ಅಬ್ಬಬ್ಬಾ..ಮೂರೇ ನಿಮಿಷದಲ್ಲಿ ಕೆಜಿಗಟ್ಟಲೆ ಮೊಸರು ತಿಂದು ದಾಖಲೆ ಬರೆದ ವ್ಯಕ್ತಿ!
ಸಾಮಾನ್ಯವಾಗಿ ಹೊಟ್ಟೆ ತುಂಬೋಕೆ ಎಲ್ಲರೂ ಆಹಾರ ಸೇವಿಸ್ತಾರೆ. ಆದ್ರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬ್ಲಾಗ್ ಮಾಡೋಕೆಂದೇ, ಬಹುಮಾನ ಗೆಲ್ಲೋಕೆ ಅಂತಾನೆ ರಾಶಿ ರಾಶಿ ಆಹಾರವನ್ನೇ ತಿನ್ನೋರಿದ್ದಾರೆ. ಹಾಗೆಯೇ ಬಿಹಾರದಲ್ಲೊಂದು ಒಂದು ವಿಶಿಷ್ಟ ಸ್ಪರ್ಧೆ ನಡೆಯುತ್ತಿದೆ. ಅದುವೇ ಮೊಸರು ತಿನ್ನೋ ಸ್ಪರ್ಧೆ
ಮೊಸರನ್ನು ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ. ಮಧ್ಯಾಹ್ನದ ಊಟದ ಕೊನೆಯಲ್ಲಿ ಅನ್ನಕ್ಕೆ ಮೊಸರು ಹಾಕಿಕೊಂಡು ತಿನ್ನುವವರು ಸಾಕಷ್ಟು ಜನರಿದ್ದಾರೆ. ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಜನರ ಮನೆಯಲ್ಲಿ ಮೊಸರು ಇದ್ದೇ ಇರುತ್ತದೆ. ಆಯುರ್ವೇದ (Ayurveda) ದಲ್ಲೂ ಮೊಸರಿಗೆ ಹೆಚ್ಚು ಪ್ರಾಶಸ್ತ್ಯವಿದೆ. ಮೊಸರು ಅಜೀರ್ಣ ಅಥವಾ ಅತಿಸಾರ (Diarrhea) ಕ್ಕೆ ಉತ್ತಮ ಮದ್ದು ಎಂದು ತಜ್ಞರು ಹೇಳ್ತಾರೆ. ಮೊಸರಿನಲ್ಲಿ ಪ್ರೋಬಯಾಟಿಕ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮೊಸರು ಉಪ್ಪು ಹಾಗೂ ಸಕ್ಕರೆಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ. ಆದ್ರೆ ಮೊಸರು (Curd)ತಿನ್ನೋಕು ಒಂದು ಸ್ಪರ್ಧೆ ಇಟ್ಟರೆ ಹೇಗಿರುತ್ತೆ ?
ಬಿಹಾರದಲ್ಲಿ ನಡೆಯುತ್ತೆ ಮೊಸರು ತಿನ್ನೋ ಸ್ಪರ್ಧೆ
ಹಸಿವಾದ್ರೆ ತಿನ್ನೋದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ರೂಢಿ. ಇದಲ್ಲದೆ ಬಾಯಿ ಚಪಲಕ್ಕೂ ತಿನ್ನೋರಿದ್ದಾರೆ. ಅದಲ್ಲದೆ ಫುಡ್ ಬ್ಲಾಗಿಂಗ್, ಯೂಟ್ಯೂಬ್ ಚಾನೆಲ್ ಅಂತ ವೀಡಿಯೋಗಾಗಿ ತಿನ್ನೋರು ಇದ್ದಾರೆ. ಇದಲ್ಲದೆಯೂ ಆಹಾರ ತಿನ್ನೋ ಸ್ಪರ್ಧೆ ಆಗಿಂದಾಗೆ ನಡೀತಾನೆ ಇರುತ್ತೆ. ಬಿರಿಯಾನಿ ತಿನ್ನೋ ಸ್ಪರ್ಧೆ (Competition), ಜ್ಯೂಸ್ ಕುಡಿಯೋ ಸ್ಪರ್ಧೆ, ಸಮೋಸಾ, ಐಸ್‌ಕ್ರೀಂ ತಿನ್ನೋ ಸ್ಪರ್ಧೆ ಆಗ್ತಾ ಇರುತ್ತೆ. ಹಾಗೆಯೇ ಬಿಹಾರದಲ್ಲೊಂದು ಒಂದು ವಿಶಿಷ್ಟ ಸ್ಪರ್ಧೆ ನಡೆಯುತ್ತಿದೆ. ಅದುವೇ ಮೊಸರು ತಿನ್ನೋ ಸ್ಪರ್ಧೆ. ಹತ್ತು ವರ್ಷಗಳಿಂದ ಪಾಟ್ನಾದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಆರೋಗ್ಯಕ್ಕೆ (Health) ಮೊಸರಿನ ಮಹತ್ವ ಸಾರುವುದೇ ಈ ಸ್ಪರ್ಧೆಯ ಹಿಂದಿರುವ ಉದ್ದೇಶ. ಈ ವರ್ಷ 500 ಸ್ಪರ್ಧಿಗಳು ಭಾಗವಹಿಸಿದ್ದರು.
