Garlic Milk Benefits: ಮಲಬದ್ಧತೆ ಸಮಸ್ಯೆನಾ ? ಬೆಳ್ಳುಳ್ಳಿ ಹಾಲು ಕುಡ್ದು ನೋಡಿ
ಅರಿಶಿನ ಹಾಕಿದ ಹಾಲು (Milk) ಕುಡಿಯೋದು ಗೊತ್ತು. ಬಾದಾಮಿ (Almond) ಹಾಕಿದ ಹಾಲು ಕುಡಿಯೋದು ಗೊತ್ತು. ಬೆಳ್ಳುಳ್ಳಿ ಹಾಕಿದ ಹಾಲು ಕುಡಿಯೋದು ಗೊತ್ತಾ ? ಯಪ್ಪಾ ಬೆಳ್ಳುಳ್ಳಿ (Garlic) ಮತ್ತು ಹಾಲಾ. ಇದೆಂಥಾ ವರ್ಸ್ಟ್ ಕಾಂಬಿನೇಷನ್ ಅಂತ ಮೂಗು ಮುರೀಬೇಡಿ. ಬೆಳ್ಳುಳ್ಳಿ ಹಾಲು ಕುಡಿಯೋದರ ಹೆಲ್ತ್ ಬೆನಿಫಿಟ್ಸ್ ಗೊತ್ತಾದ್ರೆ ನಿಮ್ಮ ಮುಖ ಅರಳೋದು ಖಂಡಿತ.
ಹಾಲು (Milk) ಆರೋಗ್ಯಕ್ಕೆ ಅತ್ಯುತ್ತಮ. ದಿನಕ್ಕೊಂದು ಲೋಟ ಹಾಲು ಕುಡಿದರೆ ಹಲವು ಆರೋಗ್ಯ (Health) ಸಮಸ್ಯೆಗಳಿಂದ ದೂರವಿರಬಹುದು ಎಂದು ವೈದ್ಯರೇ ಹೇಳುತ್ತಾರೆ. ಹಾಲು ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಪಾನೀಯವಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಹಾಲಿನಲ್ಲಿರುತ್ತದೆ. ಹೀಗಾಗಿಯೇ ಹೆಚ್ಚಿನವರು ಬೆಳಗ್ಗೆ ಟೀ, ಕಾಫಿ ಕುಡಿಯುವ ಬದಲು ಹಾಲು ಕುಡಿಯುತ್ತಾರೆ. ಹಲವರು ರಾತ್ರಿ ಅರಿಶಿನ (Turmeric) ಬೆರೆಸಿದ ಹಾಲು, ಬಾದಾಮಿ ಹಾಕಿದ ಹಾಲು ಕುಡಿಯುವುದನ್ನು ರೂಢಿ ಮಾಡಿಕೊಂಡಿರುತ್ತಾರೆ.
ಬೆಳ್ಳುಳ್ಳಿ ಹಲವಾರು ಖಾದ್ಯಗಳ ತಯಾರಿಕೆಯಲ್ಲಿ ಬಳಸುವ ಸಾಂಬಾರು ವಸ್ತು. ಬೆಳ್ಳುಳ್ಳಿಯ ವಾಸನೆಯನ್ನು ಇಷ್ಟಪಡದವರು ಮಾತ್ರ ಇದನ್ನು ಬಳಸುವುದಿಲ್ಲ. ಬೆಳ್ಳುಳ್ಳಿ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಹಾಲು ಆರೋಗ್ಯಕ್ಕೆ ಉತ್ತಮ, ಬೆಳ್ಳುಳ್ಳಿ ಸಹ ಆರೋಗ್ಯಕರ ಗುಣಗಳನ್ನು ಹೊಂದಿದೆ. ಆದರೆ ಬೆಳ್ಳುಳ್ಳಿ (Garlic) ಹಾಲು ಸಹ ಆರೋಗ್ಯಕ್ಕೆ ಅತ್ಯುತ್ತಮ ಅನ್ನೋದು ನಿಮಗೆ ಗೊತ್ತಾ ?
ಸದ್ಯ ಫುಡ್ ಲೋಕದಲ್ಲಿ ಟ್ರೆಂಡ್ ಆಗ್ತಿರೋ ಪಾನೀಯಗಳಲ್ಲಿ ಒಂದು ಬೆಳ್ಳುಳ್ಳಿ ಹಾಲು ಅಥವಾ ಗಾರ್ಲಿಕ್ ಮಿಲ್ಕ್. ಪೌಷ್ಟಿಕತಜ್ಞರು ಸಹ ಉತ್ತಮ ಆರೋಗ್ಯಕ್ಕಾಗಿ ಬೆಳ್ಳುಳ್ಳಿ ಹಾಲನ್ನು ಕುಡಿಯುವಂತೆ ಸಲಹೆ ನೀಡುತ್ತಾರೆ. ನ್ಯೂಟ್ರಿಷಿಯನ್ಸ್ ಪ್ರಕಾರ, ಗಾರ್ಲಿಕ್ ಮಿಲ್ಕ್, ಹಲವಾರು ಔಷಧೀಯ ಗುಣಗಳ ಶಕ್ತಿ ಕೇಂದ್ರವಾಗಿದೆ.
ಈರುಳ್ಳಿ ತಿಂದ್ಮೇಲೆ ಬಾಯಿಂದ ಬರುವ ಗಬ್ಬು ವಾಸನೆಗೆ Home Remedies
ಬೆಳ್ಳುಳ್ಳಿ ಹಾಲು ತಯಾರಿಸುವುದು ಹೇಗೆ ?
