ಅತಿ ಸುಲಭದಲ್ಲಿ ಫಟಾಫಟ್​ ಟೇಸ್ಟಿ ಟೇಸ್ಟಿ ಬಟಾಣಿ ಪಲಾವು ಮಾಡೋದ್ಹೇಗೆ ಅಂತ ತೋರಿಸಿಕೊಟ್ಟ ಅದಿತಿ ಪ್ರಭುದೇವ

ಅತಿ ಸುಲಭದಲ್ಲಿ ಫಟಾಫಟ್​ ಬಟಾಣಿ ಪಲಾವು ಮಾಡೋದ್ಹೇಗೆ ಅಂತ ತೋರಿಸಿಕೊಟ್ಟ ಅದಿತಿ ಪ್ರಭುದೇವ. ಇಲ್ಲಿದೆ ನೋಡಿ ರೆಸಿಪಿ... 
 

Aditi Prabhudeva showed how to make  Peas Palavu very easily suc

ಸ್ಯಾಂಡಲ್​ವುಡ್​ ನಟಿ  ಅದಿತಿ ಪ್ರಭುದೇವ  , ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.  

ಇದೀಗ ಅವರ ಬಟಾಣಿ ಕಾಳಿನ ಪಲಾವ್​ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ. ಅದು ಹೀಗಿದೆ ನೋಡಿ... 

ನುಗ್ಗೆ ಸೊಪ್ಪಿನ ಟೇಸ್ಟಿ, ಆರೋಗ್ಯಕರ ಸೂಪ್​ ಮಾಡೋದನ್ನ ನಟಿ ಅದಿತಿ ಹೇಳಿಕೊಟ್ಟಿದ್ದಾರೆ ನೋಡಿ...

ಬೇಕಾಗಿರುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನ ಹೀಗಿದೆ: ಬಾಸ್ಮತಿ ಅಕ್ಕಿ ಅರ್ಧ ಗಂಟೆ ಮುಂಚೆ ನೆನೆಸಿ ಇಟ್ಟುಕೊಳ್ಳಬೇಕು. ಪಲಾವು ಎಲೆ, ಸೋಂಪುಕಾಳು, ಚಕ್ಕೆ, ಹೂವು, ಲವಂಗ, ಜೀರಿಗೆ, ಕೊತ್ತಂಬರಿ, ಪುದೀನಾ, ಮೆಣಸಿನಕಾಯಿ, ಉಪ್ಪು, ಮಸಾಲೆ ಪೌಡರ್​, ಆಲೂಗಡ್ಡೆ, ಹೆಚ್ಚಿಟ್ಟುಕೊಂಡ ಸಿಹಿಗುಂಬಳ ಕಾಯಿ, ಆಲೂಗಡ್ಡೆ ಮತ್ತು ಬಟಾಣಿ ಇವಿಷ್ಟು ಬಟಾಣಿ ಪಲಾವ್​ ಮಾಡಲು ಬೇಕಿರುವ ಸಾಮಗ್ರಿಗಳು. 
ಮೊದಲಿಗೆ ಮಿಕ್ಸಿಗೆ ಕೊತ್ತಂಬರಿ, ಪುದಿನಾ ಮತ್ತು ಹಸಿಮೆಣಸಿನ ಕಾಯಿ ಹಾಕಿ ಮಿಕ್ಸ್​ ಮಾಡಿಕೊಳ್ಳಬೇಕು. ಸ್ವಲ್ಪ ನೀರು ಹಾಕಬೇಕು. ಕುಕ್ಕರ್​ಗೆ ತುಪ್ಪ, ಎಲ್ಲಾ ಮಸಾಲೆಗಳನ್ನು ಒಂದೇ ಸಲ ಹಾಕಿ ಫ್ರೈ ಮಾಡಿಕೊಳ್ಳಬೇಕು. ದ್ರಾಕ್ಷಿ, ಗೋಡಂಬಿ ಬೇಕಾದ್ರೆ ಬಳಸಬಹುದು. 
ದೊಡ್ಡದಾಗಿ ಹೆಚ್ಚಿರುವ ಈರುಳ್ಳಿ ಹಾಕಿ ಫ್ರೈ ಮಾಡಬೇಕು. ನಂತರ ಹೆಚ್ಚಿಕೊಂಡಿರುವ ಆಲೂಗಡ್ಡೆ ಹಾಗೂ ಸಿಹಿಗುಂಬಳಕಾಯಿ ಹಾಕಬೇಕು. ಫ್ರೈ ಆದ ಮೇಲೆ ಬಟಾಣಿ ಹಾಕಬೇಕು. 2 ನಿಮಿಷ ಫ್ರೈ ಮಾಡಬೇಕು. ಬಿರಿಯಾನಿ ಪೌಡರ್​ ಹಾಕಬೇಕು. ರುಬ್ಬಿಕೊಂಡ ಮಸಾಲೆ ಹಾಕಿಕೊಳ್ಳಬೇಕು, ಚೆನ್ನಾಗಿ ಮಿಕ್ಸ್​ ಮಾಡಬೇಕು. ಎರಡು ನಿಮಿಷ ಬೆಂದ ಮೇಲೆ, ನೆನೆ ಹಾಕಿದ ಬಾಸ್ಮತಿ ರೈಸ್​ ಹಾಕಬೇಕು. ಒಂದು ಲೋಟ ಅಕ್ಕಿಗೆ ಒಂದೂವರೆ ಲೋಟ ನೀರು ಪ್ರಮಾಣದಲ್ಲಿ ಹಾಕಬೇಕು. ಎರಡು ಚಮಚ ನಿಂಬೆ ರಸ ಹಾಕಬೇಕು. ಕುಕ್ಕರ್​ 10 ನಿಮಿಷ ಆದ ಮೇಲೆ ಆಫ್​ ಮಾಡಿ ಅದನ್ನು ಕೂಲ್​ ಮಾಡಿ ತೆಗೆದರೆ ಸಾಕು. 

ಸುಗಂಧ ದ್ರವ್ಯ ಅಲರ್ಜಿಯೆ? ಮನೆಯಲ್ಲೇ 'ಬಾಡಿ ಮಿಸ್ಟ್' ತಯಾರಿ ಹೇಳಿಕೊಟ್ಟಿದ್ದಾರೆ ನಟಿ ಅದಿತಿ ಪ್ರಭುದೇವ

Latest Videos
Follow Us:
Download App:
  • android
  • ios