Asianet Suvarna News Asianet Suvarna News

ಖಾರದ, ಮಸಾಲೆ ಚಿಪ್ಸ್ ತಿಂದು ಕೊನೆಯುಸಿರೆಳೆದ ಬಾಲಕ

ಒಂದಾದ್ಮೇಲೆ ಒಂದು ಚಾಲೆಂಜ್ ವೈರಲ್ ಆಗ್ತಿರುತ್ತದೆ. ಅದರಿಂದಾಗುವ ಲಾಭ, ನಷ್ಟಗಳನ್ನು ನೋಡದೆ ಅದ್ರಲ್ಲಿ ಪಾಲ್ಗೊಂಡ್ರೆ ಅನಾಹುತ ನಿಶ್ಚಿತ. ಈಗ ಅಮೆರಿಕಾ ಹುಡುಗನಿಗೂ ಅದೇ ಆಗಿದೆ. ಚಾಲೆಂಜ್ ಸ್ವೀಕರಿಸಿ ಇಹಲೋಕ ತ್ಯಜಿಸಿದ್ದಾನೆ.
 

A Fourteen Year Old Boy Dead One Chip Challenge roo
Author
First Published Sep 13, 2023, 12:21 PM IST

ಸಾಮಾಜಿಕ  ಜಾಲತಾಣದಲ್ಲಿ ದಿನಕ್ಕೊಂದು ಚಾಲೆಂಜ್ ನಡೆಯುತ್ತಿರುತ್ತದೆ. ಅದೇ ರೀತಿಯಲ್ಲಿ ಶುರುವಾದ ಒನ್  ಚಿಪ್ಸ್ ಚಾಲೆಂಜ್ ಸದ್ಯ ಸುದ್ದಿಯಲ್ಲಿದೆ. ಅಮೆರಿಕಾದಲ್ಲಿ ಒನ್ ಚಿಪ್ಸ್ ಚಾಲೆಂಜ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಆದ್ರೆ ಇದೇ ಒನ್ ಚಿಪ್ಸ್ ಚಾಲೆಂಜ್ ಹುಡುಗನೊಬ್ಬನ ಪ್ರಾಣ ತೆಗೆದಿದೆ. ಚಾಲೆಂಜ್ ನಲ್ಲಿ ಪಾಲ್ಗೊಂಡಿದ್ದ ದಿನವೇ ಹುಡುಗ ಸಾವನ್ನಪ್ಪಿದ್ದಾನೆ. 

ಒನ್  ಚಿಪ್ಸ್ (Chips) ಚಾಲೆಂಜ್ ಸ್ವೀಕರಿಸಿ ಸಾವನ್ನಪ್ಪಿದ ಹುಡುಗನ ಹೆಸರು ಹ್ಯಾರಿಸ್ ವೊಲೊಬಾ. ಈತ ಮ್ಯಾಸಚೂಸೆಟ್ಸ್‌ನ ವೋರ್ಸೆಸ್ಟರ್‌ ನಿವಾಸಿ. ಹ್ಯಾರಿಸ್ ವೊಲೊಬಾ (Harris Woloba) ವಯಸ್ಸು ಕೇವಲ 14 ವರ್ಷ. ಚಾಲೆಂಜ್ ನಲ್ಲಿ ಹ್ಯಾರಿಸ್ ವೊಲೊಬಾ, ಅತ್ಯಂತ ಮಸಾಲೆಯುಕ್ತ ಚಿಪ್ಸ್ ತಿಂದಿದ್ದಾನೆ. ಈ ವೈರಲ್ ಚಾಲೆಂಜ್‌ನಲ್ಲಿ ಭಾಗವಹಿಸುವವರು ಪ್ರಪಂಚದ ಅತ್ಯಂತ ಮಸಾಲೆಯುಕ್ತ ಪಾಕಿ ಚಿಪ್‌ಗಳನ್ನು ತಿನ್ನಬೇಕಾಗಿತ್ತು. ಚಾಲೆಂಜ್ ನಂತೆ ಹ್ಯಾರಿಸ್ ವೊಲೊಬಾ ಕೂಡ ಚಿಪ್ಸ್ ಸೇವನೆ ಮಾಡಿದ್ದಲ್ಲದೆ ಅದರ ವಿಡಿಯೋ ಮಾಡಿದ್ದಾನೆ.   

