡಿ ಅಚ್ಚರಿವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಬಿಸಿಯಿದೆ ಎಂದಾದ್ರೆ ಯಾವುದೇ ಕಾರಣಕ್ಕೂ ಹೊರಗೆ ಬರಬೇಡಿ ಎಂದು ಸಲಹೆ ನೀಡಿದ್ದಾರೆ.