Asianet Suvarna News Asianet Suvarna News

Zomato ಮೂಲಕ 60 ರೂ. ಮೌಲ್ಯದ ಫುಡ್‌ ಆರ್ಡರ್ ಮಾಡಿದ ಮಹಿಳೆಗೆ ಕಂಟೇನರ್‌ ಚಾರ್ಜ್‌ಗೂ 60 ರೂ. ಶುಲ್ಕ: ಟ್ವೀಟ್‌ ವೈರಲ್‌

ಮಹಿಳೆಯೊಬ್ಬರು ಝೊಮ್ಯಾಟೋ ಮೂಲಕ ರೆಸ್ಟೋರೆಂಟ್‌ವೊಂದರಿಂದ ತಲಾ 60 ರೂ. ಬೆಲೆಯ ಮೂರು ಪ್ಲೇಟ್ ದೂಧಿ ಥೆಪ್ಲಾ ಅನ್ನು ಆರ್ಡರ್‌ ಮಾಡಿದ್ದಾರೆ. ಆಕೆಗೆ ಕಂಟೇನರ್‌ ಶುಲ್ಕವೂ 60 ರೂ. ವಿಧಿಸಲಾಗಿದೆ. 

60 rs container charge excessive and unfair zomato clarifies after woman raises concern on x ash
Author
First Published Aug 8, 2023, 8:28 PM IST

ಅಹಮದಾಬಾದ್‌ (ಆಗಸ್ಟ್ 8, 2023): ಝೊಮ್ಯಾಟೋ ಕಂಪನಿ ಇತ್ತೀಚೆಗೆ ತ್ರೈಮಾಸಿಕದಲ್ಲಿ 2 ಕೋಟಿ ರೂ. ಲಾಭ ಮಾಡಿರುವ ಬಗ್ಗೆ ವರದಿಯಾಗಿತ್ತು. ಇದು ಝೊಮ್ಯಾಟೋ ನಂತಹ ಫುಡ್‌ ಡೆಲಿವರಿ ಅಪ್ಲಿಕೇಷನ್‌ಗಳ ಜನಪ್ರಿಯತೆಗೆ ಸಾಕ್ಷಿಯಾಗುತ್ತಿದೆ. ಆದರೆ, ಇತ್ತೀಚೆಗೆ ಇದೇ ಪ್ಲಾಟ್‌ಫಾರ್ಮ್‌ ಮೂಲಕ ಆಹಾರ ಮಾಡಿದ ಮಹಿಳೆಯೊಬ್ಬರು ಕಂಟೇನರ್‌ ಚಾರ್ಜ್‌ಗೆ ವಿಧಿಸಿರುವ ಶುಲ್ಕದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನ ಮಹಿಳೆಯೊಬ್ಬರು ಝೊಮ್ಯಾಟೋ ಮೂಲಕ ರೆಸ್ಟೋರೆಂಟ್‌ವೊಂದರಿಂದ ತಲಾ 60 ರೂ. ಬೆಲೆಯ ಮೂರು ಪ್ಲೇಟ್ ದೂಧಿ ಥೆಪ್ಲಾ ಅನ್ನು ಆರ್ಡರ್‌ ಮಾಡಿದ್ದಾರೆ. ಬಳಿಕ, ಆಕೆ ತಮ್ಮ ಆರ್ಡರ್‌ ಅನ್ನು ಪಡೆದುಕೊಂಡು ಬಿಲ್‌ ಅನ್ನು ಪರಿಶೀಲಿಸಿದಾಗ, ಆರ್ಡರ್‌ಗೆ ವಿಧಿಸಿದ ಕಂಟೇನರ್‌ ಶುಲ್ಕಕ್ಕೆ ಹೌಹಾರಿದ್ದಾರೆ. 60 ರೂ. ಬೆಲೆಯ ಮೂರು ಪ್ಲೇಟ್ ದೂಧಿ ಥೆಪ್ಲಾಗೆ ಕಂಟೇನರ್‌ಗಳಿಗೂ 60 ರೂ. ಶುಲ್ಕ ವಿಧಿಸಲಾಗಿದೆ ಎಂದು ಮಹಿಳೆ ಅರಿತುಕೊಂಡಿದ್ದಾಳೆ. 

ಇದನ್ನು ಓದಿ: Zomato ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಪ್ರತಿ ಆಹಾರದ ಆರ್ಡರ್‌ಗೆ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧಾರ

ಇದರಿಂದ ಬೇಸರಗೊಂಡ ಮಹಿಳೆ, ಈ ಬಗ್ಗೆ ‍‍X ನಲ್ಲಿ ಟ್ವೀಟ್‌ ಮಾಡಿ ಝೊಮ್ಯಾಟೋಗೂ ಟ್ಯಾಗ್‌ ಮಾಡಿದ್ದಾಳೆ. "ಕಂಟೇನರ್ ಶುಲ್ಕವು ನಾನು ಆರ್ಡರ್ ಮಾಡಿರುವ 60 ರೂ. ಐಟಂಗೆ ಸಮಾನವಾಗಿದೆ. ಸೀರಿಯಸ್ಲೀ? ಎಂದು ಖುಷ್ಬೂ ಥಕ್ಕರ್‌ ಟ್ವೀಟ್‌ ಮಾಡಿದ್ದು, ಜತೆಗೆ ಆಕೆಗೆ ಬಂದ ಬಿಲ್‌ನ ಫೋಟೋವನ್ನೂ ಸಹ ತನ್ನ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾಳೆ. ಬಿಲ್ ಪ್ರಕಾರ, ದೂಧಿ ಥೆಪ್ಲಾದ ಪ್ರತಿ ಪ್ಲೇಟ್ 60 ರೂ. ಮೌಲ್ಯದ್ದಾಗಿತ್ತು ಮತ್ತು ಕಂಟೈನರ್ ಶುಲ್ಕವೂ 60 ರೂ. ಆಗಿತ್ತು.

‍X ಬಳಕೆದಾರರಾದ ಖುಷ್ಬೂ ಠಕ್ಕರ್ ಅವರು ಹಂಚಿಕೊಂಡಿರುವ ಬಿಲ್ ಅನ್ನು ಕೆಳಗೆ ನೋಡಿ:

ಇದನ್ನೂ ಓದಿ: ಹೇಗಿದ್ರು ಹೇಗಾದ್ರು ಗೊತ್ತಾ.. 15 ಕೆಜಿ ತೂಕ ಕಳ್ಕೊಂಡ Zomato ಸಿಇಒ: ಫಿಟ್‌ನೆಸ್ ಗುಟ್ಟು ಬಿಟ್ಕೊಟ್ಟ ದೀಪಿಂದರ್ ಗೋಯಲ್

ಇನ್ನು, ಮಹಿಳೆಯ ಟ್ವೀಟ್‌ ವೈರಲ್‌ ಆಗಿದ್ದು, ಇದಕ್ಕೆ ಝೊಮ್ಯಾಟೋ ಸಹ ಪ್ರತಿಕ್ರಿಯೆ ನೀಡಿದೆ. “ಹಾಯ್ ಖುಷ್ಬೂ, ತೆರಿಗೆಗಳು ಸಾರ್ವತ್ರಿಕವಾಗಿವೆ ಮತ್ತು ಆಹಾರದ ಪ್ರಕಾರವನ್ನು ಅವಲಂಬಿಸಿ ಶೇಕಡಾ 5 ರಿಂದ 18 ರವರೆಗೆ ಬದಲಾಗುತ್ತದೆ. ಪ್ಯಾಕೇಜಿಂಗ್ ಶುಲ್ಕಗಳನ್ನು ನಮ್ಮ ರೆಸ್ಟೋರೆಂಟ್ ಪಾಲುದಾರರು ವಿಧಿಸುತ್ತಾರೆ, ಅವರೇ ಈ ಅಭ್ಯಾಸವನ್ನು ಜಾರಿಗೊಳಿಸುತ್ತಾರೆ ಮತ್ತು ಗಳಿಸುತ್ತಾರೆ’’ ಎಂದು ಟ್ವೀಟ್‌ ಮಾಡಿದೆ.

ಇದಕ್ಕೆ ಉತ್ತರಿಸಿದ ಖುಷ್ಬೂ ಥಕ್ಕರ್‌, “ನನಗೆ 60 ರೂ. ಕಂಟೇನರ್ ಚಾರ್ಜ್ ವಿಪರೀತ ಮತ್ತು ಅನ್ಯಾಯವಾಗಿದೆ ಎನಿಸಿತು ಎಂದು ಬರೆದಿದ್ದಾರೆ. ಗ್ರಾಹಕರಿಗೆ ಹೆಚ್ಚುವರಿ ವೆಚ್ಚವಿಲ್ಲದೆ ಕಂಟೇನರ್‌ಗಳನ್ನು ಒದಗಿಸುವುದು ರೆಸ್ಟೋರೆಂಟ್‌ನ ಜವಾಬ್ದಾರಿಯಲ್ಲವೇ?’’ ಎಂದೂ ಟ್ವೀಟ್‌ ಮಾಡಿದರು.

ಇದನ್ನೂ ಓದಿ: ತಮಿಳುನಾಡು ಲೋಕಸೇವಾ ಆಯೋಗ ಪರೀಕ್ಷೆ ಪಾಸ್‌ ಮಾಡಿದ ಝೊಮ್ಯಾಟೋ ಡೆಲಿವರಿ ಬಾಯ್‌: ನೆಟ್ಟಿಗರ ಮೆಚ್ಚುಗೆ

ಆಗಸ್ಟ್ 2 ರಂದು ಪೋಸ್ಟ್‌ ಹಂಚಿಕೊಂಡ ನಂತರ, ಟ್ವೀಟ್‌ ಸುಮಾರು 46,000 ವೀಕ್ಷಣೆಗಳನ್ನು ಗಳಿಸಿದೆ. ಈ ಟ್ವೀಟ್‌ಗೆ ಹಲವರು ಲೈಕ್‌ ಮಾಡಿದ್ದು ಮತ್ತು ಮಿಶ್ರ ಪ್ರತಿಕ್ರಿಯೆಗಳನ್ನು ಕಾಮೆಂಟ್‌ ಮೂಲಕ ಮಾಡಿದ್ದಾರೆ. 

