ತಮಿಳುನಾಡು ಲೋಕಸೇವಾ ಆಯೋಗ ಪರೀಕ್ಷೆ ಪಾಸ್ ಮಾಡಿದ ಝೊಮ್ಯಾಟೋ ಡೆಲಿವರಿ ಬಾಯ್: ನೆಟ್ಟಿಗರ ಮೆಚ್ಚುಗೆ
ಅಹಾರ ವಿತರಣಾ ಅಪ್ಲಿಕೇಷನ್ ಜೊತೆ ಕೆಲಸ ಮಾಡುತ್ತಲೇ ಓದಿಕೊಂಡು ತಮಿಳುನಾಡು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಝೊಮ್ಯಾಟೋ ಡೆಲಿವರಿ ಬಾಯ್ ವಿಘ್ನೇಶ್.
ಚೆನ್ನೈ (ಜುಲೈ 24, 2023): ಐಎಎಸ್, ಐಪಿಎಸ್ ಆಗ್ಬೇಕು ಅನ್ನೋದು ದೇಶದ ಕೋಟ್ಯಂತರ ಜನರ ಕನಸು. ಆದರೆ, ಇದನ್ನು ನನಸು ಮಾಡಿಕೊಳ್ಳೋರ ಸಂಖ್ಯೆ ಮಾತ್ರ ಕೆಲವೇ ಮಂದಿ. ಇನ್ನು, ಯುಪಿಎಸ್‌ಸಿ ಪರೀಕ್ಷೆ ಪಾಸಾಗದಿದ್ದರೂ ಕೆಲವರು ರಾಜ್ಯ ಸರ್ಕಾರಗಳು ನಡೆಸುವ ಲೋಕಸೇವಾ ಆಯೋಗ ಪರೀಕ್ಷೆಯನ್ನೂ ಹಲವರು ಕ್ಲಿಯರ್ ಮಾಡಿಕೊಳ್ಳುತ್ತಾರೆ. ಇನ್ನು, ಒಬ್ಬ ವ್ಯಕ್ತಿಯ ಕನಸು ಸಂಪೂರ್ಣ ಮ್ಯಾಜಿಕ್ ಮೂಲಕ ನನಸಾಗಲ್ಲ. ಬೆವರು, ನಿರ್ಣಯ ಮತ್ತು ಸಾಕಷ್ಟು ಶ್ರಮವನ್ನು ತೆಗೆದುಕೊಳ್ಳುತ್ತದೆ.
ಇನ್ನು, ನೀವು ಸಹ ಇದೇ ರೀತಿ ಕನಸು ನನಸು ಮಾಡಿಕೊಳ್ಳಬೇಕಾದ್ರೆ ಅನೇಕ ಸ್ಪೂರ್ತಿದಾಯಕ ಕತೆಗಳನ್ನು ಹೊಂದಿದೆ. ಅದು ನಿಮ್ಮ ಅತ್ಯುತ್ತಮವಾದದ್ದನ್ನು ಮಾಡಲು ಮತ್ತು ನಿಮ್ಮ ಕನಸುಗಳನ್ನು ಸಾಧಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ಅಂದರೆ, ಝೊಮ್ಯಾಟೋ ಡೆಲಿವರಿ ಬಾಯ್. ಅಹಾರ ವಿತರಣಾ ಅಪ್ಲಿಕೇಷನ್ ಜೊತೆ ಕೆಲಸ ಮಾಡುತ್ತಲೇ ಓದಿಕೊಂಡು ತಮಿಳುನಾಡು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ವಿಘ್ನೇಶ್.
ಇದನ್ನು ಓದಿ: ಅಮಿತ್ ಶಾ ಸಚಿವಾಲಯದ ಅಧಿಕಾರಿ ಎಂದು ಪ್ರಮುಖ ಸರ್ಕಾರಿ ಹುದ್ದೆಗೆ ಸೇರಲು ಯತ್ನಿಸಿದ ನಿರುದ್ಯೋಗಿ!
ಈ ಸಂಬಂಧ ಝೊಮ್ಯಾಟೋ ಟ್ವೀಟ್ ಮಾಡಿದ್ದು, "ಝೊಮ್ಯಾಟೋ ವಿತರಣಾ ಪಾಲುದಾರರಾಗಿ ಕೆಲಸ ಮಾಡುವಾಗ ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿಘ್ನೇಶ್‌ಗೆ ಒಂದು ಲೈಕ್ ಮಾಡಿ" ಎಂದು ಬರೆದಿದ್ದಾರೆ.
