Asianet Suvarna News Asianet Suvarna News

ಅದಿತಿ ಪ್ರಭುದೇವ ಸಿಂಗಲ್ಲಾಗಿ ಆಚರಿಸಿಕೊಂಡ ​ ಕೊನೆ ಹುಟ್ಟುಹಬ್ಬ ಹೇಗಿತ್ತು? ವಿಡಿಯೋ ಶೇರ್​ ಮಾಡಿದ ನಟಿ

ಗರ್ಭಿಣಿಯಾಗಿರುವ ನಟಿ ಅದಿತಿ ಪ್ರಭುದೇವ ಅವರು ಈಚೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅದರ ವಿಡಿಯೋ  ಶೇರ್​ ಮಾಡಿದ್ದಾರೆ. 
 

Pregnant actress Aditi Prabhudeva recently celebrated her birthday and shared a video suc
Author
First Published Jan 17, 2024, 11:20 AM IST

 ಇದೇ ಜನವರಿ 13 ಸ್ಯಾಂಡಲ್​ವುಡ್​​ ನಟಿ ಅದಿತಿ ಪ್ರಭುದೇವ ಅವರಿಗೆ 30ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡರು. ಇತ್ತೀಚೆಗಷ್ಟೇ ಅಮ್ಮ ಆಗ್ತಿರೋ ಗುಡ್​ನ್ಯೂಸ್​ ಕೊಟ್ಟಿದ್ದ ನಟಿಗೆ ಪತಿ ಯಶಸ್​ ಅವರು ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ನಟಿ ಅದಿತಿ ಅವರು ಸದ್ಯ ಅಲೆಕ್ಸಾ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದೇ  ಜನವರಿ 26ರಂದು ಚಿತ್ರ ಬಿಡುಗಡೆಯಾಗಲಿದೆ.  ಅಂದಹಾಗೆ, ಸ್ಯಾಂಡಲ್​ವುಡ್​ ನಟಿ  ಅದಿತಿ ಪ್ರಭುದೇವ  , ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಇದೀಗ ಅವರು ಅಮ್ಮ ಆಗುತ್ತಿದ್ದು, ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
 
ಈ ಹುಟ್ಟುಹಬ್ಬದ ದಿನ ಹೇಗಿತ್ತು ಸೆಲೆಬ್ರೇಷನ್​ ಎಂಬ ಬಗ್ಗೆ ನಟಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ತಾವು ಅಮ್ಮನಾಗುತ್ತಿರುವ ಹಿನ್ನೆಲೆಯಲ್ಲಿ ಸಿಂಗಲ್​ ಆಗಿ ಆಚರಿಸಿಕೊಳ್ತಿರೋ ಕೊನೆಯ ಹುಟ್ಟುಹಬ್ಬ ಎನ್ನುತ್ತಲೇ ಇದನ್ನು ವಿಶೇಷವಾಗಿ ಆಚರಿಸಿಕೊಳ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಕಾಟನ್​ ಫ್ರಾಕ್​ಗಳನ್ನು ಅಮ್ಮ ನೀಡಿದ್ದು, ಈ ಗಿಫ್ಟ್​ ನೋಡಿ ನಟಿ ತುಂಬಾ ಖುಷಿ ಪಟ್ಟುಕೊಂಡಿದ್ದಾರೆ. ರಸ್ತೆಗಳಲ್ಲಿ ತುಂಬು ಗರ್ಭಿಣಿಯರು ಕೆಲಸ ಮಾಡುವುದನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡಿರುವ ನಟಿ, ಅವರಿಗೆ ಹೋಲಿಸಿದರೆ ತಾವು ತುಂಬಾ ಕನ್​ಫರ್ಟ್​ ಎನ್ನಿಸುತ್ತದೆ ಎಂದಿದ್ದಾರೆ. 

ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್​

ಅಂದಹಾಗೆ ಅದಿತಿ ಅವರು ದಾವಣಗೆರೆ ಮೂಲದವರು. ಅಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ಸ್‌ ಮಾಡಿದ್ದಾರೆ.  ನಿರೂಪಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದ ನಟಿ,  ‘ಗುಂಡ್ಯಾನ್ ಹೆಂಡ್ತಿ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು.  2017 ರಲ್ಲಿ ನಟ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದಲ್ಲಿ ನಟಿಸುವ ಮೂಲಕ ಬಿಗ್‌ ಸ್ಕ್ರೀನ್‌ಗೆ ಪದಾರ್ಪಣೆ ಮಾಡಿದರು.  ಆದಿತಿ ಪ್ರಭುದೇವ 2022ರ ನವೆಂಬರ್ 28ರಂದು ಉದ್ಯಮಿ ಯಶಸ್ (ಯಶಸ್ವಿ) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಇತ್ತೀಚೆಗೆ ಅಮ್ಮ ಆಗುವ ವಿಷಯ ಶೇರ್​ ಮಾಡಿಕೊಂಡಿದ್ದ ನಟಿ, ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ "ಅಮ್ಮ" ಎಂದು ಬರೆದುಕೊಂಡಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ನಟಿ, ಬ್ಯೂಟಿ, ಅಡುಗೆ ಮುಂತಾದವುಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೇ ವಿಡಿಯೋದಲ್ಲಿ ಅದಿತಿ ಅವರು, ಹಲವು ಬ್ಯೂಟಿ ಬ್ರಾಂಡ್​ಗಳ ಪ್ರಚಾರವನ್ನೂ ಮಾಡಿದ್ದಾರೆ. ಜೊತೆಗೆ ಪನ್ನೀರ್​ ಬಟರ್​ ಮಸಾಲಾ ರೆಸಿಪಿ ಶೇರ್​  ಮಾಡಿಕೊಂಡಿದ್ದಾರೆ. 

ಹೊಸ ವರ್ಷಕ್ಕೆ ನಟಿ ಅದಿತಿ ಕಲಿಸಿಕೊಟ್ರು ಸುಲಭದಲ್ಲಿ ಮಾಡುವ ಬನಾನಾ ವಾಲ್​ನಟ್​ ಕೇಕ್​

Follow Us:
Download App:
  • android
  • ios