ಊಟ ಮಾಡುವಾಗ ನೀವು ಹೀಗೆಲ್ಲ ಮಾಡುತ್ತೀರಾ? ಒಮ್ಮೆ ಚೆಕ್ ಮಾಡಿಕೊಳ್ಳಿ!
ನಾವು ಹೇಗೆ ಊಟ ಮಾಡುತ್ತೇವೆ, ತಿಂಡಿ ತಿನ್ನುತ್ತೇವೆ ಎನ್ನುವುದು ಕೂಡ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಆಹಾರ ಸೇವಿಸುವಾಗ ನಮ್ಮೊಂದಿಗಿರುವವರಿಗೆ ಮುಜುಗರ ಉಂಟಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯ.
ಟೇಬಲ್‍ನಲ್ಲಿ ನಾಲ್ಕಾರು ಜನರ ಜೊತೆಗೆ ಕುಳಿತಿರುವಾಗ ನೀವು ಆಹಾರವನ್ನು ಹೇಗೆ ಸೇವಿಸುತ್ತೀರಿ ಎಂಬುದು ಕೂಡ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ವಿದೇಶಗಳಲ್ಲಿ ಟೇಬಲ್ ಮ್ಯಾನಸ್ ಅನ್ನು ಬಾಲ್ಯದಲ್ಲೇ ಮಕ್ಕಳಿಗೆ ಕಲಿಸುತ್ತಾರೆ. ಆದರೆ, ನಮ್ಮಲ್ಲಿ ಊಟ-ತಿಂಡಿಗೆ ಸಂಬಂಧಿಸಿ ಅಂಥ ಸ್ಟ್ರಿಕ್ಟ್ ರೂಲ್ಸ್‍ಯೇನೂ ಇಲ್ಲವಾದರೂ ನಾವು ತಿನ್ನುವ ಶೈಲಿ ಅಕ್ಕಪಕ್ಕದಲ್ಲಿರುವವರಿಗೆ ಇರಿಸುಮುರಿಸು ಉಂಟು ಮಾಡದಂತೆ ಎಚ್ಚರ ವಹಿಸುವುದು ಅತ್ಯಗತ್ಯ.
ರೆಡಿಯಾಗಿ ಸಿಗುವ ಯಾವುದೂ ಒಳಿತಲ್ಲ, ಇನ್ಸ್‌ಟೆಂಟ್ ನೂಡಲ್ಸ್ ಇದಕ್ಕೆ ಹೊರತಲ್ಲ!
ಹೊಟ್ಟೆ ಹಸಿದಿರುವಾಗ ಅಥವಾ ಇಷ್ಟದ ತಿನಿಸು ತಿನ್ನುವಾಗ ಹೇಗೆ ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಇಷ್ಟದ ಖಾದ್ಯವನ್ನು ಸವಿಯುವುದರಲ್ಲೇ ಮಗ್ನರಾಗಿರುತ್ತೇವೆ. ಬಾಯಿ ಚಪ್ಪರಿಸಿಕೊಂಡು ರುಚಿಯ ಸವಿಯನ್ನು ಆಸ್ವಾದಿಸುತ್ತೇವೆ. ಆದರೆ, ಇದು ಅಕ್ಕಪಕ್ಕದಲ್ಲಿ ಕುಳಿತಿರುವವರಿಗೆ ಇರಿಸುಮುರಿಸು ಉಂಟು ಮಾಡುವ ಸಾಧ್ಯತೆಯಿರುತ್ತದೆ. ಕೆಲವರು ತಿನ್ನುವ ಶೈಲಿ ನಗು ತರಿಸುತ್ತದೆ ಕೂಡ. ಹೀಗಾಗಿ ಊಟ ಮಾಡುವಾಗ, ತಿಂಡಿ ತಿನ್ನುವಾಗ ಅಥವಾ ಕಾಫಿ ಕುಡಿಯುವಾಗ ನಿಮಗೆ ಈ ಕೆಳಗೆ ತಿಳಿಸಿರುವ ಯಾವುದಾದರೂ ಅಭ್ಯಾಸವಿದ್ದರೆ ಅದನ್ನು ಆದಷ್ಟು ಬೇಗ ಬಿಡಲು ಪ್ರಯತ್ನಿಸಿ.
