Asianet Suvarna News Asianet Suvarna News

ಯಾವಾಗ್ಲೂ ಚಾಕ್ಲೇಟ್‌ ಬೇಕೆಂದು ರಚ್ಚೆ ಹಿಡಿಯೋ ಮಕ್ಕಳಿಗೆ ಈ ಹೆಲ್ದೀ ಸ್ವೀಟ್ಸ್  ಕೊಡಿ

ಮಕ್ಕಳು (Children) ಯಾವಾಗ್ಲೂ ಸಿಹಿತಿಂಡಿಗಳನ್ನು ತಿನ್ನಲು ಹೆಚ್ಚು ಹಾತೊರೆಯುತ್ತಾರೆ. ಚಾಕ್ಲೇಟ್‌ (Chocolate), ಪೆಪ್ಪರ್‌ಮೆಂಟ್‌, ಕ್ಯಾಂಡಿ, ಐಸ್‌ಕ್ರೀಂ (Icecream) ಮೊದಲಾದವುಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಮಕ್ಕಳ ಆರೋಗ್ಯ Health)ಕ್ಕಿವು ಒಳ್ಳೆಯದಲ್ಲ. ಹೀಗಿದ್ದಾಗ ಮಕ್ಕಳಿಗೆ ಈ ಸಿಹಿತಿಂಡಿಗಳಿಗೆ ಪರ್ಯಾಯವಾಗಿ (Alternative) ಬೇರೇನು ಕೊಡಬಹುದು.

Alternate Sweet Delicacies For Your Children, Nutritionist Shares Tips Vin
Author
Bengaluru, First Published May 15, 2022, 3:54 PM IST

ಮಕ್ಕಳ (Children) ಲಾಲನೆ-ಪೋಷಣೆ ತುಂಬಾ ಸೂಕ್ಷ್ಯವಾದ ವಿಚಾರ. ಮಕ್ಕಳ ಆಟ-ಪಾಠ, ಆಹಾರ  (Food) ಎಲ್ಲಾ ವಿಚಾರದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಅದರಲ್ಲೂ ಮಕ್ಕಳು ಸರಿಯಾದ ಅಹಾರ ತಿನ್ನುತ್ತಿದ್ದಾರೆಯೇ ಎಂಬುದನ್ನು ಗಮನಿಸಿಕೊಳ್ಳುವುದು ಅತೀ ಮುಖ್ಯ. ಇಲ್ಲದಿದ್ದರೆ ಪೌಷ್ಠಿಕಾಂಶದ ಕೊರತೆಯಿಂದ ಬೆಳವಣಿಗೆಗೆ ಅಡ್ಡಿಯಾಗಬಹುದು. ಮಕ್ಕಳು ಯಾವಾಗ್ಲೂ ಸಿಹಿತಿಂಡಿಗಳನ್ನು (Sweets) ತಿನ್ನಲು ಹೆಚ್ಚು ಹಾತೊರೆಯುತ್ತಾರೆ. ದೋಸೆ, ಇಡ್ಲಿ ಮೊದಲಾದ ಆಹಾರಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಮಕ್ಕಳ ಈ ವಿಪರೀತ ಸಿಹಿ ತಿನ್ನುವ ಅಭ್ಯಾಸದಿಂದ ಪೋಷಕರು (Parents) ಹಲವಾರು ಬಾರಿ ತೊಂದರೆ ಅನುಭವಿಸುತ್ತಾರೆ. ಮಕ್ಕಳ ಆರೋಗ್ಯ (Health) ಹಾಳಾಗಬಹುದೇನೋ ಎಂದು ಭಯಪಡುತ್ತಾರೆ. ಅದು ನಿಜ ಕೂಡಾ.

