ಬಾಳೆ ಎಲೆ ಊಟ ಮಾಡಿ ಎಲೆ ಅಡಿಕೆ ತಿಂದ ಅಮೆರಿಕಾ ಅಂಬಾಸಿಡರ್‌: ದಕ್ಷಿಣ ಭಾರತದ ಊಟಕ್ಕೆ ಫುಲ್ ಫಿದಾ

 ಈಗ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿಯೂ ಕೂಡ ಭಾರತೀಯ ಆಹಾರ ಪರಂಪರೆಗೆ ಮನಸೋತಿದ್ದು, ದಕ್ಷಿಣ ಭಾರತ ಶೈಲಿಯ ಬಾಳೆ ಎಲೆ ಊಟವನ್ನು ಅವರು ಖುಷಿಯಿಂದ ತಿನ್ನುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

American Ambassador for India Garcetti impressed by South Indian Food, eating traditional Banana Leaf Meal Goes Viral akb

ಚೆನ್ನೈ: ಇತ್ತೀಚೆಗಷ್ಟೇ ಜಪಾನ್ ರಾಜತಾಂತ್ರಿಕ ಅಧಿಕಾರಿ ಹಿರೋಶಿ ಸುಜುಕಿ ತಮ್ಮ ಪತ್ನಿಯೊಂದಿಗೆ ಭಾರತದ ಬೀದಿ ಬದಿಯ ಆಹಾರಗಳಾದ ವಾಡಾಪಾವ್ ಮಿಲಾಸ್ ಪಾವ್ ಅನ್ನು ಮನಸಾರೆ ಇಷ್ಟಪಟ್ಟು ತಿನ್ನುತ್ತಿರುವ ವೀಡಿಯೋ ವೈರಲ್ ಆಗಿತ್ತು, ಇದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ಸೂಚಿಸಿದ್ದರು. ಈಗ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿಯೂ ಕೂಡ ಭಾರತೀಯ ಆಹಾರ ಪರಂಪರೆಗೆ ಮನಸೋತಿದ್ದು, ದಕ್ಷಿಣ ಭಾರತ ಶೈಲಿಯ ಬಾಳೆ ಎಲೆ ಊಟವನ್ನು ಅವರು ಖುಷಿಯಿಂದ ತಿನ್ನುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ದೆಹಲಿಯ ತಮಿಳುನಾಡು ಭವನದಲ್ಲಿ ಅಮೆರಿಕನ್ ಅಂಬಾಸಿಡರ್ ಎರಿಕ್ ಗರ್ಸೆಟ್ಟಿ, ಅವರು ದಕ್ಷಿಣ ಭಾರತ ಶೈಲಿಯ ಊಟ ಬಾಳೆ ಎಲೆ ಊಟ ಮಾಡಿದ್ದು, ಊಟದ ಕೊನೆಗೆ ಪಾನ್ ತಿನ್ನುತ್ತಿರುವ ವೀಡಿಯೋ ವೈರಲ್ ಆಗಿದೆ. ಸ್ವತಃ ಎರಿಕ್ ಅವರೇ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು,  ವಣಕಂ ಫ್ರಮ್ ತಮಿಳುನಾಡು ಭವನ ದೆಹಲಿ,  ಇವತ್ತು ನಾನು ಅದ್ಭುತವಾದ ದಕ್ಷಿಣ ಭಾರತ ಶೈಲಿಯ ಬಾಳೆ ಎಲೆ ಊಟವನ್ನು ಮಾಡಿದೆ. ದಕ್ಷಿಣ ಭಾರತ ಶೈಲಿಯ ಈ ವೈವಿಧ್ಯ ಆಹಾರ ಶೈಲಿಯಿಂದ ನಾನು ಬಹಳ ಖುಷಿಯಾದೆ. ಚೆನ್ನೈ ನೀನು ನನ್ನ ಹೃದಯದಲ್ಲಿರುವೆ ನಾನು ನಿನ್ನನ್ನು ಆದಷ್ಟು ಬೇಗ ಭೇಟಿಯಾಗುವೆ ಎಂದು ಅವರು ಬರೆದುಕೊಂಡಿದ್ದಾರೆ.