ಭಾರತೀಯರ ಫೇವರಿಟ್‌ ಕಬಾಬ್, ಸಮೋಸಾ ಫಾರಿನ್‌ನಲ್ಲಿ ತಿನ್ನಂಗಿಲ್ಲ, ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ!

ಹ್ಯಾರಿಸ್ ವೊಲೊಬಾ ತಾಯಿ ಪ್ರಕಾರ, ಹ್ಯಾರಿಸ್ ವೊಲೊಬಾ ಶಾಲೆಯಿಂದ ಕರೆ ಬಂದಿದೆ. ಸ್ನೇಹಿತ ನೀಡಿದ ಚಿಪ್ಸ್ ತಿಂದ ನಂತ್ರ ಹ್ಯಾರಿಸ್ ವೊಲೊಬಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಕುಟುಂಬಸ್ಥರು ಹ್ಯಾರಿಸ್ ವೊಲೊಬಾನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗ್ತಿದ್ದಂತೆ ಹ್ಯಾರಿಸ್ ವೊಲೊಬಾ ಸುಧಾರಿಸಿಕೊಂಡಿದ್ದಾನೆ. ಹಾಗಾಗಿ ಮನೆಗೆ ವಾಪಸ್ ಕರೆತರಲಾಗಿದೆ. ಮನೆಗೆ ಬಂದ ಕೆಲ ಸಮಯದ ನಂತ್ರ ಹ್ಯಾರಿಸ್  ವೊಲೊಬಾ ಉಸಿರಾಟ ತೊಂದರೆ ಅನುಭವಿಸಿದ್ದಾನೆ. ನಂತ್ರ ಮೂರ್ಛೆ ಹೋಗಿದ್ದಾನೆ. ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋದ್ರೂ ಪ್ರಯೋಜನವಾಗಲಿಲ್ಲ. 

ಯಾವ ಕಂಪನಿ ತಯಾರಿಸುತ್ತೆ ಈ ಚಿಪ್ಸ್ : ಹ್ಯಾರಿಸ್ ವೊಲೊಬಾ ಸೇವನೆ ಮಾಡಿದ ಪಾಕಿ ಚಿಪ್ಸನ್ನು ಪಾಕಿ ಕಂಪನಿ ತಯಾರಿಸುತ್ತದೆ. ವಿಶ್ವದ ಎರಡು ಮಸಾಲೆಯುಕ್ತ ಮೆಣಸುಗಳಾದ ಕೆರೊಲಿನಾ ರೀಪರ್ ಮತ್ತು ನಾಗಾ ವೈಪರ್‌ನೊಂದಿಗೆ ಟೋರ್ಟಿಲ್ಲಾ ಚಿಪ್ಸ್ ತಯಾರಿಸಲಾಗುತ್ತದೆ. ಈ ಚಿಪ್ಸ್ ಮೇಲೆಯೇ ಇದನ್ನು ಮಕ್ಕಳು ಸೇವನೆ ಮಾಡಬಾರದು ಎಂದು ಬರೆಯಲಾಗಿದೆ. ಗರ್ಭಿಣಿಯರು, ಅಲರ್ಜಿ ಸಮಸ್ಯೆ ಹೊಂದಿರುವವರು, ಮಸಾಲೆ ಸೇವನೆಯಿಂದ ಸಮಸ್ಯೆ ಅನುಭವಿಸುವವರು, ಈಗಾಗಲೇ ಅನಾರೋಗ್ಯಕ್ಕೆ ಒಳಗಾಗಿರುವವರು ಈ ಚಿಪ್ಸ್ ಸೇವನೆ ಮಾಡಬಾರದು ಎಂದು ಚಿಪ್ಸ್ ಕಂಪನಿ ಸೂಚನೆ ನೀಡಿದೆ. 