ವಿಪರೀತವಾಗಿ ಚಾಕ್ಲೇಟ್ (Chocolate) ತಿನ್ನೋದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಚಾಕ್ಲೇಟ್‌, ಪೆಪ್ಪರ್‌ಮೆಂಟ್‌, ಕ್ಯಾಂಡಿ (Candy), ಐಸ್‌ಕ್ರೀಂ ಈ ರೀತಿಯ ಹಲವು ಸಿಹಿ ಪದಾರ್ಥಗಳು ಮಕ್ಕಳ ಆರೋಗ್ಯಕ್ಕೆ ಹಾನಿಕರವಾಗಿದೆ. ವಿಪರೀತಿ ಸಿಹಿತಿಂಡಿಗಳ ಸೇವನೆ ಹಲ್ಲಿನ ಹುಳುಕು, ಹೊಟ್ಟೆ ನೋವು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಪೌಷ್ಟಿಕತಜ್ಞೆ ಶ್ವೇತಾ ಷಾ, ನಿಮ್ಮ ಮಗು ಸಕ್ಕರೆ-ಸಿಹಿಗೊಳಿಸಿದ ಆಹಾರಗಳ ಮೇಲೆ ಹೆಚ್ಚು ಅವಲಂಬಿತವಾಗಿ ಬೆಳೆಯುವಾಗ ಇದು ದೇಹಗಳಿಗೆ ಅಗತ್ಯವಿರುವ ಪೌಷ್ಟಿಕಾಂಶವನ್ನು ಕಡಿಮೆಗೊಳಿಸುತ್ತದೆ ಎಂದು ಹೇಳುತ್ತಾರೆ. ಅಲ್ಲದೆ, ಹೆಚ್ಚು ಸಿಹಿ ಭಕ್ಷ್ಯಗಳನ್ನು ತಿನ್ನುವ ಮಕ್ಕಳು ಹಣ್ಣುಗಳು, ತರಕಾರಿಗಳು, ಧಾನ್ಯಗಳನ್ನು ಕಡಿಮೆ ಸೇವಿಸುತ್ತಾರೆ., ಬಾಲ್ಯದಲ್ಲಿ ಹೆಚ್ಚು ಸಕ್ಕರೆ ಸೇವನೆ ಮಕ್ಕಳು ವಯಸ್ಸಾದಂತೆ ಅನಾರೋಗ್ಯಕರ ಕಡುಬಯಕೆಗಳಿಗೆ ಕಾರಣವಾಗಬಹುದು. ಅನಾರೋಗ್ಯಕರ ಸ್ನ್ಯಾಕಿಂಗ್ ನಂತರದ ಹಂತದಲ್ಲಿ ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು.

ನಿಮ್ಮ ಮಗು ಸುಳ್ಳು ಹೇಳ್ತಿದೆಯಾ? ಹಾಗಿದ್ರೆ ಇದನ್ನೊಮ್ಮೆ ಓದಿ

ಮಕ್ಕಳು ತಮ್ಮ ಆಹಾರವನ್ನು ಆನಂದಿಸುವಾಗ ತಮ್ಮ ಪೌಷ್ಠಿಕಾಂಶದ ಪ್ರಮಾಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಆ ಸಿಹಿಭಕ್ಷ್ಯಗಳಿಗೆ ಪರ್ಯಾಯವಾಗಿ ಬೇರೆ ಆಹಾರ ನೀಡಬೇಕು ಎಂದು ಶ್ವೇತಾ ಷಾ ಸಲಹೆ ನೀಡಿದರು. ಪೌಷ್ಟಿಕತಜ್ಞರು ಸೂಚಿಸಿದ ಕೆಲವು ಪರ್ಯಾಯ ಸಿಹಿ ಭಕ್ಷ್ಯಗಳು ಇಲ್ಲಿವೆ.

ಮಕ್ಕಳಿಗಾಗಿ ಪೌಷ್ಟಿಕತಜ್ಞರು ಸೂಚಿಸಿರುವ ಸಿಹಿ ಭಕ್ಷ್ಯಗಳು

ತೆಂಗಿನ ಹಾಲು ಥಂಡೈ: ತೆಂಗಿನಕಾಯಿ ಮತ್ತು ಬೆಲ್ಲದಿಂದ ತಯಾರಿಸಿರುವ  ತೆಂಗಿನ ಹಾಲು ಥಂಡೈ ಮಕ್ಕಳ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದಕ್ಕೆ ಯಾವುದೇ ಕೃತಕ ಸಿಹಿ ಪದಾರ್ಥಗಳನ್ನು ಸೇರಿಸಬೇಕಾಗಿಲ್ಲ. ಹೀಗಾಗಿ ಇದು ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗುವುದಿಲ್ಲ. 

