Celebrity Life : ಮಾಂಸ ತ್ಯಜಿಸಿದ ವಿರುಷ್ಕಾ ಜೋಡಿ! ಮಹತ್ವದ ನಿರ್ಧಾರಕ್ಕೆ ಕಾರಣ ಇಲ್ಲಿದೆ

ಮಾಂಸ ತ್ಯಜಿಸೋದು ಸುಲಭವಲ್ಲ. ಬಾಲ್ಯದಿಂದ ಮಾಂಸಾಹಾರ ಸೇವನೆ ಮಾಡ್ತ ಬಂದಿರುವವರಿಗೆ ಇದು ಕಷ್ಟ. ಆದ್ರೆ ವಿರಾಟ್-ಅನುಷ್ಕಾ ದೊಡ್ಡ ತೀರ್ಮಾನ ತೆಗೆದುಕೊಂಡಿದ್ದಾರೆ. ಮಾಂಸಾಹಾರ ತ್ಯಜಿಸಿ, ಸಸ್ಯ ಆಧಾರಿತ ಮಾಂಸದ ಪ್ರವರ್ತಕ ಬ್ರಾಂಡ್ ಜೊತೆ ಕೈ ಜೋಡಿಸಿದ್ದಾರೆ.
 

Anushka Sharma Virat Kohli announces they following no meat diet for this reason

ಟೀಂ ಇಂಡಿಯಾ (Team India)ದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ (Bollywood) ಬೆಡಗಿ ಅನುಷ್ಕಾ ಶರ್ಮಾ (Anushka Sharma ) ಸೆಲೆಬ್ರಿಟಿ ಜೋಡಿ. ಕೊಹ್ಲಿ ಹಾಗೂ ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಫಿಟ್ನೆಸ್ (Fitness) ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡುವ ಅವರು, ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಳ್ತಾರೆ. ಹಾಗೆಯೇ ಈ ಜೋಡಿಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿಯಿದೆ. ಇದನ್ನು ನಾವು ಅನೇಕ ಫೋಟೋಗಳಲ್ಲಿ ನೋಡಬಹುದು. ಈಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದನ್ನು ಅಭಿಮಾನಿಗಳ ಮುಂದೆ ಹೇಳಿದ್ದಾರೆ. 

ಸೆಲೆಬ್ರಿಟಿ ಜೋಡಿಯ ಮಹತ್ವದ ನಿರ್ಧಾರ 
ಸೆಲೆಬ್ರಿಟಿ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಮಾಂಸವನ್ನು ತ್ಯಜಿಸಿದ್ದಾರೆ. ಸ್ವಲ್ಪ ಸಮಯದಿಂದ ಮಾಂಸ ರಹಿತ ಆಹಾರವನ್ನು ಅನುಸರಿಸುತ್ತಿದ್ದೇವೆಂದು ವಿರುಷ್ಕಾ ಘೋಷಿಸಿದ್ದಾರೆ. ಕೇವಲ ಪ್ರಾಣಿಪ್ರೇಮಿ ಎಂಬ ಕಾರಣಕ್ಕೆ ಮಾತ್ರವಲ್ಲದೆ ಭೂಮಿಯ ಮೇಲೆ ತಮ್ಮಿಂದ ಆಗ್ತಿರುವ ಪ್ರಭಾವವನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.

CHOCOLATE DAY: ಪ್ರೀತಿಸಿದವರನ್ನು ಮೆಚ್ಚಿಸಲು ಈ ಚಾಕೊಲೇಟ್ ರೆಸಿಪಿ ಮಾಡಿ

ಮಾಂಸ ತ್ಯಜಿಸಿದ ವಿರುಷ್ಕಾ :
ನಟಿ ಅನುಷ್ಕಾ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ವಿರಾಟ್ ಮತ್ತು ನಾನು ಗ್ರಹದ ಮೇಲೆ ಹೇಗೆ ಉತ್ತಮ ಪರಿಣಾಮ ಬೀರಬಹುದು ಮತ್ತು ಮುಂದಿನ ಪೀಳಿಗೆಗೆ ಉತ್ತಮ ಸ್ಥಳವನ್ನು ಹೇಗೆ ನೀಡಬಹುದು ಎಂಬುದರ ಕುರಿತು ಮಾತನಾಡುತ್ತಲೇ ಇರುತ್ತೇವೆ. ನಾವು ಬದಲಾವಣೆಗೆ ಮುಂದಾಗಿದ್ದೇವೆ. ಸಸ್ಯಾಹಾರವನ್ನು ನಾವು ಅಳವಡಿಸಿಕೊಂಡಿದ್ದೇವೆ. ಅಂದರೆ ಯಾವುದೇ ಮಾಂಸವನ್ನು ಸೇವಿಸುವುದಿಲ್ಲ. ನಾವು ಪ್ರಾಣಿ ಪ್ರೇಮಿಗಳಾಗಿರುವುದರಿಂದ ಮಾತ್ರವಲ್ಲ, ಮಾಂಸ ಸೇವನೆಯು ಗ್ರಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ನಾವು ಮಾಂಸಹಾರ ತ್ಯಜಿಸುತ್ತಿದ್ದೇವೆಂದು ಅನುಷ್ಕಾ ಹೇಳಿದ್ದಾರೆ.