ಸೌಂಡ್ ಮಾಡುತ್ತ ತಿನ್ನುವುದು: ಊಟ ಮಾಡುವಾಗ ಶಬ್ದ ಬರುವಂತೆ ಅಗೆಯುವುದರಿಂದ ಅಕ್ಕಪಕ್ಕದಲ್ಲಿರುವವರಿಗೆ ಕಿರಿಕಿರಿಯಾಗಬಹುದು. ಕೆಲವರು ಕಾಫಿ, ಟೀ ಕುಡಿಯುವಾಗ ಬಾಯಿ ಚಪ್ಪರಿಸುವಂತಹ ಸೌಂಡ್ ಮಾಡುತ್ತಾರೆ. ಈ ತರಹ ಕುಡಿಯುವುದರಿಂದ ನಿಮಗೇನೂ ಖುಷಿ ಸಿಗಬಹುದು. ಆದರೆ ನಿಮ್ಮ ಜೊತೆಗಿರುವ ಸ್ನೇಹಿತರಿಗೆ ಇರಿಸುಮುರಿಸು ಉಂಟಾಗುವುದರಲ್ಲಿ ಅನುಮಾನವೇ ಇಲ್ಲ.
ಬಾಯಿ ಸೈಜ್‍ಗಿಂತ ಜಾಸ್ತಿ ತುಂಬಿಸುವುದು: ಕೆಲವರಿಗೆ ಊಟ ಮಾಡುವಾಗ ಬಾಯಿ ತುಂಬಿ ಹೊರಗೆ ಬರುವಷ್ಟು ತುಂಬಿಸಿಕೊಳ್ಳುವ ಅಭ್ಯಾಸವಿರುತ್ತದೆ. ಇದು ನೋಡುವವರಿಗೆ ಅಸಹ್ಯ ಅನಿಸಬಹುದು. ಆದಕಾರಣ ಹೊಟ್ಟೆ ಅದೆಷ್ಟೇ ಚುರುಗುಟ್ಟುತ್ತಿರಲಿ ಸ್ವಲ್ಪ ಸ್ವಲ್ಪ ಆಹಾರವನ್ನೇ ಬಾಯಿಗೆ ತುಂಬಿಸಿಕೊಳ್ಳಿ. ನಿಮ್ಮ ತಟ್ಟೆಯಲ್ಲಿರುವ ಆಹಾರವನ್ನು ಬೇರೆ ಯಾರೂ ಕಸಿದುಕೊಳ್ಳುವುದಿಲ್ಲ. ಸ್ವಲ್ಪ ಸ್ವಲ್ಪವಾಗಿಯೇ ಬಾಯಿಗೆ ತುಂಬಿಸಿಕೊಳ್ಳಿ. ಬೇರೆ ಯಾರಾದರೂ ನಿಮ್ಮ ಮುಂದೆ ಬಾಯಿ ತುಂಬಾ ತುಂಬಿಸಿಕೊಂಡು ತಿನ್ನುವುದನ್ನು ನೋಡಿದರೆ ನಿಮಗೆ ಅಸಹ್ಯವಾಗುವುದಿಲ್ಲವೆ? ಯೋಚಿಸಿ ನೋಡಿ.
ಸಾಕಷ್ಟು ತಿನ್ನದಿದ್ದರೆ ದೇಹ ಹೇಗೆಲ್ಲ ಪ್ರತಿಕ್ರಿಯಿಸುತ್ತದೆ ಗೊತ್ತಾ?
ಮೈ ಮೇಲೆಲ್ಲ ಊಟ: ಕೆಲವರಿಗೆ ಊಟದ ತಟ್ಟೆ ಮುಂದಿಟ್ಟ ತಕ್ಷಣ ಬೇಗ ಬೇಗ ತಿಂದು ಮುಗಿಸಬೇಕೆಂಬ ತವಕ. ಇದರ ಪರಿಣಾಮವಾಗಿ ಕೈ ಮತ್ತು ಬಾಯಿಗೆ ಹೆಚ್ಚು ಕೆಲಸ ನೀಡಲು ಮುಂದಾಗುತ್ತಾರೆ. ಕೈಗೆ ನೀವು ಬಯಸಿದಷ್ಟು ವೇಗವಾಗಿ ಚಲಿಸಲು ಸಾಧ್ಯವಾಗದಿದ್ದಾಗ ಆಹಾರ ಮೈ ಮೇಲೆಲ್ಲ ಬೀಳುತ್ತದೆ. ಕೆಲವರಿಗೆ ಮೊಬೈಲ್ ನೋಡುತ್ತ, ಟಿವಿ ನೋಡುತ್ತ ಊಟ ಮಾಡುವ ಅಭ್ಯಾಸವಿರುತ್ತದೆ. ಪರಿಣಾಮ ಕೈ ಬಾಯಿಗೆ ಹೋಗುತ್ತದೋ ಇಲ್ಲ ಬೇರೆಲ್ಲಿ ಹೋಗುತ್ತದೋ ಎಂಬುದೇ ತಿಳಿಯುವುದಿಲ್ಲ. ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಡ್ರೆಸ್ ತುಂಬೆಲ್ಲ ಊಟ ಬೀಳಿಸಿಕೊಂಡರೆ ಮುಜುಗರ ಎದುರಾಗುವುದು ಗ್ಯಾರಂಟಿ.