ಆಹಹಾ ಖಾರ ಖಾರ.... ಭಾರತೀಯ ಸ್ಟ್ರೀಟ್ ಫುಡ್‌ಗೆ ಮನಸೋತ ಜಪಾನ್ ರಾಯಭಾರಿ

2 ನಿಮಿಷಗಳ ವೀಡಿಯೋದಲ್ಲಿ ಎರಿಕ್ ಅವರು ದಕ್ಷಿಣ ಭಾರತ ಶೈಲಿಯ (South India Style) ಸಮೃದ್ಧ ವೈವಿಧ್ಯಮಯ ಬಾಳೆ ಎಲೆ ಊಟವನ್ನು ಬಹಳ ಅಚ್ಚರಿಯಿಂದ ಸೇವಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಅವರಿಗೆ ತಮಿಳು ಭವನದಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ಎಲೆಯಲ್ಲಿದ್ದ ಪ್ರತಿ ತಿನಿಸಿನ ಬಗ್ಗೆಯೂ ವಿವರ ನೀಡಿದ್ದಾರೆ. ವೀಡಿಯೋದಲ್ಲಿ ಹಿರಿಯರೊಬ್ಬರು ಕರ್ನಾಟಕದ ಆಹಾರವೂ ಸ್ವಲ್ಪ ಬದಲಾವಣೆಯೊಂದಿಗೆ ಇದೇ ರೀತಿ ಇರುತ್ತದೆ ಎಂದು ವೀಡಿಯೋದಲ್ಲಿ ಹೇಳುವುದನ್ನು ನೋಡಬಹುದಾಗಿದೆ. ಅಲ್ಲದೇ ಎರಿಕ್ ಅವರು ಪ್ರತಿಯೊಂದು ಆಹಾರದ ಬಗ್ಗೆ ಕುತೂಹಲದಿಂದ ಕೇಳುತ್ತಿರುವುದನ್ನು ಹಾಗೂ ಅಲ್ಲಿದ್ದ ಎಲ್ಲರ ಜೊತೆ ಮಾತನಾಡುತ್ತಾ ಆ ಕ್ಷಣವನ್ನು ಸಂಭ್ರಮಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲಿ ಸಂಪ್ರದಾಯಿಕ ಧಿರಿಸಿನಲ್ಲಿರುವ ದಕ್ಷಿಣ ಭಾರತೀಯ ಮಹಿಳೆಯರು ಸೇರಿದಂತೆ ಅನೇಕರು ಅಲ್ಲಿ ಎರಿಕ್ ಅವರಿಗೆ ದಕ್ಷಿಣ ಭಾರತ ಶೈಲಿಯ ಆಹಾರವನ್ನು ವಿವರಿಸುತ್ತಿರುವುದನ್ನು ನೋಡಬಹುದು. 

ಬೀದಿಬದಿ ಪಾನಿಪುರಿ ತಿಂದ ಕೊರಿಯನ್‌ ಯೂಟ್ಯೂಬರ್ ಏನು ಹೇಳಿದ ನೋಡಿ: ವೈರಲ್

2.25 ನಿಮಿಷದ ವೀಡಿಯೋದದಲ್ಲಿ ಮೊದಲಿಗೆ ಎರಿಕ್ ಅವವರಿಗೆ ಪಡ್ಡು, ಚಟ್ನಿ ವಡೆಯನ್ನು ಬಾಳೆ ಎಲೆಗೆ ಬಳಸಲಾಗುತ್ತದೆ. ನಂತರ ಒಂದೊಂದಾಗಿ ಎಲೆಯ ತುಂಬೆಲ್ಲಾ ಆಹಾರ ನೋಡಿದ ಎರಿಕ್ ಎಷ್ಟೊಂದು ಬಗೆ ಆಹಾರವಿದೆ ಎಂದು ಲೆಕ್ಕ ಹಾಕುತ್ತಾರೆ. ಸ್ಪೂನ್ ಇಲ್ಲ ಏನು ಇಲ್ಲ ಮೊದಲ ಬಾರಿಗೆ ಕೈಯಲ್ಲಿ ಬಾಳೆ ಎಲೆಯ ಊಟ ಮಾಡುತ್ತಿದ್ದೇನೆ. ಇದು ಸ್ವಾದಿಷ್ಟವಾಗಿದೆ. ಚೆನ್ನೈ (Chennai) ನನ್ನ ಹೃದಯದಲ್ಲಿರುತ್ತದೆ. ನಾ ಆದಷ್ಟು ಬೇಗ ಚೆನ್ನೈಗೆ ಬರುವೆ ಎಂದು ಅವರು ವಿಡಿಯೋ ಕೊನೆಗೆ ಹೇಳುತ್ತಾರೆ. ಊಟದ ನಂತರ ಅವರು ಪಾನ್ ಸೇವಿಸುವುದಲ್ಲದೇ ಟೀ ಕುಡಿಯುವ ದೃಶ್ಯವೂ ಮಜಾವಾಗಿದೆ. ಒಟ್ಟಿನಲ್ಲಿ ಭಾರತೀಯ ಆಹಾರ ಪರಂಪರೆಯೂ ನಮ್ಮ ದೇಶದಷ್ಟೇ ವೈವಿಧ್ಯಮಯವಾಗಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಜೊತೆಗೆ ಈ ಆಹಾರ ಶೈಲಿಯನ್ನು ತರಹೇವಾರಿ ತಿನಿಸುಗಳನ್ನು ಇಷ್ಟಪಡದ ಜನರಿಲ್ಲವೆಂದೇ ಹೇಳಬಹುದು. 

 

Latest Videos
Follow Us:
Download App:
  • android
  • ios