ಚಿಯಾ ಪುಡಿಂಗ್: ಸಾಮಾನ್ಯ ಬಿಳಿ ಸಕ್ಕರೆಯ ಬದಲು, ಚಿಯಾ ಬೀಜಗಳನ್ನು ಆರಿಸಿಕೊಳ್ಳಿ ಮತ್ತು ಪುಡಿಂಗ್‌ಗಾಗಿ ಮಾಗಿದ ಬಾಳೆಹಣ್ಣನ್ನು ಆರಿಸಿಕೊಳ್ಳಿ. ಈ ರೀತಿ ಮಾಡಿದ ಚಿಯಾ ಪುಡ್ಡಿಂಗ್ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.

ಗಂಡ-ಹೆಂಡ್ತಿ ಜಗಳದ ಮಧ್ಯೆ ಕೂಸು ಬಡವಾಗ್ಬಾರ್ದು ಅಂದ್ರೆ ಹೀಗೆ ಮಾಡಿ

ಕುಲ್ಫಿ: ಕುಲ್ಫಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ರೂ ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಮಕ್ಕಳಿಗೂ ಸಹ ಕುಲ್ಫಿ ತಿನ್ನುವುದು ತುಂಬಾನೇ ಇಷ್ಟ. ಮಕ್ಕಳಿಗೆ ಕುಲ್ಫೀ ಕೊಡೋದೆನೋ ಸರಿ. ಆದರೆ ಇದನ್ನು ತಯಾರಿಸುವಾಗ ಹಾಲಿನ ಬದಲು ತೆಂಗಿನ ಹಾಲು ಬಳಸಿದರೆ ಇನ್ನೂ ಒಳ್ಳೆಯದು. ಹಾಲು ಕುಡಿಯುವುದರಿಂದ ಮಕ್ಕಳಲ್ಲಿ ಕಫದ ಸಮಸ್ಯೆ ಉಂಟಾಗುತ್ತದೆ. ತೆಂಗಿನಹಾಲು ಬಳಸೋದ್ರಿಂದ ಇಂಥಾ ಸಮಸ್ಯೆ ಇರೋದಿಲ್ಲ

ಸಿಹಿ ಆಲೂಗಡ್ಡೆ ಬ್ರೌನಿ: ಮಣ್ಣಿನಡಿ ಬೆಳೆಯುವ ಆಲೂಗಡ್ಡೆ ಮಕ್ಕಳ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದು ಮಕ್ಕಳ ದೇಹಕ್ಕೆ ಅಗತ್ಯವಾಗಿರುವ ಪೌಷ್ಠಿಕಾಂಶವನ್ನು ಒದಗಿಸುತ್ತದೆ. ಹೀಗಾಗಿ ಸಿಹಿ ತಿಂಡಿ ಇಷ್ಟಪಡುವ ಮಕ್ಕಳಿಗೆ ಸಿಹಿ ಆಲೂಗಡ್ಡೆ ಬ್ರೌನಿ ತಯಾರಿಸಿ ಕೊಡಬಹುದು. ಸಿಹಿ ಆಲೂಗಡ್ಡೆ, ಬೆಲ್ಲ, ಕೋಕೋ ಬೀಜವನ್ನು ಬಳಸಿ ಸಿಹಿ ಆಲೂಗಡ್ಡೆ ಬ್ರೌನಿ ತಯಾರಿಸಬಹುದು.ಮಕ್ಕಳ ಸಿಹಿತಿಂಡಿ ತಯಾರಿಸುವಾಗ ಯಾವಾಗಲೂ ಸಕ್ಕರೆ ಬಳಸುವ ಬದಲು ಬೆಲ್ಲವನ್ನು ಬಳಸುವಂತೆ ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ.

Follow Us:
Download App:
  • android
  • ios