ಗಾರ್ಲಿಕ್ ಮಿಲ್ಕ್‌ನ್ನು ತಯಾರಿಸಲು, ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಹಾಲನ್ನು ಕುದಿಸಿಕೊಳ್ಳಿ. ನಂತರ ಅದಕ್ಕೆ 3-4 ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ. ಬಳಿಕ ಗ್ಯಾಸ್ ಹಚ್ಚಿ ಪ್ಯಾನ್‌ನ್ನು ಒಲೆಯಲ್ಲಿಟ್ಟು ಚೆನ್ನಾಗಿ ಕುದಿಸಿಕೊಳ್ಳಿ. ನಂತರ, ಅದರಲ್ಲಿ 1/2 ಟೀ ಸ್ಪೂನ್ ಅರಿಶಿನ ಪುಡಿಯೊಂದಿಗೆ ಒಂದು ಚಿಟಿಕೆ ಕರಿಮೆಣಸು ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. ಅದನ್ನು ಮತ್ತೊಮ್ಮೆ ಕುದಿಸಿ ಮತ್ತು ಗ್ಯಾಸ್ ಸ್ಟವ್ ಆಫ್ ಮಾಡಿ. ಹಾಲು ಸಾಕಷ್ಟು ಬೆಚ್ಚಗಿರುವಾಗ, ಒಂದು ಕಪ್‌ನಲ್ಲಿ ಸೋಸಿಕೊಳ್ಳಿ ಮತ್ತು ಅದರಲ್ಲಿ 1/2 ಚಮಚ ಜೇನುತುಪ್ಪವನ್ನು ಬೆರೆಸಿ ಬೆಚ್ಚಗಿದ್ದಾಗಲೇ ಕುಡಿಯಿರಿ.
ಬೆಳ್ಳುಳ್ಳಿ ಹಾಲಿನ ಆರೋಗ್ಯ ಪ್ರಯೋಜನಗಳು
ಬೆಳ್ಳುಳ್ಳಿ ಹಾಲು ನೈಸರ್ಗಿಕ ನೋವು ನಿವಾರಕ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿ ಹಾಲನ್ನು ಸೇವಿಸುವುದರಿಂದ ಸಂಧಿವಾತದಂತಹ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ. ಬೆಳ್ಳುಳ್ಳಿ ಹಾಲು ಎಂಬ ನೈಸರ್ಗಿಕ ಪಾನೀಯವು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸಿ, ಮಲಬದ್ಧತೆ (Constipation) ಸಮಸ್ಯೆಯನ್ನು ಇಲ್ಲವಾಗಿಸುತ್ತದೆ. ಅಜೀರ್ಣ, ಆಮ್ಲೀಯತೆ ಮತ್ತು ಗ್ಯಾಸ್‌ನಂತಹ ಪರಿಸ್ಥಿತಿಗಳಿಗೆ ಪ್ರಬಲವಾದ ಪರಿಹಾರವಾಗಿದೆ. ಬೆಳ್ಳುಳ್ಳಿಯು ನಂಜುನಿರೋಧಕ ಗುಣಗಳನ್ನು ಹೊಂದಿದೆ, ಇದು ಜೀವಾಣು ವಿಷವನ್ನು ತೆಗೆದುಹಾಕುವಾಗ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು ಅತ್ಯುತ್ತಮ ಘಟಕಾಂಶವಾಗಿದೆ.
Garlic Health Benefits: ಬೆಳ್ಳುಳ್ಳಿ ಗಿಡ ಬೆಳೆಸಿ ಈ 5 ಅದ್ಭುತ ಪ್ರಯೋಜನ ಪಡೆಯಿರಿ !!
ಗಾರ್ಲಿಕ್ ಮಿಲ್ಕ್ ಬೆನ್ನು, ಕೆಳ ಬೆನ್ನು, ಪೃಷ್ಠದ ಮತ್ತು ಕಾಲುಗಳಲ್ಲಿ ನೋವು ಇರುವವರಿಗೆ ಅಮೃತವಾಗಿದೆ. ಕೆಳಗಿನ ಬೆನ್ನಿನಿಂದ ಸೊಂಟ, ಪೃಷ್ಠದ ಮತ್ತು ಪ್ರತಿ ಕಾಲಿನವರೆಗೆ ಸಾಗುವ ಸಿಯಾಟಿಕಾ ನೋವನ್ನು ಹೊಂದಿರುವವರಿಗೆ ಇದು ಪರಿಣಾಮಕಾರಿ ಪರಿಹಾರವಾಗಿದೆ. ಇವುಗಳಷ್ಟೇ ಅಲ್ಲ, ಬೆಳ್ಳುಳ್ಳಿ ಹಾಲು ಕೆಮ್ಮು, ಅಸ್ತಮಾ, ಕ್ಷಯ,ನ್ಯುಮೋನಿಯಾ ಮತ್ತು ಕೊಲೆಸ್ಟ್ರಾಲ್‌ಗೆ ಚಿಕಿತ್ಸೆ ನೀಡುತ್ತದೆ. ಈ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಇಲ್ಲವಾಗುತ್ತದೆ.
ನಿದ್ರಾಹೀನತೆಯ ಸಮಸ್ಯೆ ಇರುವವರು, ಒತ್ತಡದಿಂದ ಬಳಲುವವರು ಬೆಳ್ಳುಳ್ಳಿ ಹಾಲನ್ನು ದಿನಕ್ಕೊಮ್ಮೆ ಕುಡಿದರೆ ಉತ್ತಮ ಪರಿಹಾರ ಸಿಗುತ್ತದೆ. ಸತತವಾಗಿ ಒಂದು ವಾರದವರೆಗೆ ಪ್ರತಿದಿನ ಈ ಹಾಲನ್ನು 1/2 ಕಪ್ ನಷ್ಟು ಕುಡಿಯಿರಿ. ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದನ್ನು ಗಮನಿಸಬಹುದು.