ಒಂದೇ ಕೈಯಲ್ಲಿ 16 ದೋಸೆ ಪ್ಲೇಟ್ ಬ್ಯಾಲೆನ್ಸ್, ವಿದ್ಯಾರ್ಥಿಭವನದ ಸರ್ವರ್‌ಗೆ ಆನಂದ್ ಮಹೀಂದ್ರಾ ಮೆಚ್ಚುಗೆ
ದೋಸೆ ಅಂದಾಕ್ಷಣ ಬೆಂಗಳೂರಿಗರಿಗೆ ತಕ್ಷಣಕ್ಕೆ ನೆನಪಾಗೋದು ಬಾಯಲ್ಲಿ ನೀರೂರಿಸೋ ವಿದ್ಯಾರ್ಥಿಭವನದ ಮಸಾಲೆ ದೋಸೆ. ಅದರಲ್ಲೂ ಅಲ್ಲಿನ ಸರ್ವರ್ ಹಲವು ದೋಸೆ ಪ್ಲೇಟ್‌ಗಳನ್ನು ಬ್ಯಾಲೆನ್ಸ್ ಮಾಡ್ಕೊಂಡು ತೆಗೆದುಕೊಂಡು ಬರೋ ರೀತಿಯೇ ಅದ್ಭುತ. ಸದ್ಯ ಈ ವೀಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.
ಮಹೀಂದ್ರಾ ಗ್ರೂಪ್ ಅಧ್ಯಕ್ಷ, ಆನಂದ್ ಮಹೀಂದ್ರಾ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಮತ್ತು ಅವರ ಟ್ವಿಟರ್ ಖಾತೆಯು ಅದಕ್ಕೆ ಪುರಾವೆಯಾಗಿದೆ. ಈ ಕೈಗಾರಿಕೋದ್ಯಮಿ ಸಾಮಾನ್ಯವಾಗಿ ಹಾಸ್ಯದ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇಂಥಾ ಪೋಸ್ಟ್‌ಗಳು ಯಾವುದೇ ಸಮಯದಲ್ಲಿ ಜನ ಮೆಚ್ಚುಗೆ ಪಡೆಯುತ್ತವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಸದ್ಯ ಈ ಬಿಲಿಯನೇರ್ ಬೆಂಗಳೂರಿನ ಗಾಂಧಿಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನ ಹೊಟೇಲ್‌ನಲ್ಲಿ ಅಲ್ಲಿನ ಸರ್ವರ್ ಹಲವು ದೋಸೆಗಳ ಪ್ಲೇಟ್‌ನ್ನು ಬ್ಯಾಲೆನ್ಸಿಂಗ್ ಆಗಿ ಕೊಂಡೊಯ್ಯುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಅತ್ಯಂತ ಪ್ರಸಿದ್ಧವಾದ ದೋಸೆ ತಾಣದ ಬಗ್ಗೆ ಯೋಚಿಸಿದಾಗಲೆಲ್ಲಾ ಥಟ್ಟಂತ ನೆನಪಾಗೋದೆ ವಿದ್ಯಾರ್ಥಿ ಭವನ. ಬಸವನಗುಡಿ ರಸ್ತೆಯ ಗಾಂಧಿ ಬಜಾರ್‌ನಲ್ಲಿರುವ ಐಕಾನಿಕ್ ತಿನಿಸು 1943 ರಿಂದ ನಗರದಲ್ಲಿ ಅತ್ಯುತ್ತಮ ಮಸಾಲೆ ದೋಸೆಗಳನ್ನು ನೀಡುತ್ತಿದೆ. ಇಲ್ಲಿನ ಸ್ವಾದಿಷ್ಟ ದೋಸೆಯನ್ನು ಸವಿಯಲೆಂದೇ ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಮಂದಿ ಬರುತ್ತಾರೆ. ಹೊಟೇಲ್ ಜನರಿಂದ ಕಿಕ್ಕಿರಿದು ತುಂಬಿದ್ದರೂ ಗಂಟೆಗಟ್ಟಲೆ ಕಾದು ದೋಸೆಯನ್ನು ಸವಿಯುತ್ತಾರೆ.