ತಿನ್ನುವಾಗ ಮಾತನಾಡುವುದು: ಈ ಅಭ್ಯಾಸ ಬಹುತೇಕರಿಗಿರುತ್ತದೆ. ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡುತ್ತ ಊಟ ಮಾಡುವುದು ಖುಷಿ ನೀಡುತ್ತದೆ ನಿಜ. ಆದರೆ, ಬಾಯಿಯಲ್ಲಿ ಆಹಾರವಿರುವಾಗ ಮಾತನಾಡಿದರೆ ಅದು ನಿಮ್ಮ ಮುಂದೆ ಕುಳಿತಿರುವ ವ್ಯಕ್ತಿಯ ಮೈ ಮೇಲೆ ಬೀಳುವ ಸಾಧ್ಯತೆಯಿರುತ್ತದೆ. ಆದಕಾರಣ ಕೇರ್‍ಫುಲ್ ಆಗಿರುವುದು ಅಗತ್ಯ.
ಬೆರಳುಗಳನ್ನೂ ಟೇಸ್ಟ್ ಮಾಡುವುದು: ರುಚಿಯಾದ ಖಾದ್ಯವನ್ನು ಸವಿಯುವಾಗ ಮನಸ್ಸು ಖುಷಿಗೊಳ್ಳುವುದು ಸಹಜ. ಕೆಲವರಿಗೆ ಆ ಖುಷಿಯನ್ನು ಕಂಟ್ರೋಲ್ ಮಾಡಿಕೊಳ್ಳೋದಕ್ಕೇ ಸಾಧ್ಯವಾಗುವುದಿಲ್ಲ. ಬೆರಳುಗಳಿಗೆ ಅಂಟಿರುವ ಆಹಾರವನ್ನು ಕೂಡ ಚಪ್ಪರಿಸಿಕೊಂಡು ತಿನ್ನುತ್ತಾರೆ. ಬೆರಳನ್ನು ಬಾಯಿಯೊಳಗಡೆ ಹಾಕಿಕೊಳ್ಳುವ ನಿಮ್ಮ ಅಭ್ಯಾಸ ಜೊತೆಗಿರುವವರಿಗೆ ಅಸಹ್ಯ ಅಂದೆನಿಸಬಹುದು.
ಇದನ್ನು ಓದಿದ್ರೆ ಇನ್ನು ನೀವು ಜಂಕ್ ಫುಡ್ ಮುಟ್ಟೋಲ್ಲ!
ತಿಂದಿರುವ ಕೈಯಲ್ಲೇ ಊಟ ಬಡಿಸಿಕೊಳ್ಳುವುದು: ತಿನ್ನುವ ಮಧ್ಯೆ ಅಥವಾ ತಟ್ಟೆಯಲ್ಲಿದ್ದ ಆಹಾರ ಖಾಲಿಯಾದ ಬಳಿಕ ಮತ್ತಷ್ಟು ಬಡಿಸಿಕೊಳ್ಳಲು ನೀವು ಎಂಜಲು ಕೈಯನ್ನೇ ಬಳಸಿದರೆ ಅದು ಉಳಿದವರಿಗೆ ಇರಿಸುಮುರಿಸು ಉಂಟು ಮಾಡುತ್ತದೆ. ಹೀಗಾಗಿ ಆಹಾರ ಬಡಿಸಿಕೊಳ್ಳಲು ಬೇರೆಯವರ ಸಹಾಯ ಪಡೆಯಿರಿ ಇಲ್ಲವೆ ನಿಮ್ಮ ಇನ್ನೊಂದು ಕೈಯನ್ನು ಬಳಸಿ.