ಹೊಸ ವರ್ಷಕ್ಕೆ ನಟಿ ಅದಿತಿ ಕಲಿಸಿಕೊಟ್ರು ಸುಲಭದಲ್ಲಿ ಮಾಡುವ ಬನಾನಾ ವಾಲ್ನಟ್ ಕೇಕ್
ಹೊಸ ವರ್ಷಕ್ಕೆ ನಟಿ ಅದಿತಿ ಕಲಿಸಿಕೊಟ್ರು ಸುಲಭದಲ್ಲಿ ಮಾಡುವ ಬನಾನಾ ವಾಲ್ನಟ್ ಕೇಕ್. ಅದನ್ನು ತಯಾರಿಸುವುದು ಹೇಗೆ? ಇಲ್ಲಿದೆ ವಿಡಿಯೋ
ಇನ್ನೇನು ಹೊಸವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ವಿಧ ವಿಧ ರೀತಿಯಲ್ಲಿ, ಹೊಸ ವರ್ಷದ ಸಂಭ್ರಮ ಆಚರಣೆ ಮಾಡಲು ಸಿದ್ಧತೆ ನಡೆಯುತ್ತಿದೆ. ಹಲವರು ಸ್ವೀಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಇದು ಕ್ರೈಸ್ತರ ಆರಂಭದ ದಿನವಾಗಿರುವ ಕಾರಣ, ಕೇಕ್ಗೆ ಭರ್ಜರಿ ಡಿಮ್ಯಾಂಡ್. ಇದೀಗ ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಅವರು ಬಾಳೆಹಣ್ಣು ವಾಲ್ನಟ್ ಕೇಕ್ ಮಾಡುವುದನ್ನು ಕಲಿಸಿಕೊಟ್ಟಿದ್ದಾರೆ.ಮನೆಯಲ್ಲಿಯೇ ಸುಲಭವಾಗಿ ಅದನ್ನು ಹೇಗೆ ತಯಾರು ಮಾಡಬಹುದು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.
ಮೊದಲಿಗೆ ಮೌಲ್ಡ್ಗೆ ಬೆಣ್ಣೆ ಸವರಬೇಕು. ನಂತರ ಸ್ವಲ್ಪ ಮೈದಾ ಹಿಟ್ಟು ಸವರಬೇಕು. ನಾಲ್ಕು ಪೂರ್ತಿ ಹಣ್ಣನ್ನು ಸ್ಮ್ಯಾಷ್ ಮಾಡಿಕೊಳ್ಳಬೇಕು. ಇದಕ್ಕೆ ಸಕ್ಕರೆ ಪೌಡರ್ ಹಾಕಬೇಕು. ಇನ್ನೊಂದು ಬ್ರೌನ್ ಶುಗರ್ ಇದ್ದರೆ ಇಲ್ಲದಿದ್ದರೆ ಸಕ್ಕರೆ ಪೌಡರ್ ಹಾಕಿಕೊಳ್ಳಬೇಕು. ಇದಕ್ಕೆ ಬೆಣ್ಣೆ ಹಾಕಬೇಕು. ಸಮಾಧಾನವಾಗಿ ಮಿಕ್ಸ್ ಮಾಡಬೇಕು. ಮೊಟ್ಟೆ ಬೇಕು ಎಂದರೆ ಈಗ ಎರಡು ಮೊಟ್ಟೆ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಸ್ಕಿಪ್ ಮಾಡಬಹುದು. ನಂತರ ಇದಕ್ಕೆ ಬಾದಾಮಿಯನ್ನು ಚಿಕ್ಕ ಉರಿಯಲ್ಲಿ ಹುರಿದು ಪೌಡರ್ ಮಾಡಿಕೊಳ್ಳಬೇಕು. ಅದನ್ನು ಈಗ ಹಾಕಿಕೊಳ್ಳಬೇಕು. ಒಂದು ಬಟ್ಟಲು ಮೈದಾ ಹಾಕಬೇಕು. ನಂತರ ಕಾಲು ಚಮಚ ಬೇಕಿಂಗ್ ಸೋಡಾ, ಒಂದು ಚಮಚ ಬೇಕಿಂಗ್ ಪೌಡರ್ ಹಾಕಿಮಿಕ್ಸ್ ಮಾಡಬೇಕು. ನಿಮ್ಮ ಇಷ್ಟದ ಎಸೆನ್ಸ್ ಒಂದು ಚಮಚ ಹಾಕಬೇಕು. ಮಿಕ್ಸರ್ ಗಟ್ಟಿ ಎನಿಸಿದರೆ ಹಾಲನ್ನು ಸ್ವಲ್ಪ ಬಳಸಬಹುದು. ಕೊನೆಯಲ್ಲಿ ಹುರಿದುಕೊಂಡಿರುವ ವಾಲ್ನಟ್ ತುಂಡುಗಳನ್ನು ಹಾಕಿಕೊಂಡು ನೀಟಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮೌಲ್ಡ್ಗೆ ಟ್ರಾನ್ಸ್ಫರ್ ಮಾಡಿಕೊಳ್ಳಬೇಕು. 180 5-10 ನಿಮಿಷ ಪ್ರೀ ಹೀಟ್ ಸೇರಿಸಿ ಒಂದು ಗಂಟೆ ಇರಬೇಕು. 15-20 ಆದ ಮೇಲೆ ನೋಡುತ್ತಾ ಇರಬೇಕು. ಇಷ್ಟು ಮಾಡಿದರೆ ರುಚಿಕರವಾಗಿ ಬನಾನಾ ವಾಲ್ನಟ್ ಕೇಕ್ ರೆಡಿ.
ಅತಿ ಸುಲಭದಲ್ಲಿ ಫಟಾಫಟ್ ಟೇಸ್ಟಿ ಟೇಸ್ಟಿ ಬಟಾಣಿ ಪಲಾವು ಮಾಡೋದ್ಹೇಗೆ ಅಂತ ತೋರಿಸಿಕೊಟ್ಟ ಅದಿತಿ ಪ್ರಭುದೇವ
ಅಂದಹಾಗೆ, ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ , ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದಾಗಲೇ ಹಲವಾರು ರೀತಿಯ ಟಿಪ್ಸ್ ಕೊಟ್ಟಿದ್ದು, ಕೇಕ್ ಮಾಡುವುದನ್ನು ತಿಳಿಸಿಕೊಟ್ಟಿದ್ದಾರೆ.
ನುಗ್ಗೆ ಸೊಪ್ಪಿನ ಟೇಸ್ಟಿ, ಆರೋಗ್ಯಕರ ಸೂಪ್ ಮಾಡೋದನ್ನ ನಟಿ ಅದಿತಿ ಹೇಳಿಕೊಟ್ಟಿದ್ದಾರೆ ನೋಡಿ...