Viral Video: ನೃತ್ಯ ಮಾಡಿದ ಬಾಲಕಿಯ ತಲೆ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿದ ಆನೆ
ಒಂದೇ ಕೈಯಲ್ಲಿ 16 ದೋಸೆ ಪ್ಲೇಟ್ ಬ್ಯಾಲೆನ್ಸ್ ಮಾಡೋ ಸರ್ವರ್
ಆ ಸ್ಥಳಕ್ಕೆ ಭೇಟಿ ನೀಡಿದವರಿಗೆಲ್ಲರಿಗೂ ಅಲ್ಲಿಯ ಸರ್ವರ್‌ಗಳಲ್ಲಿ ವಿಶೇಷ ಪ್ರತಿಭೆ (Skills) ಇದೆ ಎಂದು ತಿಳಿದಿದೆ. ಅವರು ತಮ್ಮ ಕೈಯಲ್ಲಿ ಒಂದು ಸಮಯದಲ್ಲಿ ಅನೇಕ ದೋಸೆಯ ಪ್ಲೇಟ್‌ಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ತೆಗೆದುಕೊಂಡು ಬರುತ್ತಾರೆ. ಎಲ್ಲವನ್ನೂ ಒಂದರ ಮೇಲೊಂದರಂತೆ ಇಟ್ಟು ತೆಗೆದುಕೊಂಡು ಬರುವ ರೀತಿ ಅಚ್ಚರಿ ಮೂಡಿಸುತ್ತದೆ. ಸದ್ಯ ಉದ್ಯಮಿ ಆನಂದ್ ಮಹೀಂದ್ರಾ ಈ ವೀಡಿಯೋವನ್ನು ಹಂಚಿಕೊಂಡಿದ್ದು ಎಲ್ಲೆಡೆ ವೈರಲ್ ಆಗ್ತಿದೆ.
ಆನಂದ್ ಮಹೀಂದ್ರಾ ಅವರು ವಿದ್ಯಾರ್ಥಿ ಭವನದ ಪರಿಚಾರಕರಿಂದ ಎಷ್ಟು ಪ್ರಭಾವಿತರಾಗಿದ್ದಾರೆಂದರೆ, ಅವರ ಕೌಶಲ್ಯವನ್ನು ‘ಒಲಿಂಪಿಕ್ ಕ್ರೀಡೆ’ ಎಂದು ಗುರುತಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಹೀಂದ್ರಾ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಸರ್ವರ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 2.20 ನಿಮಿಷಗಳ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ ದೋಸೆಗಳನ್ನು ಮಾಡುತ್ತಿದ್ದಾನೆ ಮತ್ತು ಇನ್ನೊಬ್ಬ ವ್ಯಕ್ತಿ ತಟ್ಟೆಯಲ್ಲಿ ದೋಸೆಗಳನ್ನು ಸಂಗ್ರಹಿಸುತ್ತಿರುವುದನ್ನು ಕಾಣಬಹುದು. ಅವನು ಒಂದು ಕೈಯಲ್ಲಿ ಸುಮಾರು 15 ದೋಸೆ ಪ್ಲೇಟ್‌ಗಳನ್ನು ಇರಿಸುತ್ತಾನೆ, ಅಂಗೈಯಿಂದ ತೋಳಿನ ಕೊನೆಯ ವರೆಗೆ ದೋಸೆ ಪ್ಲೇಟ್ ಇಡುವುದನ್ನು ಕಾಣಬಹುದು. ನಂತರ ಅವನು ಟೇಬಲ್‌ಗಳವರೆಗೆ ನಡೆದು ಗ್ರಾಹಕರಿಗೆ (Customers) ದೋಸೆ ಪ್ಲೇಟ್ ನೀಡುತ್ತಾನೆ.
ದೇವರ ನಾಡಿನಲ್ಲೊಂದು ಸುಂದರ ಬುಡಕಟ್ಟು ಗ್ರಾಮ, ವೀಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ವೈರಲ್ ಆದ ವೀಡಿಯೋಗೆ ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್
ಸದ್ಯ ವೈರಲ್ ಆಗಿರೋ ವೀಡಿಯೋಗೆ ನಾನಾ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಟ್ವಿಟ್ಟರ್ ಬಳಕೆದಾರರು ನಿರ್ದಿಷ್ಟ ರೀತಿಯಲ್ಲಿ ದೋಸೆಗಳನ್ನು ಬಡಿಸಲು ಸಂಬಂಧಿಸಿದ ನೈರ್ಮಲ್ಯದ (Clean) ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಒಂದು ತಟ್ಟೆಯ ಕೆಳಭಾಗವು ಕೆಳಗಿನ ತಟ್ಟೆಯಲ್ಲಿ ದೋಸೆಯ ಮೇಲಿನ ಮೇಲ್ಮೈಯನ್ನು ಮುಟ್ಟುತ್ತದೆ ಎಂದು ಕೆಲವರು ಹೇಳಿದರು. ಇನ್ನು ಕೆಲವರು ವಿದ್ಯಾರ್ಥಿ ಭವನದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ವೀಡಿಯೊದ ಕಾಮೆಂಟ್ ವಿಭಾಗದಲ್ಲಿ, ಇನ್ನೊಬ್ಬ ಬಳಕೆದಾರರು ಎರಡೂ ಕೈಗಳಿಂದ ಬಿಯರ್ ಗ್ಲಾಸ್‌ಗಳ ಗೋಪುರವನ್ನು ಸಮತೋಲನಗೊಳಿಸುತ್ತಿರುವ ಹುಡುಗಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 'ಸರ್ ಎಲ್ಲಾ ಕಡೆ ಇಂಥಾ ಪ್ರತಿಭೆಗಳಿವೆ' ಎಂದು ಕಾಮೆಂಟಿಸಿದ್ದಾರೆ.