ಬ್ಲೂ ಟ್ರೈಬ್ ಫುಡ್‌ ನಲ್ಲಿ ಹೂಡಿಕೆ (Blue Tribe Food) :
ಸಸ್ಯ ಆಧಾರಿತ ಮಾಂಸದ ಪ್ರವರ್ತಕ ಬ್ರಾಂಡ್ ಆಗಿರುವ ಬ್ಲೂ ಟ್ರೈಬ್ ಫುಡ್‌ನಲ್ಲಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ಹೂಡಿಕೆ ಮಾಡಿದ್ದಾರೆ.ಇದ್ರ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಈಗ ತಮ್ಮ ಭರವಸೆಯನ್ನು ಈಡೇರಿಸಿದ್ದೇವೆ ಎಂದು ದಂಪತಿ ಹೇಳಿದ್ದಾರೆ.  

ವಿರಾಟ್ ಮತ್ತು ನಾನು #PlanetfriendlyTribe ಗೆ ಸೇರಲು ರೋಮಾಂಚನಗೊಂಡಿದ್ದೇವೆ  ಎಂದು ವಿಡಿಯೋಕ್ಕೆ ಅನುಷ್ಕಾ ಶೀರ್ಷಿಕೆ ಹಾಕಿದ್ದಾರೆ. ನಮ್ಮ ಗ್ರಹವನ್ನು ರಕ್ಷಿಸುವ ಶಕ್ತಿಯನ್ನು ನಾವೆಲ್ಲರೂ ಹೊಂದಿದ್ದೇವೆ ಎಂದು ನಾವು ನಂಬುತ್ತೇವೆ. ಮತ್ತು ನಾವು ಮಾಡುವ ಪ್ರತಿಯೊಂದು ಸಣ್ಣ ಆಯ್ಕೆಯು ಮಹತ್ವ ಪಡೆಯುತ್ತದೆ. ಸಂಪೂರ್ಣ ಆಹಾರವಾಗಿರುವುದರಿಂದ, @bluetribeofficial ನ ಸಸ್ಯ-ಆಧಾರಿತ ಮಾಂಸಗಳು ಪರಿಸರದ ಮೇಲೆ ಪರಿಣಾಮ ಬೀರದೆ, ಮಾಂಸದ ರುಚಿಯ ಉತ್ಪನ್ನಗಳನ್ನು ತಿನ್ನುವ ಅನುಭವವನ್ನು ನಮಗೆ ನೀಡುತ್ತವೆ ಎಂಬ ಅಂಶವನ್ನು ನಾವು ಪ್ರೀತಿಸುತ್ತೇವೆ ಎಂದು ಬರೆದಿದ್ದಾರೆ.

Garlic Milk Benefits: ಮಲಬದ್ಧತೆ ಸಮಸ್ಯೆನಾ ? ಬೆಳ್ಳುಳ್ಳಿ ಹಾಲು ಕುಡ್ದು ನೋಡಿ

ಸಸ್ಯಹಾರಿತ ಮಾಂಸ : ಬ್ಲೂ ಟ್ರೈಬ್ ಫುಡ್‌ ಸಸ್ಯಾಹಾರಿತ ಮಾಂಸವಾಗಿದೆ. ಅಂದ್ರೆ ಸಸ್ಯಾಹಾರದಿಂದ ತಯಾರಾಗುವ ಮಾಂಶವನ್ನು ಜನರಿಗೆ ನೀಡಲಾಗುತ್ತದೆ. ಇದರ ಆಹಾರ ಸೇವನೆ ಮಾಡಿದ್ರೆ ಮಾಂಸ ಸೇವನೆ ಮಾಡಿದ ಅನುಭವವಾಗುತ್ತದೆ. ಆದ್ರೆ ವಾಸ್ತವವಾಗಿ ಅದು ಪ್ರಾಣಿಗಳ ಮಾಂಸವಲ್ಲ. ಸಸ್ಯಹಾರಗಳಿಂದ ಮಾಂಸಹಾರ ತಯಾರಿಸಲಾಗುತ್ತದೆ. 
ಮಾಂಸಹಾರ ಬಿಡುವುದು ಸುಲಭವಲ್ಲ. ಪ್ರತಿ ದಿನ ಮಾಂಸಹಾರ ಸೇವನೆ ಮಾಡುವವರಿದ್ದಾರೆ. ಅದನ್ನು ತ್ಯಜಿಸಲು ನಿರ್ಧರಿಸಿದ್ದರೆ ಅಂಥವರಿಗೆ ಬ್ಲೂ ಟ್ರೈಬ್ ಫುಡ್‌ ನೆರವಾಗಲಿದೆ.  
 

Latest Videos
Follow Us:
Download App:
  • android
  • ios