ಐವಿಎಫ್ ಚಿಕಿತ್ಸೆ ವೇಳೆ ತಿನ್ನೋ ಆಹಾರದ ಮೇಲೆ ಸಕ್ಸೆಸ್ ರೇಟ್ ಡಿಪೆಂಡ್ ಆಗಿರುತ್ತೆ!

ಚಿಪ್ಸ್ ಸೇವನೆ ಮಾಡಿದ ನಂತ್ರ ಮೂರ್ಛೆ ಹೋಗುವುದು, ಹೊಟ್ಟೆ ನೋವು ಅಥವಾ ಉಸಿರಾಟದ ತೊಂದರೆ, ವಾಕರಿಕೆ ಕಾಡುವ ಸಾಧ್ಯತೆಯಿರುತ್ತದೆ. ಈ ಸಮಸ್ಯೆ ಕಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕೆಂದು ಚಿಪ್ಸ್ ಕಂಪನಿ ಸೂಚನೆ ನೀಡಿದೆ. 

ಒನ್ ಚಿಪ್ಸ್ ಚಾಲೆಂಜ್ ಗೆ ಸಂಬಂಧಿಸಿದ ದುರ್ಘಟನೆ ಇದೇ ಮೊದಲಲ್ಲ. ಈ ಹಿಂದೆಯೂ ಚಿಪ್ಸ್ ಸೇವನೆ ಮಾಡಿ ಅನಾರೋಗ್ಯಕ್ಕೊಳಗಾದ ಸುದ್ದಿ ಬಂದಿತ್ತು. ಕ್ಯಾಲಿಪೋರ್ನಿಯಾ ಸ್ಕೂಲ್ ನಲ್ಲಿ ಒನ್ ಚಿಪ್ಸ್ ಚಾಲೆಂಜ್ ಮಾಡಲು ಹೋಗಿ  ಮೂವರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ್ರೆ ಇಬ್ಬರಿಗೆ ವಾಂತಿಯಾಗಿತ್ತು. ಈ ಚಿಪ್ಸ್ 10 ಡಾಲರ್ ಗೆ ಲಭ್ಯವಿದೆ. ಶಾಲೆ ಆವರಣದಲ್ಲಿ ಈ ಚಿಪ್ಸ್ ಮಾರಾಟ ಮಾಡದಂತೆ ಕೆಲವು ಕಡೆ ನಿರ್ಬಂಧ ಹೇರಲಾಗಿದೆ. 

ಏನಿದು ಒನ್ ಚಿಪ್ಸ್ ಚಾಲೆಂಜ್? (Chips Challenge) : ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವವರು ಖಾರದ ಮೆಣಸಿನಿಂದ ತಯಾರಿಸಿದ ಟೋರ್ಟಿಲ್ಲಾ ಚಿಪ್ಸನ್ನು ಹೆಚ್ಚಾಗಿ ಸೇವನೆ ಮಾಡ್ತಾರೆ. ಈ ಚಿಪ್ಸ್ ತಿನ್ನುವ ವೇಳೆ ಬೇರೆ ಯಾವುದೇ ಆಹಾರ ಸೇವನೆ ಮಾಡುವಂತಿಲ್ಲ. ಚಿಪ್ಸ್ ತಿಂದ್ಮೇಲೆ ಅದ್ರ ವಿಡಿಯೋ ಹಾಕ್ಬೇಕು. #onechipchallenge ಹಾಕಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ಬೇಕು. ಚಾಲೆಂಜ್ ಪೂರ್ಣಗೊಳಿಸಲು ಹೋಗಿ ಬಾಲಕ ಬಲಿಯಾಗಿದ್ದಾನೆ. 
 

Follow Us:
Download App:
  • android
  • ios