Ayurveda Tips : ಚಳಿಗಾಲದಲ್ಲಿ ಕಫ ಹೆಚ್ಚು ಮಾಡುತ್ತಾ ಮೊಸರು?
3 ನಿಮಿಷಗಳಲ್ಲಿ 3.5 ಕೆಜಿಗಿಂತ ಹೆಚ್ಚು ಮೊಸರು ತಿಂದ ವ್ಯಕ್ತಿ
ಈ ದಹಿ ಖಾವೋ ಸ್ಪರ್ಧೆಮೂರು ವಿಭಾಗಗಳನ್ನು ಹೊಂದಿತ್ತು. ಮಹಿಳೆಯರು, ಪುರುಷರು ಮತ್ತು ಹಿರಿಯ ನಾಗರಿಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿತ್ತು. ಮೊಸರಿನ ಆರೋಗ್ಯ ಪ್ರಯೋಜನಗಳನ್ನು ಉತ್ತೇಜಿಸಲು ಸುಧಾ ಡೈರಿ ಸ್ಪರ್ಧೆಯನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ 3 ನಿಮಿಷಗಳಲ್ಲಿ 3.5 ಕೆಜಿಗಿಂತ ಹೆಚ್ಚು ಮೊಸರನ್ನು ಸೇವಿಸುವ ಮೂಲಕ ವ್ಯಕ್ತಿಯೊಬ್ಬರು ವಿಶಿಷ್ಟ ದಾಖಲೆ (Record)ಯನ್ನು ನಿರ್ಮಿಸಿದ್ದಾರೆ.
ದಹೀ ಖಾವೋ ಸ್ಪರ್ಧೆಯನ್ನು ಪಾಟ್ನಾದಲ್ಲಿ ಕಳೆದ ಹತ್ತುವರ್ಷಗಳಿಂದ ಏರ್ಪಡಿಸುತ್ತ ಬರಲಾಗಿದೆ. ಮಹಿಳೆಯರು, ಪುರುಷರು ಮತ್ತು ಹಿರಿಯ ನಾಗರಿಕರು ಹೀಗೆ ಮೂರು ಗುಂಪುಗಳಲ್ಲಿ ಸ್ಪರ್ಧಾರ್ಥಿಗಳನ್ನು ವಿಂಗಡಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಅಜಯ್ ಕುಮಾರ್ 3 ನಿಮಿಷದಲ್ಲಿ 3 ಕಿ.ಗ್ರಾಂ 420 ಗ್ರಾಂ ಮೊಸರನ್ನು ತಿಂದು ಪ್ರಥಮ ಸ್ಥಾನ ಗಳಿಸಿದ್ಧಾರೆ. ಮಹಿಳೆಯರಲ್ಲಿ ಪ್ರೇಮಾ ತಿವಾರಿ 3 ನಿಮಿಷದಲ್ಲಿ 2 ಕಿ.ಗ್ರಾಂ 718 ಗ್ರಾಂ ಮೊಸರು ತಿಂದು ಮೊದಲ ಸ್ಥಾನ ಪಡೆದಿದ್ದಾರೆ. ಹಿರಿಯ ನಾಗರಿಕರಲ್ಲಿ ಶಂಕರ್ ಕಾಂತ್ 3 ನಿಮಿಷದಲ್ಲಿ 3 ಕಿ.ಗ್ರಾಂ, 647 ಗ್ರಾಂ ಮೊಸರು ತಿಂದು ಅಗ್ರಸ್ಥಾನವೇರಿದ್ದಾರೆ.
Health Tips : ಮೊಸರಿನ ಜೊತೆ ಚಪಾತಿ ತಿಂದು ಆರೋಗ್ಯ ಕಾಯ್ದುಕೊಳ್ಳಿ
ಸ್ಪರ್ಧೆಗೆ 'ದಹಿ ಖಾವೊ ಇನಾಮ್ ಪಾವೊ' (ಮೊಸರು ತಿನ್ನಿ, ಬಹುಮಾನ ಗೆಲ್ಲಿ) ಎಂಬ ಹೆಸರಿಡಲಾಗಿತ್ತು. ಪಾಟ್ನಾ ಡೈರಿ ಪ್ರಾಜೆಕ್ಟ್‌ನ ಅಧ್ಯಕ್ಷ ಸಂಜಯ್ ಕುಮಾರ್ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದಿಸಿದರು. ಮೊಸರು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎನ್ನುವುದನ್ನು ತಿಳಿಸುವುದು ಈ ಸ್ಪರ್ಧೆಯ ಉದ್ದೇಶವಾಗಿತ್ತು ಎಂದು ತಿಳಿಸಿದರು.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಕಾಲ ಈ ಸ್ಪರ್ಧೆ ನಡೆಸಲಾಗಿರಲ್ಲಿಲ್ಲ. ಈಗ ಎರಡು ವರ್ಷದ ನಂತರ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 700ಕ್ಕೂ ಹೆಚ್ಚು ಮಂದಿ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದು, 500 ಮಂದಿ ಭಾಗವಹಿಸಿದ್ದರು