Asianet Suvarna News Asianet Suvarna News

ಗರ್ಭಿಣಿ ಅದಿತಿ ಪ್ರಭುದೇವ ಅಮ್ಮ ಕಲಿಸಿಕೊಟ್ರು ಮುತ್ತಜ್ಜಿಯ ರೆಸಿಪಿ ಸೂಪರ್​, ಟೇಸ್ಟಿ 'ಮಾದಲಿ'!

ನಟಿ ಅದಿತಿ ಪ್ರಭುದೇವ ಅವರ ಅಮ್ಮ ಮಾದಲಿ ಎಂಬ ಉತ್ತರ ಕರ್ನಾಟಕದ ಟೇಸ್ಟಿ ರೆಸಿಪಿ ಹೇಳಿಕೊಟ್ಟಿದ್ದಾರೆ. ಅದರ ವಿಡಿಯೋ ಇಲ್ಲಿದೆ...
 

Actress Aditi Prabhudevas mother taught tasty recipe from North Karnataka  Madali suc
Author
First Published Feb 2, 2024, 3:48 PM IST

 ಇತ್ತೀಚೆಗಷ್ಟೇ ಅಮ್ಮ ಆಗ್ತಿರೋ ಗುಡ್​ನ್ಯೂಸ್​ ಕೊಟ್ಟಿದ್ದರು ನಟಿ ಅದಿತಿ ಪ್ರಭುದೇವ.  ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ನಟಿ ಅದಿತಿ ಅವರು ಸದ್ಯ ಅಲೆಕ್ಸಾ ಚಿತ್ರದ ಖುಷಿಯಲ್ಲಿದ್ದಾರೆ.  ಅಂದಹಾಗೆ, ಸ್ಯಾಂಡಲ್​ವುಡ್​ ನಟಿ  ಅದಿತಿ ಪ್ರಭುದೇವ  , ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಇದೀಗ ಅವರು ಅಮ್ಮ ಆಗುತ್ತಿದ್ದು, ಈಚೆಗಷ್ಟೇ ತಮ್ಮ ಕೊನೆಯ ಸಿಂಗಲ್​  ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಇದೀಗ ಅದಿತಿ ಅವರ ಅಮ್ಮ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಗರ್ಭಿಣಿ ಮಗಳಿಗೆ ಸೂಪರ್​ ಟೇಸ್ಟಿಯಾಗಿರುವ ಉತ್ತರ ಕರ್ನಾಟಕ ಶೈಲಿಯ ಮಾದಲಿ ಮಾಡಿಕೊಟ್ಟಿದ್ದಾರೆ. ಅದಿತಿ ಅವರ ಅಮ್ಮನಿಗೆ ಅವರ ಅಜ್ಜಿ ಅಂದರೆ ಅದಿತಿಯವರ ಮುತ್ತಜ್ಜಿ ಹೇಳಿಕೊಟ್ಟ ರೆಸಿಪಿ ಇದು. ಮುತ್ತಜ್ಜಿಯಿಂದ ಅಜ್ಜಿಗೆ, ಅಜ್ಜಿಯಿಂದ ಅಮ್ಮನಿಗೆ ಹಾಗೂ ಅಮ್ಮ ನನಗೆ ಹೇಳಿಕೊಡ್ತಿರೋ ರೆಸಿಪಿ ಎನ್ನುತ್ತಲೇ ನಟಿ, ಇದನ್ನು ಮಾಡುವ ಬಗೆ ತೋರಿಸಿದ್ದಾರೆ. ಅತ್ಯಂತ ಕಡಿಮೆ ಸಾಮಗ್ರಿ ಬಳಸಿ ಇದನ್ನು ಮಾಡಬಹುದು. 

ಅದಿತಿ ಪ್ರಭುದೇವ ಸಿಂಗಲ್ಲಾಗಿ ಆಚರಿಸಿಕೊಂಡ ​ ಕೊನೆ ಹುಟ್ಟುಹಬ್ಬ ಹೇಗಿತ್ತು? ವಿಡಿಯೋ ಶೇರ್​ ಮಾಡಿದ ನಟಿ