ಈ ಮಹಿಳೆಯ ಟ್ವೀಟ್‌ಗೆ ‍X ಬಳಕೆದಾರರು ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ..
"ನಿಮ್ಮ ಕೈಂಡ್‌ ಇನ್‌ಫಾರ್ಮೇಷನ್‌ಗಾಗಿ, ಕಂಟೇನರ್ ಪ್ರೈಸ್‌ ಲೇಬಲ್ ಅನ್ನು ಅಂಗಡಿಯು ಬಳಸುತ್ತದೆ, ಝೊಮ್ಯಾಟೋ ಬಳಸುವುದಿಲ್ಲ" ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.
ಮತ್ತೊಬ್ಬರು ‘’ಥೆಪ್ಲಾದ ಝೊಮ್ಯಾಟೋ ಬೆಲೆ 60 ರೂ. ಆಗಿದ್ದ, ಇದು ಈಗಾಗಲೇ 20 ರೂ. ಹೆಚ್ಚಾಗಿದೆ. ನೀವು ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರೆ ನಿಜವಾದ ವೆಚ್ಚ 35 ರಿಂದ 40 ಆಗಿರಬಹುದು. ಆದ್ದರಿಂದ ಕಂಟೇನರ್‌ ಮಾತ್ರವಲ್ಲದೆ ನೀವು ಈಗಾಗಲೇ 60 ರೂಪಾಯಿಗಳನ್ನು ಝೊಮ್ಯಾಟೋಗೆ ಪಾವತಿಸಿದ್ದೀರಿ. . ಇದು ಕನ್‌ವೀನಿಯೆನ್ಸ್‌ ಶುಲ್ಕವಾಗಿದೆ’’ಎಂದಿದ್ದಾರೆ. 

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ ಸ್ಟಾರ್‌ಬಕ್ಸ್‌ ಕಾಫಿ ಕುಡಿಯಲು ನೀವೂ ಈ ದೇಸಿ ಐಡಿಯಾ ಮಾಡ್ಬೋದು!

 
ಹಾಗೂ, ‘’ಆರ್ಡರ್‌ ದೃಢೀಕರಿಸುವ ಮೊದಲು ನೀವು ಅದನ್ನು ಪರಿಶೀಲಿಸಲಿಲ್ಲವೇ?’’ ಎಂದೂ ಹೇಳಿದ್ದಾರೆ. ಮತ್ತೊಬ್ಬರು, ‘’ಕೆಲವು ಸಮಯದ ಹಿಂದೆಯೇ ಝೊಮ್ಯಾಟೋ ಬಳಸುವುದನ್ನು ನಿಲ್ಲಿಸಿದೆ. ಜನರು ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದಿಲ್ಲ.. ಅವುಗಳ ಬೆಲೆಗಳನ್ನು ಹೋಲಿಸಲು ಪ್ರಾರಂಭಿಸಿ ಮತ್ತು ನೇರವಾಗಿ ರೆಸ್ಟೋರೆಂಟ್‌ಗಳಿಂದ ಆರ್ಡರ್‌ ಮಾಡಿ ಮತ್ತು ಶುಲ್ಕಗಳು ಎಷ್ಟು ಹೆಚ್ಚು ಎಂದು ನೀವು ಅರಿತುಕೊಳ್ಳುತ್ತೀರಿ. ಆಹಾರದ ಬೆಲೆ ಹೆಚ್ಚಿಸಲಾಗುತ್ತೆ, ಪ್ಯಾಕಿಂಗ್ ಶುಲ್ಕ, ವಿತರಣಾ ಶುಲ್ಕಗಳು ಮತ್ತು ನಂತರ ಹೆಚ್ಚುವರಿ ಜಿಎಸ್ಟಿ ವಿಧಿಸಲಾಗುತ್ತೆ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೆ, ''ಸಗಟು ಮಾರುಕಟ್ಟೆಯಲ್ಲಿ ಕಂಟೇನರ್ ಬೆಲೆ 4 ರೂ.. 60 ರೂ. ಎಂದರೆ 15x ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪರಿಸರದ ಕುರಿತು ಜಾಗೃತಿ ನೀಡಲು ಹೋಗಿ ಜಾತಿ ವಿವಾದಕ್ಕೆ ಸಿಲುಕಿದ Zomato: ನೆಟ್ಟಿಗರ ಕಿಡಿ ಬಳಿಕ ಜಾಹೀರಾತು ವಿಡಿಯೋ ಡಿಲೀಟ್‌!

Follow Us:
Download App:
  • android
  • ios