ಟ್ವೀಟ್ ಇಲ್ಲಿದೆ ನೋಡಿ:
ಇದನ್ನೂ ಓದಿ: ಹೋಟೆಲ್ ಮಾಣಿಯಾಗಿದ್ದೋರು IAS ಅಧಿಕಾರಿಯಾದ್ರು: 7ನೇ ಪ್ರಯತ್ನದಲ್ಲಿ ನನಸಾಯ್ತು UPSC ಕನಸು!
ಈ ಟ್ವೀಟ್ ಅನ್ನು ಶೇರ್ ಮಾಡಿಕೊಂಡಾಗಿನಿಂದ ಈ ಪೋಸ್ಟ್ (ಈ ಸುದ್ದಿ ಪಬ್ಲಿಷ್ ಅಗುವ ವೇಳೆ) ಸುಮಾರು 1,500 ಲೈಕ್ ಮತ್ತು 60 ಕ್ಕೂ ಹೆಚ್ಚು ರೀಟ್ವೀಟ್ ಪಡೆದುಕೊಂಡಿದೆ. ಹಾಗೂ, ಹಲವರು ವಿಘ್ನೇಶ್ ಅವರ ಯಶಸ್ಸಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸಿ ಕಾಮೆಂಟ್ ಮಾಡಿದ್ದಾರೆ.
ಅಲ್ಲದೆ, ಒಬ್ಬರು ಬಳಕೆದಾರರು, ‘’ಇನ್ಮುಂದೆ, ವಿಘ್ನೇಶ್ ಆರ್ಡರ್‌ಗಳಿಗೆ ಸಹಿ ಹಾಕುತ್ತಾರೆ’’ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ''ಅದ್ಭುತ ಸಾಧನೆ'' ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ''ಜೀವನದಲ್ಲಿ ಅಂತಹ ಸಮರ್ಪಣೆ ಬೇಕು'' ಎಂದು ಪೋಸ್ಟ್ ಮಾಡಿದ್ದಾರೆ. ''ಇದು ವಾಹ್'' ಎಂದು ಮಗದೊಬ್ಬರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: IAS ಅಧಿಕಾರಿಯಾದ ರಿಕ್ಷಾ ಎಳೆಯುವವರ ಮಗ ಗೋವಿಂದ್ ಜೈಸ್ವಾಲ್: ಹೋರಾಟದ ಹಾದಿ ಹೀಗಿದೆ..
ಹಾಗೆ, ''ವಾವ್, ತಮಿಳುನಾಡು ಲೋಕಸೇವಾ ಆಯೋಗದ ಪರೀಕ್ಷೆ ತೇರ್ಗಡೆಯಾಗಿದ್ದಕ್ಕೆ ವಿಘ್ನೇಶ್ ಅವರಿಗೆ ಅಭಿನಂದನೆಗಳು! ಮತ್ತು Zomato ಆರ್ಡರ್‌ಗಳನ್ನು ಡೆಲಿವರಿ ಮಾಡುತ್ತ ಹಾಗೂ ಅಧ್ಯಯನ ಮಾಡಲು ಸಮಯ ನಿರ್ವಹಿಸಿದ್ದಕ್ಕೆ ಒಂದು ಲೈಕ್. ಪ್ರಭಾವಶಾಲಿ ಮಲ್ಟಿಟಾಸ್ಕಿಂಗ್ ಕೌಶಲ್ಯಗಳು ಎಂದು ನಾನು ಹೇಳಲೇಬೇಕು’’ ಎಂದಿದ್ದಾರೆ.
ಗಮನಾರ್ಹವಾಗಿ, ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯು ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ (TNPSC) ನಡೆಸುವ ರಾಜ್ಯ ಮಟ್ಟದ ನಾಗರಿಕ ಸೇವಾ ಪರೀಕ್ಷೆಯಾಗಿದೆ. ಯುಪಿಎಸ್‌ಸಿ ಪರೀಕ್ಷೆಯಷ್ಟು ಅಲ್ಲದಿದ್ದರೂ ಈ ಪರೀಕ್ಷೆಯೂ ಸಾಕಷ್ಟು ಕಷ್ಟದ ಪರೀಕ್ಷೆಯೇ ಆಗಿದೆ. ಇಂತಹ ಪರೀಕ್ಷೆಯನ್ನು ಝೊಮ್ಯಾಟೋ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡು ಅಧ್ಯಯನ ಮಾಡಿ ಪರೀಕ್ಷೆ ಪಾಸಾಗಿದ್ದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ.
ಇದನ್ನೂ ಓದಿ: ರೈತನ ಮಗಳು, ಕಂಡಕ್ಟರ್ ಪುತ್ರ ಐಎಎಸ್ ಪಾಸ್: ರಾಜ್ಯದ 35 ಮಂದಿ ತೇರ್ಗಡೆ