ಮಾದಲಿ ಮಾಡಲು ಬೇಕಿರುವ ಸಾಮಗ್ರಿ ಹಾಗೂ ಮಾಡುವ ವಿಧಾನ ಹೀಗಿದೆ: 
ಒಂದು ಬಟ್ಟಲು ಗೋಧಿ ಹಿಟ್ಟು, ಒಂದು ಬಟ್ಟಲು ಹಸಿ ಕಡಲೆ ಹಿಟ್ಟು. ಎರಡೂ ಸಮ ಪ್ರಮಾಣದಲ್ಲಿ ಇರಬೇಕು. ಬೆಲ್ಲ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದು. ಸ್ವಲ್ಪ ಏಲಕ್ಕಿ ಪುಡಿ, ಸ್ವಲ್ಪ ಉಪ್ಪು, ಸ್ವಲ್ಪ ಎಣ್ಣೆ. ಎಲ್ಲವನ್ನೂ ಮಿಕ್ಸ್​ ಮಾಡಬೇಕು. ಎಲ್ಲವನ್ನೂ ಗಟ್ಟಿ ಕಲಿಸಿಕೊಳ್ಳಬೇಕು. ಚಪಾತಿಗಿಂತ ಸ್ವಲ್ಪ ದಪ್ಪ ಇರಬೇಕು. ಚಪಾತಿ ರೀತಿ ಲಟ್ಟಿಸಿಕೊಳ್ಳಬೇಕು. ಮೀಡಿಯಂ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಹೊತ್ತಿಸಬಾರದು. ಬಿಸಿ ಇದ್ದಾಗನೇ ಪುಟ್ಟಪುಟ್ಟದಾಗಿ ತುಂಡು ಮಾಡಿಕೊಳ್ಳಬೇಕು. ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಜರಡಿ ಹಿಡಿದುಕೊಳ್ಳಬೇಕು. ಪೌಡರ್​ಗೆ ಪುಡಿ ಮಾಡಿದ ಬೆಲ್ಲ ಮಿಕ್ಸ್ ಮಾಡಬೇಕು. ಜೊತೆಗೆ ಏಲಕ್ಕಿ ಪುಡಿ ಹಾಕಬೇಕು. ಗೋಡಂಬಿ, ಒಣ ಕೊಬ್ಬರಿ ಎಲ್ಲಾ ಹಾಕಿದರೆ ಇನ್ನೂ ಟೇಸ್ಟಿ ಇರುತ್ತದೆ. ಆದರೆ ಬೇಗ ಖಾಲಿ ಮಾಡಬೇಕಾಗುತ್ತದೆ. ಪ್ಲೇನ್​ ಮಾಡಿಕೊಂಡರೆ ತುಂಬಾ ದಿನ ಬರುತ್ತದೆ. ಮತ್ತೆ ಮಿಕ್ಸಿಯಲ್ಲಿ ಗ್ರ್ಯಾಂಡ್​ ಮಾಡಬೇಕು.  ಆರಲು ಬಿಟ್ಟು, ಬಾಕ್ಸ್​ನಲ್ಲಿ ಹಾಕಿಕೊಳ್ಳಬೇಕು. 10 ದಿನಗಳವರೆಗೆ ತಿನ್ನಬಹುದು. ನೀರು ಹಾಕಿಕೊಂಡು, ತುಪ್ಪು ಹಾಕಿಕೊಂಡು, ಹಾಲು ಹಾಕಿಕೊಂಡು ತಿನ್ನಬಹುದು. 

ಅಂದಹಾಗೆ ಅದಿತಿ ಅವರು ದಾವಣಗೆರೆ ಮೂಲದವರು. ಅಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ಸ್‌ ಮಾಡಿದ್ದಾರೆ.  ನಿರೂಪಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ನಟಿ,  ‘ಗುಂಡ್ಯಾನ್ ಹೆಂಡ್ತಿ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು.  2017 ರಲ್ಲಿ ನಟ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದಲ್ಲಿ ನಟಿಸುವ ಮೂಲಕ ಬಿಗ್‌ ಸ್ಕ್ರೀನ್‌ಗೆ ಪದಾರ್ಪಣೆ ಮಾಡಿದರು.  ಆದಿತಿ ಪ್ರಭುದೇವ 2022ರ ನವೆಂಬರ್ 28ರಂದು ಉದ್ಯಮಿ ಯಶಸ್ (ಯಶಸ್ವಿ) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ತಮ್ಮ ಜೀವನದ ಅಪರೂಪದ ವ್ಯಕ್ತಿಯನ್ನು ಪರಿಚಯಿಸಿದ ಬಿಗ್​ಬಾಸ್​ ಸಂಗೀತಾ ಶೃಂಗೇರಿ

Follow Us:
Download App:
  • android
  • ios